ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಪಡೆ 42 ದಿನ ವ್ಯರ್ಥವಾಗಿ ಇಂಗ್ಲೆಂಡ್‌ನಲ್ಲಿ ಏನು ಮಾಡಲಿದೆ? ಬಿಸಿಸಿಐಗೆ ಮಾಜಿ ಆಟಗಾರನ ಖಡಕ್ ಪ್ರಶ್ನೆ!

 This itinerary is weird what will India do for 42 days after WTC final says Dilip Vengsarkar
42 ದಿನ ವಿರಾಟ್ ಅಂಡ್ ಟೀಂ ಇಂಗ್ಲೆಂಡ್ ನಲ್ಲಿ ಏನ್ ಮಾಡ್ತಾರೆ | Oneinida Kannada

ಟೀಮ್ ಇಂಡಿಯಾ ಜೂನ್ 3ರಂದು ಇಂಗ್ಲೆಂಡ್‌ನ ಸೌತಾಂಪ್ಟನ್ ತಲುಪಲಿದ್ದು ಜೂನ್ 18ರಂದು ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್‌ನಲ್ಲಿಯೇ ಉಳಿದುಕೊಳ್ಳಲಿರುವ ಟೀಮ್ ಇಂಡಿಯಾ ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

ಐಪಿಎಲ್‌ನಲ್ಲಿ ಕೊಹ್ಲಿ ಮಾತು ಕೇಳದೇ ಜೆಮಿಸನ್ ಒಳ್ಳೆಯ ಕೆಲಸ ಮಾಡಿದ್ದಾನೆ; ಟಿಮ್ ಸೌಥಿ ಪ್ರಶಂಸೆ

ಜೂನ್ 3ರಂದು ಟೀಮ್ ಇಂಡಿಯಾ ಇಂಗ್ಲೆಂಡ್ ತಲುಪಲಿದ್ದು ಜೂನ್ 18ರಿಂದ 22ರವರೆಗೆ ನ್ಯೂಜಿಲೆಂಡ್ ವಿರುದ್ಧದ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನಾಡಲಿದೆ. ಈ ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್‌ನಲ್ಲಿಯೇ ಬೀಡು ಬಿಡಲಿರುವ ಟೀಮ್ ಇಂಡಿಯಾ ತಂಡ ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

ಆ ಪಂದ್ಯದಿಂದ ನಾನು ಕೆಟ್ಟವನಾಗಿ ತಂಡದಿಂದ ಹೊರಬಿದ್ದೆ, ಎಷ್ಟೋ ರಾತ್ರಿ ನಿದ್ರೆ ಮಾಡಿರಲಿಲ್ಲ: ರವೀಂದ್ರ ಜಡೇಜಾ

ಈ ಪ್ರವಾಸದ ಕುರಿತು ಇದೀಗ ಭಾರತದ ಮಾಜಿ ಆಟಗಾರ ದಿಲೀಪ್ ವೆಂಗ್‍ಸರ್ಕಾರ್ ಮಾತನಾಡಿದ್ದು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೂ ಇರುವ ಅಂತರವನ್ನು ಟೀಕಿಸಿದ್ದಾರೆ. 'ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿಯನ್ನು ನೋಡಿ ನಿಜಕ್ಕೂ ನನಗೆ ಆಶ್ಚರ್ಯವಾಯಿತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯ ನಡುವೆ 42 ದಿನಗಳ ಅಂತರವಿರಲಿದ್ದು ಟೀಮ್ ಇಂಡಿಯಾ ಆ ಸಮಯದಲ್ಲಿ ಏನು ಮಾಡಲಿದೆ? ಇದು ಯಾವ ರೀತಿಯ ಪ್ರವಾಸ ಆಯೋಜನೆ?' ಎಂದು ಕಿಡಿಕಾರಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಬಳಿಕ 42 ದಿನ ಕೊಹ್ಲಿ ಪಡೆ ಇಂಗ್ಲೆಂಡ್‌ನಲ್ಲಿಯೇ ಇರಬೇಕಿದೆ

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಬಳಿಕ 42 ದಿನ ಕೊಹ್ಲಿ ಪಡೆ ಇಂಗ್ಲೆಂಡ್‌ನಲ್ಲಿಯೇ ಇರಬೇಕಿದೆ

ಹೌದು ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಮುಗಿದ 42 ದಿನಗಳ ನಂತರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗುವ ಕಾರಣ ಆ 42 ದಿನಗಳ ಕಾಲ ಇಂಗ್ಲೆಂಡ್‌ನಲ್ಲಿ ಕೊಹ್ಲಿ ಪಡೆ ಏನು ಮಾಡಲಿದೆ? ಇಷ್ಟು ದೊಡ್ಡ ಮಟ್ಟದಲ್ಲಿ ಕಾಲಹರಣ ಮಾಡುವ ಅಗತ್ಯವೇನಿದೆ ಎಂದು ದಿಲೀಪ್ ವೆಂಗ್‍ಸರ್ಕಾರ್ ಪ್ರಶ್ನಿಸಿದ್ದಾರೆ.

ಈ ನಡುವೆ ಇಂಗ್ಲೆಂಡ್ ಶ್ರೀಲಂಕಾ ಮತ್ತು ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನಾಡುವ ಸಂಭವ

ಈ ನಡುವೆ ಇಂಗ್ಲೆಂಡ್ ಶ್ರೀಲಂಕಾ ಮತ್ತು ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನಾಡುವ ಸಂಭವ

ಈ 42 ದಿನಗಳ ಅಂತರದಲ್ಲಿ, ಜುಲೈ ತಿಂಗಳಿನಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ಅಥವಾ ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನಾಡುವ ಸಂಭವವಿದೆ ಎನ್ನಲಾಗುತ್ತಿದ್ದು, ಒಂದುವೇಳೆ ಶ್ರೀಲಂಕಾ ಅಥವಾ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ಪಂದ್ಯಗಳನ್ನು ಆಯೋಜಿಸುವುದೇ ಆದರೆ ಭಾರತದ ವಿರುದ್ಧದ ಸರಣಿಯನ್ನು ಬೇಗ ಆಯೋಜಿಸಬಹುದಲ್ಲವಾ ಎಂದು ದಿಲೀಪ್ ವೆಂಗ್‍ಸರ್ಕಾರ್ ಪ್ರಶ್ನಿಸಿದ್ದಾರೆ.

ಇದೇ ಅವಧಿಯಲ್ಲಿ ಶ್ರೀಲಂಕಾ ಪ್ರವಾಸಕ್ಕೆ ಭಾರತದ ಮತ್ತೊಂದು ತಂಡ ರಚನೆ

ಇದೇ ಅವಧಿಯಲ್ಲಿ ಶ್ರೀಲಂಕಾ ಪ್ರವಾಸಕ್ಕೆ ಭಾರತದ ಮತ್ತೊಂದು ತಂಡ ರಚನೆ

ಈ ಅವಧಿಯಲ್ಲಿಯೇ ಜುಲೈ ತಿಂಗಳಿನಲ್ಲಿ ಶ್ರೀಲಂಕಾ ಟೀಂ ಇಂಡಿಯಾ ವಿರುದ್ಧ ಸೀಮಿತ ಓವರ್‌ಗಳ ಸರಣಿಗಳನ್ನು ಆಯೋಜಿಸಲಿದ್ದು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಆಟಗಾರರನ್ನು ಹೊರತುಪಡಿಸಿ ಮತ್ತೊಂದು ಭಾರತ ತಂಡವನ್ನು ಬಿಸಿಸಿಐ ರಚಿಸಲಿದೆ.

Story first published: Tuesday, June 1, 2021, 17:28 [IST]
Other articles published on Jun 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X