ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ಸುಳಿವು ನೀಡಿದ ವಿರಾಟ್ ಕೊಹ್ಲಿ!?

This man, made me run like in a fitness test: Kohli pays tribute to MS Dhoni

ನವದೆಹಲಿ, ಸೆಪ್ಟೆಂಬರ್ 12: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ಹೊಸ್ತಿಲಲ್ಲಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಲೇ ಇವೆ. ಈ ಮಧ್ಯೆ ಹಾಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಹಾಕಿಕೊಂಡಿರುವ ಫೋಟೋ ಧೋನಿ ನಿವೃತ್ತಿಯ ಸುಳಿವು ನೀಡುತ್ತಿರುವಂತಿದೆ.

ಸ್ಫೋಟಕ ಶತಕ ಬಾರಿಸಿ ಟಿ20 ದಾಖಲೆ ಬರೆದ ಯೂನಿವರ್ಸ್ ಬಾಸ್ ಗೇಲ್ಸ್ಫೋಟಕ ಶತಕ ಬಾರಿಸಿ ಟಿ20 ದಾಖಲೆ ಬರೆದ ಯೂನಿವರ್ಸ್ ಬಾಸ್ ಗೇಲ್

ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪಂದ್ಯವೊಂದರ ಫೋಟೋ ಹಾಕಿಕೊಂಡಿರುವ ಕೊಹ್ಲಿ, 'ನಾನು ಯಾವತ್ತಿಗೂ ಮರೆಯಲಾರದ ಪಂದ್ಯವದು. ವಿಶೇಷ ಇರುಳದು. ಆವತ್ತು ಈ ಮನುಷ್ಯ ನನ್ನನ್ನು ಫಿಟ್‌ನೆಸ್ ಟೆಸ್ಟ್‌ಗೆ ಓಡಿಸುವ ಹಾಗೆ ಓಡಿಸಿಬಿಟ್ಟಿದ್ದ' ಎಂದು ಬರೆದುಕೊಂಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ ಆಸೀಸ್ ವೇಗಿ ಮೇಗನ್ ಶುಟ್ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ ಆಸೀಸ್ ವೇಗಿ ಮೇಗನ್ ಶುಟ್

ಕೊಹ್ಲಿ ಮತ್ತು ಧೋನಿ ಪಂದ್ಯದಲ್ಲಿ ಆಡುತ್ತಿರುವಾಗಿನ ಆ ಫೋಟೋ ಮತ್ತು ಕೊಹ್ಲಿ ಬರೆದಿರುವ ಸಾಲುಗಳು ಧೋನಿಯ ನಿವೃತ್ತಿಯ ಸುಳಿವು ನೀಡುತ್ತಿವೆಯೇ ಎಂಬ ರೀತಿಯಲ್ಲಿದೆ. ಸಾಲದ್ದಕ್ಕೆ ಇವತ್ತು ಸುದ್ದಿಗೋಷ್ಠಿ ಕೂಡ ನಡೆಯುತ್ತಿದೆ.

ಧೋನಿಗೆ ಗೌರವ ಸಲ್ಲಿಕೆ

ನಿವೃತ್ತಿ ನೀಡಲಿರುವ ಎಂಎಸ್ ಧೋನಿಗೆ ಗೌರವಾರ್ಥವಾಗಿ ಕೊಹ್ಲಿ ಹೀಗೆ ಫೋಟೋ ಹಂಚಿಕೊಂಡಿದ್ದಾರಾ? ಇದು ಧೋನಿ ನಿವೃತ್ತಿ ನೀಡುವುದರಲ್ಲಿದ್ದಾರೆ ಎನ್ನುವುದಕ್ಕೆ ಮುನ್ಸೂಚನೆಯಾ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ.

2016ರ ಫೋಟೋ

2016ರ ಫೋಟೋ

ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಫೋಟೋ 27 ಮಾರ್ಚ್ 2016ರದ್ದು. ಮೊಹಾಲಿಯಲ್ಲಿ ನಡೆದಿದ್ದ ವರ್ಲ್ಡ್ ಟಿ20 ಸೂಪರ್ ಟೆನ್ ಗ್ರೂಪ್-2ರ ಪಂದ್ಯದಲ್ಲಿ ತೆಗೆದ ಫೋಟೋವಿದು. ಈ ಪಂದ್ಯ ನಡೆದಿದ್ದು ಆಸ್ಟ್ರೇಲಿಯಾ ವಿರುದ್ಧ.

ಭಾರತಕ್ಕೆ ಜಯ

ಭಾರತಕ್ಕೆ ಜಯ

ಆಸ್ಟ್ರೇಲಿಯಾ-ಭಾರತ ನಡುವಣ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್, 20 ಓವರ್‌ಗೆ 6 ವಿಕೆಟ್ ಕಳೆದು 160 ರನ್ ಮಾಡಿತ್ತು. ಭಾರತ 19.1ನೇ ಓವರ್‌ಗೆ 4 ವಿಕೆಟ್ ಕಳೆದು 161 ರನ್ ಗಳಿಸಿ, 6 ವಿಕೆಟ್ ಗೆಲುವನ್ನಾಚರಿಸಿತು.

ರನ್‌ ವಿಚಾರದಲ್ಲಿ ಗಂಭೀರ

ರನ್‌ ವಿಚಾರದಲ್ಲಿ ಗಂಭೀರ

ರನ್ ಓಡುವ ವಿಚಾರದಲ್ಲಿ ಧೋನಿ ಗಂಭೀರ ಅನ್ನೋ ಸಂಗತಿ ನಿಮಗೆ ಗೊತ್ತಿರಬಹುದು. ಅಂದಿನ ಪಂದ್ಯದಲ್ಲಿ ನಾಯಕನಾಗಿದ್ದ ಧೋನಿ, ಕೊಹ್ಲಿಯನ್ನು ರನ್‌ಗಾಗಿ ಚೆನ್ನಾಗಿ ಓಡಾಡಿಸಿದ್ದರು. ಇದರ ಫಲವಾಗಿ ಕೊಹ್ಲಿ 51 ಎಸೆತಗಳಿಗೆ ಅಜೇಯ 82 ರನ್ ಗಳಿಸಿದ್ದರು. ಧೋನಿ ಅಜೇಯ 18 ರನ್‌ ಮಾಡಿದ್ದರು.

Story first published: Thursday, September 12, 2019, 16:59 [IST]
Other articles published on Sep 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X