ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಷ್ಟ್ರೀಯ ತಂಡಗಳ ನಾಯಕರಾಗಿದ್ದರೂ ಈ 5 ಕ್ರಿಕೆಟಿಗರು ತಮ್ಮದೇ ದೇಶದ ಟಿ20 ಲೀಗ್‌ನಲ್ಲಿ ಆಡುತ್ತಿಲ್ಲ

These 5 international team captains do not participate in their home countrys T20 League

ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಾದವರು ತಂಡದ ಇತರ ಆಟಗಾರರಿಗಿಂತ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವುದು ಸಾಮಾನ್ಯ. ನಾಯಕನಾದವರು ತಂಡದ ಮುಖವಾಣಿಯಂತಿದ್ದು ಎಲ್ಲೆಲ್ಲಾ ತಂಡದ ಲೋಗೋ ಕಾಣಿಸಿಕೊಳ್ಳುತ್ತದೋ ಅಂಥಾ ಕಡೆಗಳಲ್ಲಿ ನಾಯಕನ ಫೋಟೋ ಕೂಡ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.

ಇನ್ನು ಅಂತಾರಾಷ್ಟ್ರೀಯ ತಂಡದ ನಾಯಕನಾದವನಿಗೆ ಹೆಚ್ಚಿನ ಪ್ರಾಮುಖ್ಯತೆ, ಬೇಡಿಕೆ ದೊರೆಯುತ್ತದೆ ಎಂಬುದು ಕೂಡ ದೊಡ್ಡ ಸಂಗತಿಯಲ್ಲ. ಈ ಕಾರಣದಿಂದಾಗಿಯೇ ಟಿ20 ಲೀಗ್‌ನಲ್ಲಿ ಫ್ರಾಂಚೈಸಿಗಳು ಇಂಥಾ ಆಟಗಾರರಿಗೆ ಹೆಚ್ಚಿನ ಮಣೆ ಹಾಕುತ್ತವೆ. ನಾಯಕತ್ವದ ಗುಣ, ಕೌಶಲ್ಯ, ಅನುಭವ ಮುಂತಾದವು ಆಯಾ ತಂಡಗಳಿಗೆ ಹೆಚ್ಚು ಉಪಯುಕ್ತವಾಗುತ್ತವೆ ಅನ್ನೋದು ಇದರ ಹಿಂದಿರುವ ಸಹಜ ಲೆಕ್ಕಾಚಾರವಾಗಿರುತ್ತದೆ. ಇನ್ನು ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಆಡುವುದು, ಎಲ್‌ಪಿಎಲ್‌ನಲ್ಲಿ ಶ್ರೀಲಂಕಾ ನಾಯಕ ದಾಸುನ್ ಶನಕ ಭಾಗಿಯಾಗುವುದು, ಬಾಬರ್ ಅಜಂ ಪಿಎಸ್‌ಎಲ್‌ನ ಪ್ರಮುಖ ಆಕರ್ಷಣೆಯಾಗಿರುವುದು ಸಾಮಾನ್ಯ ಸಂಗತಿ ನಿಜ.

WFI Controversy: ಬ್ರಿಜ್ ಭೂಷಣ್ ಶರಣ್ ಸಿಂಗ್ ರಾಜೀನಾಮೆಗೆ 24 ಗಂಟೆಗಳ ಗಡುವು ನೀಡಿದ ಕ್ರೀಡಾ ಸಚಿವಾಲಯWFI Controversy: ಬ್ರಿಜ್ ಭೂಷಣ್ ಶರಣ್ ಸಿಂಗ್ ರಾಜೀನಾಮೆಗೆ 24 ಗಂಟೆಗಳ ಗಡುವು ನೀಡಿದ ಕ್ರೀಡಾ ಸಚಿವಾಲಯ

ಆದರೆ ಅಚ್ಚರಿಯೆಂಬಂತೆ ಈ ವರದಿಯಲ್ಲಿ ಅಂತಾರಾಷ್ಟ್ರೀಯ ತಂಡದ ನಾಯಕನಾಗಿದ್ದರೂ ತಮ್ಮದೇ ದೇಶದ ಟಿ20 ಲೀಗ್‌ನಲ್ಲಿ ಆಡದ ಐವರು ನಾಯಕರ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ.

ಪ್ಯಾಟ್ ಕಮ್ಮಿನ್ಸ್, ಬಿಗ್‌ಬ್ಯಾಶ್ ಲೀಗ್

ಪ್ಯಾಟ್ ಕಮ್ಮಿನ್ಸ್, ಬಿಗ್‌ಬ್ಯಾಶ್ ಲೀಗ್

ಆಸ್ಟ್ರೇಲಿಯಾದ ಟೆಸ್ಟ್ ಹಾಗೂ ಏಕದಿನ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿರುವ ಕ್ರಿಕೆಟಿಗ ನಾಯಕ ಪ್ಯಾಟ್ ಕಮಿನ್ಸ್. ಆಸ್ಟ್ರೇಲಿಯಾದ ಟಿ20 ತಂಡದ ಪ್ರಮುಖ ಸದಸ್ಯನಾಗಿಯೂ ಕಳೆದ ಹಲವು ವರ್ಷಗಳಿಂದ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹಾಗಿದ್ದರೂ ಆಸ್ಟ್ರೇಲಿಯಾದ ಈ ಸ್ಟಾರ್ ಆಟಗಾರ ಆಸ್ಟ್ರೇಲಿಯಾದ ಟಿ20 ಲೀಗ್ ಬಿಗ್‌ಬ್ಯಾಷ್ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ ಎಂಬುದು ಗಮನಾರ್ಹ ಅಂಶ.

ಟೆಂಬಾ ಬವುಮಾ- SA20

ಟೆಂಬಾ ಬವುಮಾ- SA20

ದಕ್ಷಿಣ ಆಫ್ರಿಕಾ ಏಕದಿನ ಹಾಗೂ ಟಿ20 ತಂಡದ ನಾಯಕ ಟೆಂಬಾ ಬವುಮಾ. ಕಳೆದ ಕೆಲ ವರ್ಷಗಳಿಂದ ಈ ಎರಡು ಮಾದರಿಯಲ್ಲಿಯೂ ಬವುಮಾ ತಮ್ಮ ದೇಶವನ್ನು ಮುನ್ನಡೆಸುತ್ತಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ಟಿ20 ಲೀಗ್ ಎಸ್‌ಎ20 ಟೂರ್ನಿಯ ಚೊಚ್ಚಲ ಆವೃತ್ತಿಯಲ್ಲಿ ಟೆಂಬಾ ಬವುಮಾ ಆಡುತ್ತಿಲ್ಲ. ಟೆಂಬಾ ಬವುಮಾ ತಮ್ಮ ಹೆಸರನ್ನು ನೊಂದಾಯಿಸಿದ್ದರು ಕೂಡ ಯಾವುದೇ ಫ್ರಾಂಚೈಸಿಗಳು ಕೂಡ ದಕ್ಷೀಣ ಆಫ್ರಿಕಾದ ನಾಯಕನ್ನು ಆಯ್ಕೆ ಮಾಡುವ ಮನಸ್ಸು ಮಾಡಲಿಲ್ಲ. ಹೀಗಾಗಿ ಟೆಂಬಾ ಬವುಮಾ ಆಡುವ ಅವಕಾಶ ಕಳೆದುಕೊಂಡಿದ್ದಾರೆ.

ಡೀನ್ ಎಲ್ಗರ್- SA20

ಡೀನ್ ಎಲ್ಗರ್- SA20

ಇನ್ನು ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡದ ನಾಯಕ ಡೀನ್ ಎಲ್ಗರ್ ಕೂಡ ದಕ್ಷಿಣ ಆಫ್ರಿಕಾದ ಟಿ20 ಲೀಗ್ ಎಸ್‌ಎ20 ಟೂರ್ನಿಯ ಮೊದಲ ಆವೃತ್ತಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ಇವರು ಕೂಡ ಟೆಂಬಾ ಬವುಮಾ ರೀತಿಯಲ್ಲೇ ಹರಾಜಿನಲ್ಲಿ ಹೆಸರು ನೊಂದಾಯಿಸಿದ್ದರು ಕೂಡ ಯಾವುದೇ ತಂಡ ಇವರ ಮೇಲೆ ಆಸಕ್ತಿ ತೋರಲಿಲ್ಲ.ಇನ್ನು ಎಲ್ಗರ್ ಇತರ ಯಾವುದೇ ಪ್ರಮುಖ ಟಿ20 ಲೀಗ್‌ನಲ್ಲಿಯೂ ಆಡಿರುವ ಇತಿಹಾಸವಿಲ್ಲ.

ಕೇನ್ ವಿಲಿಯಮ್ಸನ್, ಸೂಪರ್ ಸ್ಮ್ಯಾಶ್

ಕೇನ್ ವಿಲಿಯಮ್ಸನ್, ಸೂಪರ್ ಸ್ಮ್ಯಾಶ್

ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಏಕದಿನ ಹಾಗೂ ಟಿ20 ತಂಡದ ನಾಯಕ. ಆದರೆ ಪ್ರಸ್ತುತ ನಡೆಯುತ್ತಿರುವ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಸೂಪರ್ ಸ್ಮ್ಯಾಶ್ ಲೀಗ್‌ನಲ್ಲಿ ಕೇನ್ ವಿಲಿಯಮ್ಸನ್ ಒಂದೇ ಒಂದು ಪಂದ್ಯವನ್ನು ಆಡಿಲ್ಲ ಎಂಬುದು ಗಮನಾರ್ಹ ಅಂಶ.

ಟಿಮ್ ಸೌಥಿ, ಸೂಪರ್ ಸ್ಮ್ಯಾಶ್

ಟಿಮ್ ಸೌಥಿ, ಸೂಪರ್ ಸ್ಮ್ಯಾಶ್

ಇನ್ನು ನ್ಯೂಜಿಲೆಂಡ್ ತಂಡದ ಟೆಸ್ಟ್ ನಾಯಕ ಟಿಮ್ ಸೌಥಿ ಕೂಡ ಈ ಪಟ್ಟಿಯಲ್ಲಿರುವ ಮತ್ತೋರ್ವ ಪ್ರಮುಖ ನಾಯಕ. ಕೇನ್ ಮಿಲಿಯಮ್ಸನ್ ರೀತಿಯಲ್ಲೇ ಸೌಥಿ ಕೂಡ ಸೂಪರ್ ಸ್ಮ್ಯಾಶ್ ಲೀಗ್‌ನಲ್ಲಿ ಒಂದೇ ಒಂದು ಪಂದ್ಯದಲ್ಲಿ ಆಡಿಲ್ಲ. ಗಮನಾರ್ಹ ಅಂಶವೆಂದರೆ ಕೇನ್ ವಿಲಿಯಮ್ಸನ್ ಹಾಗೂ ಟಿಮ್ ಸೌಥಿ ಇಬ್ಬರು ಕೂಡ ಭಾರತದ ಟಿ20 ಲೀಗ್ ಐಪಿಎಲ್‌ನಲ್ಲಿ ಈ ವರ್ಷ ಭಾಗಿಯಾಗಲಿದ್ದಾರೆ.

Story first published: Friday, January 20, 2023, 16:34 [IST]
Other articles published on Jan 20, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X