ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಇದು ನಮಗೆ ಎಚ್ಚರಿಕೆಯ ಕರೆಗಂಟೆ, ನಾವು ಜವಾಬ್ದಾರಿ ಹೊರಬೇಕು'

This is wake up call for us, we should take more responsibility: Shreyas Iyer

ದುಬೈ: ಫಾರ್ಮ್‌ನಲ್ಲಿರುವ ಶಿಖರ್ ಧವನ್ ಹೊರತುಪಡಿಸಿ ಉಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ತಂಡದ ಗೆಲುವಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಈ ಸೋಲು ನಮಗೆ ಎಚ್ಚರಿಕೆ ಕರೆಗಂಟೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಐಯ್ಯರ್ ಹೇಳಿದ್ದಾರೆ. ಕಿಂಗ್ಸ್ XI ಪಂಜಾಬ್ ವಿರುದ್ಧ ಡೆಲ್ಲಿ 5 ವಿಕೆಟ್‌ಗಳ ಸೊಲನುಭವಿಸಿದ ಬಳಿಕ ಐಯ್ಯರ್ ಈ ಮಾತನ್ನಾಡಿದ್ದಾರೆ.

ಆರ್‌ಸಿಬಿ ಗೆಲುವಿಗಾಗಿ ಧಾರವಾಡದಲ್ಲಿ ಅಭಿಮಾನಿಯಿಂದ ವಿಶೇಷ ಪೂಜೆ!ಆರ್‌ಸಿಬಿ ಗೆಲುವಿಗಾಗಿ ಧಾರವಾಡದಲ್ಲಿ ಅಭಿಮಾನಿಯಿಂದ ವಿಶೇಷ ಪೂಜೆ!

ಮಂಗಳವಾರ ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್ 38ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಡೆಲ್ಲಿಯಿಂದ ಶಿಖರ್ ಧವನ್ 61 ಎಸೆತಗಳಲ್ಲಿ 106 ರನ್ ಬಾರಿಸಿದ್ದರು. ಧವನ್ ಬಿಟ್ಟರೆ ಪೃಥ್ವಿ ಶಾ 7, ಶ್ರೇಯಸ್ ಅಯ್ಯರ್ 14, ರಿಷಭ್ ಪಂತ್ 14, ಮಾರ್ಕಸ್ ಸ್ಟೋಯ್ನಿಸ್ 9, ಶಿಮ್ರನ್ ಹೆಟ್ಮೈರ್ 10 ರನ್ ಬಾರಿಸಿದ್ದರು.

ಧವನ್ ಬಿಟ್ಟು ಉಳಿದ ಯಾವ ಬ್ಯಾಟ್ಸ್‌ಮನ್‌ಗಳೂ ಒಳ್ಳೆಯ ಪ್ರದರ್ಶನ ನೀಡಿದಿದ್ದರಿಂದ ಡೆಲ್ಲಿ 20 ಓವರ್‌ಗೆ 5 ವಿಕೆಟ್ ಕಳೆದು 164 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಕಿಂಗ್ಸ್ XI ಪಂಜಾಬ್, ಕ್ರಿಸ್ ಗೇಲ್ 29, ನಿಕೋಲಸ್ ಪೂರನ್ 53, ಗ್ಲೆನ್ ಮ್ಯಾಕ್ಸ್‌ವೆಲ್ 32 ರನ್ ಕೊಡುಗೆಯೊಂದಿಗೆ 19 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 167 ರನ್ ಬಾರಿಸಿ ಗೆಲುವನ್ನಾಚರಿಸಿತ್ತು.

20ನೇ ಬಾರಿಗೆ ಕೊರೊನಾ ಟೆಸ್ಟ್‌ ಮಾಡಿಸಿದ ಪ್ರೀತಿ ಜಿಂಟಾ: 'ಕೋವಿಡ್ ಟೆಸ್ಟ್ ಕ್ವೀನ್'20ನೇ ಬಾರಿಗೆ ಕೊರೊನಾ ಟೆಸ್ಟ್‌ ಮಾಡಿಸಿದ ಪ್ರೀತಿ ಜಿಂಟಾ: 'ಕೋವಿಡ್ ಟೆಸ್ಟ್ ಕ್ವೀನ್'

ಪಂದ್ಯದ ಬಳಿಕ ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೇಯಸ್ ಐಯ್ಯರ್, 'ಈ ಸೋಲು ನಮಗೆ ಎಚ್ಚರಿಕೆ ಕರೆಗಂಟೆಯಿದ್ದಂತಿದೆ. ಮುಂದೆ ಸಾಗುತ್ತಿದ್ದಂತೆ ನಾವು ಕಠಿಣ ಸಂದರ್ಭ ಎದುರುಗೊಳ್ಳುತ್ತಿದ್ದೇವೆ. ಬಲಿಷ್ಠ ತಂಡಗಳನ್ನು ಎದುರಿಸುತ್ತಿದ್ದೇವೆ. ಟೂರ್ನಿ ಆರಂಭದಲ್ಲಿ ನಾವು ಒಳ್ಳೆಯ ಆಟ ನೀಡಿದ್ದೆವು. ಆದರೆ ನಾವು ಅಲ್ಲಿಗೆ ಮೈ ಮರೆಯಬಾರದು. ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿ ತೆಗೆದುಕೊಳ್ಳಬೇಕು' ಎಂದಿದ್ದಾರೆ.

Story first published: Wednesday, October 21, 2020, 17:58 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X