ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕನಾಗಿ ಕೊಹ್ಲಿ ಹೆಸರಿನಲ್ಲಿರುವ ಈ 3 ದಾಖಲೆಗಳನ್ನು ರೋಹಿತ್ ಶರ್ಮಾ ಮುರಿಯುವುದು ಅಸಾಧ್ಯ!

These 3 Virat Kohli’s captaincy records impossible to break by Rohit Sharma

ಸದ್ಯ ರೋಹಿತ್ ಶರ್ಮಾ ಎಲ್ಲಾ ಮಾದರಿಯಲ್ಲಿಯೂ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೊಹ್ಲಿ ಕೈಯ್ಯಲ್ಲಿದ್ದ ಭಾರತ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿಕೊಂಡಿದ್ದು ರೋಹಿತ್ ನಾಯಕತ್ವದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಟಿ20 ಮಾದರಿಯಲ್ಲಿ ಹಿಂದೆಂದಿಗಿಂತಲೂ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದೆ. ಪ್ರಮುಖ ವಿಷಯವೆಂದರೆ ಟಿ20 ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಕಳೆದ 9 ತಿಂಗಳಿನಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಸರಣಿಯಲ್ಲಿ ಸೋಲು ಅನುಭವಿಸಿಲ್ಲ.

ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವ ಅದ್ಭುತ ಯಶಸ್ಸು ಸಾಧಿಸುತ್ತಿದೆ. ಕಳೆದ ಮೂರು ಏಕದಿನ ಸರಣಿಯಲ್ಲಿಯೂ ಭಾರತ ಅಜೇಯವಾಗುಳಿದಿದೆ. ಆದರೆ ಟೆಸ್ಟ್ ನಾಯಕನಾಗಿ ರೋಹಿತ್ ಶರ್ಮಾ ಇನ್ನೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ. ರೋಹಿತ್ ಶರ್ಮಾ ನಾಯಕನಾಗಿ ಆಟಗಾರನಾಗಿ ಸಾಕಷ್ಟು ಪಂದ್ಯಗಳಲ್ಲಿ ಮಿಂಚಿದ್ದಾರೆ. ಆದರೆ ನಾಯಕನಾಗಿ ವಿರಾಟ್ ಕೊಹ್ಲಿ ದಾಖಲಿಸಿರುವ ಈ ಮೂರು ದಾಖಲೆಗಳನ್ನು ಮಾತ್ರ ವಿರಾಟ್ ಕೊಹ್ಲಿಯಿಂದ ಮುರಿಯುವುದು ಅಸಾಧ್ಯ. ಹಾಗಾದರೆ ಯಾವುದು ಆ ಮೂರು ದಾಖಲೆ? ಮುಂದೆ ಓದಿ..

CWG 2022: ಕಾಮನ್‍ವೆಲ್ತ್ ಮುಕ್ತಾಯ; ಭಾರತದ ಪರ ಪದಕ ಗೆದ್ದ ಎಲ್ಲಾ ಕ್ರೀಡಾಪಟುಗಳ ಪಟ್ಟಿCWG 2022: ಕಾಮನ್‍ವೆಲ್ತ್ ಮುಕ್ತಾಯ; ಭಾರತದ ಪರ ಪದಕ ಗೆದ್ದ ಎಲ್ಲಾ ಕ್ರೀಡಾಪಟುಗಳ ಪಟ್ಟಿ

ಭಾರತದ ಟೆಸ್ಟ್ ನಾಯಕನಾಗಿ ಅತೀ ಹೆಚ್ಚು ಪಂದ್ಯ

ಭಾರತದ ಟೆಸ್ಟ್ ನಾಯಕನಾಗಿ ಅತೀ ಹೆಚ್ಚು ಪಂದ್ಯ

ರೋಹಿತ್ ಶರ್ಮಾ 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ವೈಟ್‌ಬಾಲ್ ಮಾದರಿಯಲ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಎನಿಸಿಕೊಂಡರು. ಆದರೆ ಟೆಸ್ಟ್ ತಂಡದಲ್ಲಿ ಆ ರೀತಿಯ ಪ್ರದರ್ಶನ ನೀಡಲು ಅವರಿಂದ ಸಾಧ್ಯವಾಗಿರಲಿಲ್ಲ. 2019ರಲ್ಲಿ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ದ್ವಿಶತಕ ಸಿಡಿಸಿದ ಬಳಿಕವೇ ಟೆಸ್ಟ್ ಮಾದರಿಯಲ್ಲಿ ಮಿಂಚಲು ಆರಂಭಿಸಿದ್ದರು. ಆದರೆ ಮತ್ತೊಂದೆಡೆ ವಿರಾಟ್ ಕೊಹ್ಲಿ 2014ರಲ್ಲಿಯೇ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಂಡು 68 ಪಂದ್ಯಗಳಲ್ಲಿ ಸುದೀರ್ಘ ಮಾದರಿಯಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ಮೂಲಕ ಭಾರತ ತಂಡವನ್ನು ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ಬಾರಿ ಮುನ್ನಡೆಸಿದ ನಾಯಕ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಈಗಾಗಲೇ 34ರ ಹರೆಯದಲ್ಲಿದ್ದು ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಈ ದಾಖಲೆ ಮುರಿಯುವುದು ಅಸಾಧ್ಯ.

ನಾಯಕನಾಗಿ ಅತಿ ಹೆಚ್ಚು ದ್ವಿಶತಕ

ನಾಯಕನಾಗಿ ಅತಿ ಹೆಚ್ಚು ದ್ವಿಶತಕ

ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ ಕೇವಲ ಒಂದು ದ್ವಿಶತಕವನ್ನು ಮಾತ್ರವೇ ಗಳಿಸಿದ್ದಾರೆ. ಇನ್ನು ಕೂಡ ರೋಹಿತ್ ಎರಡ್ಮೂರು ವರ್ಷಗಳ ಕಾಲ ಟೆಸ್ಟ್ ನಾಯಕನಾಗಿ ಮುಂದುವರಿದರು ಕೂಡ ವಿರಾಟ್ ಕೊಹ್ಲಿ ದಾಖಲೆ ಮುರಿಯುವುದು ಅಸಾಧ್ಯ. ಯಾಕೆಂದರೆ ಟೆಸ್ಟ್ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಬರೊಬ್ಬರಿ ಏಳು ದ್ವಿಶತಕವನ್ನು ಗಳಿಸಿದ್ದಾರೆ. 2016-2019ರ ಅವಧಿಯಲ್ಲಿ ಈ ಸಾಧನೆಯನ್ನು ಕೊಹ್ಲಿ ಮಾಡಿದ್ದಾರೆ. ಅದರಲ್ಲೂ ಕೇವಲ ಒಂದು ವರ್ಷದ ಅವಧಿಯಲ್ಲಿ ಕೊಹ್ಲಿ ದ್ವಿಶತಕ ಸಿಡಿಸಿದ್ದಾರೆ. ವೃತ್ತಿ ಜೀವನದ ಅತ್ಯುನ್ನತ ಕಾಲಘಟ್ಟದಲ್ಲಿ ಕೊಹ್ಲಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗುದ್ದರು. ಹೀಗಾಗಿ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ನಾಯಕನಾಗಿ ಅತಿ ಹೆಚ್ಚು ದ್ವಿ ಶತಕದ ದಾಖಲೆ ಮುರಿಯುವುದು ಕೂಡ ರೋಹಿತ್ ಶರ್ಮಾರಿಂದ ಅಸಾಧ್ಯ.

ಏಕದಿನ ನಾಯಕನಾಗಿ ಅತೀ ಹೆಚ್ಚು ರನ್

ಏಕದಿನ ನಾಯಕನಾಗಿ ಅತೀ ಹೆಚ್ಚು ರನ್

ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ಅನೇಕ ಅದ್ಭುತ ದಾಖಲೆಗಳನ್ನು ಹೊಂದಿದ್ದಾರೆ. 3 ದ್ವಿಶತಕ ಗಳಿಸುವ ಮೂಲಕ ಅತಿ ಹೆಚ್ಚು ದ್ವಿಶತಕದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದ್ದರೆ 264 ರನ್‌ಗಳಿಸಿ ವೈಯಕ್ತಿಕ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಕೂಡ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಆದರೆ 34ರ ಹರೆಯದಲ್ಲಿ ಭಾರತ ತಂಡದ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ನಾಯಕನಾಗಿ ಅತಿ ಹೆಚ್ಚು ರನ್‌ಗಳ ದಾಖಲೆಯನ್ನು ಮುರಿಯುವುದು ಕೂಡ ಸಾಧ್ಯವೇ ಇಲ್ಲ. ಏಕದಿನ ಮಾದರಿಯಲ್ಲಿ ಕೊಹ್ಲಿ ಭಾರತ ತಂಡದ ನಾಯಕನಾಗಿ 95 ಪಂದ್ಯಗಳಲ್ಲಿ ಮುನ್ನಡೆಸಿದ್ದು 5449 ರನ್‌ಗಳನ್ನು ಗಳಿಸಿದ್ದಾರೆ. ಹೀಗಾಗಿ ಇಷ್ಟು ಬೃಹತ್ ಮೊತ್ತ ರೋಹಿತ್ ಶರ್ಮಾರಿಂದ ಗಳಿಸುವುದು ಅಸಾಧ್ಯ.

Story first published: Tuesday, August 9, 2022, 18:05 [IST]
Other articles published on Aug 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X