ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup 2022: ಜಸ್ಪ್ರೀತ್ ಬುಮ್ರಾ ಬದಲಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಆಟಗಾರ ಯಾರು?

These Bowler May Replace Injured Jasprit Bumrah In Team India For Upcoming T20 World Cup

ಟಿ20 ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳಿರುವಂತೆ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಭಾರತ ತಂಡದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ನಂತರ ಮುಂಬರುವ T20 ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಗುಳಿದಿದ್ದಾರೆ. ಗಾಯದ ಪ್ರಮಾಣ ಇನ್ನೂ ತಿಳಿದಿಲ್ಲ, ಆದರೆ ಇದು ಭಾರತಕ್ಕೆ ದೊಡ್ಡ ಹೊಡೆತವಾಗಿದೆ.

ಗಾಯದ ಸಮಸ್ಯೆಯಿಂದ ಏಷ್ಯಾಕಪ್‌ನಿಂದ ಹೊರಗುಳಿದಿದ್ದ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡಕ್ಕೆ ಸೇರ್ಪಡೆಯಾಗಿದ್ದರು. ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಪಂದ್ಯ ಆಡದಿದ್ದರೂ ಎರಡು ಮತ್ತು ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

Breaking: ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ದೊಡ್ಡ ಆಘಾತ: ಜಸ್ಪ್ರೀತ್ ಬೂಮ್ರಾ ಸಂಪೂರ್ಣ ಟೂರ್ನಿಯಿಂದ ಔಟ್!Breaking: ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ದೊಡ್ಡ ಆಘಾತ: ಜಸ್ಪ್ರೀತ್ ಬೂಮ್ರಾ ಸಂಪೂರ್ಣ ಟೂರ್ನಿಯಿಂದ ಔಟ್!

ಆಸ್ಟ್ರೇಲಿಯಾದ ವೇಗದ ಪಿಚ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಪರಿಣಾಮಕಾರಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರು. ಭಾರತದ ವೇಗದ ಬೌಲಿಂಗ್ ಪಡೆಯನ್ನು ಅವರು ಮುನ್ನಡೆಸುತ್ತಾರೆ ಎಂದು ಅಭಿಮಾನಿಗಳು ಸಂತಸಗೊಂಡಿದ್ದರು. ಆದರೆ, ಗಾಯದ ಸಮಸ್ಯೆ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ.

ಬುಮ್ರಾ ಬದಲಾಗಿ ಟೀಂ ಇಂಡಿಯಾದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎನ್ನುವ ಚರ್ಚೆ ಈಗಾಗಲೇ ಜೋರಾಗಿದೆ. ಮೀಸಲು ಆಟಗಾರರ ಪಟ್ಟಿಯಲ್ಲಿರುವ ಮೊಹಮ್ಮದ್ ಶಮಿ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ ಆದರೂ ಈ ರೇಸ್‌ನಲ್ಲಿ ಇನ್ನು ಹಲವು ಬೌಲರ್ ಹೆಸರು ಕೇಳಿ ಬರುತ್ತಿದೆ.

ಬುಮ್ರಾ ಸ್ಥಾನಕ್ಕೆ ಶಮಿ ಆಯ್ಕೆ ಸಾಧ್ಯತೆ

ಬುಮ್ರಾ ಸ್ಥಾನಕ್ಕೆ ಶಮಿ ಆಯ್ಕೆ ಸಾಧ್ಯತೆ

ಸದ್ಯ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಮೊಹಮ್ಮದ್ ಶಮಿ ಈ ವಾರದಲ್ಲಿ ಹೃದಯರಕ್ತನಾಳ ಪರೀಕ್ಷೆಗೆ ಒಳಗಾಗಲಿದ್ದಾರೆ. ನಂತರ ಅವರ ಫಿಟ್ನೆಸ್ ಪರೀಕ್ಷೆ ನಡೆಯಲಿದ್ದು ಅಲ್ಲಿ ಪಾಸಾದ ನಂತರ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ವಿಶ್ವಕಪ್ ತಂಡದ ಮೀಸಲು ಆಟಗಾರನಾಗಿರುವ ಮೊಹಮ್ಮದ್ ಶಮಿ ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಬರುವುದು ಬಹುತೇಕ ಖಚಿತವಾಗಿದೆ.

ಹಿರಿಯ ಅನುಭವಿ ಆಟಗಾರ 2022ರ ಐಪಿಎಲ್ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ಆಡಿದ್ದರು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರು. ಅಕ್ಟೋಬರ್ 5ರ ವೇಳೆಗೆ ಶಮಿ ಎಲ್ಲಾ ಪರೀಕ್ಷೆಗಳನ್ನು ಮುಗಿಸುವ ಸಾಧ್ಯತೆ ಇದ್ದು, ಅಕ್ಟೋಬರ್ 6 ರಂದು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಗೆ ತೆರಳಲಿರುವ ವಿಶ್ವಕಪ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಈತ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರ: ರೋಹನ್ ಗವಾಸ್ಕರ್

ದೀಪಕ್ ಚಹಾರ್‌ಗೆ ಸಿಗುತ್ತಾ ಸ್ಥಾನ?

ದೀಪಕ್ ಚಹಾರ್‌ಗೆ ಸಿಗುತ್ತಾ ಸ್ಥಾನ?

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲನೇ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ದೀಪಕ್ ಚಹಾರ್ ಕೂಡ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಅವರು ಇದೇ ರೀತಿ ಉತ್ತಮ ಪ್ರದರ್ಶನ ನೀಡಿದರೆ, ಆಯ್ಕೆದಾರರು ಅವರನ್ನು ಪರಿಗಣಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ದೀಪಕ್ ಚಹಾರ್ ಕೂಡ ಟಿ20 ವಿಶ್ವಕಪ್ ಭಾರತ ತಂಡದ ಮೀಸಲು ಆಟಗಾರ ಪಟ್ಟಿಯಲ್ಲಿದ್ದಾರೆ.

ದೀಪಕ್ ಚಹಾರ್ ದಕ್ಷಿಣ ಆಫ್ರಿಕಾ ವಿರುದ್ಧ 4 ಓವರ್ ಗಳಲ್ಲಿ 24 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದಿದ್ದರು. ಐಪಿಎಲ್‌ನಲ್ಲಿ ಸಿಎಸ್‌ಕೆ ಪರವಾಗಿ ಉತ್ತಮ ಪ್ರದರ್ಶನ ನೀಡಿರುವ ಚಹಾರ್ ಸ್ವಿಂಗ್ ಬೌಲಿಂಗ್‌ಗೆ ಪ್ರಸಿದ್ಧರಾಗಿದ್ದಾರೆ. ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇರುವುದರಿಂದ ಸದ್ಯ ಆಯ್ಕೆ ರೇಸ್‌ನಲ್ಲಿದ್ದಾರೆ.

ಉಮ್ರಾನ್ ಮಲಿಕ್, ಉಮೇಶ್ ಯಾದವ್‌ಗೆ ಸ್ಥಾನ?

ಉಮ್ರಾನ್ ಮಲಿಕ್, ಉಮೇಶ್ ಯಾದವ್‌ಗೆ ಸ್ಥಾನ?

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಶಮಿ ಅಲಭ್ಯರಾಗಿದ್ದ ಕಾರಣ ಉಮ್ರಾನ್ ಮಲಿಕ್‌ಗೆ ಸಿದ್ಧವಾಗಿರುವಂತೆ ಬಿಸಿಸಿಐ ಸೂಚನೆ ನೀಡಿತ್ತು. ವೇಗದ ಬೌಲಿಂಗ್‌ನಿಂದ ಐಪಿಎಲ್‌ನಲ್ಲಿ ಗಮನ ಸೆಳೆದಿದ್ದ ಉಮ್ರಾನ್ ಮಲಿಕ್ ಟೀಂ ಇಂಡಿಯಾ ಪರವಾಗಿ ಆಡಿದ್ದರು, ಹೆಚ್ಚಿನ ಅವಕಾಶ ಪಡೆದಿರಲಿಲ್ಲ.

ಉಮೇಶ್ ಯಾದವ್ ಭಾರತದ ಮತ್ತೊಬ್ಬ ಹಿರಿಯ ವೇಗಿ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡಿದ ಉಮೇಶ್ ಯಾದವ್ ಎರಡು ವಿಕೆಟ್ ಪಡೆದಿದ್ದರು. ನಂತರದ ಪಂದ್ಯಗಳಲ್ಲಿ ಅವರು ಸ್ಥಾನ ಪಡೆಯುವಲ್ಲಿ ವಿಫಲರಾದರು. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದಲ್ಲಿರುವ ಅವರು, ಆಡುವ ಬಳಗದಲ್ಲಿ ಸ್ಥಾನ ಪಡೆದಿಲ್ಲ. ಅನುಭವದ ಆಧಾರದ ಮೇಲೆ ಉಮೇಶ್ ಯಾದವ್ ಅವರನ್ನು ಪರಿಗಣಿಸಬಹುದಾದರು, ಅದರ ಸಾಧ್ಯತೆ ಬಹಳ ಕಡಿಮೆ ಎನ್ನಲಾಗಿದೆ.

Story first published: Thursday, September 29, 2022, 16:50 [IST]
Other articles published on Sep 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X