ನಮಸ್ತೆ ಟ್ರಂಪ್‌ಗೆ ವೇದಿಕೆ ಒದಗಿಸಿದ ಸ್ಟೇಡಿಯಂ ವಿಶೇಷತೆಗಳೇನು?

Motera Stadium: Things you should know about worlds largest cricket stadium as Donald Trump inaugurates it

ಅಹಮದಾಬಾದ್, ಫೆಬ್ರವರಿ 24: ಅಹಮದಾಬಾದ್‌ನ ಮೊಟೆರಾದಲ್ಲಿ ನಿರ್ಮಾಣವಾಗಿರುವ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ''ನಮಸ್ತೆ ಟ್ರಂಪ್'' ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಿದೆ. ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಟ್ರಂಪ್ ಅವರು ಈ ಹೊಚ್ಚ ಹೊಸ ಮೈದಾನದಲ್ಲಿ ನೆರೆದಿದ್ದ ಲಕ್ಷಾಂತರ ಮಂದಿಯನ್ನು ಉದ್ದೇಶಿಸಿ ಮಾತನಾಡಿದರು.

ಹಳೆಯದಾಗಿದ್ದ ಮತ್ತು ಸೌಲಭ್ಯಗಳ ಕೊರತೆಯಿದ್ದ ಹಳೆಯ ಮೊಟೆರಾ ಕ್ರೀಡಾಂಗಣವನ್ನು ಕೆಡವಿ ಹೊಸದಾಗಿ ನಿರ್ಮಿಸಲಾಗಿದೆ. ಈ ವಿಶಾಲ ಕ್ರೀಡಾಂಗಣ ಈಗ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯಲಿದೆ.

ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣ ಜಗತ್ತಿನ ಅತಿ ದೊಡ್ಡ ಮೈದಾನ ಎನಿಸಿಕೊಂಡಿದೆ. ಆದರೆ, ಮೊಟೆರಾದ ಕ್ರೀಡಾಂಗಣವು ಎಂಸಿಜಿ ಮೈದಾನವನ್ನು ಮೀರಿಸಿದೆ.

ಪೋಟಸ್ ಸ್ವಾಗತಕ್ಕಾಗಿ ಇಡೀ ಸ್ಟೇಡಿಯಂ ಸಿಂಗಾರ

ಪೋಟಸ್ ಸ್ವಾಗತಕ್ಕಾಗಿ ಇಡೀ ಸ್ಟೇಡಿಯಂ ಸಿಂಗಾರ

ಪೋಟಸ್ ಸ್ವಾಗತಕ್ಕಾಗಿ ಇಡೀ ಸ್ಟೇಡಿಯಂ ಸಿಂಗಾರಗೊಳಿಸಲಾಗಿತ್ತು. ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸ್ವಾಗತ ಕೋರಿದರು. ಹೌಡಿ ಮೋದಿ ಕಾರ್ಯಕ್ರಮದಂತೆ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಂಡಿದ್ದಾರೆ. ಅಹಮದಾಬಾದ್‌ಗೆ ಭೇಟಿ ನೀಡಿದ್ದು, ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಜೊತೆ ರೋಡ್ ಶೋ ನಡೆಸಿದರು. ಸಬರಮತಿ ಆಶ್ರಮಕ್ಕೆ ಭೇಟಿ ನಂತರ ಮೊಟೆರಾದ ನೂತನ ಬೃಹತ್ ಕ್ರೀಡಾಂಗಣ ಉದ್ಘಾಟಿಸಿ, ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದಾರೆ.

ಈ ಕ್ರೀಡಾಂಗಣ 63 ಎಕರೆ ಪ್ರದೇಶದಲ್ಲಿದೆ

ಈ ಕ್ರೀಡಾಂಗಣ 63 ಎಕರೆ ಪ್ರದೇಶದಲ್ಲಿದೆ

ಈ ಕ್ರೀಡಾಂಗಣ 63 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರತಿಷ್ಠಿತ ಪಾಪ್ಯುಲಸ್ ಆರ್ಕಿಟೆಕ್ಟ್ ಕಂಪೆನಿ ಸ್ಟೇಡಿಯಂ ವಿನ್ಯಾಸದ ಜವಾಬ್ದಾರಿ ನಿರ್ವಹಿಸುತ್ತಿದೆ. ಇದು 700 ಕೋಟಿ ರೂಪಾಯಿ ವೆಚ್ಚದ ಯೋಜನೆಯಾಗಿದೆ. ಭಾರತದ ಅತಿ ದೊಡ್ಡ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾದ ಎಲ್‌ & ಟಿ, ಸ್ಟೇಡಿಯಂ ನಿರ್ಮಾಣದ ಟೆಂಡರ್ ಪಡೆದುಕೊಂಡಿದೆ. ಏಕತಾ ಪ್ರತಿಮೆಯ ನಿರ್ಮಾಣವನ್ನೂ ಇದೇ ಕಂಪೆನಿ ನಿರ್ವಹಿಸಿತ್ತು.

ಮೂರು ಅಭ್ಯಾಸ ಮೈದಾನಗಳು ಇರಲಿವೆ

ಮೂರು ಅಭ್ಯಾಸ ಮೈದಾನಗಳು ಇರಲಿವೆ

ಗುಜರಾತ್ ಕ್ರಿಕೆಟ್ ಸಂಸ್ಥೆಯ ವೆಬ್‌ಸೈಟ್ ಮಾಹಿತಿ ಪ್ರಕಾರ ಸ್ಟೇಡಿಯಂನಲ್ಲಿ ಮೂರು ಅಭ್ಯಾಸ ಮೈದಾನಗಳು ಇರಲಿವೆ. ಇದರ ಜೊತೆ ಒಂದು ಒಳ ಕ್ರೀಡಾಂಗಣವೂ ಇರಲಿದೆ. 3,000 ಕಾರುಗಳು ಮತ್ತು 10,000 ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ಸೌಲಭ್ಯವಿದೆ. ಅಲ್ಲದೆ, ವಾಹನಗಳ ಸಂಚಾರ ಮತ್ತು ಪಾದಚಾರಿ ಮಾರ್ಗಗಳ ಸಂಪರ್ಕಕ್ಕೆ ಯಾವುದೇ ಅಡೆ ತಡೆ ಇರುವುದಿಲ್ಲ. 55 ಸುಸಜ್ಜಿತ ಕೊಠಡಿಗಳ ಕ್ಲಬ್‌ ಮತ್ತು ಒಲಿಂಪಿಕ್ ಗಾತ್ರದ ಸ್ವಿಮ್ಮಿಂಗ್ ಪೂಲ್ ಇರಲಿದ್ದು, 76 ಕಾರ್ಪೊರೆಟ್ ಬಾಕ್ಸ್‌ಗಳಿರಲಿವೆ.

ಅತಿ ದೊಡ್ಡ ಸ್ಟೇಡಿಯಂಗಳು

ಅತಿ ದೊಡ್ಡ ಸ್ಟೇಡಿಯಂಗಳು

ಮೋಟೆರಾ ಸ್ಟೇಡಿಯಂ ಹೆಸರನ್ನು ಸರ್ದಾರ್ ವಲ್ಲಭಬಾಯಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿದೆ. 1 ಲಕ್ಷ 10 ಸಾವಿರ ಸೀಟು ಹೊಂದಿದೆ. ಅತಿ ದೊಡ್ದ ಕ್ರಿಕೆಟ್ ಮೈದಾನ ಎನಿಸಿದೆ. ಆದರೆ, ಒಟ್ಟು 114000 ಸೀಟುಗಳನ್ನು ಹೊಂದಿರುವ ಉತ್ತರ ಕೊರಿಯಾದ ರಂಗ್ರಾಡೋ ಮೇ ಡೇ ಸ್ಟೇಡಿಯಂ ವಿಶ್ವದ ಅತಿದೊಡ್ಡ ಸ್ಟೇಡಿಯಂ ಎಂಬ ದಾಖಲೆ ಹೊಂದಿದೆ.

ಮೆಲ್ಬರ್ನ್ ಕ್ರಿಕೆಟ್ ಮೈದಾನ(ಎಂಸಿಜಿ) ಸಾಮರ್ಥ್ಯದ ಆಧಾರದಲ್ಲಿ ಅತಿ ದೊಡ್ಡ ಕ್ರೀಡಾಂಗಣವಾಗಿತ್ತು, 95000 (ಅಂದಾಜು 1 ಲಕ್ಷ) ಜನರು ಒಟ್ಟಿಗೆ ಕುಳಿತು ಪಂದ್ಯ ವೀಕ್ಷಿಸಲು ಅವಕಾಶವಿದೆ. ಅದರ ನಂತರ ಎರಡನೆಯ ದೊಡ್ಡ ಕ್ರೀಡಾಂಗಣ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನವಾಗಿದ್ದು, 66 ಸಾವಿರ ಸಾಮರ್ಥ್ಯವಿದೆ.

ಬದಲಾದ ಮೊಟೆರಾ ಕ್ರೀಡಾಂಗಣ

ಬದಲಾದ ಮೊಟೆರಾ ಕ್ರೀಡಾಂಗಣ

ಇದಕ್ಕೂ ಮೊದಲು ಮೊಟೆರಾ ಕ್ರೀಡಾಂಗಣದಲ್ಲಿ 54 ಸಾವಿರ ಜನರು ಪಂದ್ಯ ವೀಕ್ಷಿಸಬಹುದಾಗಿತ್ತು. ಕ್ರೀಡಾಂಗಣವನ್ನು ನವೀಕರಿಸಿ ಇನ್ನಷ್ಟು ವಿಸ್ತರಿಸಲು 2016ರಲ್ಲಿ ಜಿಸಿಎ ಹಳೆಯ ಕ್ರೀಡಾಂಗಣವನ್ನು ಕೆಡವಿ ಹೊಸ ಕಾಮಗಾರಿ ಆರಂಭಿಸಿತ್ತು. ಕ್ರಿಕೆಟ್ ಅಲ್ಲದೆ, ಫುಟ್ಬಾಲ್, ಹಾಕಿ, ಬಾಸ್ಕೆಟ್ ಬಾಲ್, ಕಬಡ್ಡಿ, ಬಾಕ್ಸಿಂಗ್, ಟೆನಿಸ್, ಅಥ್ಲೆಟಿಕ್ಸ್ ಮುಂತಾದ ಕ್ರೀಡೆಗಳಿಗೂ ಬಳಸಬಹುದಾಗಿದೆ.

ದಾಖಲೆಗಳಿಗೆ ಸಾಕ್ಷಿಯಾಗಿದ್ದ ಮೈದಾನ

ದಾಖಲೆಗಳಿಗೆ ಸಾಕ್ಷಿಯಾಗಿದ್ದ ಮೈದಾನ

ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 10, 000 ರನ್ ಗಳಿಸಿದ್ದು, ಮಾಜಿ ನಾಯಕ ಕಪಿಲ್ ದೇವ್ ಅವರು ನ್ಯೂಜಿಲೆಂಡ್ ದಿಗ್ಗಜ ರಿಚರ್ಡ್ ಹ್ಯಾಡ್ಲಿ ಅತ್ಯಧಿಕ ವಿಕೆಟ್ ಗಳಿಕೆ ದಾಖಲೆ ಮುರಿದಿದ್ದು ಇದೇ ಮೈದಾನದಲ್ಲಿ ಎಂಬುದು ವಿಶೇಷ. ಆದರೆ, ಈ ಮೈದಾನದಲ್ಲಿ ಮೊದಲ ಪಂದ್ಯ ಯಾವಾಗ ನಡೆಯಲಿದೆ ಎಂಬ ಮಾಹಿತಿ ಸದ್ಯಕ್ಕಿಲ್ಲ. ಐಪಿಎಲ್ 2020 ಸಂದರ್ಭದಲ್ಲಿ ಈ ಮೈದಾನ ಬಳಕೆಯಾಗುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, February 24, 2020, 15:15 [IST]
Other articles published on Feb 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more