ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3 ಫಾರ್ಮೆಟ್ ಕ್ರಿಕೆಟ್ ಆಡಬಲ್ಲ ಪ್ಲೇಯರ್ ನಾನು, ತಂಡಕ್ಕೆ ವಾಪಸ್ಸಾಗಲು ರೆಡಿಯಿದ್ದೇನೆ: ಶಾರ್ದೂಲ್ ಠಾಕೂರ್

Shardul thakur

ಟೀಂ ಇಂಡಿಯಾ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಸದ್ಯ ರಾಷ್ಟ್ರೀಯ ತಂಡದ ಪರ ಆಡದಿದ್ರೂ ಸಹ, ಭಾರತ ಎ ವಿರುದ್ಧ ಯಶಸ್ವಿ ಪ್ರದರ್ಶನ ನೀಡುತ್ತಿದ್ದಾರೆ. ನ್ಯೂಜಿಲೆಂಡ್ ಎ ವಿರುದ್ಧದ ಸರಣಿಯಲ್ಲಿ ಮಿಂಚುತ್ತಿರುವ ಠಾಕೂರ್ ಟೀಂ ಇಂಡಿಯಾ ಕಂಬ್ಯಾಕ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಟೀಂ ಇಂಡಿಯಾಗೆ ಮತ್ತೆ ಯಾವಾಗ ಹಿಂದಿರುಗಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಶಾರ್ದೂಲ್‌, ರಾಷ್ಟ್ರೀಯ ತಂಡದ ಪರ ಆಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ನ್ಯೂಜಿಲೆಂಡ್ ಎ ವಿರುದ್ಧದ ಅನಧಿಕೃತ ಏಕದಿನಸರಣಿಯ ಮೊದಲ ಪಂದ್ಯದಲ್ಲಿ ಬಲಗೈ ಬೌಲರ್‌ ನಾಲ್ಕು ವಿಕೆಟ್ ಕಬಳಿಸಿದರು. ಭಾರತ ಬೌಲಿಂಗ್ ದಾಳಿಗೆ ತತ್ತರಿಸಿದ ಕಿವೀಸ್ ಪಡೆ 165ರನ್‌ಗಳಿಗೆ ಆಲೌಟ್‌ ಆಯಿತು.

ನ್ಯೂಜಿಲೆಂಡ್ ಎ ತಂಡದ 168ರನ್ ಗುರಿಯನ್ನ ಭಾರತ ಎ ತಂಡವು 31.5 ಓವರ್‌ಗಳಲ್ಲಿ ಗುರಿ ತಲುಪಿತು. ರಜತ್ ಪಾಟೀದಾರ್ ಅಜೇಯ 45 ರನ್ ಕಲೆಹಾಕಿದರು.

ಟಿ20 ವಿಶ್ವಕಪ್‌ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆಯಲು ವಿಫಲಗೊಂಡ ಠಾಕೂರ್

ಟಿ20 ವಿಶ್ವಕಪ್‌ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆಯಲು ವಿಫಲಗೊಂಡ ಠಾಕೂರ್

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆಯುವಲ್ಲಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ವಿಫಲರಾಗಿದ್ದಾರೆ. ಇದಷ್ಟೇ ಅಲ್ಲದೆ ಕಳೆದ ಏಷ್ಯಾಕಪ್ 2022ರ ಟೂರ್ನಿಯಲ್ಲಿ ಭಾರತದ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಕೊನೆಯ ಬಾರಿಗೆ ಈತ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದು, ಎರಡನೇ ಏಕದಿನ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದರು.

ಟೀಂ ಇಂಡಿಯಾ ಕಂಬ್ಯಾಕ್ ಆಗುವ ಕುರಿತು ಪಾಸಿಟಿವ್ ಮನಸ್ಥಿತಿಯನ್ನ ಹೊಂದಿರುವ ಶಾರ್ದೂಲ್ ರಾಷ್ಟ್ರೀಯ ತಂಡಕ್ಕೆ ಮರಳಲು ಅನೇಕ ಕಾರಣಗಳನ್ನ ಹೊಂದಿದ್ದಾರೆ.

CPL 2022: ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ, 5 ಎಸೆತದಲ್ಲಿ ಸತತ 5 ಸಿಕ್ಸರ್ ಸಿಡಿಸಿದ ಬೇಬಿ ಎಬಿ

ರಾಷ್ಟ್ರೀಯ ತಂಡದ ಕರೆಗಾಗಿ ಎದುರು ನೋಡುತ್ತಿದ್ದೇನೆ

ರಾಷ್ಟ್ರೀಯ ತಂಡದ ಕರೆಗಾಗಿ ಎದುರು ನೋಡುತ್ತಿದ್ದೇನೆ

ರಾಷ್ಟ್ರೀಯ ತಂಡದ ಪರ ಮತ್ತೆ ಆಡಲು ತಾನು ಎದುರು ನೋಡುತ್ತಿರುವುದಾಗಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಹೇಳಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ತಾನು ಮೂರು ಫಾರ್ಮೆಟ್ ಆಡುವ ಪ್ಲೇಯರ್ ಎಂಬುದನ್ನ ಮನವರಿಕೆ ಮಾಡಿದ್ದಾರೆ. ಹೀಗಾಗಿ ಆಯ್ಕೆ ಕುರಿತು ಚಿಂತಿಸದೆ ತನ್ನ ಪ್ರದರ್ಶನದತ್ತ ಮಾತ್ರ ಗಮನಹರಿಸುವೆ ಎಂದಿದ್ದಾರೆ.

ಜೊತೆಗೆ ಶೀಘ್ರದಲ್ಲೇ ರಾಷ್ಟ್ರೀಯ ಕರೆ ಬಗ್ಗೆ ಅವರು ಆಶಾವಾದಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರದರ್ಶನದ ಕುರಿತು ತನ್ನ ಯೋಜನೆಗಳನ್ನ ರೂಪಿಸಿದ್ದೇನೆ ಎಂದು ತಿಳಿಸಿದರು.

CPL 2022: ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ, 5 ಎಸೆತದಲ್ಲಿ ಸತತ 5 ಸಿಕ್ಸರ್ ಸಿಡಿಸಿದ ಬೇಬಿ ಎಬಿ

ಟೀಂ ಇಂಡಿಯಾ ಪರ ಮೂರು ಫಾರ್ಮೆಟ್‌ ಆಡಲು ಸಿದ್ಧನಿದ್ದೇನೆ

ಟೀಂ ಇಂಡಿಯಾ ಪರ ಮೂರು ಫಾರ್ಮೆಟ್‌ ಆಡಲು ಸಿದ್ಧನಿದ್ದೇನೆ

''ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಜೊತೆಗೆ ಮೊದಲ ಸಂಭಾಷಣೆಯಲ್ಲಿಯೇ ತಾನು ಮೂರು ಫಾರ್ಮೆಟ್ ಆಡುವ ಪ್ಲೇಯರ್ ಎಂದು ತಿಳಿಸಿದ್ದಾರೆ. ನಾನು ಮೂರು ಫಾರ್ಮೆಟ್‌ನಲ್ಲಿ ಆಡುವುದನ್ನ ಎದುರು ನೋಡುತ್ತಿದ್ದಾರೆ. ಆ ಸಂಭಾಷಣೆಯ ಬಳಿಕ ಎಂದಿಗೂ ಮ್ಯಾನೇಜ್‌ಮೆಂಟ್ ಜೊತೆಗೆ ತಾನು ಕುಳಿತು ಮಾತನಾಡಿಲ್ಲ. ಏಕೆಂದರೆ ನಾವು ಸತತವಾಗಿ ಪಂದ್ಯವನ್ನ ಆಡುತ್ತೇಲೆ ಇದ್ದೇವೆ, ವೇಳಾಪಟ್ಟಿ ತುಂಬಿದೆ'' ಎಂದು ಹೇಳಿದರು.

ಟೀಂ ಇಂಡಿಯಾ ಒಂದರ ಹಿಂದೆ ಮತ್ತೊಂದು ಸರಣಿಯನ್ನ ಆಡುತ್ತಿದ್ದು, ಕೇವಲ ನಾಲ್ಕೈದು ದಿನಗಳಷ್ಟೇ ಅಂತರವಿದೆ. ಯಾರಿಗೂ ಕುಳಿತ ಒಬ್ಬರನ್ನೊಬ್ಬರ ಕುರಿತು ಮಾತನಾಡುವ ಸಮಯವಿಲ್ಲ. ನಾವು ಏನೇ ಮಾತನಾಡಿದ್ರೂ ಕೂಡ ಕೇವಲ ಪಂದ್ಯ ಕುರಿತಾಗಿ ಅಥವಾ ಮುಂದಿನ ಪಂದ್ಯದ ಸ್ಟ್ರಾಟರ್ಜಿ ಅಥವಾ ಪ್ಲಾನ್ ಕುರಿತಾಗಿ ಅಷ್ಟೇ ಆಗಿದೆ'' ಎಂದಿದ್ದಾರೆ.

''ನಾನು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದು, ವಿಕೆಟ್‌ಗಳನ್ನ ಪಡೆಯುತ್ತಿದ್ದೇನೆ. ಕಳೆದ ಎರಡು ವೈಟ್ ಬಾಲ್ ಸರಣಿಗಳಲ್ಲಿ ನಾನು ಆಡಿದ್ದು, ವಿಕೆಟ್‌ಗಳನ್ನ ಪಡೆದಿದ್ದೇನೆ. ಹೀಗಾಗಿ ಖಂಡಿತವಾಗಿ ರಾಷ್ಟ್ರೀಯ ತಂಡದ ಕರೆಯನ್ನು ಎದುರು ನೋಡುತ್ತಿದ್ದು, ಅವರ ಸೇವೆಗೆ ಬೇಕಾದಾಗ ತೆರಳುವೆ'' ಎಂದು ಶಾರ್ದೂಲ್ ತಿಳಿಸಿದ್ರು.

Story first published: Friday, September 23, 2022, 16:38 [IST]
Other articles published on Sep 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X