ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವೇಗಿ ಆ್ಯಂಡರ್ಸನ್ ಪ್ರದರ್ಶನಕ್ಕೆ ಲಕ್ಷ್ಮಣ್, ಚೋಪ್ರಾ ಮೆಚ್ಚುಗೆ

this is the best I have seen James Anderson bowl in Indian conditions: VVS Laxman

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಕೂಡ ಬ್ಯಾಟಿಂಗ್‌ನಲ್ಲಿ ವೈಫಲ್ಯವನ್ನು ಅನುಭವಿಸಿದೆ. ರೋಹಿತ್ ಶರ್ಮಾ(49 ರನ್) ಹೊರತು ಪಡಿಸಿ ಅಗ್ರ ಕ್ರಮಾಂಕದ ಉಳಿದ ಬ್ಯಾಟ್ಸ್‌ಮನ್‌ಗಳು ರನ್‌ಗಳಿಸಲು ಪರದಾಡಿದ್ದಾರೆ. ಇದರಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಪ್ರದರ್ಶನದ ಬಗ್ಗೆ ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಜೇಮ್ಸ್ ಆಂಡರ್ಸನ್ ಭಾರತೀಯ ಇನ್ನಿಂಗ್ಸ್‌ನ ಆರಂಭದಲ್ಲಿಯೇ ಆಘಾತವನ್ನು ನೀಡುವಲ್ಲಿ ಯಶಸ್ವಿಯಾದರು. ಮೊದಲ ದಿನದಾಟದಲ್ಲಿ ಭಾರತದ ಆರಂಭಿಕ ಆಟಗಾರ ಶುಬ್ಮನ್ ಗಿಲ್ ವಿಕೆಟ್ ಪಡೆಯುವಲ್ಲಿ ಆಂಡರ್ಸನ್ ಯಶಸ್ವಿಯಾಗಿದ್ದರು. ಅದಾದ ಬಳಿಕ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ ವಿಕೆಟ್ ಕಬಳಿಸಿ ಆಘಾತವನ್ನು ನೀಡಿದ್ದಾರೆ.

ಭಾರತ vs ಇಂಗ್ಲೆಂಡ್: ಅಂತಿಮ ಟೆಸ್ಟ್, 2ನೇ ದಿನ, Live ಸ್ಕೋರ್ ಮಾಹಿತಿಭಾರತ vs ಇಂಗ್ಲೆಂಡ್: ಅಂತಿಮ ಟೆಸ್ಟ್, 2ನೇ ದಿನ, Live ಸ್ಕೋರ್ ಮಾಹಿತಿ

"ಭಾರತೀಯ ಪಿಚ್ ಕಂಡೀಶನ್‌ನಲ್ಲಿ ಜೇಮ್ಸ್ ಆಂಡರ್ಸನ್ ಅವರ ಅತ್ಯುತ್ತಮ ಪ್ರದರ್ಶನವನ್ನು ನಾನು ನೋಡುತ್ತಿದ್ದೇನೆ. ಕಳೆಯ ಚೆಂಡಿನಲ್ಲಿ ಅವರ ಮ್ಯಾಜಿಕ್ ಸ್ಪೆಲ್‌ಅನ್ನು ಚೆನ್ನೈನಲ್ಲಿ ನಾವು ನೋಡಿದ್ದೆವು. ಈಗ ಅಹ್ಮದಾಬಾದ್‌ನಲ್ಲಿ ಅವರ ಅದ್ಭುತವಾದ ಪ್ರದರ್ಶನ" ಎಂದು ಲಕ್ಷ್ಮಣ್ ಹೇಳಿದ್ದಾರೆ.

"ಆವರು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವುದು ನಿಜಕ್ಕೂ ಅದ್ಭುತವಾಗಿದೆ. ಮೊದಲ ಸ್ಪೆಲ್‌ನಲ್ಲಿ ರೋಹಿತ್ ಶರ್ಮಾಗೆ ಎಸೆತ ಇನ್‌ಸ್ವಿಂಗ್ ಎಸೆತಗಳು ಹಾಗೂ ಅಜಿಂಕ್ಯ ರಹಾನೆಗೆ ಎಸೆದ ಎಸೆತಗಳು ಅದ್ಭುತವಾಗಿದ್ದವು" ಎಂದು ಲಕ್ಷ್ಮಣ್ ವಿವರಿಸಿದ್ದಾರೆ.

ಕೊಹ್ಲಿ ಮತ್ತು ಸ್ಟೋಕ್ಸ್ ನಡುವೆ ಮಾತಿನ ಚಕಮಕಿ: ನಿಜಕ್ಕೂ ಆಗಿದ್ದೇನೆಂದು ವಿವರಿಸಿದ ಸಿರಾಜ್ಕೊಹ್ಲಿ ಮತ್ತು ಸ್ಟೋಕ್ಸ್ ನಡುವೆ ಮಾತಿನ ಚಕಮಕಿ: ನಿಜಕ್ಕೂ ಆಗಿದ್ದೇನೆಂದು ವಿವರಿಸಿದ ಸಿರಾಜ್

ಇನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಟ್ವಿಟ್ಟರ್‌ನಲ್ಲಿ ಆಂಡರ್ಸನ್ ಪ್ರದರ್ಶನವನ್ನು ಪ್ರಶಂಸಿಸಿದ್ದಾರೆ. ಅಂಡರ್ಸನ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಆಕಾಶ್ ಚೋಪ್ರ ತಮ್ಮ ಟ್ವೀಟ್‌ನಲ್ಲಿ ಸೂಚ್ಯವಾಗಿ ಹೇಳಿಕೊಂಡಿದ್ದಾರೆ.

Story first published: Friday, March 5, 2021, 13:45 [IST]
Other articles published on Mar 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X