ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ತೆಂಡೂಲ್ಕರ್ 100 : ಕ್ರಿಕೆಟ್ ದೇವರ ಶತಕದ ಶತಕಕ್ಕೆ 8 ವರ್ಷ

This Day In 2012: Sachin Tendulkar Completes Century Of Centuries

ಅದು ಮಾರ್ಚ್ 16, 2012. ವಿಶ್ವ ಕ್ರಿಕೆಟ್ ಹಿಂದೆಂದೂ ಕಾಣದ ಅದ್ಭುತ ಕ್ಷಣವೊಂದಕ್ಕೆ ಸಾಕ್ಷಿಯಾಗಿತ್ತು. ಒಬ್ಬ ವ್ಯಕ್ತಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಬಾರಿಸುವುದು ಎಂದರೆ ಅದು ಊಹಿಸುವುದು ಸಾಧ್ಯವಾಗಿರಲಿಲ್ಲ. ಆದರೆ ಕ್ರಿಕೆಟ್ ದೇವರು ಅದನ್ನು ನಿಜವಾಗಿಸಿದ್ದರು.

ಆ ಕ್ಷಣವನ್ನು ಕಣ್ತುಂಬಿಕೊಳ್ಳು ವಿಶ್ವ ಕ್ರಿಕೆಟ್ ಕಾದು ಕುಳಿತಿತ್ತು. ಆದರೆ ಸಚಿನ್ ತೆಂಡೂಲ್ಕರ್ ಹಲವು ಪ್ರಯತ್ನಗಳಲ್ಲಿ ಯಶಸ್ಸನ್ನು ಕಂಡಿರಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದಾಗಲೆ ಸಚಿನ್ 99 ಶತಕಗಳನ್ನು ಬಾರಿಸಿದ್ದರು. ನೂರನೇ ಶತಕಕ್ಕೆ ಕೇವಲ ಸಚಿನ್ ಮಾತ್ರವಲ್ಲ, ಅವರ ಅಪಾರ ಪ್ರಮಾಣದ ಅಭಿಮಾನಿಗಳು ಕಾದು ಕುಳಿತಿದ್ದರು.

ಚೀನಿಯರ ಆಹಾರ ಕ್ರಮ ಜಗತ್ತನ್ನೇ ಭೀತಿಗೆ ತಳ್ಳಿದೆ ಎಂದು ಅಖ್ತರ್ ಆಕ್ರೋಶಚೀನಿಯರ ಆಹಾರ ಕ್ರಮ ಜಗತ್ತನ್ನೇ ಭೀತಿಗೆ ತಳ್ಳಿದೆ ಎಂದು ಅಖ್ತರ್ ಆಕ್ರೋಶ

ಅದು ಏಷ್ಯಾ ಕಪ್ ಟೂರ್ನಮೆಂಟ್. ಬಾಂಗ್ಲಾದೇಶದ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ ಈ ಐತಿಹಾಸಿಕ ಪಂದ್ಯದ ಆತಿಥ್ಯವನ್ನು ವಹಿಸಿಕೊಂಡಿತ್ತು. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ನೇ ಶತಕವನ್ನು ಬಾರಿಸಿ ಇತಿಹಾಸವನ್ನು ನಿರ್ಮಿಸಿದರು.

ಏಕದಿನದಲ್ಲಿ 49ನೇ ಶತಕವನ್ನು ಬಾರಿಸುವುದರೊಂದಿಗೆ ಸಚಿನ್ ಈ ದಾಖಲೆಯನ್ನು ಮಾಡಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಸಿಡಿಸಿದ ಕಟ್ಟ ಕಡೆಯ ಶತಕವೂ ಹೌದು. ಈ ಶತಕಕ್ಕಾಗಿ ಸಚಿನ್ ತೆಂಡೂಲ್ಕರ್ 114 ಎಸೆತಗಳನ್ನು ಎದುರಿಸಿದರು.

ಕಿವೀಸ್ ವಿರುದ್ಧದ ಟೆಸ್ಟ್ ಸೋಲಿಗೆ 'ಇದೇ' ಕಾರಣ: ಬ್ರ್ಯಾನ್ ಲಾರಾಕಿವೀಸ್ ವಿರುದ್ಧದ ಟೆಸ್ಟ್ ಸೋಲಿಗೆ 'ಇದೇ' ಕಾರಣ: ಬ್ರ್ಯಾನ್ ಲಾರಾ

ಸಚಿನ್ ತೆಂಡೂಲ್ಕರ್ ಅದಾಗಲೆ ಟೆಸ್ಟ್ ಕ್ರಿಕೆಟ್‌ನಲ್ಲಿ 51ನೇ ಶತಕವನ್ನು ದಾಖಲಿಸಿದ್ದರು. ಆದರೆ ತಮ್ಮ ನೂರನೇ ಶತಕಕ್ಕೆ ಸರಿ ಸುಮಾರು ಒಂದು ವರ್ಷಗಳನ್ನು ತೆಗೆದುಕೊಂಡ ಸಚಿನ್ ಕಡೆಗೂ ಈ ಗುರಿಯನ್ನು ಏಷ್ಯಾಕಪ್‌ನಲ್ಲಿ ತಲುಪುವಲ್ಲಿ ಯಶಸ್ವಿಯಾದರು.

Story first published: Monday, March 16, 2020, 14:34 [IST]
Other articles published on Mar 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X