ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೋಪಿಂಗ್‌ಗಾಗಿ ನಿಷೇಧಕ್ಕೊಳಗಾದ ಬಳಿಕ ಪ್ರತಿಕ್ರಿಯಿಸಿದ ಪೃಥ್ವಿ ಶಾ

This has really shaken me: Prithvi Shaw responds to doping violation ban

ನವದೆಹಲಿ, ಜುಲೈ 31: ಡೋಪಿಂಗ್‌ ಕಾರಣಕ್ಕಾಗಿ ನಿಷೇಧಕ್ಕೀಡಾಗಿರುವ ಭಾರತದ ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ ಪ್ರತಿಕ್ರಿಯಿಸಿದ್ದಾರೆ. ಕೆಮ್ಮಿನ ಸಿರಪ್ ಸೇವಿಸುವಾಗ ನಿಷೇಧಿತ ಟೆರ್ಬುಟಾಲಿನ್ ಅಂಶವನ್ನೂ ಅಜಾಗರೂಕತೆಯಿಂದ ಸೇವಿಸಿದ್ದು ನಿಷೇಧಕ್ಕೆ ಕಾರಣ ಎಂದು ಪೃಥ್ವಿ ಟ್ವಿಟರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಟೀಮ್‌ ಇಂಡಿಯಾದ ಯಂಗ್‌ ಬ್ಯಾಟ್ಸ್‌ಮನ್‌ ಬ್ಯಾನ್‌ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಟೀಮ್‌ ಇಂಡಿಯಾದ ಯಂಗ್‌ ಬ್ಯಾಟ್ಸ್‌ಮನ್‌ ಬ್ಯಾನ್‌

ಕಳೆದ ಫೆಬ್ರವರಿಯಲ್ಲಿ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ಪರ ಆಡಿದ್ದ ಪೃಥ್ವಿ ಶಾ ಅವರನ್ನು ಡೋಪಿಂಗ್ ತಡೆ ಮಂಡಳಿ ಪರೀಕ್ಷೆಗೊಳಪಡಿಸಿತ್ತು. ಆಗ ಪೃಥ್ವಿ ಮೂತ್ರದ ಮಾದರಿಯಲ್ಲಿ ನಿಷೇಧಿತ ಮದ್ದಿನ ಅಂಶ ಕಂಡುಬಂದಿತ್ತು.

ವಿಂಡೀಸ್ ಪ್ರವಾಸಕ್ಕೆ 'ಗಬ್ಬರ್' ಧವನ್-'ಹಿಟ್‌ಮ್ಯಾನ್' ರೋಹಿತ್ ಜೋಡಿ ರೆಡಿವಿಂಡೀಸ್ ಪ್ರವಾಸಕ್ಕೆ 'ಗಬ್ಬರ್' ಧವನ್-'ಹಿಟ್‌ಮ್ಯಾನ್' ರೋಹಿತ್ ಜೋಡಿ ರೆಡಿ

ಡೋಪಿಂಗ್ ಟೆಸ್ಟ್ ನಲ್ಲಿ ಫೇಲಾಗಿರುವ ಕಾರಣ ಪೃಥ್ವಿ ಶಾಗೆ ಬಿಸಿಸಿಐ 8 ತಿಂಗಳ ನಿಷೇಧ ಶಿಕ್ಷೆ ವಿಧಿಸಿದೆ. ಮುಂದಿನ ನವೆಂಬರ್ 15ರ ವರೆಗೆ ಪೃಥ್ವಿ ಯಾವುದೇ ಕ್ರಿಕೆಟ್ ಪಂದ್ಯಗಳನ್ನು ಪೃಥ್ವಿ ಆಡುವಂತಿಲ್ಲ.

ಕೆಮ್ಮಿಗೆ ಸಿರಪ್ ಸೇವಿಸಿದ್ದೆ

'2019ರ ನವೆಂಬರ್ ವರೆಗೆ ನನಗೆ ಕ್ರಿಕೆಟ್ ಆಡಲಾಗುತ್ತಿಲ್ಲ ಎಂಬುದು ನನಗೆ ತಿಳಿದಿದೆ. ಫೆಬ್ರವರಿ 2019ರಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ಪರ ಆಡುತ್ತಿರುವಾಗ ತೀವ್ರ ಕೆಮ್ಮು ಮತ್ತು ಶೀತಕ್ಕೆ ನಾನು ಅಜಾಗರೂಕತೆಯಿಂದ ಸಿರಪ್ ಸೇವಿಸಿದ್ದೆ. ಇದರಲ್ಲಿ ನಿಷೇಧಿತ ಅಂಶವಿತ್ತು,' ಎಂದು ಟ್ವಿಟರ್‌ ಹೇಳಿಕೆ ಮೂಲಕ ಪೃಥ್ವಿ ತಿಳಿಸಿದ್ದಾರೆ.

ಆಡಬೇಕನ್ನೋ ತುಡಿತವಿತ್ತು

ಆಡಬೇಕನ್ನೋ ತುಡಿತವಿತ್ತು

ಭಾರತದ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಾನು ಕಾಲು ನೋವಿನ ಸಮಸ್ಯೆಯಿಂದ ನರಳಿದ್ದೆ. ಆಟ ಆಡುವ ಬಗ್ಗೆ ನನ್ನಲ್ಲಿ ತುಡಿತವಿತ್ತು. ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ನಾನು ಸಕ್ರಿಯ ಆಟಗಾರನಾಗಿರಲು ಬಯಸಿದ್ದೆ. ಆದ್ದರಿಂದ ಕೆಮ್ಮಿಗೆ ಮದ್ದು ತೆಗೆದುಕೊಳ್ಳುವಾಗ ಮುನ್ನೆಚ್ಚರಿಕೆ ವಹಿಸಿಸಲಿಲ್ಲ,' ಎಂದು ಪೃಥ್ವಿ ಹೇಳಿಕೊಂಡಿದ್ದಾರೆ.

ಬ್ಯಾನ್‌ ಆಗಿದ್ದ ಯೂಸುಫ್

ಬ್ಯಾನ್‌ ಆಗಿದ್ದ ಯೂಸುಫ್

ಪ್ರಚಲಿತ ಆಟಗಾರನೊಬ್ಬ ಇದೇ ರೀತಿ ಬ್ಯಾನ್‌ಗೆ ಒಳಗಾಗುತ್ತಿರುವುದು ಇದು ಎರಡನೇಸಾರಿ. ಇದಕ್ಕೂ ಮೊದಲು 2018ರ ಜನವರಿಯಲ್ಲಿ ಯೂಸುಫ್ ಪಠಾಣ್ ಬಿಸಿಸಿಐನಿಂದ ಐದು ತಿಂಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಪಠಾಣ್ ಕೂಡ ಡೋಪಿಂಗ್‌ಗಾಗಿ ನಿಶೇಧಿಸಲ್ಪಟ್ಟಿದ್ದರು. ಅವರ ದೇಹದಲ್ಲೂ ಕೆಮ್ಮಿನ ಸಿರಾಪ್‌ನಲ್ಲಿರುವ ಅಂಶ ಕಂಡುಬಂದಿತ್ತು.

ಈ ಸುದ್ದಿ ನನ್ನನ್ನು ಕಂಪಿಸಿತು

ಈ ಸುದ್ದಿ ನನ್ನನ್ನು ಕಂಪಿಸಿತು

'ನನ್ನ ಪ್ರಾಮಾಣಿಕತೆ ಮತ್ತು ಅದೃಷ್ಟವನ್ನು ಒಪ್ಪಿಕೊಳ್ಳಬೇಕಾಗಿದೆ. ಹಿಂದಿನ ಟೂರ್ನಿಯಲ್ಲಿ ಗಾಯದ ಸಮಸ್ಯೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಈ ಸುದ್ದಿ ನನ್ನನ್ನು ಕಂಪಿಸಿತು. ಈ ವಿಚಾರವನ್ನು ನಾನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಈ ಘಟನೆ ಇತರರಿಗೂ ಕ್ರೀಡೆಯಲ್ಲಿನ ಭ್ರಾತೃತ್ವತೆಗೆ ಸ್ಫೂರ್ತಿಯಾಗಲಿದೆ. ಅನಾರೋಗ್ಯದ ವೇಳೆ ಮದ್ದು ತೆಗೆದುಕೊಳ್ಳುವಾಗಲೂ ಕ್ರೀಡಾಪಟುವೊಬ್ಬ ತೀರಾ ಎಚ್ಚರಿಕೆ ವಹಿಸಬೇಕು ಅನ್ನೋದು ಇದರಿಂದ ತಿಳಿಯುತ್ತಿದೆ,' ಎಂದು ಶಾ ತಿಳಿಸಿದ್ದಾರೆ.

Story first published: Wednesday, July 31, 2019, 11:55 [IST]
Other articles published on Jul 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X