ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಇದು ನನ್ನ ಕೊನೆಯ ಟೆಸ್ಟ್, 8 ವಿಕೆಟ್ ತೆಗೆಯುತ್ತೇನೆ': ಮುರಳೀಧರನ್ ಮಾತಿಗೆ ದಂಗಾಗಿದ್ದ ಸಂಗಕ್ಕಾರ

This Is My Last Test, Thank You, I’m Going To Take 8 Wickets: Muralitharan To Sangakkara

ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಕೂಡ ಒಬ್ಬರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭರ್ತಿ 800 ವಿಕೆಟ್‌ಗಳನ್ನು ಪಡೆದು ನಿವೃತ್ತಿಯನ್ನು ಪಡೆದುಕೊಂಡಿದ್ದರು ಈ ದಿಗ್ಗಜ ಬೌಲರ್. ಆದರೆ ಮುರಳೀಧರನ್ ಅವರ ಅಂತಿಮ ಪಂದ್ಯದಲ್ಲ ನಡೆದ ಈ ಘಟನೆ ಸಾಕಷ್ಟು ಕುತೂಹಲವನ್ನು ಮೂಡಿಸುತ್ತದೆ.

ಸಾರ್ವಕಾಲಿಕ ಶ್ರೇಷ್ಠ ಆರ್‌ಸಿಬಿ ತಂಡದಲ್ಲಿ ನಾಲ್ವರು ಕನ್ನಡಿಗರಿಗೆ ಸ್ಥಾನಸಾರ್ವಕಾಲಿಕ ಶ್ರೇಷ್ಠ ಆರ್‌ಸಿಬಿ ತಂಡದಲ್ಲಿ ನಾಲ್ವರು ಕನ್ನಡಿಗರಿಗೆ ಸ್ಥಾನ

ಬೌಲರ್ ಆಗಿ ತನ್ನಮೇಲೆ ಮುರಳೀಧರನ್ ಎಷ್ಟು ನಂಬಿಕೆಯನ್ನು ಹೊಂದಿದ್ದರು ಎಂಬುದಕ್ಕೆ ಉತ್ತರವಿದ್ದಂತಿದೆ. ಭಾರತದ ವಿರುದ್ಧ ಮುರಳೀಧರನ್ ತಮ್ಮ ಅಂತಿಮ ಟೆಸ್ಟ್ ಪಂದ್ಯವನ್ನು ಆಡುವ ನಿರ್ಧಾರವನ್ನು ಮಾಡಿದ್ದರು. ಶ್ರೀಲಂಕಾವೇ ಮೂರು ಪಂದ್ಯಗಳ ಸರಣಿಯ ಆತಿಥ್ಯವನ್ನು ವಹಿಸಿಕೊಂಡಿತ್ತು. ಹೀಗಾಗಿ ಮೊದಲ ಪಂದ್ಯದ ಬಳಿಕ ನಿವೃತ್ತಿಯನ್ನು ಪಡೆಯುವ ನಿರ್ಧಾರಕ್ಕೆ ಬಂದಿದ್ದರು ಶ್ರೀ ಲಂಕಾ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್.

ಮಹತ್ವದ ಮೈಲಿಗಲ್ಲಿಗೆ 8 ವಿಕೆಟ್ ಅಗತ್ಯವಿತ್ತು

ಮಹತ್ವದ ಮೈಲಿಗಲ್ಲಿಗೆ 8 ವಿಕೆಟ್ ಅಗತ್ಯವಿತ್ತು

ಶ್ರೀಲಂಕಾದ ಈ ದಿಗ್ಗಜ ಬೌಲರ್ ಅದಾಗಲೇ ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು. ಆದರೆ ಟೆಸ್ಟ್ ಇತಿಹಾಸದಲ್ಲಿ ಯಾರೂ ಈವರೆಗೂ ಮಾಡಲಾಗದ ಸಾಧನೆಯ ಅತ್ಯಂತ ಸಮೀಪದಲ್ಲಿದ್ದರು ಮುರಳೀಧರನ್. ತಮ್ಮ ಅಂತಿಮ ಪಂದ್ಯಕ್ಕೂ ಮುನ್ನ 792 ವಿಕೆಟ್‌ಗಳನ್ನು ಖಾತೆಗೆ ಹಾಕಿಕೊಂಡಿದ್ದರು.

800 ವಿಕೆಟ್ ಪಡೆಯುವ ವಿಶ್ವಾಸ

800 ವಿಕೆಟ್ ಪಡೆಯುವ ವಿಶ್ವಾಸ

ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಮುರಳೀಧರನ್ ತನ್ನ ಅಂತಿಮ ಟೆಸ್ಟ್ ಪಂದ್ಯ ಎಂದು ಮುರಳೀಧರನ್ ನಿರ್ಧರಿಸಿದ್ದರು. 800 ವಿಕೆಟ್ ಮೈಲಿಗಲ್ಲು ತಲುಪುವ ವಿಶ್ವಾಸ ಮುರಳೀಧರನ್ ಬಳಿ ಇತ್ತು. ಆದ ಕಾರಣ ತಂಡದ ನಾಯಕನಾಗಿದ್ದ ಕುಮಾರ ಸಂಗಕ್ಕರ ಬಳಿ ತೆರಳಿದ್ದ ಮುರಳೀಧರನ್ ಈ ಪಂದ್ಯ ನನ್ನ ಅಂತಿಮ ಪಂದ್ಯ. ಇದರಲ್ಲಿ ನಾನು 8 ವಿಕೆಟ್ ಪಡೆಯುತ್ತೇನೆ ಎಂದು ಹೇಳಿದ್ದರು. ಈ ವಿಚಾರವನ್ನು ಸ್ವತಃ ಸಂಗಕ್ಕರ ಬಹಿರಂಗಪಡಿಸಿದ್ದಾರೆ.

ನಿರ್ಧಾರವನ್ನು ಮುಂದೂಡಲು ಹೇಳಿದ್ದರು ಸಂಗಕ್ಕರ

ನಿರ್ಧಾರವನ್ನು ಮುಂದೂಡಲು ಹೇಳಿದ್ದರು ಸಂಗಕ್ಕರ

ಆದರೆ ಇದಕ್ಕೆ ಸಂಗಾಕ್ಕರ ಮುರಳೀಧರನ್ ಬಳಿ ಸವಾಲುಗಳನ್ನು ಹಾಕಿಕೊಳ್ಳುವುದೆಂದರೆ ಇಷ್ಟ. ಆದರೆ ಈ ರೀತಿಯ ಸವಾಲಾ? ಒಂದು ವೇಳೆ 800 ವಿಕೆಟ್‌ಗಳ ಗಡಿಯವರೆಗೆ ತಲುಪಿ ಅದು ಸಾಧ್ಯವಾಗದಿದ್ದಾಗ ಬೇಸರವಾಗುತ್ತದೆ. ಆದಕ್ಕಾಗಿ ಮುಂದಿನ ಪಂದ್ಯವನ್ನೂ ಆಡಬಹುದು, ಅದಿಲ್ಲದಿದ್ದರೆ ಮೂರನೇ ಪಂದ್ಯವಿದೆ ಎಂದು ಮನವೊಲಿಕೆಯ ಯತ್ನವನ್ನು ನಡೆಸಿದ್ದರಂತೆ. ಟೀಮ್ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಜೊತೆಗೆ ಸಂವಾದದಲ್ಲಿ ಮಾತನಾಡಿದ ಕುಮಾರ ಸಂಗಾಕ್ಕರ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಮುರಳಿ ಧೃಡ ನಿರ್ಧಾರ

ಮುರಳಿ ಧೃಡ ನಿರ್ಧಾರ

ಆದರೆ ನಾಯಕ ಹೇಳಿದ ಮಾತಿಗೆ ಮುರಳೀಧರನ್ "ನಾನು ಈ ಪಂದ್ಯದಲ್ಲಿ 8 ವಿಕೆಟ್ ಪಡೆದರೆ 800 ವಿಕೆಟ್ ಪಡೆದಂತಾಗುತ್ತದೆ. ಮತ್ತು ಈ ಪಂದ್ಯವನ್ನು ನಾವು ಗೆಲ್ಲಲು ಸಾಧ್ಯವಾಗುತ್ತದೆ. ನನ್ನಿಂದ ಅದು ಸಾಧ್ಯವಾಗದಿದ್ದರೆ ನಾನು ಅದನ್ನು(800 ವಿಕೆಟ್) ಪಡೆಯುವುದಿಲ್ಲ. ಇದು ನನ್ನ ಕೊನೆಯ ಟೆಸ್ಟ್ ಪಂದ್ಯ. ಧನ್ಯವಾದಗಳು. ನಾನು 8 ವಿಕೆಟ್ ಪಡೆಯುತ್ತೇನೆ" ಎಂದು ಹೇಳಿ ಹೋಗಿದ್ದರು ಎಂದು ಸಂಗಾಕ್ಕರ ನೆನಪಿಸಿಕೊಂಡಿದ್ದಾರೆ.

ಅಂದುಕೊಂಡಂತೆಯೇ ಸಾಧಿಸಿದ ಮುರಳೀಧರನ್

ಅಂದುಕೊಂಡಂತೆಯೇ ಸಾಧಿಸಿದ ಮುರಳೀಧರನ್

ಆ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಮುರಳೀಧರ್ ಅಂದುಕೊಂಡಂತೆಯೇ ಪ್ರದರ್ಶನವನ್ನು ನೀಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದ ಮುರಳೀಧರನ್ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದು 800 ವಿಕೆಟ್‌ಗಳ ಬೃಹತ್ ಮೈಲಿಗಲ್ಲನ್ನು ನೆಟ್ಟರು. ಮಾತ್ರವಲ್ಲ ಆ ಪಂದ್ಯವನ್ನು ಶ್ರೀಲಂಕಾ ಭರ್ಜರಿಯಾಗಿ ಗೆದ್ದುಕೊಳ್ಳಲು ಸಾಧ್ಯವಾಯಿತು. ಈ ರೀತಿಯಾಗಿ ಅಭೂತಪೂರ್ವವಾಗಿ ಮುತ್ತಯ್ಯ ಮುರಳೀಧರನ್ ತಮ್ಮ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನವನ್ನು ಅಂತ್ಯಗೊಳಿಸಿದರು.

Story first published: Monday, June 1, 2020, 17:06 [IST]
Other articles published on Jun 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X