ಪರದೆ ಮೇಲೆ ನಿರ್ಣಯ ಪ್ರಕಟಿಸುವ ಬದಲು ಬೇರೆ ವಿಷಯವನ್ನು ಹರಿಬಿಟ್ಟ ಥರ್ಡ್ ಅಂಪೈರ್!

Pakistan ಆಟಗಾರರಿಗೆ ಚಳ್ಳೆ ಹಣ್ಣು ತಿನ್ನಿಸಿದ West Indies | Oneindia Kannada

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಎರಡನೇ ಆವೃತ್ತಿ ಆರಂಭವಾಗಿದ್ದು ಒಂದೆಡೆ ಉದ್ಘಾಟನಾ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡುತ್ತಿದ್ದರೆ ಮತ್ತೊಂದೆಡೆ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿವೆ. ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್ ಪಂದ್ಯ ಮತ್ತು 4 ಟಿ ಟ್ವೆಂಟಿ ಪಂದ್ಯಗಳನ್ನು ಆಡಲು ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದೆ.

WTC ದ್ವಿತೀಯ ಆವೃತ್ತಿ: 14 ಅಂಕ ಪಡೆದ ಭಾರತಕ್ಕೆ ಎರಡನೇ ಸ್ಥಾನ, ಕೇವಲ 12 ಅಂಕ ಪಡೆದ ತಂಡಕ್ಕೆ ಪ್ರಥಮ ಸ್ಥಾನ!WTC ದ್ವಿತೀಯ ಆವೃತ್ತಿ: 14 ಅಂಕ ಪಡೆದ ಭಾರತಕ್ಕೆ ಎರಡನೇ ಸ್ಥಾನ, ಕೇವಲ 12 ಅಂಕ ಪಡೆದ ತಂಡಕ್ಕೆ ಪ್ರಥಮ ಸ್ಥಾನ!

ಹೀಗೆ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೊದಲನೇ ಟೆಸ್ಟ್ ಪಂದ್ಯ ಆಗಸ್ಟ್ 12 ರಿಂದ ಆಗಸ್ಟ್ 16 ರವರೆಗೆ ಜಮೈಕಾದ ಕಿಂಗ್‍ಸ್ಟನ್‌ನಲ್ಲಿರುವ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಪಾಕಿಸ್ತಾನ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಬಿಟ್ಟುಕೊಟ್ಟಿತು. ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ ಮೊದಲನೇ ಇನ್ನಿಂಗ್ಸ್‌ನಲ್ಲಿ 217 ರನ್‌ಗಳಿಗೆ ಆಲ್ ಔಟ್ ಆಯಿತು. ಇನ್ನು ಮೊದಲನೇ ಇನ್ನಿಂಗ್ಸ್‌ನಲ್ಲಿ ತನ್ನ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡದ ಪರ ಬ್ರಾಥ್‌ವೈಟ್ 97 ರನ್ ಮತ್ತು ಜೇಸನ್ ಹೋಲ್ಡರ್ 58 ರನ್ ಬಾರಿಸುವುದರ ಮೂಲಕ 253 ರನ್ ಗಳಿಸಿ ಪಾಕಿಸ್ತಾನದ ವಿರುದ್ಧ 36 ರನ್‌ಗಳ ಮುನ್ನಡೆಯನ್ನು ಸಾಧಿಸಿತು.

ಹೀಗೆ ಮೊದಲನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ ಮುನ್ನಡೆ ಸಾಧಿಸಲು 97 ರನ್ ಬಾರಿಸಿ ನೆರವಾದ ಬ್ರಾಥ್‌ವೈಟ್ ಪಾಕಿಸ್ತಾನದ ಹಸನ್ ಅಲಿಗೆ ರನ್ ಔಟ್ ಆದರು. ಬ್ರಾಥ್‌ವೈಟ್ 97 ರನ್ ಗಳಿಸಿದ್ದಾಗ ರನ್ ಔಟ್ ಮನವಿಯನ್ನು ಪಾಕಿಸ್ತಾನದ ಆಟಗಾರರು ಮಾಡಿದರು. ಈ ಸಮಯದಲ್ಲಿ ಮೈದಾನದಲ್ಲಿದ್ದ ತೀರ್ಪುಗಾರರು ಥರ್ಡ್ ಅಂಪೈರ್‌ಗೆ ನಿರ್ಣಯವನ್ನು ವರ್ಗಾಯಿಸಿದರು. ಈ ಸಂದರ್ಭದಲ್ಲಿ ಔಟ್ ಅಥವಾ ನಾಟೌಟ್ ಎಂದು ಪರದೆ ಮೇಲೆ ಪ್ರದರ್ಶಿಸುವ ಬದಲು ಥರ್ಡ್ ಅಂಪೈರ್ ತನ್ನ ಮ್ಯೂಸಿಕ್ ಪ್ಲೇಯರ್‌‌ನ್ನು ಪರದೆಯ ಮೇಲೆ ಪ್ರದರ್ಶಿಸುವುದರ ಮೂಲಕ ಕೆಲಕಾಲ ಹಾಸ್ಯದ ವಾತಾವರಣವನ್ನು ನಿರ್ಮಿಸಿದರು.

ಭಾರತ vs ಇಂಗ್ಲೆಂಡ್: ಆಗೊಂದು ಈಗೊಂದು ಶತಕ ಬಾರಿಸುವವರೇ ತಂಡದಲ್ಲಿದ್ದಾರೆ ಎಂದ ಸಚಿನ್!ಭಾರತ vs ಇಂಗ್ಲೆಂಡ್: ಆಗೊಂದು ಈಗೊಂದು ಶತಕ ಬಾರಿಸುವವರೇ ತಂಡದಲ್ಲಿದ್ದಾರೆ ಎಂದ ಸಚಿನ್!

ಹೀಗೆ ತನ್ನ ಮ್ಯೂಸಿಕ್ ಪ್ಲೇಯರ್‌‌ನ್ನು ಪರದೆಯ ಮೇಲೆ ಪ್ರದರ್ಶಿಸಿದ ಕೂಡಲೇ ಎಚ್ಚೆತ್ತ ಥರ್ಡ್ ಅಂಪೈರ್ ಕೆಲವೇ ಕ್ಷಣಗಳಲ್ಲಿ ರನ್ ಔಟ್ ನಿರ್ಣಯವನ್ನು ಔಟ್ ಎಂದು ಪರದೆಯ ಮೇಲೆ ಹಾಕಿದರು. ಸದ್ಯ ಪಾಕಿಸ್ತಾನ ಮತ್ತು ವಿಂಡೀಸ್ ನಡುವಿನ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಥರ್ಡ್ ಅಂಪೈರ್ ಮಾಡಿದ ಈ ಯಡವಟ್ಟಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಆ ವೈರಲ್ ವಿಡಿಯೋ ಮುಂದಿದೆ ನೋಡಿ..


ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ 203 ರನ್ ಗಳಿಸಿ ಆಲ್ ಔಟ್ ಆಗುವುದರ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 167 ರನ್‌ಗಳ ಗುರಿಯನ್ನು ನೀಡಿತು. ಹೀಗೆ ಪಾಕಿಸ್ತಾನ ನೀಡಿದ 167 ರನ್‌ಗಳ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಆರಂಭದಲ್ಲಿಯೇ ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ವಿಂಡೀಸ್ ಪರ ಬ್ಲ್ಯಾಕ್‌ವುಡ್ 50 ರನ್ ಬಾರಿಸಿ ಜವಾಬ್ದಾರಿಯುತ ಆಟವನ್ನಾಡಿದರು ಮತ್ತು ಕೆಮರ್ ರೋಚ್ ಅಜೇಯ 30 ರನ್ ಬಾರಿಸಿ ವೆಸ್ಟ್ ಇಂಡೀಸ್ 168 ರನ್ ಬಾರಿಸಿ ಗೆಲುವಿನ ಗುರಿಯನ್ನು ಮುಟ್ಟಲು ಸಹಕಾರಿಯಾದರು. ಕೊನೆಗೆ 9 ವಿಕೆಟ್‍ಗಳನ್ನು ಕಳೆದುಕೊಂಡು 168 ರನ್ ಬಾರಿಸುವುದರ ಮೂಲಕ ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನದ ವಿರುದ್ಧ 1 ವಿಕೆಟ್ ರೋಚಕ ಜಯವನ್ನು ಸಾಧಿಸಿತು.

ಪಾಕಿಸ್ತಾನ ವಿರುದ್ಧದ ಈ ಜಯದ ಮೂಲಕ ದ್ವಿತೀಯ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ವೆಸ್ಟ್ ಇಂಡೀಸ್ 12 ಅಂಕ ಪಡೆದುಕೊಳ್ಳುವುದರ ಮೂಲಕ ಸದ್ಯಕ್ಕೆ ಅಗ್ರಸ್ಥಾನ ಪಡೆದುಕೊಂಡಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 9 - October 21 2021, 03:30 PM
ಬಾಂಗ್ಲಾದೇಶ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Wednesday, August 18, 2021, 14:39 [IST]
Other articles published on Aug 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X