ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅವರು ಇನ್ನು ಬುದ್ಧಿ ಕಲಿಯಲ್ಲ: ಆಸಿಸ್ ನಾಯಕನ ವರ್ತನೆಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ತೀವ್ರ ತರಾಟೆ

They just don’t seem to learn: David Lloyd slams Ausis skipper Tim Paine

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಗಾಯದ ಸಮಸ್ಯೆ, ಬಯೋಬಬಲ್ ವಿವಾದ, ನಿಂದನೆ, ಸ್ಟೀವ್ ಸ್ಮಿತ್ ಕ್ರೀಡಾಸ್ಪೂರ್ತಿ ಮರೆತ ಪ್ರಕರಣ ಸೇರಿದಂತೆ ಸಾಕಷ್ಟು ಸಂಗತಿಗಳು ಸಿಡ್ನಿ ಟೆಸ್ಟ್ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಇದರ ಜೊತೆಗೆ ಆಸಿಸ್ ನಾಯಕ ಟಿಮ್ ಪೈನ್ ಅಂತಿಮ ದಿನದಾಟದ ವೇಳೆ ಭಾರತೀಯ ಆಟಗಾರ ಆರ್ ಅಶ್ವಿನ್‌ಗೆ ಸ್ಲೆಡ್ಜ್ ಮಾಡಿದ ರೀತಿ ತೀವ್ರ ಟೀಕೆಗೆ ಗುರಿಯಾಗಿದೆ.

ಈ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ದಿಗ್ಗಜ ಆಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಆಸಿಸ್ ನಾಯಕ ಟಿಮ್ ಪೈನ್ ಕ್ಷಮೆಯನ್ನೂ ಕೇಳಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಡೇವಿಡ್ ಲಾಯ್ಡ್ ಈ ಬಗ್ಗೆ ಅಂಕಣವೊಂದರಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಆಸಿಸ್ ನಾಯಕನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್‌ನಿಂದ ರವೀಂದ್ರ ಜಡೇಜಾ ಹೊರಕ್ಕೆಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್‌ನಿಂದ ರವೀಂದ್ರ ಜಡೇಜಾ ಹೊರಕ್ಕೆ

ನಾಯಕನಾಗಿ ಉದಾಹರಣೆಯಾಗಬೇಕಿತ್ತು

ನಾಯಕನಾಗಿ ಉದಾಹರಣೆಯಾಗಬೇಕಿತ್ತು

ದಿ ಡೈಲಿ ಮೇಲ್‌ ಪತ್ರಿಕೆಗೆ ಪರೆದ ಅಂಕಣದಲ್ಲಿ ಡೇವಿಡ್ ಲಾಯ್ಡ್ ವಿಕೆಟ್ ಹಿಂದಿನಿಂದ ಪೈನ್‌ನ ವರ್ತನೆ 'ಚಡಪಡಿಸುವಂತೆ ಮಾಡಿದೆ' ಎಂದು ಲಾಯ್ಡ್ ಬರೆದಿದ್ದಾರೆ. ಯಾರಾದರೂ ತನ್ನೊಂದಿಗೆ ಆ ರೀತಿ ಮಾತನಾಡಿದ್ದರೆ, ನಾನು ಆತನ ಮೇಲಿನ ಎಲ್ಲ ಗೌರವವನ್ನು ಕಳೆದುಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ. ನಾಯಕನಾಗಿ ಪೈನ್ ತನ್ನ ಆಟಗಾರರನ್ನು ನಿಯಂತ್ರಿಸಬೇಕಾಗಿತ್ತು. ಆತ ತನ್ನ ಸಹ ಆಟಗಾರರಿಗೆ ಉದಾಹರಣೆಯಾಗಬೇಕಿತ್ತು ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಸ್ಲೆಡ್ಜ್ ಮಾಡಿದರೂ ಕುಳಿತು ಡ್ರಿಂಕ್ಸ್ ಮಾಡಬಹುದಾಗಿತ್ತು

ಸ್ಲೆಡ್ಜ್ ಮಾಡಿದರೂ ಕುಳಿತು ಡ್ರಿಂಕ್ಸ್ ಮಾಡಬಹುದಾಗಿತ್ತು

"ನಾನು ಸುಮಾರು ಎರಡು ದಶಕಗಳ ಕಾಲ ಕ್ರಿಕೆಟ್ ಆಡಿದ್ದೆ. ಸ್ಲೆಡ್ಜಿಂಗ್ ಬಗ್ಗೆ ಜನರು ಮಾತನಾಡಿದರೆ ಮಾಜಿ ನಾಯಕ ಇಯಾನ್ ಚಾಪೆಲ್ ಅವರ ನೇತೃತ್ವದ ತಂಡವನ್ನು ತೋರಿಸಿ ಈಗಿನದ್ದು ಸ್ಲೆಡ್ಜಿಂಗ್ ಅಲ್ಲ ಎನ್ನುತ್ತಾರೆ. ಆದರೆ ಆಗ ಡೆನ್ನಿಸ್ ಲಿಲ್ಲಿ ಮತ್ತು ಜೆಫ್ ಥಾಮ್ಸನ್ ಅವರಂತವರು ಬಂಟರ್‌ಗಳನ್ನು ಮಾತ್ರವೇ ಮಾಡುತ್ತಿದ್ದರು. ಅವರು ಯಾವತ್ತು ಕೂಡ ಪಂದ್ಯ ಮುಗಿದ ಬಳಿಕ ಜೊತೆಯಾಗಿ ಕುಳಿತು ಬೀಯರ್ ಕುಡಿಯಲು ಬಯಸದಂತೆ ಏನನ್ನೂ ಹೇಳುತ್ತಿರಲಿಲ್ಲ" ಎಂದಿದ್ದಾರೆ ಡೇವಿಡ್ ಲಾಯ್ಡ್. ಆರ್ ಅಶ್ವಿನ್‌ಗೆ ಹೇಳಿದಂತಾ ಮಾತನ್ನು ಆಡಿದರೆ ಪಂದ್ಯ ಮುಗಿದ ಬಳಿಕ ಅಶ್ವಿನ್ ಆಸ್ಟ್ರೇಲಿಯನ್ನರ ಜೊತೆಯಾಗಿ ಕುಳಿತು ಪಾನೀಯ ಸೇವಿಸಲು ಹೇಗೆ ಸಾಧ್ಯವಾಗಬಲ್ಲದು? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಅವರು ಪಾಠ ಕಲಿತಿಲ್ಲ

ಅವರು ಪಾಠ ಕಲಿತಿಲ್ಲ

"ಸ್ಯಾಂಡ್ ಪೃಪರ್ ಪ್ರಕರಣದ ನಂತರ ಆಸ್ಟ್ರೇಲಿಯನ್ನರು ತಮ್ಮ ವರ್ತನೆ ಹಾಗೂ ಭಾಷೆಯನ್ನು ಸುಧಾರಿಸಿಕೊಳ್ಳುತ್ತಾರೆ ಎಂದು ನೀವು ಅಂದುಕೊಳ್ಳಬಹುದು. ಆದರೆ ಅವರು ಅದರಿಂದ ಪಾಠ ಕಲಿತಂತೆ ಕಾಣಿಸುತ್ತಿಲ್ಲ. ಈ ಭೂಮಿಯ ಮೇಲೆ ಅವರಿಗೆ ಏನು ತಪ್ಪಾಗಿದೆ" ಎಂದು ಆಸ್ಟ್ರೇಲಿಯಾ ನಾಯಕನ ವರ್ತನೆಯನ್ನು ಮುಂದಿಟ್ಟುಕೊಂಡು ಇಡೀ ಆಸ್ಟ್ರೇಲಿಯಾ ತಂಡದ ವರ್ತನೆಯ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಡೇವಿಡ್ ಲಾಯ್ಡ್ ಕಟು ಮಾತುಗಳಲ್ಲಿ ಟೀಕೆಯನ್ನು ಮಾಡಿದ್ದಾರೆ.

Story first published: Wednesday, January 13, 2021, 9:50 [IST]
Other articles published on Jan 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X