ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA 2022: ಬ್ಯಾಟರ್ Vs ಬೌಲರ್, ಆ ಆಟಗಾರರ ನಡುವಿನ ಕದನದಲ್ಲಿ ಗೆಲುವು ಯಾರಿಗೆ?

These Three Players Battle Will More Interesting In India vs South Africa First T20I

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲನೇ ಪಂದ್ಯ ಸೆಪ್ಟೆಂಬರ್ 28 ರಂದು ತಿರುವನಂತರಪುರಂನ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳು ಈಗಾಗಲೇ ಭರ್ಜರಿ ಆಭ್ಯಾಸ ನಡೆಸಿದ್ದು, ಕಾದಾಟಕ್ಕೆ ಸಿದ್ಧವಾಗಿವೆ. ಈ ವರ್ಷದ ಆರಂಭದಲ್ಲಿ ಉಭಯ ತಂಡಗಳು ಈಗಾಗಲೇ ಐದು ಪಂದ್ಯಗಳ ಟಿ20 ಸರಣಿ ಆಡಿದ್ದವು. ಎರಡೂ ತಂಡಗಳು ತಲಾ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ಧಾಯಿತು.

 ICC T20 World Cup: ಕೊನೆ ಕ್ಷಣದಲ್ಲಿ ಭಾರತದ ಟಿ20 ವಿಶ್ವಕಪ್‌ ತಂಡದಲ್ಲಿ ಬದಲಾವಣೆ ಸಾಧ್ಯತೆ ICC T20 World Cup: ಕೊನೆ ಕ್ಷಣದಲ್ಲಿ ಭಾರತದ ಟಿ20 ವಿಶ್ವಕಪ್‌ ತಂಡದಲ್ಲಿ ಬದಲಾವಣೆ ಸಾಧ್ಯತೆ

ಟಿ20 ವಿಶ್ವಕಪ್‌ಗೆ ಕೇವಲ ಒಂದೆರಡು ವಾರಗಳು ಬಾಕಿ ಇರುವಾಗ, ಎರಡು ತಂಡಗಳ ನಡುವಿನ ಮುಂಬರುವ ಸರಣಿಯು ತಂಡದ ಆಡುವ ಬಳಗವನ್ನು ನಿರ್ಣಯಿಸಲು ಉತ್ತಮ ವೇದಿಕೆ ಆಗಲಿದೆ ಎಂದು ಹೇಳಲಾಗಿದೆ. ಎರಡೂ ಕಡೆಗಳಲ್ಲಿ ವಿಶ್ವದರ್ಜೆಯ ಆಟಗಾರರಿರುವುದರಿಂದ, ಪಂದ್ಯವು ಸರಣಿಯ ಫಲಿತಾಂಶವನ್ನು ನಿರ್ಧರಿಸುವಲ್ಲಿ ನಿಸ್ಸಂಶಯವಾಗಿ ಬೃಹತ್ ಪಾತ್ರವನ್ನು ವಹಿಸುವುದು ಸಹಜ.

ದಕ್ಷಿಣ ಆಫ್ರಿಕಾ ಉತ್ತಮ ಬೌಲಿಂಗ್ ಪಡೆಯನ್ನು ಹೊಂದಿದ್ದು ಭಾರತದ ಬ್ಯಾಟರ್ ಗಳಿಗೆ ಸವಾಲಾಗಲಿದೆ. ಹಾಗೆಯೇ, ಭಾರತದ ಬೌಲರ್ ಗಳು ಕೂಡ ದಕ್ಷಿಣ ಆಫ್ರಿಕಾ ಬ್ಯಾಟರ್ ಗಳ ವಿರುದ್ಧ ಉತ್ತಮ ಅಂಕಿ ಅಂಶ ಹೊಂದಿದ್ದಾರೆ. ಈ ಮೂವರು ಬ್ಯಾಟರ್ ಮತ್ತು ಬೌಲರ್ ಗಳ ನಡುವಿನ ಕದನಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ರೋಹಿತ್ ಶರ್ಮಾಗೆ ವೇಯ್ನ್ ಪಾರ್ನೆಲ್ ಸವಾಲು

ರೋಹಿತ್ ಶರ್ಮಾಗೆ ವೇಯ್ನ್ ಪಾರ್ನೆಲ್ ಸವಾಲು

ಭಾರತದ ನಾಯಕ ರೋಹಿತ್ ಶರ್ಮಾ ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ ಅಜೇಯ 46 ರನ್ ಗಳಿಸುವ ಮೂಲಕ ಉತ್ತಮ ಫಾರ್ಮ್ ಅನ್ನು ತೋರಿಸಿದ್ದಾರೆ. ಆದಾಗ್ಯೂ, ರೋಹಿತ್‌ನ ಆಕ್ರಮಣಕಾರಿ ಕ್ರಿಕೆಟ್‌ ಆಡುವಾಗ ಬೇಗನೆ ಔಟಾದ ನಿದರ್ಶನಗಳಿವೆ.

ರೋಹಿತ್ ಶರ್ಮಾ 91 ಇನ್ನಿಂಗ್ಸ್‌ಗಳಲ್ಲಿ 19 ಬಾರಿ ಎಡಗೈ ವೇಗದ ಬೌಲರ್ ಗಳಿಗೆ ವಿಕೆಟ್‌ ಒಪ್ಪಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಎಡಗೈ ವೇಗಿ ವೇಯ್ಸ್ ಪಾರ್ನೆಲ್‌ರನ್ನು ರೋಹಿತ್ ವಿರುದ್ಧ ಆಡಿಸಲಿದ್ದಾರೆ.

ಆರಂಭದಲ್ಲಿ, ರೋಹಿತ್ ತನ್ನ ಮುಂಭಾಗದ ಪಾದದಿಂದ ಚೆಂಡಿನ ಪಿಚ್‌ಗೆ ಬರಲು ಕಷ್ಟಪಡುತ್ತಾರೆ ಮತ್ತು ಕ್ರೀಸ್‌ನಲ್ಲಿ ಸಿಲುಕಿಕೊಳ್ಳುತ್ತಾರೆ. ಇದು ರೋಹಿತ್ ಶರ್ಮಾರನ್ನು ಎಲ್‌ಬಿಡಬ್ಲ್ಯೂ ಅಥವಾ ಬೌಲ್ಡ್ ಮಾಡಲು ಸುಲಭವಾಗುತ್ತದೆ. ವೇಯ್ನ್ ಪಾರ್ನೆಲ್ ಮತ್ತು ರೋಹಿತ್ ಶರ್ಮಾ ನಡುವೆ ಯಾರು ಗೆಲ್ಲುತ್ತಾರೆ ಎನ್ನುವದನ್ನು ಗ್ರೀನ್‌ಫೀಲ್ಡ್ ಮೈದಾನದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.

Ind Vs SA T20: ಇಂದಿನ ಪಂದ್ಯದಲ್ಲಿ ಈತ ಆಡಿದರೆ ಭಾರತದ ಬೌಲಿಂಗ್ ಸಮಸ್ಯೆಗೆ ಪರಿಹಾರ: ವಾಸಿಂ ಜಾಫರ್

ಕ್ವಿಂಟನ್ ಡಿ ಕಾಕ್‌ಗೆ ಚಹಾಲ್ ಸ್ಪಿನ್‌ ಬಲೆ

ಕ್ವಿಂಟನ್ ಡಿ ಕಾಕ್‌ಗೆ ಚಹಾಲ್ ಸ್ಪಿನ್‌ ಬಲೆ

ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಸ್ಫೋಟಕ ಆರಂಭ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಭಾರತದ ಪಿಚ್‌ಗಳಲ್ಲಿ ಆಡಿ ಅಭ್ಯಾಸ ಇರುವ ಅನುಭವಿ ಆಟಗಾರನನ್ನು ಬೇಗನೆ ಔಟ್ ಮಾಡಲು ಭಾರತ ಚಹಾಲ್‌ರನ್ನು ಬಳಲಿಕೊಳ್ಳಲು ತಂತ್ರ ರೂಪಿಸುತ್ತದೆ.

ಕ್ವಿಂಟನ್ ಡಿ ಕಾಕ್ ಲಯ ಕಂಡುಕೊಂಡರೆ ಸ್ಫೋಟಕ ಆಟವಾಡು ಎಡಗೈ ಆಟಗಾರ, ಭಾರತದ ವೇಗದ ಬೌಲಿಂಗ್ ವಿರುದ್ಧ ರನ್ ಗಳಿಸುವ ಸಾಮರ್ಥ್ಯ ಅವರಿಗಿದೆ, ಆದ್ದರಿಂದ ಭಾರತವು ಪವರ್‌ಪ್ಲೇನಲ್ಲಿ ಕನಿಷ್ಠ ಒಂದು ಓವರ್‌ಗೆ ಲೆಗ್-ಸ್ಪಿನ್ನರ್ ಯುಜುವೇಂದ್ರ ಚಹಾಲ್ ಅನ್ನು ಬೌಲ್ ಮಾಡಲು ಯೋಜಿಸುತ್ತದೆ.

ಯುಜುವೇಂದ್ರ ಚಹಾಲ್ ಐಪಿಎಲ್‌ನಲ್ಲಿ ಆರು ಬಾರಿ ಬಾರಿ ಕ್ವಿಂಟನ್ ಡಿ ಕಾಕ್‌ರನ್ನು ಔಟ್ ಮಾಡಿದ್ದಾರೆ. ಏಕದಿನ ಪಂದ್ಯದಲ್ಲಿ ಎರಡು ಬಾರಿ ಔಟ್ ಮಾಡಿದ್ದಾರೆ. ಇವರಿಬ್ಬರ ನಡುವೆ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ.

ಸೂರ್ಯಕುಮಾರ್ ವಿರುದ್ಧ ಕೇಶವ ಮಹಾರಾಜ್ ಸ್ಪಿನ್ ಮೋಡಿ

ಸೂರ್ಯಕುಮಾರ್ ವಿರುದ್ಧ ಕೇಶವ ಮಹಾರಾಜ್ ಸ್ಪಿನ್ ಮೋಡಿ

ಸೂರ್ಯಕುಮಾರ್ ಸದ್ಯ ಭಾರತ ತಂಡದಲ್ಲಿ ಫಾರ್ಮ್‌ನಲ್ಲಿರುವ ಅತ್ಯುತ್ತಮ ಟಿ20 ಬ್ಯಾಟರ್. ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ 69 ರನ್ ಗಳಿಸಿದರು. ಸೂರ್ಯಕುಮಾರ್ ಆಟದ ನೆರವಿನಿಂದ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತವು ಸತತ ಒಂಬತ್ತನೇ ಸರಣಿ ಗೆಲುವು ಸಾಧಿಸಿತು.

ಟಿ20 ಮೊದಲ ಪಂದ್ಯದಿಂದ ಸೂರ್ಯಕುಮಾರ್ ಯಾದವ್ ಉತ್ತಮವಾಗಿ ಆಡುತ್ತಿದ್ದಾರೆ. ಹಾಗಿದ್ದರೂ ಸೂರ್ಯಕುಮಾರ್ ಯಾದವ್ ಎಡಗೈ ಸ್ಪಿನ್ನರ್‌ಗಳ ವಿರುದ್ಧ ಆಡಲು ಕಷ್ಟಪಡುತ್ತಾರೆ. ಹಲವು ಬಾರಿ ಎಡಗೈ ಸ್ಪಿನ್ನರ್ ವಿರುದ್ಧ ರನ್ ಗಳಿಸುವ ಭರದಲ್ಲಿ ಸೂರ್ಯಕುಮಾರ್ ಔಟ್ ಆಗಿದ್ದಾರೆ.

ಎಡಗೈ ಸ್ಪಿನ್ನರ್‌ಗಳ ವಿರುದ್ಧ ಕೇವಲ 29 ಸರಾಸರಿ ಹೊಂದಿದ್ದಾರೆ, 107.71 ರ ಕಳಪೆ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. 62 ಇನ್ನಿಂಗ್ಸ್‌ಗಳಲ್ಲಿ 13 ಬಾರಿ ಔಟಾದರು. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಪ್ರಮುಖ ಎಡಗೈ ಸ್ಪಿನ್ನರ್ ಆಗಿದ್ದಾರೆ. ಸೂರ್ಯಕುಮಾರ್ ಯಾದವ್ ವಿರುದ್ಧ ಕೇಶವ್ ಮಹಾರಾಜ್ ಮೇಲುಗೈ ಸಾಧಿಸಬೇಕೆಂದ ದಕ್ಷಿಣ ಆಫ್ರಿಕಾ ಬಯಸುತ್ತದೆ.

ಟಿ20 ಸರಣಿಯಲ್ಲಿ ಆಡುವ ಉಭಯ ತಂಡಗಳ ವಿವರ

ಟಿ20 ಸರಣಿಯಲ್ಲಿ ಆಡುವ ಉಭಯ ತಂಡಗಳ ವಿವರ

ಟಿ20 ಸರಣಿಗೆ ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಯುಜವೇಂದ್ರ ಚಹಾಲ್, ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಶ್ರೇಯಸ್ ಅಯ್ಯರ್, ಶಹಬಾಜ್ ಅಹ್ಮದ್.

ದಕ್ಷಿಣ ಆಫ್ರಿಕಾ ಟಿ20 ತಂಡ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಹೆನ್ರಿಕ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಕ್ ನೋಕಿಯಾ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ರಿಲಿ ರೊಸೊ, ತಬ್ರೇಝ್ ಶಂಸಿ, ಟ್ರಿಸ್ಟಾನ್ ಸ್ಟಬ್ಸ್.

Story first published: Wednesday, September 28, 2022, 13:02 [IST]
Other articles published on Sep 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X