ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ODIನಲ್ಲಿ ಭರ್ಜರಿ ಆಟ, ಆದರೆ ಟಿ20ಯಲ್ಲಿ ವೈಫಲ್ಯ: ಟೀಮ್ ಇಂಡಿಯಾದ 3 ಯುವ ಆಟಗಾರರ ಕಥೆಯಿದು!

These three Team Indias young cricketers excellent in ODIs but poor in T20I format

ಕ್ರಿಕೆಟ್‌ನಲ್ಲಿ ಪ್ರತಿಯೊಂದು ಮಾದರಿ ಕೂಡ ಭಿನ್ನ ಹಾಗೂ ಅದರಲ್ಲೇ ಆದ ಶೈಲಿಯನ್ನು ಹೊಂದಿದೆ. ಇಲ್ಲಿ ಒಂದು ಮಾದರಿಯಲ್ಲಿ ಮಿಂಚಿದ ಆಟಗಾರರು ಮತ್ತೊಂದು ಮಾದರಿಯಲ್ಲಿ ವೈಫಲ್ಯವನ್ನು ಅನುಭವಿಸಿರುವ ಸಾಕಷ್ಟು ಉದಾಹರಣೆಗಳು ಇದೆ. ಉದಾಹರಣೆಗೆ ಭಾರತದ ಹಿರಿಯ ಆಟಗಾರ ಚೇತೇಶ್ವರ್ ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಪ್ರಮುಖ ಭಾಗವಾಗಿದ್ದರೂ ವೈಟ್‌ಬಾಲ್ ಮಾದರಿಯಲ್ಲಿ ಆಯ್ಕೆಗೆ ಪರಿಗಣನೆಯಾಗುವುದೇ ಇಲ್ಲ. ಮತ್ತೊಂದೆಡೆ ಆಸ್ಟ್ರೇಲಿಯದ ಆಡಂ ಜಂಪಾ ಕೂಡ ಇದೇ ಮಾದರಿಯ ಆಟಗಾರ. ವೈಟ್‌ಬಾಲ್ ಮಾದರಿಯಲ್ಲಿ ಜಂಪಾ ಆಸಿಸ್ ತಂಡದ ಪ್ರಮುಖ ಆಟಗಾರನಾಗಿದ್ದರೂ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದೇ ಇಲ್ಲ.

ಏನೇ ಆಗಿದ್ದರೂ ಏಕದಿನ ಹಾಗೂ ಟಿ20 ಮಾದರಿಯಲ್ಲಿ ಬಹುತೇಕ ತಂಡಗಳು ಒಂದೇ ರೀತಿಯಲ್ಲಿರುತ್ತವೆ. ಹೆಚ್ಚಿನ ಬದಲಾವಣೆಗಳು ಇರುವುದಿಲ್ಲ. ಆದರೆ ವಿಚಿತ್ರವೆನ್ನುವಂತೆ ಕೆಲ ಆಟಗಾರರು ಏಕದಿನ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಟಿ20 ಮಾದರಿಯಲ್ಲಿ ವಿಫಲವಾಗುವಂತಾ ಉದಾಹರಣೆಗಳು ಕೂಡ ಇದೆ.

IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್

ಭಾರತ ತಂಡದಲ್ಲಿ ಏಕದಿನ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿರುವ ಈ ಮೂವರು ಯುವ ಆಟಗಾರರು ಟಿ20ಯಲ್ಲಿ ಮಿಂಚಲು ವಿಫಲವಾಗಿದ್ದಾರೆ. ಆ ಮೂವರು ಆಟಗಾರರು ಯಾರು? ಇಲ್ಲಿದೆ ಮಾಹಿತಿ.

ಶುಬ್ಮನ್ ಗಿಲ್

ಶುಬ್ಮನ್ ಗಿಲ್

ಟೀಮ್ ಇಂಡಿಯಾದ ಯುವ ಆಟಗಾರ ಶುಬ್ಮನ್ ಗಿಲ್ ಏಕದಿನ ಮಾದರಿಯಲ್ಲಿ ನೀಡುತ್ತಿರುವ ಸ್ಥಿರ ಪ್ರದರ್ಶನ ಅದ್ಭುತವಾಗಿದೆ. ಅದರಲ್ಲೂ ಕಳೆದ ಕೆಲ ವಾರಗಳಲ್ಲಿ ಶುಬ್ಮನ್ ಗಿಲ್ ಸತತವಾಗಿ ಮೂರಂಕಿಯ ಗಡಿದಾಟುತ್ತಿರುವುದು ಭಾರತಕ್ಕೆ ಹೊಸ ಭರವಸೆ ಮೂಡಿಸಿದೆ. 2019ರಲ್ಲಿ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ ಗಿಲ್ 21 ಏಕದಿನ ಪಂದ್ಯಗಳಲ್ಲಿ 1254 ರನ್‌ಗಳನ್ನು ಗಳಿಸಿದ್ದು 73.76ರಷ್ಟು ಅದ್ಭುತವಾದ ಸರಾಸರಿ ಹೊಂದಿದ್ದಾರೆ. 109.81ರ ಅದ್ಭುತ ಸ್ಟ್ರೈಕ್‌ರೇಟ್ ಕೂಡ ಹೊಂದಿದ್ದು ನಾಯಕ ರೋಹಿತ್ ಶರ್ಮಾಗೆ ಸೂಕ್ತವಾದ ಆರಂಭಿಕ ಜೊತೆಗಾರ ಎನಿಸಿಕೊಂಡಿದ್ದಾರೆ.

ಶುಬ್ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ಪ್ರದರ್ಶಿಸಿದ ಅದ್ಭುತ ಫಾರ್ಮ್‌ನಿಂದಾಗಿ ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಸರಣಿಯ ಮೂಲಕ ಟಿ20 ಮಾದರಿಗೂ ಪದಾರ್ಪಣೆ ಮಾಡುವ ಅವಕಾಶ ಪಡೆದುಕೊಂಡರು. ಆದರೆ ಚುಟುಕು ಕ್ರಿಕೆಟ್‌ನಲ್ಲಿ ಗಿಲ್ ಈವರೆಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಈವರೆಗೆ ಆಡಿರುವ 5 ಟಿ20 ಪಂದ್ಯಗಳಲ್ಲಿ ಕೇವಲ 76 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ. ಅವರ ಸರಾಸರಿ 15.20. ಹೀಗಾಗಿ ಶುಬ್ಮನ್ ಗಿಲ್ ಬದಲು ಟಿ20 ಮಾದರಿಯಲ್ಲಿ ಫೃಥ್ವಿ ಶಾಗೆ ಅವಕಾಶ ನೀಡಿ ಎಂದು ಕೆಲ ಕ್ರಿಕೆಟ್ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ರಿಷಭ್ ಪಂತ್

ರಿಷಭ್ ಪಂತ್

ಟೀಮ್ ಇಂಡಿಯಾದ ಮತ್ತೋರ್ವ ಯುವ ಆಟಗಾರ ರಿಷಭ್ ಪಂತ್ ಟೆಸ್ಟ್ ಮಾದರಿಯಲ್ಲಿ ತಂಡದ ದೊಡ್ಡ ಆಸ್ತಿ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರವಲ್ಲ ಏಕದಿನ ಮಾದರಿಯಲ್ಲಿಯೂ ಪಂತ್ ಉತ್ತಮ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಕೆಲ ಪಂದ್ಯಗಳಲ್ಲಿ ಪಂತ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಕೂಡ ನೀಡಿದ್ದಾರೆ. ಆದರೆ ರಿಷಭ್ ಪಂತ್ ಟಿ20 ಕ್ರಿಕೆಟ್‌ನಲ್ಲಿ ನಿರೀಕ್ಷಿಸಲು ಸಾಧ್ಯವಾಗದಂತೆ ವೈಫಲ್ಯ ಅನುಭವಿಸಿದ್ದಾರೆ.ರಿಷಭ್ ಪಂತ್ 66 ಟಿ20 ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. ಹಾಗಿದ್ದರು ಕೂಡ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಲು ಪಂತ್‌ಗೆ ಸಾಧ್ಯವಾಗಿಲ್ಲ 22.43ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಪಂತ್ ಸ್ಟ್ರೈಕ್‌ರೇಟ್ ಕೂಡ 125.54ರಷ್ಟು ಇರುವುದು ಕಳವಳಕಾರಿಯಾಗಿದೆ.

ಇಶಾನ್ ಕಿಶನ್

ಇಶಾನ್ ಕಿಶನ್

24ರ ಹರೆಯದ ಯುವ ಆಟಗಾರ ಇಶಾನ್ ಕಿಶನ್ ಅದ್ಬುತ ಪ್ರತಿಭಾವಂತ ಕ್ರಿಕೆಟಿಗ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಈಗಾಗಲೇ ಇಶಾನ್ ಕಿಶನ್ ಟೀಮ್ ಇಂಡಿಯಾದ ಟಿ20 ಹಾಗೂ ಏಕದಿನ ಮಾದರಿಯಲ್ಲಿ ಪ್ರತಿನಿಧಿಸಿದ್ದು ಭರವಸೆ ಮೂಡಿಸಿದ್ದಾರೆ. ಜಾರ್ಖಂಡ್ ಮೂಲದ ಈ ಆಟಗಾರ ಈವರೆಗೆ 13 ಏಕದಿನ ಕ್ರಿಕೆಟ್‌ನಲ್ಲಿ ಆಡಿದ್ದು ಇದರಲ್ಲಿ ಒಂದು ದ್ವಿಶತಕವನ್ನು ಕೂಡ ಹೊಂದಿದ್ದಾರೆ. 46.09ರ ಸರಾಸರಿಯನ್ನು ಹೊಂದಿರುವ ಇಶಾನ್ 107.09ರ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಈ ಮೂಲಕ 2023ರ ಏಕದಿನ ವಿಶ್ವಕಪ್‌ನ ತಂಡದಲ್ಲಿ ಸ್ಥಾನ ಪಡೆಯು ಸ್ಪರ್ಧೆಯಲ್ಲಿದ್ದಾರೆ.

ಆದರೆ ಇಶಾನ್ ಕಿಶನ್ ಕೂಡ ಶುಬ್ಮನ್ ಗಿಲ್ ಹಾಗೂ ರಿಷಭ್ ಪಂತ್ ರೀತಿಯಲ್ಲಿಯೇ ಟಿ20 ಕ್ರಿಕೆಟ್‌ನಲ್ಲಿ ಮಿಂಚಲು ವಿಫಲವಾಗಿದ್ದಾರೆ. ಚುಟುಕು ಮಾದರಿಯಲ್ಲಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಇಶಾನ್ ಕಿಶನ್‌ಗೆ ಸಾಧ್ಯವಾಗಿಲ್ಲ. 26 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಇಶಾನ್ ಕಿಶನ್ 30ಕ್ಕಿಂತ ಕಡಿಮೆ ಸರಾಸರಿ ಹೊಂದಿದ್ದು ಸ್ಟ್ರೈಕ್‌ರೇಟ್‌ನಲ್ಲಿಯೂ ಗಮನಸೆಳೆಯುವಲ್ಲಿ ವಿಫಲವಾಗಿದ್ದಾರೆ.

Story first published: Tuesday, January 31, 2023, 14:05 [IST]
Other articles published on Jan 31, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X