ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಗ್ಬೇಡಿ ಪ್ಲೀಸ್..! ವಿಚಿತ್ರ ಕಾರಣಕ್ಕೆ ಟಿ20 ವಿಶ್ವಕಪ್‌ನಿಂದ ತಪ್ಪಿಸಿಕೊಂಡ ಐವರು ಕ್ರಿಕೆಟಿಗರು: ಓರ್ವ ಭಾರತೀಯ!

These five 5 cricketers are missed t20 world cup because of strange reason

ವಿಶ್ವಕಪ್‌ನಂತಾ ಮಹತ್ವದ ಟೂರ್ನಮೆಂಟ್‌ಗಳಲ್ಲಿ ಆಡಬೇಕು ಎಂಬುದು ಎಲ್ಲಾ ಕ್ರಿಕೆಟಿಗರ ಬಹುದೊಡ್ಡ ಕನಸಾಗಿರುತ್ತದೆ. ಅದಕ್ಕಾಗಿ ಪ್ರತಿ ತಂಡದಲ್ಲಿಯೂ ಆಟಗಾರರ ಮಧ್ಯೆ ಸಾಕಷ್ಟು ಪೈಪೋಟಿಗಳು ನಡೆಯುತ್ತದೆ. ಕೆಲ ಆಟಗಾರರಿಗೆ ಅವಕಾಶ ದೊರೆತರೆ ಇನ್ನು ಕೆಲವರಿಗೆ ಅವಕಾಶ ದೊರೆಯುವುದಿಲ್ಲ. ಆದರೆ ಕೆಲ ಆಟಗಾರರಿಗೆ ಅದೃಷ್ಟ ಕೈಕೊಟ್ಟು ಟೂರ್ನಿಯಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಳ್ಳುವಂತಾ ಪ್ರಸಂಗಗಳು ಬರುತ್ತದೆ.

ಆದರೆ ಇಂದು ನಾವು ಟಿ20 ವಿಶ್ವಕಪ್‌ನಲ್ಲಿ ವಿಚಿತ್ರ ಕಾರಣಗಳಿಂದಾಗಿ ಭಾಗವಹಿಸಲು ಸಾಧ್ಯವಾಗದಿರುವ ಐವರು ಕ್ರಿಕೆಟಿಗರ ಬಗ್ಗೆ ಕುತೂಹಲಕಾರಿ ಮಾಹಿತಿ ನೀಡುತ್ತಿದ್ದೇವೆ. ಈ ಆಟಗಾರರು ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸುವ ಅರ್ಹತೆಯಿದ್ದರೂ ತಮ್ಮ ಕೈಯ್ಯಾರೆ ವಿಚಿತ್ರ ಕಾರಣಗಳಿಂದ ಭಾಗವಹಿಸುವ ಅದೃಷ್ಟವನ್ನು ಕಳೆದುಕೊಂಡಿದ್ದಾರೆ. ಹೀಗೆ ವಿಚಿತ್ರ ಕಾರಣಗಳಿಂದ ಅವಕಾಶವಂಚಿತವಾದ ಐವರು ಕ್ರಿಕೆಟಿಗರ ಬಗ್ಗೆ ಇಲ್ಲಿದೆ ಮಾಹಿತಿ.. ಮುಂದೆ ಓದಿ..

T20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರT20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರ

ಶಿಮ್ರಾನ್ ಹೇಟ್ಮೇರ್‌ಗೆ ವಿಮಾನವೂ ತಪ್ಪಿತು ವಿಶ್ವಕಪ್ಪೂ ತಪ್ಪಿತು!

ಶಿಮ್ರಾನ್ ಹೇಟ್ಮೇರ್‌ಗೆ ವಿಮಾನವೂ ತಪ್ಪಿತು ವಿಶ್ವಕಪ್ಪೂ ತಪ್ಪಿತು!

ವೆಸ್ಟ್ ಇಂಡೀಸ್ ತಂಡದ ಸ್ಪೋಟಕ ಆಟಗಾರ ಶಿಮ್ರಾನ್ ಹೇಟ್ಮೇಯರ್ ಸರಿಯಾದ ಸಮಯದಲ್ಲಿ ವಿಮಾನವನ್ನು ಹಿಡಿಯಲು ಸಾಧ್ಯವಾಗದೆ ಈ ಬಾರಿಯ ವಿಶ್ವಕಪ್‌ನಿಂದ ವಂಚಿತವಾಗಿದ್ದಾರೆ. ಕೌಟುಂಬಿಕ ಕಾರಣಗಳನ್ನು ನೀಡಿದ್ದ ಕಾರಣದಿಂದಾಗಿ ಶಮ್ರಾನ್ ಹೇಟ್ಮೇಯರ್‌ಗೆ ಪ್ರತ್ಯೇಕವಾಗಿ ಬದಲಿ ವಿಮಾನದ ಮೂಲಕ ಆಸ್ಟ್ರೇಲಿಯಾಗೆ ಪ್ರಯಾಣಿಸುವ ವ್ಯವಸ್ಥೆಯನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮಾಡಿತ್ತು. ಆದರೆ ಹೇಟ್ಮೇಯರ್ ಆ ವಿಮಾನವನ್ನು ಕೂಡ ಸೂಕ್ತ ಸಮಯಕ್ಕೆ ತಲುಪದ ಕಾರಣ ಆಸ್ಟ್ರೇಲಿಯಾಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಂಡಿಸ್ ಮಂಡಳಿ ಕಠಿಣ ನಿಲುವನ್ನು ತೆಗೆದುಕೊಂಡಿದ್ದು ವಿಶ್ವಕಪ್ ಸ್ಕ್ವಾಡ್‌ನಿಂದಲೇ ಶಿಮ್ರಾನ್ ಹೇಟ್ಮೇಯರ್ ಅವರನ್ನು ಹೊರಹಾಕಿದೆ.

ಸಾಹಸ ಕ್ರೀಡೆ ಮಾಡಲು ಹೋಗಿ ಎಡವಿದ ರವೀಂದ್ರ ಜಡೇಜಾ

ಸಾಹಸ ಕ್ರೀಡೆ ಮಾಡಲು ಹೋಗಿ ಎಡವಿದ ರವೀಂದ್ರ ಜಡೇಜಾ

ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್‌ನ ಸಂದರ್ಭದಲ್ಲಿ ಗಾಯಗೊಂಡ ಕಾರಣ ವಿಶ್ವಕಪ್‌ನಿಂದಲೂ ಹೊರಗುಳಿಯುವಂತಾಯಿತು. ಆದರೆ ಅವರ ಗಾಯ ಯಾವ ಕಾರಣಕ್ಕಾಯಿತು ಎಂಬುದು ತಿಳಿದರೆ ಮಾತ್ರ ವಿಪರ್ಯಾಸ ಎನಿಸದೆ ಇರಲಾರದು. ಏಷ್ಯಾಕಪ್‌ನ ಸಂದರ್ಭದಲ್ಲಿ ರವೀಂದ್ರ ಜಡೇಜಾ ಯುಎಇನ ಕಡೆಲ ಕಿನಾರೆಯಲ್ಲಿ ಸಾಹಸ ಕ್ರೀಡೆ ಮಾಡುವ ಸಂದರ್ಭದಲ್ಲಿ ಕಾಲಿಗೆ ತೀವ್ರ ಗಾಯಮಾಡಿಕೊಂಡಿದ್ದಾರೆ. ಹೀಗಾಗಿ ಹಲವು ತಿಂಗಳುಗಳ ವಿಶ್ರಾಂತಿಯ ಅನಿವಾರ್ಯತೆಗೆ ಸಿಲುಕಿದ್ದಾರೆ ಟೀಮ್ ಇಂಡಿಯಾದ ಅನುಭವಿ ಆಲ್‌ರೌಂಡರ್.

ಬ್ಯಾಟ್‌ಗೆ ಗುದ್ದಿ ಗಾಯಗೊಂಡ ಡೆವೋನ್ ಕಾನ್ವೆ

ಬ್ಯಾಟ್‌ಗೆ ಗುದ್ದಿ ಗಾಯಗೊಂಡ ಡೆವೋನ್ ಕಾನ್ವೆ

ಈ ಘಟನೆ ನಡೆದಿರುವುದು ಕಳೆದ ವರ್ಷ ಯುಎಇನಲ್ಲಿ ನಡೆದ ವಿಶ್ವಕಪ್‌ನ ಸಂದರ್ಭದಲ್ಲಿ. ನ್ಯೂಜಿಲೆಂಡ್ ತಂಡದ ಆರಂಬಿಕ ಆಟಗಾರ ಡೆವೋನ್ ಕಾನ್ವೆ ವಿಕೆಟ್ ಕಳೆದುಕೊಂಡ ಹತಾಶೆಯಲ್ಲಿ ಕೈಯಿಂದ ಬ್ಯಾಟ್‌ಗೆ ಬಲವಾಗಿ ಗುದ್ದಿದ್ದರು. ಇದರ ಪರಿಣಾಮವಾಗಿ ಅವರ ಬೆರಳಿನ ಮೂಳೆ ಮುರಿದಿತ್ತು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶದಿಂದ ಡೆವೋನ್ ಕಾನ್ವೆ ವಂಚಿತವಾದರು.

ಗಾಲ್ಫ್ ಆಡುತ್ತಾ ಗಾಯಕ್ಕೊಳಗಾದ ಜಾನಿ ಬೈರ್‌ಸ್ಟೋವ್

ಗಾಲ್ಫ್ ಆಡುತ್ತಾ ಗಾಯಕ್ಕೊಳಗಾದ ಜಾನಿ ಬೈರ್‌ಸ್ಟೋವ್

ಇಂಗ್ಲೆಂಡ್ ತಂಡದ ಆರಂಬಿಕ ಆಟಗಾರ ಜಾನಿ ಬೈರ್‌ಸ್ಟೋವ್ ಎಂಥಾ ವಿಧ್ವಂಸಕ ಆಟಗಾರ ಎಂಬುದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದರಲ್ಲೂ ಇತ್ತೀಚೆಗಿನ ಅವರ ಫಾರ್ಮ್ ಅಮೋಘವಾಗಿತ್ತು. ಆದರೆ ವಿಶ್ವಕಪ್‌ಗೆ ಕೆಲವೇ ತಿಂಗಳುಗಳಿರುವಾಗ ದೊಡ್ಡ ಎಡವಟ್ಟೊಂದನ್ನು ಮಾಡಿದ್ದರು ಜಾನಿ ಬೈರ್‌ಸ್ಟೋವ್. ಗಾಲ್ಫ್ ಆಡುತ್ತಿದ್ದ ಸಂದರ್ಭದಲ್ಲಿ ಜಾನಿ ಬೈರ್‌ಸ್ಟೋವ್ ತೀವ್ರಗಾಯಕ್ಕೆ ತುತ್ತಾದರು. ಹೀಗಾಗಿ ಅವರಿಗೂ ಕೆಲ ತಿಂಗಳುಗಳ ವಿಶ್ರಾಂತಿಯ ಅಗತ್ಯವಿದ್ದು ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ.

ಮೀನಿನ ಟ್ಯಾಂಕ್‌ನಿಂದಾಗಿ ಗಾಯಗೊಂಡ ಜೋಫ್ರಾ ಆರ್ಚರ್

ಮೀನಿನ ಟ್ಯಾಂಕ್‌ನಿಂದಾಗಿ ಗಾಯಗೊಂಡ ಜೋಫ್ರಾ ಆರ್ಚರ್

ಇಂಗ್ಲೆಂಡ್ ತಂಡದ ಪ್ರತಿಭಾವಂತ ವೇಗದ ಬೌಲರ್ ಜೋಫ್ರಾ ಆರ್ಚರ್ ಕೂಡ ವಿಚಿತ್ರ ರೀತಿಯಲ್ಲಿ ಗಾಯಗೊಂಡು ಸುದೀರ್ಘ ಕಾಲದಿಂದ ಕ್ರಿಕೆಟ್‌ನಿಮದಲೇ ದೂರವುಳಿಯುವ ಪರಿಸ್ಥಿತಿಗೆ ಬಂದಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್‌ಗೂ ಮುನ್ನವೇ ಈ ಘಟನೆ ನಡೆದಿತ್ತು. ಹೀಗಾಗಿ ಕಳೆದ ವರ್ಷದ ಟಿ20 ವಿಶ್ವಕಪ್ ತಂಡದಲ್ಲಿಯೂ ಜೋಫ್ರಾ ಆರ್ಚರ್ ಸ್ಥಾನವನ್ನು ಪಡೆದುಕೊಂಡಿರಲಿಲ್ಲ. ತಮ್ಮ ಮನೆಯ ಮೀನಿನ ಟ್ಯಾಂಕ್‌ಅನ್ನು ಸ್ವಚ್ಚಗೊಳಿಸುತ್ತಿದ್ದ ಸಂದರ್ಭದಲ್ಲಿ ಜೋಫ್ರಾ ಆರ್ಚರ್ ಗಾಯಗೊಂಡಿದ್ದಾರೆ. ಅದಾದ ಬಳಿಕ ಆರ್ಚರ್‌ಗೆ ಮೊಣಕೈ ಸಮಸ್ಯೆ ಕಾಡಲಾರಂಭಿಸಿದೆ. ಹೀಗಾಗಿ ಸದ್ಯ ಜೋಫ್ರಾ ಆರ್ಚರ್ ಕ್ರಿಕೆಟ್ ಚಟುವಟಿಕೆಗಳಿಂದ ದೂರವುಳಿದಿದ್ದಾರೆ.

Story first published: Wednesday, October 5, 2022, 21:38 [IST]
Other articles published on Oct 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X