ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೋಲಿನ ಬಳಿಕ ಆತ್ಮಾವಲೋಕನ: ಸತತ 3ನೇ ವರ್ಷ ವಯಸ್ಸಾದ ತಂಡದೊಂದಿಗೆ ಸಾಗುವುದು ಕಷ್ಟಕರ ಎಂದ CSK ಕೋಚ್

Third Year With An Ageing Squad Was Always Going To Be Difficult: Stephen Fleming

ಚೆನ್ನೈ ಸೂಪರ್ ಕಿಂಗ್ಸ್‌ನ ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಈ ಋತುವಿನಲ್ಲಿ ಸಿಎಸ್‌ಕೆ ವೈಫಲ್ಯತೆಯನ್ನು ತೆರೆದಿಟ್ಟಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಳು ವಿಕೆಟ್‌ಗಳ ಹೀನಾಯ ಸೋಲು ಕಂಡ ಬಳಿಕ ಸಂದರ್ಶನದ ವೇಳೆ ಸಿಎಸ್‌ಕೆ ಎಡವಿದ್ದೆಲ್ಲಿ ಎಂಬುದನ್ನ ತಿಳಿಸಿದ್ದಾರೆ.

ಐಪಿಎಲ್ 2020ರಲ್ಲಿ ಕನಿಷ್ಟ ಮೊತ್ತವನ್ನು ದಾಖಲಿಸುವ ಮೂಲಕ ತನ್ನ 10ನೇ ಪಂದ್ಯದಲ್ಲೂ ಸೋಲನ್ನಪ್ಪಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ಪಾಯಿಂಟ್ಸ್ ಟೇಬಲ್‌ನಲ್ಲಿ ತಳಭಾಗದಲ್ಲಿದೆ. ಕೇವಲ ಮೂರು ಪಂದ್ಯ ಗೆದ್ದು , ಏಳು ಪಂದ್ಯಗಳಲ್ಲಿ ಮುಗ್ಗರಿಸಿರುವ ಧೋನಿ ಪಡೆ ಪ್ರಸಕ್ತ ಟೂರ್ನಿಯಲ್ಲಿ ಅತ್ಯಂತ ಹೀನಾಯ ಪ್ರದರ್ಶನ ತೋರಿದ ತಂಡಗಳಲ್ಲಿ ಒಂದಾಗಿದೆ.

ತಂಡದ ಆಯ್ಕೆ ಕುರಿತು ಟೀಕೆ ಎದುರಿಸುತ್ತಿರುವ ಧೋನಿ

ತಂಡದ ಆಯ್ಕೆ ಕುರಿತು ಟೀಕೆ ಎದುರಿಸುತ್ತಿರುವ ಧೋನಿ

ಹೌದು, ಪ್ಲೇಯಿಂಗ್ ಇಲೆವೆನ್‌ನಲ್ಲಿ ಧೋನಿ ಆಯ್ಕೆ ಕುರಿತು ಭಾರೀ ಟೀಕೆಗಳು ಎದುರಾಗಿವೆ. ಈಗಾಗಲೇ ಅನೇಕ ಮಾಜಿ ಕ್ರಿಕೆಟಿಗರು ಧೊನಿ ಸೆಲೆಕ್ಷನ್ ಕುರಿತು ಟೀಕಿಸಿದ್ದಾರೆ. ಕೇದಾರ್ ಜಾಧವ್, ಪಿಯೂಷ್ ಚಾವ್ಲಾರಂತಹ ಆಟಗಾರರನ್ನು ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡಿಸಿದ್ರ ಕುರಿತು ಧೋನಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

'ಸೋಲಿನ ಬಳಿಕ ಧೋನಿ ಉತ್ತರಗಳನ್ನು ಇಂದು ನಾನು ಸ್ವೀಕರಿಸುವುದಿಲ್ಲ': ಕ್ರಿಸ್ ಶ್ರೀಕಾಂತ್ ಟೀಕೆ

ಕಳೆದ ಆವೃತ್ತಿಯ ಪರ್ಪಲ್ ಕ್ಯಾಪ್ ವಿನ್ನರ್ ಬೆಂಚ್ ಕಾದಿದ್ದೇ ಬಂತು!

ಕಳೆದ ಆವೃತ್ತಿಯ ಪರ್ಪಲ್ ಕ್ಯಾಪ್ ವಿನ್ನರ್ ಬೆಂಚ್ ಕಾದಿದ್ದೇ ಬಂತು!

ಐಪಿಎಲ್ 12ನೇ ಆವೃತ್ತಿಯ ಅತಿ ಹೆಚ್ಚು ವಿಕೆಟ್ ಪಡೆದ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದ ಇಮ್ರಾನ್ ತಾಹಿರ್ ಅವರು ಮೊದಲ 10 ಪಂದ್ಯಗಳಿಗೆ ಬೆಂಚ್‌ನಲ್ಲೇ ಕುರಿಸಿದ ಧೋನಿ ಅವರ ಅನುಚಿತ ತಂಡದ ನಿರ್ವಹಣೆ ನಿಜಕ್ಕೂ ಆಶ್ಚರ್ಯಕ್ಕೆ ಎಡೆಮಾಡಿದೆ. ಮೂರು ಬಾರಿಯ ಚಾಂಪಿಯನ್ ಸಿಎಸ್‌ಕೆ ಕಳಪೆ ತಂಡದ ನಿರ್ವಹಣೆ ಸಾಕಷ್ಟು ಸಮಸ್ಯೆಯನ್ನುಂಟು ಮಾಡಿರುವುದು ಗೋಚರಿಸುತ್ತಿದೆ.

 ವಯಸ್ಸಾದ ತಂಡದೊಂದಿಗೆ ಮೂರನೇ ವರ್ಷ ಕಷ್ಟಕರ- ಸ್ಟೀಫನ್ ಫ್ಲೆಮಿಂಗ್

ವಯಸ್ಸಾದ ತಂಡದೊಂದಿಗೆ ಮೂರನೇ ವರ್ಷ ಕಷ್ಟಕರ- ಸ್ಟೀಫನ್ ಫ್ಲೆಮಿಂಗ್

"ನೀವು ಮೂರು ವರ್ಷದ ಚಕ್ರವನ್ನು ನೋಡುತ್ತಿದ್ದರೆ - ನಾವು ಮೊದಲ ವರ್ಷವನ್ನು ಗೆದ್ದಿದ್ದೇವೆ(2018), ಕಳೆದ ವರ್ಷ ಕೊನೆಯ ಎಸೆತದಲ್ಲಿ ಚಾಂಪಿಯನ್ ಪಟ್ಟ ಕಳೆದುಕೊಂಡೆವು, ಮತ್ತುಈಗ ವಯಸ್ಸಾದ ತಂಡದೊಂದಿಗೆ ಮೂರನೇ ವರ್ಷ ಕಷ್ಟಕರವೆಂದು ನಾವು ಭಾವಿಸಿದ್ದೇವೆ. ಮತ್ತು ದುಬೈ [ಯುಎಇ] ನಮಗೆ ಸಂಪೂರ್ಣ ಹೊಸ ಅವಶ್ಯಕತೆಗಳನ್ನು ಸವಾಲು ಮಾಡಿದೆ, "ಎಂದು ಸಿಎಸ್‌ಕೆ ತಂಡದ ಮುಖ್ಯ ತರಬೇತುದಾರ ಸ್ಟೀಫನ್ ಫ್ಲೇಮಿಂಗ್ ಹೇಳಿದ್ದಾರೆ.

IPL 2020: ಪಾಯಿಂಟ್ಸ್ ಟೇಬಲ್ ತಳ ಮುಟ್ಟಿದ 3 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌

'ತಂಡದ ಫಾರ್ಮ್ ಕುಸಿದಾಗ ಸಕಾರಾತ್ಮಕವಾಗಿರುವುದು ತುಂಬಾ ಕಷ್ಟ'

'ತಂಡದ ಫಾರ್ಮ್ ಕುಸಿದಾಗ ಸಕಾರಾತ್ಮಕವಾಗಿರುವುದು ತುಂಬಾ ಕಷ್ಟ'

"ನಾವು ಬಹುಶಃ ಪ್ರವೇಶಿಸಬಹುದಾದ ಹೊರಗಿನ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ, ಆದರೆ ನೀವು ಇತರ ಫಲಿತಾಂಶಗಳನ್ನು ಮತ್ತು ನಿಮ್ಮ ಸ್ವಂತ ತಂಡಕ್ಕೆ ರೂಪದ ಬದಲಾವಣೆಯನ್ನು ಅವಲಂಬಿಸುತ್ತಿರುವಾಗ, ಲವಲವಿಕೆಯ ಮತ್ತು ಸಕಾರಾತ್ಮಕವಾಗಿರುವುದು ತುಂಬಾ ಕಷ್ಟ," ಫ್ಲೆಮಿಂಗ್ ತನ್ನ ನಾಯಕನ ಭಾವನೆಗಳನ್ನು ಪ್ರತಿಧ್ವನಿಸುತ್ತಾ ಹೇಳಿದರು.

ಪಂದ್ಯ ಮುಗಿದ ಬಳಿಕ ನಾಯಕ ಧೋನಿ ತಂಡದ ಯುವ ಆಟಗಾರರಲ್ಲಿ ಕಿಡಿ ಕಾಣಿಸಲಿಲ್ಲ ಎಂದಿದ್ದರು. ಆದರೆ ಈ ಕುರಿತು ಟೀಕೆಗಳನ್ನು ಸಹ ಎದುರಿಸುತ್ತಿದ್ದು, ಕೇದಾರ್ ಜಾಧವ್ , ಪಿಯೂಷ್ ಚಾವ್ಲಾರಿಂದ ಕಿಡಿ ಕಾಣಿಸಿತೇ ಎಂದು ಭಾರತದ ಮಾಜಿ ಆಟಗಾರ ಕ್ರಿಸ್ ಶ್ರೀಕಾಂತ್ ಧೋನಿ ಹೇಳಿಕೆಯನ್ನ ಪ್ರಶ್ನಿಸಿದ್ದಾರೆ.

Story first published: Tuesday, October 20, 2020, 11:44 [IST]
Other articles published on Oct 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X