ಐಪಿಎಲ್ 2022: ಕಡಿಮೆ ಬೆಲೆಗೆ ರೀಟೈನ್ ಆದ ಕೊಹ್ಲಿ, ಧೋನಿ: ವೇತನ ಕಡಿತಕ್ಕೆ ಹೇಗೆ ಒಪ್ಪಿಕೊಂಡ್ರು?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಗೆ ವೇದಿಕೆ ಸಿದ್ಧಗೊಂಡಿದ್ದು, ಆಟಗಾರರ ರೀಟೈನ್ ಪಟ್ಟಿ ಬಿಡುಗಡೆಗೊಂಡಿದೆ. ಇನ್ನೇನಿದ್ರೂ ಆಟಗಾರರ ಹರಾಜಿನ ಪ್ರಕ್ರಿಯೆ ಮಾತ್ರ ಪ್ರಾರಂಭಗೊಳ್ಳುವುದಷ್ಟೇ ಬಾಕಿ ಉಳಿದಿದೆ. ಎಂಟು ಹಳೆಯ ಐಪಿಎಲ್ ಫ್ರಾಂಚೈಸಿಗಳಲ್ಲಿ ಎಲ್ಲವೂ ನಾಲ್ವರು ಆಟಗಾರರನ್ನ ರೀಟೈನ್ ಮಾಡಿಕೊಂಡಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್, ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಸಂಪೂರ್ಣ ನಾಲ್ವರು ಆಟಗಾರರನ್ನಷ್ಟೇ ರೀಟೈನ್ ಮಾಡಿಕೊಂಡಿದೆ. ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಹೊರತುಪಡಿಸಿ ಉಳಿದ ತಂಡಗಳು ಮೂವರು ಆಟಗಾರರನ್ನ ರೀಟೈನ್ ಮಾಡಿಕೊಂಡಿದೆ.

ರೀಟೈನ್ ಪಟ್ಟಿ ಹೊರಬೀಳುತ್ತಿದ್ದಂತೆ ಕೆಲವೊಂದು ಆಶ್ಚರ್ಯ ಕಾದಿತ್ತು. ಮೊದಲನೆಯದು ಪ್ರಮುಖ ಸ್ಟಾರ್ ಆಟಗಾರರನ್ನ, ಕಳೆದ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರರನ್ನೇ ಕೆಲ ಫ್ರಾಂಚೈಸಿಗಳು ಕೈ ಬಿಟ್ಟಿರುವುದು. ಮತ್ತೊಂದು ವಿಚಾರ ಏನಂದ್ರೆ ಆಟಗಾರರ ರೀಟೈನ್ ಆಯ್ಕೆಯಲ್ಲಿ ಕಂಡುಬಂದಿರುವ ಬದಲಾವಣೆಗಳು.

ಇದರ ನಡುವೆ ಹೆಚ್ಚಿನ ತಂಡಗಳು ತಮ್ಮ ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿವೆ ಮತ್ತು ಕೆಲವು ತಮ್ಮ ದೊಡ್ಡ ಆಟಗಾರರ ಮನವೊಲಿಸುವಲ್ಲಿ ವಿಫಲವಾಗಿವೆ. ಈ ಪಂದ್ಯಾವಳಿಯಲ್ಲಿ ಹಣವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ಸುಮಾರು 23 ಆಟಗಾರರು ತಮ್ಮ ಮಾರುಕಟ್ಟೆ ಮೌಲ್ಯಗಳಿಗಿಂತ ಹೆಚ್ಚಿನ ವೇತನವನ್ನು ಪಡೆದಿದ್ದಾರೆ. ಆದ್ರೆ ಕೆಲವು ಖ್ಯಾತ ನಾಮ ಆಟಗಾರರೇ ವಿವಿಧ ಕಾರಣಗಳಿಂದ ಕಳೆದ ಸೀಸನ್‌ಗಿಂತ ತಮ್ಮ ವೇತನವನ್ನು ಕಡಿಮೆ ಪಡೆಯುತ್ತಿದ್ದಾರೆ.

ಸುನಿಲ್ ನರೈನ್

ಸುನಿಲ್ ನರೈನ್

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಭಾಗವಾಗಿರುವ ವೆಸ್ಟ್‌ ಇಂಡೀಸ್ ಮಿಸ್ಟರಿ ಸ್ಪಿನ್ನರ್ ಸುನಿಲ್ ನರೈನ್, ತಮ್ಮ ಕೈಬೆರಳುಗಳ ಚಾಣಾಕ್ಯತೆಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಭಾರೀ ತೊಂದರೆಯುಂಟು ಮಾಡಬಲ್ಲರು. ಬೌಲಿಂಗ್‌ನಲ್ಲಷ್ಟೇ ಅಲ್ಲದೆ ಬ್ಯಾಟಿಂಗ್‌ನಲ್ಲಿ 161ರ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ.

ಕೆಕೆಆರ್ ತಂಡದ ಅವಿಭಾಜ್ಯ ಅಂಗವಾಗಿರುವ ನರೈನ್ 134 ಪಂದ್ಯಗಳಿಂದ 6.7 ರ ಅದ್ಭುತ ಎಕಾನಮಿಯೊಂದಿಗೆ 143 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಬರೋಬ್ಬರಿ 12.5 ಕೋಟಿ ರೂಪಾಯಿಯ ಬೃಹತ್ ಮೊತ್ತಕ್ಕೆ ಬಿಡ್ ಆಗಿದ್ದ ನರೈನ್ KKR ಪರ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಾಗಿದ್ದರು. ಆದರೆ ಈ ಬಾರಿ ಅರ್ಧಕ್ಕಿಂತ ಕಡಿಮೆ ಮೊತ್ತಕ್ಕೆ ಮಾತ್ರ ಉಳಿಸಿಕೊಂಡಿದ್ದಾರೆ.

ಸುನಿಲ್ ನರೈನ್ ಕೆಕೆಆರ್ ಪರ ಕೇವಲ 6 ಕೋಟಿ ರೂಪಾಯಿಗೆ ಕೆಕೆಆರ್ ಪರ ಆಡಲು ಒಪ್ಪಿಕೊಂಡಿದ್ದಾರೆ. ಈತ ಹರಾಜಿಗೆ ಹೋದ್ರೆ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗುತ್ತಾರೆ ಎಂದು ತಿಳಿದಿದ್ರೂ ಸಹ, ಯಾವುದೇ ಹಿಂಜರಿಕೆಯಿಲ್ಲದೆ KKR ಫ್ರಾಂಚೈಸಿಯಿಂದ ಪ್ರಸ್ತಾಪವನ್ನು ಸ್ವೀಕರಿಸಿದರು.

ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಬಿಟ್ಟದ್ದು ನೀತಿಗೆಟ್ಟ ಕೆಲಸ ಎಂದು ಕಿಡಿಕಾರಿದ ಮಾಲೀಕರು!

ಗ್ಲೆನ್ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ 14ನೇ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆರು 50 ಪ್ಲಸ್ ಸ್ಕೋರ್‌ಗಳೊಂದಿಗೆ 42.15 ಸರಾಸರಿಯಲ್ಲಿ 513 ರನ್ ಗಳಿಸಿದರು. ಕಳೆದ ಸೀಸನ್‌ನಲ್ಲಿ ಆರ್‌ಸಿಬಿಗೆ ಮಧ್ಯಮ ಕ್ರಮಾಂಕದಲ್ಲಿ ಮತ್ತು ಬೌಲಿಂಗ್ ವಿಭಾಗದಲ್ಲಿ ಸಮತೋಲನವನ್ನು ಒದಗಿಸಿದ ಅವರು ಆರ್‌ಸಿಬಿ ತಂಡಕ್ಕೆ ಬಲ ತುಂಬಿದ್ದಾರೆ.

ಮೈದಾನದ ಯಾವುದೇ ಮೂಲೆಗೆ ಚೆಂಡನ್ನ ಅಟ್ಟುವಂತಹ 360 ಡಿಗ್ರಿ ಪ್ಲೇಯರ್‌ ಮ್ಯಾಕ್ಸ್‌ವೆಲ್ ಎಬಿಡಿ ನಿರ್ಗಮನದ ಬಳಿಕ ಆರ್‌ಸಿಬಿ ತಂಡದ ಪ್ರಮುಖ ಶಕ್ತಿಯಾಗಿ ಉಳಿದಿದ್ದಾರೆ. ಕಳೆದ ಸೀಸನ್‌ನಲ್ಲಿ 14.25 ಕೋಟಿ ರೂ. ಆರ್‌ಸಿಬಿ ಪರ ಬ್ಯಾಟ್ ಬೀಸಿದ್ದರು. ಆದರೆ ಈಗ ಆರ್‌ಸಿಬಿ ಫ್ರಾಂಚೈಸಿ 11 ಕೋಟಿ ಬೆಲೆಗೆ ಎರಡನೇ ಆಟಗಾರನಾಗಿ ರೀಟೈನ್ ಮಾಡಿಕೊಂಡಿದೆ. ಪ್ರತಿ ವರ್ಷ ಹರಾಜಿನ ಸಮಯದಲ್ಲಿ ಅವರು ಯಾವಾಗಲೂ ತಮ್ಮ ಹೆಸರಿನ ಹಿಂದೆ ದೊಡ್ಡ ಬೆಲೆಯನ್ನು ಹೊಂದಿರುತ್ತಾರೆ.

2020ರ ಐಪಿಎಲ್ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್‌ ಪರ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದ ಮ್ಯಾಕ್ಸ್‌ವೆಲ್ ಕೇವಲ 108 ರನ್ ಗಳಿಸಿದರು. ಆದ್ರೆ ನಂತರದ ಸೀಸನ್‌ನಲ್ಲಿ ಆರ್‌ಸಿಬಿ ಪರ ಅದ್ಭುತ ಪ್ರದರ್ಶನ ತೋರಿದ್ದಾರೆ. ಮುಂಬರುವ ಸೀಸನ್‌ಗಳಲ್ಲಿ ಅವರ ಮೇಲೆ ಭಾರಿ ನಿರೀಕ್ಷೆ ಇದೆ. ಸ್ಟಾರ್ ಎಬಿ ಡಿವಿಲಿಯರ್ಸ್ ಇತ್ತೀಚೆಗೆ ನಿವೃತ್ತಿ ಹೊಂದಿದ್ದರಿಂದ ವಿರಾಟ್ ಜೊತೆಗೆ ಮ್ಯಾಕ್ಸ್‌ವೆಲ್ ತಂಡಕ್ಕೆ ಭವಿಷ್ಯವಾಗಲಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಹಲವು ವರ್ಷಗಳ ಕಾಲ ತಂಡವನ್ನ ಮುನ್ನೆಡೆಸಿದ್ದ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಾಗಿದ್ದರು. ಇವರು ಅತಿ ಹೆಚ್ಚು ಸಂಬಳ 2017 ರಿಂದ 17 ಕೋಟಿ ರೂಪಾಯಿ.

ಹೀಗೆ ದೊಡ್ಡ ಮಟ್ಟಿಗೆ ವೇತನ ಪಡೆಯುತ್ತಿದ್ದ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇದರ ಜೊತೆಗೆ ಅವರ ವೇತನ ಪ್ರಮಾಣವು ಕಡಿಮೆಯಾಗಿದೆ.

ಐಪಿಎಲ್‌ನ ಉದ್ಘಾಟನಾ ಆವೃತ್ತಿಯಿಂದಲೂ ವಿರಾಟ್ ಆರ್‌ಸಿಬಿಗಾಗಿ ಆಡುತ್ತಿದ್ದಾರೆ ಮತ್ತು ಪಂದ್ಯಾವಳಿಯಲ್ಲಿ ಮತ್ತು ಫ್ರಾಂಚೈಸಿಗಾಗಿ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಕೊಹ್ಲಿ 207 ಪಂದ್ಯಗಳಲ್ಲಿ 6283 ರನ್‌ಗಳೊಂದಿಗೆ ಅತಿ ಹೆಚ್ಚು ಐಪಿಎಲ್ ರನ್ ಗಳಿಸಿದವರ ಪಟ್ಟಿಯಲ್ಲಿ ಎತ್ತರದಲ್ಲಿದೆ. ಆದರೂ ಈ ಬಾರಿ 2 ಕೋಟಿ ರೂಪಾಯಿಗಳ ವೇತನ ಕಡಿತವನ್ನು ಒಪ್ಪಿಕೊಂಡಿದ್ದಾರೆ. ಐಪಿಎಲ್‌ನ ಈ ಆವೃತ್ತಿಯಲ್ಲಿ ರೂ. 15 ಕೋಟಿ ರೂಪಾಯಿ ಪಡೆಯಲಿದ್ದಾರೆ.

ಇತ್ತೀಚೆಗಷ್ಟೇ ಕೊಹ್ಲಿ ನಾಯಕತ್ವದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದು, ಸಂಬಳ ಕಡಿತಕ್ಕೆ ಒಪ್ಪಿಕೊಳ್ಳಲು ಇದೇ ಕಾರಣವಿರಬಹುದು. ಅವರ ಈ ನಿರ್ಧಾರವು ಹೆಚ್ಚು ಪ್ರಶಂಸನೀಯವಾಗಿದೆ ಮತ್ತು ತಂಡವನ್ನು ಮತ್ತಷ್ಟು ಸಂಯೋಜಿಸಲು ಉಳಿದ ಸ್ಥಾನ ತುಂಬಲು ಹರಾಜಿಗೆ ತೆರಳುವಾಗ ಪರ್ಸ್ ವ್ಯಾಪ್ತಿಯನ್ನ ಹೆಚ್ಚಿಸಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ಸತತ ಮೂರನೇ ಗೆಲುವಿನ ಮೇಲೆ ಟೀಮ್ ಇಂಡಿಯಾ ಕಣ್ಣು

ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಲು ವಿರಾಟ್ ಕೊಹ್ಲಿ ಸಿದ್ಧ | Oneindia Kannada
ಎಂ.ಎಸ್ ಧೋನಿ

ಎಂ.ಎಸ್ ಧೋನಿ

ಚೆನ್ನೈ ಸೂಪರ್ ಕಿಂಗ್ಸ್‌ನ ಚಾಂಪಿಯನ್ ನಾಯಕ, ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈ ತಂಡದ ಬೆನ್ನಲುಬು ಆಗಿದ್ದಾರೆ. ಈತನನ್ನ ಚೆನ್ನೈ ಅಭಿಮಾನಿಗಳು ದೇವರಂತೆ ಪೂಜಿಸುವ ಮೌಲ್ಯಯುತ ಆಟಗಾರ.

ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಕಾಣಿಸಿಕೊಂಡಾಗಿನಿಂದ ಧೋನಿ ಚೆನ್ನೈ ಪರ ವೇತನದಲ್ಲಿ ಸಿಂಹಪಾಲು ಪಡೆಯುತ್ತಿದ್ದಾರೆ. 2008 ರಲ್ಲಿ ಸಿಎಕ್‌ಕೆ ಅವರನ್ನು USD 1.5 ಮಿಲಿಯನ್‌ಗೆ ಖರೀದಿಸಿದಾಗ ಅವರು ಅತ್ಯಂತ ದುಬಾರಿ ಆಯ್ಕೆಯಾಗಿದ್ದರು. ಆದ್ರೆ ಈತ ಪಡೆದ ಹಣಕ್ಕಿಂತ ಹೆಚ್ಚಾಗಿ ತಂಡವನ್ನ ಮುನ್ನೆಡೆಸಿದ್ದು, ಅವರ ಬೆಲೆಯನ್ನು ಸಮರ್ಥಿಸುತ್ತದೆ . ಜೊತೆಗೆ ಅವರು ನಾಲ್ಕು ಐಪಿಎಲ್ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಐಪಿಎ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (220) ಪಂದ್ಯಗಳನ್ನಾಡಿರುವ ಧೋನಿ ಟೂರ್ನಿಯಲ್ಲಿ ಎಂಟನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. 40ರ ಹರೆಯದ ಆಟಗಾರ ಈಗ ಸಂಭಾವನೆಯಲ್ಲೂ ಕಡಿತಗೊಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರು ತಲ ಮಹೇಂದ್ರ ಸಿಂಗ್ ಧೋನಿ ರೀಟೈನ್ ಆದ ಎರಡನೇ ಆಟಗಾರನಾಗಿದ್ದು, 12 ಕೋಟಿ ರೂಪಾಯಿಗೆ ಧೋನಿ ತಂಡಕ್ಕೆ ಸೇರ್ಪಡೆಯಾಗಿದ್ದು ಆಶ್ಚರ್ಯದ ಜೊತೆಗೆ ಸಿಎಸ್‌ಕೆ ಪರ್ಸ್‌ ಮೌಲ್ಯ ಹೆಚ್ಚಿಸಿದೆ.

ಸಿಎಸ್‌ಕೆ ಪರ ರವೀಂದ್ರ ಜಡೇಜಾ ರೀಟೈನ್ ಆದ ಮೊದಲ ಪ್ಲೇಯರ್ ಆಗಿ ಹೊರಹೊಮ್ಮಿದ್ದು, ಜಡ್ಡು 16 ಕೋಟಿಗೆ ರೀಟೈನ್ ಆಗಿದ್ದಾರೆ. ಈ ಮೂಲಕ ಧೋನಿ ತಮ್ಮ ಮೊದಲ ಸ್ಥಾನವನ್ನ ಎಡಗೈ ಆಲ್‌ರೌಂಡರ್‌ಗೆ ಬಿಟ್ಟುಕೊಟ್ಟಿದ್ದಾರೆ.

ಸಿಎಸ್‌ಕೆ ಮೂರು ಮತ್ತು ನಾಲ್ಕನೇ ಆಟಗಾರರ ರೀಟೈನ್ ಆಗಿ ಮೋಯಿನ್ ಅಲಿ ಹಾಗೂ ರುತುರಾಜ್ ಗಾಯಕ್ವಾಡ್‌ರನ್ನ ಆಯ್ಕೆ ಮಾಡಿಕೊಂಡಿದೆ. ಮೋಯಿನ್ ಅಲಿಯನ್ನ 8 ಕೋಟಿ ರೂಪಾಯಿಗೆ ರೀಟೈನ್ ಮಾಡಿಕೊಳ್ಳಲಾಗಿದ್ದು, ರುತುರಾಜ್ ಗಾಯಕ್ವಾಡ್‌ರನ್ನ ಸಿಎಸ್‌ಕೆ 6 ಕೋಟಿ ರೂಪಾಯಿಗೆ ರೀಟೈನ್ ಮಾಡಿದೆ.

ಇನ್ನು ಸಿಎಸ್‌ಕೆ ತಂಡದಲ್ಲಿ ರಾಬಿನ್ ಉತ್ತಪ್ಪ, ಫಾಫ್ ಡುಪ್ಲೆಸಿಸ್‌ ಅಂಬಟಿ ರಾಯುಡು ರಂತಹ ಅನುಭವಿ ಆಟಗಾರರನ್ನ ಹರಾಜಿಗೆ ಬಿಡಲಾಗಿದ್ದು, ಸಿಎಸ್‌ಕೆ 48 ಕೋಟಿ ರೂಪಾಯಿಗಳ ಪರ್ಸ್‌ನೊಂದಿಗೆ ಹರಾಜನ್ನು ಪ್ರವೇಶಿಸಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, December 2, 2021, 13:49 [IST]
Other articles published on Dec 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X