ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಪದಾರ್ಪಣೆ ಬಳಿಕ ಮೊದಲ ODI ಪಂದ್ಯವನ್ನಾಡಿದ್ದ ಈ ಐವರು ಈಗಾಗಲೇ ನಿವೃತ್ತಿ!

Rohit Sharma

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರಸ್ತುತ ಮೂರು ಫಾರ್ಮೆಟ್‌ನಲ್ಲಿ ಭಾರತವನ್ನ ಮುನ್ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ (ಜೂನ್ 23) ರೋಹಿತ್ ತನ್ನ 15ನೇ ಅಂತರಾಷ್ಟ್ರೀಯ ಕ್ರಿಕೆಟ್ ವರ್ಷಾಚರಣೆಯಾಗಿದೆ.

ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ ಆಡಿದಾಗ ರೋಹಿತ್ ಭಾರತೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಭಾರತ ಏಕದಿನ ಪಂದ್ಯವನ್ನೂ ಒಂಬತ್ತು ವಿಕೆಟ್‌ಗಳಿಂದ ಗೆದ್ದಿತ್ತು. ಆದರೆ ಈ ಪಂದ್ಯದಲ್ಲಿ ರೋಹಿತ್‌ಗೆ ಬ್ಯಾಟಿಂಗ್‌ ಅವಕಾಶ ಸಿಗಲಿಲ್ಲ.

ರೋಹಿತ್ ಅವರು 2007 ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಅವರ ಕೆಲವು ಅತ್ಯುತ್ತಮ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದ್ದಾರೆ. ರೋಹಿತ್ ಚೊಚ್ಚಲ ಪಂದ್ಯದ ನಂತರ ಅನೇಕ ಆಟಗಾರರು ರಾಷ್ಟ್ರೀಯ ತಂಡಕ್ಕೆ ಬಂದು ಹೋಗಿದ್ದಾರೆ. ಈ ಪಟ್ಟಿಯಲ್ಲಿ ಹಲವರು ಈಗಾಗಲೇ ನಿವೃತ್ತಿಯಾಗಿದ್ದಾರೆ. ಹಾಗಿದ್ರೆ, ರೋಹಿತ್ ಶರ್ಮಾ ಪದಾರ್ಪಣೆ ಬಳಿಕ ಮೊದಲ ಏಕದಿನ ಪಂದ್ಯವನ್ನಾಡಿ ಈಗಗಲೇ ನಿವೃತ್ತಿಯಾದ ಐವರು ಕ್ರಿಕೆಟಿಗರು ಯಾರು ಎಂಬುದನ್ನ ಈ ಕೆಳಗೆ ಕಾಣಬಹುದು.

ಎಸ್‌.ಬದರೀನಾಥ್

ಎಸ್‌.ಬದರೀನಾಥ್

ದೇಶೀಯ ಕ್ರಿಕೆಟ್‌ನ ಸ್ಟಾರ್ ಬ್ಯಾಟ್ಸ್‌ಮನ್ ಸುಬ್ರಮಣ್ಯಂ ಬದರಿನಾಥ್ ಅವರು 20 ಆಗಸ್ಟ್ 2008 ರಂದು ಶ್ರೀಲಂಕಾ ವಿರುದ್ಧ ದಂಬುಲ್ಲಾದಲ್ಲಿ ಭಾರತ ತಂಡದ ಪರ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಬದರಿನಾಥ್ ಏಕದಿನಸ್ವರೂಪದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಲಿಲ್ಲ ಮತ್ತು 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನಾಡಿದರು. ಬದರಿನಾಥ್ ತಮ್ಮ ವೃತ್ತಿಜೀವನದಲ್ಲಿ ಏಳು ಏಕದಿನ ಪಂದ್ಯಗಳಲ್ಲಿ 79 ರನ್ ಗಳಿಸಿದರು ಮತ್ತು ಅವರು 2 ಟೆಸ್ಟ್ ಪಂದ್ಯಗಳಿಂದ 63 ರನ್‌ಗಳನ್ನು ಗಳಿಸಿದರು.

ದೇಶೀಯ ಕ್ರಿಕೆಟ್‌ನಲ್ಲಿ ಸ್ಟಾರ್ ಬ್ಯಾಟರ್ ಆಗಿ ಮಿಂಚಿದ ಬದರಿನಾಥ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಆಗಸ್ಟ್ 2018 ರಲ್ಲಿ ಅವರ ವೃತ್ತಿಜೀವನವು ಅಂತ್ಯಗೊಂಡಿತು.

ಪ್ರಗ್ಯಾನ್ ಓಜಾ

ಪ್ರಗ್ಯಾನ್ ಓಜಾ

ಪ್ರಗ್ಯಾನ್ ಓಜಾ, ಅಶೋಕ್ ದಿಂಡಾ, ಅಭಿಮನ್ಯು ಮಿಥುನ್ ಮತ್ತು ಪ್ರವೀಣ್ ಕುಮಾರ್ ರೋಹಿತ್ ಶರ್ಮಾ ನಂತರ ಪಾದಾರ್ಪಣೆ ಮಾಡಿದ ಇತರ ಬೌಲರ್‌ಗಳು. ಓಜಾ ಹೊರತುಪಡಿಸಿ ಎಲ್ಲರೂ ವೇಗದ ಬೌಲರ್‌ಗಳು. 2008ರಲ್ಲಿ ಪದಾರ್ಪಣೆ ಮಾಡಿದ್ದ ಓಜಾ 18 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದಾರೆ.

ಏಷ್ಯಾ ಕಪ್ 2008 ರಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದ ಓಜಾ ಏಕದಿನ ಫಾರ್ಮೆಟ್‌ನಲ್ಲಿ ಆಡಲು ಹೆಚ್ಚು ಅವಕಾಶವನ್ನು ಪಡೆಯಲಿಲ್ಲ ಮತ್ತು ಕೇವಲ 18 ಪಂದ್ಯಗಳನ್ನು ಆಡಿದರು. ಅವರ ವೃತ್ತಿಜೀವನದಲ್ಲಿ 21 ವಿಕೆಟ್‌ಗಳನ್ನು ಪಡೆದರು. ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಜೊತೆಗೆ ಆಡಿದ ಓಜಾ, 2012 ರ ಶ್ರೀಲಂಕಾ ಪ್ರವಾಸದ ನಂತರ ಭಾರತೀಯ ಏಕದಿನ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಅವರು ಫೆಬ್ರವರಿ 2020 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾದರು.

ಜೋ ರೂಟ್ ರೀತಿಯಲ್ಲಿ ಬ್ಯಾಟ್ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿದ ಕೊಹ್ಲಿ: ನಡೆಯಲಿಲ್ಲ ವಿರಾಟ್ ಮ್ಯಾಜಿಕ್

ಪ್ರವೀಣ್ ಕುಮಾರ್

ಪ್ರವೀಣ್ ಕುಮಾರ್

ಪ್ರವೀಣ್ ಕುಮಾರ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಏಕದಿನ ಸ್ವರೂಪದೊಂದಿಗೆ ಪ್ರಾರಂಭಿಸಿದರು. ಪ್ರವೀಣ್ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ 18 ನವೆಂಬರ್ 2007 ರಂದು ಆಡಿದರು. ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯವನ್ನು ಪ್ರವೀಣ್ ಸ್ವಲ್ಪ ಸಮಯದವರೆಗೆ ಭಾರತಕ್ಕಾಗಿ ಉತ್ತಮ ಪ್ರದರ್ಶನ ನೀಡಿದರು. ಆದರೆ ನಂತರ, ಆಗಾಗ್ಗೆ ಗಾಯಗಳಿಂದಾಗಿ ಅವನ ವೃತ್ತಿಜೀವನವು ಹೆಚ್ಚು ಕಾಲ ಉಳಿಯಲಿಲ್ಲ.

ಪ್ರವೀಣ್ 68 ಏಕದಿನ ಪಂದ್ಯಗಳಲ್ಲಿ 77 ವಿಕೆಟ್ ಪಡೆದಿದ್ದಾರೆ. ಅವರು ಅಕ್ಟೋಬರ್ 2018 ರಲ್ಲಿ ನಿವೃತ್ತರಾದರು, ಈ ಮೂಲಕ ಅವರ ವೃತ್ತಿಜೀವನವನ್ನು ಕೊನೆಗೊಳಿಸಿದರು.

ಟಿ20ಐ ಕ್ರಿಕೆಟ್‌ನ ಒಂದೇ ಪಂದ್ಯದಲ್ಲಿ ನಾಯಕತ್ವ ವಹಿಸಿಕೊಂಡ 5 ಕ್ರಿಕೆಟಿಗರು: ಓರ್ವ ಭಾರತೀಯ ದಿಗ್ಗಜ ಕ್ರಿಕೆಟಿಗ

ವಿನಯ್ ಕುಮಾರ್

ವಿನಯ್ ಕುಮಾರ್

ವಿನಯ್ ಕುಮಾರ್ ಮೇ 2010 ರಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನಾಡಿದರು. ಅವರು ನವೆಂಬರ್ 2013 ರವರೆಗೆ 31 ಏಕದಿನ ಪಂದ್ಯಗಳನ್ನು ಆಡಿದ್ದು,
ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ 9 ಓವರ್‌ಗಳಿಗೆ 102 ರನ್ ಗಳನ್ನ ಬಿಟ್ಟುಕೊಟ್ಟ ನಂತರ ಅವರನ್ನು ತಂಡದಿಂದ ಕೈ ಬಿಡಲಾಯ್ತು.

ವಿಶೇಷ ಅಂದ್ರೆ ಅದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಚೊಚ್ಚಲ ದ್ವಿಶತಕ ದಾಖಲಿಸಿದರು. ಅದರ ನಂತರ ವಿನಯ್‌ಗೆ ಹಿಂತಿರುಗಲು ಸಾಧ್ಯವಾಗಲಿಲ್ಲ ಮತ್ತು ಫೆಬ್ರವರಿ 2021 ರಲ್ಲಿ ನಿವೃತ್ತರಾದರು.

ವಿಚಿತ್ರವಾಗಿ ಔಟಾದ ಹೆನ್ರಿ ನಿಕೋಲ್ಸ್:ಈ ಥರಾ ಔಟ್‌ ನೋಡಿ ಎಲ್ರಿಗೂ ಶಾಕ್ | *Cricket | Oneindia Kannada
ಯೂಸುಫ್ ಪಠಾಣ್

ಯೂಸುಫ್ ಪಠಾಣ್

ಯೂಸುಫ್ ಅತ್ಯಂತ ಅಪಾಯಕಾರಿ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದರು. 57 ಏಕದಿನ ಪಂದ್ಯಗಳಲ್ಲಿ 810 ರನ್ ಹಾಗೂ 33 ವಿಕೆಟ್ ಪಡೆದಿದ್ದಾರೆ. ಯೂಸುಫ್ ಭಾರತಕ್ಕಾಗಿ ಹಲವು ಸಂದರ್ಭಗಳಲ್ಲಿ ಪಂದ್ಯಗಳನ್ನು ಗೆದ್ದಿದ್ದಾರೆ. ಆದ್ರೆ ಅವರುಸ್ಥಿರವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದ ಕಾರಣ ಅವರ ವೃತ್ತಿಜೀವನವು ಹೆಚ್ಚು ಯಶಸ್ವಿಯಾಗಲಿಲ್ಲ.

ಮತ್ತೊಬ್ಬ ಆಲ್ ರೌಂಡರ್ ಬಿನ್ನಿ 2014ರಲ್ಲಿ ಪದಾರ್ಪಣೆ ಮಾಡಿದ್ದರು. ಏಕದಿನದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ದಾಖಲೆಯನ್ನು ಹೊಂದಿರುವ ಈತ ಏಕದಿನ ವೃತ್ತಿಜೀವನದಲ್ಲಿ 230 ರನ್ ಮತ್ತು 20 ವಿಕೆಟ್‌ಗಳನ್ನು ಗಳಿಸಿದ್ದಾರೆ. ಗೋನಿ 2008ರ ಏಷ್ಯಾಕಪ್‌ನಲ್ಲಿ ಭಾರತದ ಪರ ಆಡಿದ್ದರು. ಮ್ಯಾಚ್ ವಿನ್ನಿಂಗ್ ಆಲ್ ರೌಂಡರ್ ಗಳಲ್ಲಿ ಒಬ್ಬರಾಗಿರುವ ಅವರು ಬೆರಳೆಣಿಕೆಯ ಪಂದ್ಯಗಳಲ್ಲಿ ಮಾತ್ರ ಆಡಿದ್ದಾರೆ.

ಹೀಗೆ ರೋಹಿತ್ ಶರ್ಮಾ ಬಳಿಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹಲವು ಕ್ರಿಕೆಟಿಗರು ನಿವೃತ್ತಿ ಘೋಷಿಸಿದ್ದಾರೆ.

Story first published: Friday, June 24, 2022, 16:42 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X