ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಅವರು ನಮ್ಮ ಪಾಸ್‌ಪೋರ್ಟ್ ಕಿತ್ತುಕೊಂಡು ಗದೆ ಎಲ್ಲಿದೆ ಎಂದರು': ವ್ಯಾಗ್ನರ್

They grabbed our passports, asked wheres the mace?: Neil Wagner explains grand welcome in New Zealand

ವೆಲ್ಲಿಂಗ್ಟನ್: ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಗೆದ್ದು ಆಕರ್ಷಕ (ಟ್ರೋಫಿ) ಗದೆಯೊಂದಿಗೆ ತವರಿಗೆ ತೆರಳಿರುವ ನ್ಯೂಜಿಲೆಂಡ್ ಆಟಗಾರರಿಗೆ ನ್ಯೂಜಿಲೆಂಡ್‌ನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕೂಡ ಬೇರೆ ತನಿಖೆ ಮಾಡುವ ಬದಲು ಗದೆಯ ಬಗ್ಗೆಯೇ ಪ್ರಶ್ನಿಸಿದರು, ಮನಸಾರೆ ಅಭಿನಂದಿಸಿದರು ಎಂದು ನ್ಯೂಜಿಲೆಂಡ್ ವೇಗಿ ನೀಲ್ ವ್ಯಾಗ್ನರ್ ಹೇಳಿದ್ದಾರೆ.

'ಗ್ರೇಟ್‌ವಾಲ್‌-2' ಪೂಜಾರಗೆ ಮುಂದೆ ಭಾರತ ತಂಡದಲ್ಲಿ ಜಾಗ ಇಲ್ವಾ?!'ಗ್ರೇಟ್‌ವಾಲ್‌-2' ಪೂಜಾರಗೆ ಮುಂದೆ ಭಾರತ ತಂಡದಲ್ಲಿ ಜಾಗ ಇಲ್ವಾ?!

ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ನಡೆದಿದ್ದ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ 8 ವಿಕೆಟ್ ಸುಲಭ ಜಯ ಗಳಿಸಿತ್ತು. ಟೆಸ್ಟ್‌ ಚಾಂಪಿಯನ್‌ಶಿಪ್‌ ಮುಗಿಸಿಕೊಂಡು ಪ್ರಶಸ್ತಿಯಾಗಿ ಲಭಿಸಿದ ಚಾಂಪಿಯನ್‌ಶಿಪ್‌ ಗದೆಯೊಂದಿಗೆ ತವರು ತಲುಪಿದ ಕಿವೀಸ್ ಆಟಗಾರರಿಗೆ ಅಲ್ಲಿನ ಎಲ್ಲರೂ ಅಭಿನಂದಿಸಿ ಖುಷಿಪಟ್ಟಿದ್ದಾರೆ.

ಭಾರತ ಸೋಲಿಸಿದ್ದಕ್ಕೆ ಅದ್ದೂರಿ ಸ್ವಾಗತ

ಭಾರತ ಸೋಲಿಸಿದ್ದಕ್ಕೆ ಅದ್ದೂರಿ ಸ್ವಾಗತ

ನ್ಯೂಜಿಲೆಂಡ್ ತಲುಪುತ್ತಲೇ ಅಲ್ಲಿ ಯಾವ ರೀತಿಯ ಸ್ವಾಗತ ಸಿಕ್ಕಿತು ಅನ್ನೋದನ್ನು ನೀಲ್ ವ್ಯಾಗ್ನರ್ ವಿವರಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅಲ್ಲಿನ ಅಧಿಕಾರಿಗಳು ತಪಾಸಣೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಗದೆಯ ಬಗ್ಗೆಯೇ ಪ್ರಶ್ನಿಸಿದರು. ಗೆದ್ದ ನಮ್ಮನ್ನು ಅಭಿನಂದಿಸಿದರು. ಭಾರತದಂತ ಬಲಿಷ್ಠ ತಂಡದೆದುರು ಗೆದ್ದಿದ್ದರಿಂದ ಹಿಂದೆಂದೂ ಸಿಕ್ಕಿರದ ಅದ್ದೂರಿ ಸ್ವಾಗತ ಸಿಕ್ಕಿತು ಎಂದು ವ್ಯಾಗ್ನರ್ ತಿಳಿಸಿದ್ದಾರೆ.

ಪಾಸ್‌ಪೋರ್ಟ್‌ ಕಿತ್ತುಕೊಂಡರು

ಪಾಸ್‌ಪೋರ್ಟ್‌ ಕಿತ್ತುಕೊಂಡರು

"ಕಸ್ಟಮ್ಸ್ ಅಧಿಕಾರಿಗಳ ಮುಂದೆ ನಾನು ಹಾಗೆ ನಡೆಯುತ್ತೇನೆ, ನನಗೆ ಅಂಥ ಸ್ವಾಗತ, ಅಭಿನಂದನೆ ಸಿಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ನಮ್ಮನ್ನು ಪರಿಶೀಲಿಸುವ ಬದಲು ಎಲ್ಲರೂ ನಮ್ಮನ್ನು ಅಭಿನಂದಿಸಿದರು. ನಮ್ಮ ಪಾಸ್‌ಪೋರ್ಟ್‌ ಕಿತ್ತುಕೊಂಡು ಎಲ್ಲರೂ ಚಾಂಪಿಯನ್‌ಶಿಪ್‌ ಗದೆಯ ಬಗ್ಗೆಯೇ ಕೇಳತೊಡಗಿದರು. ಪೊಲೀಸ್ ಅಧಿಕಾರಿಗಳು ಜೊತೆ ನಿಂತು ಫೋಟೋ ಹೊಡೆಸಿಕೊಳ್ಳಲು ಬಯಸುತ್ತಿದ್ದರು," ಎಂದು ವ್ಯಾಗ್ನರ್ ವಿವರಿಸಿದ್ದಾರೆ.

ಸುಧೀರ್ಘ ವರ್ಷಗಳ ಬಳಿಕ ಐಸಿಸಿ ಟ್ರೋಫಿ

ಸುಧೀರ್ಘ ವರ್ಷಗಳ ಬಳಿಕ ಐಸಿಸಿ ಟ್ರೋಫಿ

ಅಂದ್ಹಾಗೆ ನ್ಯೂಜಿಲೆಂಡ್ ತಂಡ ಐಸಿಸಿ ಟ್ರೋಫಿ ಗೆದ್ದಿದ್ದು ಇದು ಸುಮಾರು 21 ವರ್ಷಗಳ ಬಳಿಕ. ನ್ಯೂಜಿಲೆಂಡ್‌ನಲ್ಲಿ ಕಿವೀಸ್ ಆಟಗಾರರಿಗೆ ಅದ್ದೂರಿ ಸ್ವಾಗತ ಸಿಗಲು ಇದೂ ಒಂದು ಕಾರಣ. 2019ರಲ್ಲಿ ಐಸಿಸಿ ಒಡಿಐ ವಿಶ್ವಕಪ್‌ ಕಳೆದುಕೊಂಡ ದುಃಖದಲ್ಲಿದ್ದ ನ್ಯೂಜಿಲೆಂಡ್‌ಗೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆಲುವು ಅತೀವ ಖುಷಿ ಕೊಟ್ಟಿದೆ.

Story first published: Saturday, June 26, 2021, 22:54 [IST]
Other articles published on Jun 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X