ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನ ಬೌಲಿಂಗ್‌ಗೆ ಬೆದರಿ ನಿದ್ದೆಗೆಟ್ಟಿದ್ದೆ: ರೋಹಿತ್ ಶರ್ಮಾ ಕಂಗೆಡಿಸಿದ್ದ ಆಸಿಸ್ ಬೌಲರ್

They Gave Me Nightmares: Rohit Sharma Reveals The Most Difficult Bowler

ಟೀಮ್ ಇಂಡಿಯಾದ ಸ್ಪೋಟಕ ಆರಂಭಕ ಆಟಗಾರ ರೋಹಿತ್ ಶರ್ಮಾ ಬೌಲರ್‌ಗಳಿಗೆ ನಿದ್ದೆಗೆಡಿಸುವಂತಾ ಆಟಗಾರ. ಕ್ರೀಸ್‌ಗೆ ಕಚ್ಚಿ ನಿಂತರೆ ಬೌಲರ್‌ಗಳ ಪಾಲಿಗೆ ರೋಹಿತ್ ಕಟ್ಟಿಹಾಕುವುದು ಸುಲಭವಲ್ಲ. ದೊಡ್ಡ ಇನ್ನಿಂಗ್ಸ್‌ ಆಡುವುದು, ಸುಲಭವಾಗಿ ಎಸೆತಗಳನ್ನು ಸಿಕ್ಸರ್‌ಗೆ ಅ್ಟ್ಟುವುದು ರೋಹಿತ್‌ಗೆ ಸಲೀಸು. ಇಂತಾ ರೋಹಿತ್ ಶರ್ಮಾ ಪಾಲಿಗೆ ಓರ್ವ ಬೌಲರ್‌ ಮಾತ್ರ ಕಬ್ಬಿಣದ ಕಡಲೆಯಂತೆ.

ಹೌದು.. ಅದು ಬೇರೆ ಯಾರೂ ಅಲ್ಲ. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೇಟ್ ಲೀ. ಬ್ರೇಟ್‌ಲೀ ಬೌಲಿಂಗ್‌ನ್ನು ಎದುರಿಸುವುದು ರೋಹಿತ್ ಶರ್ಮಾಗೆ ಸಾಕಷ್ಟು ಆತಂಕವನ್ನುಂಟು ಮಾಡಿತ್ತಂತೆ. ಅದಕ್ಕಾಗಿ ಚಿಂತಿಸಿ ನಿದ್ದೆಯನ್ನೂ ಮರೆತುಬಿಟ್ಟಿದ್ದರಂತೆ ರೋಹಿತ್. ಇದನ್ನು ಸ್ವತಃ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.

ಆಲ್‌ಟೈಮ್ ಬೆಸ್ಟ್ ಟೆಸ್ಟ್ ತಂಡವನ್ನು ಹೆಸರಿಸಿದ ಗಂಭೀರ್: ಕುಂಬ್ಳೆ ಕ್ಯಾಪ್ಟನ್ಆಲ್‌ಟೈಮ್ ಬೆಸ್ಟ್ ಟೆಸ್ಟ್ ತಂಡವನ್ನು ಹೆಸರಿಸಿದ ಗಂಭೀರ್: ಕುಂಬ್ಳೆ ಕ್ಯಾಪ್ಟನ್

"ಬ್ರೇಟ್ ಲೀ ನನ್ನ ಪಾಲಿಗೆ ಕಠಿಣ ಬೌಲರ್. 2007ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ನನ್ನ ಮೊದಲ ಪ್ರವಾಸದಲ್ಲಿ ಪಂದ್ಯಕ್ಕೂ ಹಿಂದಿನ ದಿನ ನಾನು ನಿದ್ದೆಯನ್ನೇ ಮಾಡಿರಲಿಲ್ಲ. 150-155 ಕಿ.ಮೀ ವೇಗದಲ್ಲಿ ಬರುವ ಬಾಲ್‌ಗಳನ್ನು ಹೇಗೆ ಎದುರಿಸುವುದು ಎಂದು ಚಿಂತಿತನಾಗಿದ್ದೆ. ಆಗ ವೃತ್ತಿ ಜೀವನದ ಉತ್ತುಂಗದಲ್ಲಿದ್ದರು ಬ್ರೇಟ್ ಲೀ. ನಾನು ಗಮನಿಸುತ್ತಿದ್ದೆ ನಿರಂತರವಾಗಿ 150-155 ಕಿ.ಮಿ.ವೇಗದಲ್ಲಿ ಅವರು ಬೌಲಿಂಗ್ ಮಾಡುತ್ತಿದ್ದರು. ಅದು ನನ್ನಂತಾ ಯುವಕನ ನಿದ್ದೆಯನ್ನು ಕೆಡಿಸಿತ್ತು ಎಂದಿದ್ದಾರೆ ರೋಹಿತ್ ಶರ್ಮಾ.

ಪ್ರಸಕ್ತ ಆಡುತ್ತಿರುವವರಲ್ಲಿ ಯಾರು ಕಠಿಣ ಬೌಲರ್ ಎಂಬ ಪ್ರಶ್ನೆಯೂ ರೋಹಿತ್ ಶರ್ಮಾಗೆ ಎದುರಾಯುತು. ಇದಕ್ಕೂ ಕೂಡ ರೋಹಿತ್ ಶರ್ಮಾ ಆಸ್ಟ್ರೇಲಿಯಾದ ಬೌಲರ್ ಹೆಸರನ್ನೇ ತೆಗೆದುಕೊಂಡರು. ಆಸ್ಟ್ರೇಲಿಯಾ ತಂಡದ ವೇಗಿ ಜೋಶ್ ಹ್ಯಾಸಲ್‌ವುಡ್ ಸದ್ಯ ಕಠಿಣ ಬೌಲರ್ ಎಂದು ಹೇಳಿದರು.

ಕನ್ನಡಿಗ ಅನಿಲ್ ಕುಂಬ್ಳೆ ನಾಯಕತ್ವವನ್ನು ಮನಸಾರೆ ಹೊಗಳಿದ ಗಂಭೀರ್ಕನ್ನಡಿಗ ಅನಿಲ್ ಕುಂಬ್ಳೆ ನಾಯಕತ್ವವನ್ನು ಮನಸಾರೆ ಹೊಗಳಿದ ಗಂಭೀರ್

ಜೋಶ್ ಹ್ಯಾಸಲ್‌ವುಡ್ ಶಿಸ್ತುಬದ್ಧ ಬೌಲರ್. ಬ್ಯಾಟ್ಸ್‌ಮನ್‌ಗೆ ಆತ ದುರ್ಬಲ ಎಸೆತಗಳನ್ನು ಎಸೆಯುವುದೇ ಇಲ್ಲ. ಆಸ್ಟ್ರೇಲಿಯಾಗೆ ಟೆಸ್ಟ್ ಸರಣಿಗೆ ಪ್ರಯಾಣಿಸುವುದಿದ್ದರೆ ನಾನು ಜೋಶ್ ಹ್ಯಾಸಲ್‌ವುಡ್ ಎಸೆತವನ್ನು ಶಿಸ್ತುಬದ್ಧವಾಗಿ ಎದುರಿಸಲು ಮಾನಸಿಕವಾಗಿ ಸಿದ್ಧಗೊಳ್ಳುತ್ತೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Story first published: Sunday, May 3, 2020, 18:18 [IST]
Other articles published on May 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X