ಜಿಂಬಾಬ್ವೆ ನೆಲದಲ್ಲಿ ಪದಾರ್ಪಣೆ ಮಾಡಿದ ಈ ನಾಲ್ಕು ಭಾರತೀಯರು ಮತ್ತೆ ಭಾರತದ ಪರ ಆಡಿಯೇ ಇಲ್ಲ!

ಟೆಸ್ಟ್ ಆಡುವ ಕ್ರಿಕೆಟ್ ದೇಶಗಳ ಪೈಕಿ ಜಿಂಬಾಬ್ವೆ ತಂಡ ದುರ್ಬಲ ತಂಡ ಎನಿಸಿಕೊಂಡಿದೆ. ಹೀಗಾಗಿ ಜಿಂಬಾಬ್ವೆಗೆ ಪ್ರವಾಸ ತೆರಳುವ ಸಂದರ್ಭ ಬಂದಾಗ ಅಗ್ರ ತಂಡಗಳು 'ಬಿ' ತಂಡವನ್ನು ಜಿಂಬಾಬ್ವೆ ಪ್ರವಾಸಕ್ಕೆ ಕಳುಹಿಸುವುದು ಸಾಮಾನ್ಯವಾಗಿದೆ. ಭಾರತ ಕೂಡ ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದಾಗ ಇದೇ ರೀತಿ ಮಾಡಿಕೊಂಡು ಬಂದಿದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶವನ್ನು ನೀಡಿಕೊಂಡು ಬಂದಿದೆ.

ಈ ಹಿಂದೆ 2010 ಮತ್ತು 2016ರಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದಾಗಲೂ ಕೆಲವು ಆಟಗಾರರು ಈ ಸರಣಿಯ ಮೂಲಕ ಪದಾರ್ಪಣೆ ಮಾಡಿದ್ದಾರೆ. ಕೆಎಲ್ ರಾಹುಲ್ ಕೂಡ 2016ರ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಈ ಬಾರಿ ಅವರು ಭಾರತ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಕೆಲ ಆಟಗಾರರು ಜಿಂಬಾಬ್ವೆ ನೆಲದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಬಳಿಕ ಆ ಮಾದರಿಯಲ್ಲಿ ಮತ್ತೆ ಭಾರತ ತಂಡದಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅಂಥಾ ನಾಲ್ವರು ಆಟಗಾರರ ಬಗ್ಗೆ ಮುಂದೆ ಓದಿ..

IND vs PAK ಪಂದ್ಯಕ್ಕೆ ಭರ್ಜರಿ ತಯಾರಿ; ಆಮ್ಲಾರ ಮತ್ತೊಂದು ODI ದಾಖಲೆ ಮುರಿದ ಬಾಬರ್ ಅಜಂIND vs PAK ಪಂದ್ಯಕ್ಕೆ ಭರ್ಜರಿ ತಯಾರಿ; ಆಮ್ಲಾರ ಮತ್ತೊಂದು ODI ದಾಖಲೆ ಮುರಿದ ಬಾಬರ್ ಅಜಂ

ಚೊಚ್ಚಲ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದ ಫೈಜ್ ಫಜಲ್

ಚೊಚ್ಚಲ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದ ಫೈಜ್ ಫಜಲ್

2016ರಲ್ಲಿ ಭಾರತ ಜಿಂಬಾಬ್ವೆಗೆ ಪ್ರವಾಸ ಕೈಗೊಂಡಿದ್ದಾಗ ಎಡಗೈ ದಾಂಡಿಗ ಫೈಜ್ ಫಜಲ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ತಮ್ಮ ಪ್ರಥಮ ಪಂದ್ಯದಲ್ಲಿಯೇ ಫಜಲ್ ಭರ್ಜರಿ ಅರ್ಥಶತಕ ಸಿಡಿಸಿದ್ದರು. ಪದಾರ್ಪಣಾ ಪಂದ್ಯದಲ್ಲಿ ಫಜಲ್ 55 ರನ್‌ಗಳ ಕೊಡುಗೆ ನೀಡಿದ್ದರು. ಆದರೆ ಮತ್ತೊಮ್ಮೆ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಅವರಿಗೆ ದೊರೆಯಲಿಲ್ಲ.

ಮಂದೀಪ್ ಸಿಂಗ್

ಮಂದೀಪ್ ಸಿಂಗ್

ಈ ಪಟ್ಟಿಯಲ್ಲಿ ಬರುವ ಮತ್ತೋರ್ವ ಆಟಗಾರ ಮಂದೀಪ್ ಸಿಂಗ್. ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದಾಗ ಟಿ20 ಸರಣಿಯ ಮೂರು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದರು ಮಂದೀಪ್ ಸಿಂಗ್. ಇವುಗಳಲ್ಲಿ 87 ರನ್‌ಗಳನ್ನು ಗಳಿಸಿದ್ದರು. ಆದರೆ ಫೈಜಲ್ ರೀತಿಯಲ್ಲಿಯೇ ಮಂದೀಪ್ ಸಿಂಗ್ ಕೂಡ ಮತ್ತೆ ಟಿ20 ತಂಡದಲ್ಲಿ ಆಡುವ ಅವಕಾಶ ಮಂದೀಪ್ ಸಿಂಗ್‌ಗೆ ದೊರೆಯಲಿಲ್ಲ.

2010ರಲ್ಲಿ ಪದಾರ್ಪಣೆ ಮಾಡಿದ್ದ ಪಂಕಜ್ ಸಿಂಗ್

2010ರಲ್ಲಿ ಪದಾರ್ಪಣೆ ಮಾಡಿದ್ದ ಪಂಕಜ್ ಸಿಂಗ್

2010ರಲ್ಲಿ ಭಾರತ ಕ್ರಿಕೆಟ್ ತಂಡ ತ್ರಿಕೋನ ಸರಣಿಗಾಗಿ ಜಿಂಬಾಬ್ವೆಗೆ ಪ್ರವಾಸ ಕೈಗೊಂಡಿದ್ದಾಗ ಭಾರತ ತಂಡದಲ್ಲಿ ಪಂಕಜ್ ಸಿಂಗ್ ಕೂಡ ಅವಕಾಶವನ್ನು ಪಡೆದುಕೊಂಡಿದ್ದರು. ಈ ಸರಣಿಯ ಮೂಲಕ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ಅವರಿಗೆ ಆಡುವ ಅವಕಾಶ ದೊರೆಯಿತು. ಈ ಮೂಲಕ ಅವರು ಏಕೈಕ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಮಾತ್ರವೇ ಆಡುವ ಅವಕಾಶವನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ವಿಕೆಟ್ ಕೀಪರ್ ಬ್ಯಾಟರ್ ನಮನ್ ಓಜಾ

ವಿಕೆಟ್ ಕೀಪರ್ ಬ್ಯಾಟರ್ ನಮನ್ ಓಜಾ

ವಿಕೆಟ್ ಕೀಪರ್ ನಮನ್ ಓಜಾ ಕೂಡ 2010ರಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದಾಗ ತ್ರೊಕೋನ ಸರಣಿಯಲ್ಲಿ ಭಾಗಿಯಾದ ತಂಡಗಳಲ್ಲಿ ಒಂದಾದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ನಮನ್ ಓಜಾಗೆ ಕೂಡ ಅದಾದ ಬಳಿಕ ಭಾರತ ಏಕದಿನ ತಂಡದಲ್ಲಿ ಆಡುವ ಅವಕಾಶ ದೊರೆಯಲೇ ಇಲ್ಲ. ಈ ಮೂಲಕ ಭಾರತದ ಪರವಾಗಿ ಒಂದೇ ಪಂದ್ಯ ಆಡಿದ ಆಟಗಾರ ಎನಿಸಿದ್ದಾರೆ ನಮನ್ ಓಜಾ.

For Quick Alerts
ALLOW NOTIFICATIONS
For Daily Alerts
Story first published: Friday, August 19, 2022, 23:14 [IST]
Other articles published on Aug 19, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X