ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಕಳೆದ ವರ್ಷ ಕೋಟಿ ಕೋಟಿ ಬಾಚಿದ್ದ ಈ ಆಟಗಾರರು ಈ ಬಾರಿ ಹರಾಜಾಗುವುದುದೇ ಡೌಟ್!

Three big buys from the IPL 2021 season that may go unsold in the IPL Mega Auction 2022

2022ರ ಐಪಿಎಲ್ ಆರಂಭಕ್ಕೂ ಮುನ್ನ ಮಹಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಈಗಾಗಲೇ ಇರುವ 8 ತಂಡಗಳು ಕೆಲ ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. 8 ತಂಡಗಳಲ್ಲಿ ಒಟ್ಟು 27 ಆಟಗಾರರು ಟೀಟೈನ್ ಆಗಿದ್ದಾರೆ. ಈ ರೀಟೆನ್ಶನ್ ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನಯಟ್ ರೈಡರ್ಸ್ ತಂಡಗಳು ಗರಿಷ್ಠ ನಾಲ್ಕು ಆಟಗಾರನ್ನು ಕೂಡ ರೀಟೈನ್ ಮಾಡಿಕೊಂಡಿದೆ. ರಾಜಸ್ಥಾನ್ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮೂವರು ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಪಂಜಾಬ್ ಕಿಂಗ್ಸ್ ಕೇವಲ ಇಬ್ಬರನ್ನು ಮಾತ್ರವೇ ರೀಟೈನ್ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದೆ.

ಇನ್ನು ಮುಂದಿನ ಆವೃತ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ ಅಹ್ಮದಾಬಾದ್ ಹಾಗೂ ಲಕ್ನೋ ಫ್ರಾಂಚೈಸಿಗಳು ಗರಿಷ್ಠ ಮೂವರು ಆಟಗಾರರನ್ನು ಹರಾಜು ಪ್ರಕ್ರಿಯೆಗೂ ಮುನ್ನ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು ಇದಕ್ಕೆ ಡಿಸೆಂಬರ್ 1ರಿಂದ 25ರವರೆಗೆ ಅವಕಾಶ ನೀಡಲಾಗಿದೆ.

ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್‌: ಡಿಕ್ಲೇರ್ ಘೋಷಿಸಿದ ಟೀಂ ಇಂಡಿಯಾ, ಭಾರತಕ್ಕೆ 539 ರನ್‌ಗಳ ಮುನ್ನಡೆಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್‌: ಡಿಕ್ಲೇರ್ ಘೋಷಿಸಿದ ಟೀಂ ಇಂಡಿಯಾ, ಭಾರತಕ್ಕೆ 539 ರನ್‌ಗಳ ಮುನ್ನಡೆ

ಈ ಮಧ್ಯೆ ಕಳೆದ ವರ್ಷ ನಡೆದ ಮಿನಿ ಹರಾಜಿನಲ್ಲಿ ಅತ್ಯಂತ ದೊಡ್ಡ ಮೊತ್ತಕ್ಕೆ ಹರಾಜಾಗುವ ಮೂಲಕ ಕ್ರಿಕೆಟ್ ಪ್ರೇಮಿಗಳ ಹುಬ್ಬೇರುವಂತೆ ಮಾಡಿದ್ದರು ಕೆಲ ಆಟಗಾರರು. ಆದರೆ ಅಂಥವರಲ್ಲಿ ಪ್ರಮುಖ ಮೂವರು ಆಟಗಾರರು ಈ ಬಾರಿಯ ಮಹಾ ಹರಾಜಿನಲ್ಲಿ ಯಾವುದೇ ತಂಡಕ್ಕೂ ಬೇಡವಾಗದೆ ಉಳಿಯುವ ಸಾಧ್ಯತೆಯಿದೆ. ಯಾರವರು? ಮುಂದೆ ಓದಿ..

ಕೃಷ್ಣಪ್ಪ ಗೌತಮ್- ಚೆನ್ನೈ ಸೂಪರ್ ಕಿಂಗ್ಸ್(9.25 ಕೋ.)

ಕೃಷ್ಣಪ್ಪ ಗೌತಮ್- ಚೆನ್ನೈ ಸೂಪರ್ ಕಿಂಗ್ಸ್(9.25 ಕೋ.)

ಕಳೆದ ವರ್ಷದ ಐಪಿಎಲ್‌ನಲ್ಲಿ 33ರ ಹರೆಯದ ಕನ್ನಡಿಗ ಆಲ್‌ರೌಂಡರ್ ಆಟಗಾರ ಕೃಷ್ಣಪ್ಪ ಗೌತಮ್ 9.25 ಕೋಟಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದರು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿ ಅನ್‌ಕ್ಯಾಪ್‌ಡ್ ಆಟಗಾರನಾಗಿ ಅತಿ ಹೆಚ್ಚು ಮೊತ್ತಕ್ಕೆ ಹಾರಾಜಾದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಕೃಷ್ಣಪ್ಪ ಗೌತಮ್ 43 ಪಂದ್ಯಗಳಲ್ಲಿ 24.57ರ ಸರಾಸರಿಯಲ್ಲಿ 166 ವಿಕೆಟ್ ಸಂಪಾದಿಸಿದ್ದಾರೆ.

ಟಿ20 ವೃತ್ತಿ ಜೀವನದಲ್ಲಿ ಗೌತಮ್ 67 ಪಂದ್ಯಗಳಲ್ಲಿ 48 ವಿಕೆಟ್ ಸಂಪಾದಿಸಿದ್ದಾರೆ. ಆಫ್‌ ಬ್ರೇಕ್ ಬೌಲರ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಕೊಡುಗೆ ನೀಡುವ ಸಾಮರ್ಥ್ಯ ಈ ಆಟಗಾರನಲ್ಲಿದೆ. ಪ್ರಥಂ ದರ್ಜೆ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಸಾಧನೆ ಕೂಡ ಮಾಡಿದ್ದಾರೆ ಗೌತಮ್. ಈ ಪ್ರದರ್ಶನ ಗಮನಿಸಿ ಗೌತಮ್‌ಗೆ ದೊಡ್ಡ ಮೊತ್ತವನ್ನು ನಿಡಿತ್ತು ಸಿಎಸ್‌ಕೆ. ಆದರೆ ಇಷ್ಟು ದೊಡ್ಡ ಮೊತ್ತವನ್ನು ಪಡೆದುಕೊಂಡಿದ್ದರೂ ಕೃಷ್ಣಪ್ಪ ಗೌತಮ್ ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ಪರವಾಗಿ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡಿಲ್ಲ. ಒಂದು ಬಾರಿ ಫಿಲ್ಡಿಂಗ್ ಮಾಡುವ ಅವಕಾಶ ಪಡೆದುಕೊಂಡಿದ್ದಾಗಲೂ ನಿರ್ಣಾಯಕ ಹಂತದಲ್ಲಿ ಕ್ಯಾಚ್ ಡ್ರಾಪ್ ಮಾಡುವ ಮೂಲಕ ಬೇಡದ ಕಾರಣಕ್ಕೆ ಸುದ್ದಿಯಾಗಿದ್ದರು ಗೌತಮ್. ಇದು ಆ ಪಂದ್ಯದಲ್ಲಿ ತಂಡಕ್ಕೆ ದುಬಾರಿಯಾಗಿತ್ತು.

ಜೇ ರಿಚರ್ಡ್ಸನ್- ಪಂಜಾಬ್ ಕಿಂಗ್ಸ್(14 ಕೋಟಿ)

ಜೇ ರಿಚರ್ಡ್ಸನ್- ಪಂಜಾಬ್ ಕಿಂಗ್ಸ್(14 ಕೋಟಿ)

ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಹರಾಜಿನಲ್ಲಿ ಅಚ್ಚರಿಯೆಂಬಂತೆ ಕೆಲ ಸಾಮಾನ್ಯ ಆಟಗಾರರ ಮೇಲೆಯೂ ಭಾರೀ ಮೊತ್ತವನ್ನು ಹೂಡಿಕೆ ಮಾಡುವ ಕೆಟ್ಟ ಇತಿಹಾಸವನ್ನು ಹೊಂದಿದೆ. ಅದು ಕಳೆದ ವರ್ಷದ ಮಿನಿ ಹರಾಜಿನಲ್ಲಿಯೂ ಮುಂದುವರಿದಿತ್ತು. ಆಸ್ಟ್ರೇಲಿಯಾದ ವೇಗಿ ಜೇ ರಿಷರ್ಡ್ಸನ್ ಮೇಲೆ 14 ಕೋಟಿ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಎಚ್ಚರ ಹುಬ್ಬೇರುವಂತೆ ಮಾಡಿತ್ತು ಪಂಜಾಬ್ ಕಿಂಗ್ಸ್. ಪಂಜಾಬ್ ಕಿಂಡದ ಈ ನಿರ್ಧಾರ ತಂಡಕ್ಕೆ ಭಾರೀ ಹಿನ್ನಡೆಯುಂಟು ಮಾಡಿತ್ತು. 25ರ ಹರೆಯದ ಆಸಿಸ್‌ನ ಈ ಆಟಗಾರರ ಪಂಜಾಬ್ ತಂಡಕ್ಕೆ ದುಬಾರಿಯಾದರು. ಕಳೆದ ಆವೃತ್ತಿಯಲ್ಲಿ ಪಂಜಾಬ್ ಪರವಾಗಿ ರಿಚರ್ಡ್ಸನ್ ಕೇವಲ 3 ಪಂದ್ಯಗಳನ್ನು ಆಡಿದ್ದು ಮೂರು ವಿಕೆಟ್ ಸಂಪಾದಿಸಿದ್ದಾರೆ. ಆದರೆ 10.63ರ ಸರಾಸರಿಯಲ್ಲಿ ರನ್ ಬಿಟ್ಟುಕೊಡುವ ಮೂಲಕ ದುಬಾರಿಯಾದರು. ಅಲ್ಲದೆ ಯುಎಇ ಆವೃತ್ತಿಯಿಂದ ಹೊರಗುಳಿಯಲು ನಿರ್ಧರಿಸಿದ್ದರು ರಿಚರ್ಡ್ಸನ್. ಕೊನೆಯ ಕ್ಷಣದಲ್ಲಿ ಅವರಿ ಈ ನಿರ್ಧಾರ ತೆಗೆದುಕೊಮಡಿದ್ದ ಕಾರಣದಿಂದಾಗಿ ಕೋವಿಡ್ ನಿಮಗಳು ಇದ್ದ ಕಾರಣ ಸೂಕ್ತ ಬದಲಿ ಆಟಗಾರನನ್ನು ಕೂಡ ಹೊಂದಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಕ್ರಿಸ್ ಮೋರಿಸ್- ರಾಜಸ್ಥಾನ್ ರಾಯಲ್ಸ್(16.25 ಕೋಟಿ)

ಕ್ರಿಸ್ ಮೋರಿಸ್- ರಾಜಸ್ಥಾನ್ ರಾಯಲ್ಸ್(16.25 ಕೋಟಿ)

ಕಳೆದ ವರ್ಷ ನಡೆದ ಮಿನಿ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕ್ರಿಸ್ ಮೋರಿಸ್ ಅವರನ್ನು ದುಬಾರಿ ಮೊತ್ತಕ್ಕೆ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿತ್ತು. ಬರೊಬ್ಬರಿ 16.25 ಕೋಟಿಯ ದಾಖಲೆ ಮೊತ್ತಕ್ಕೆ ಕ್ರಿಸ್ ಮೋರಿಸ್ ಆರ್ಆರ್ ಪಾಲಾಗಿದ್ದರು. ಬ್ಯಾಟ್ ಹಘಾಊ ಬೌಲಿಂಗ್‌ನ ಮೂಲಕ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದ ಕಾರಣದಿಂದಾಗಿ ಮೋರಿಸ್ ಈ ದುಬಾರಿ ಮೊತ್ತವನ್ನು ಪಡೆದುಕೊಂಡಿದ್ದರು. ಆದರೆ ಇದಕ್ಕೆ ಪೂರಕವಾದ ಪ್ರದರ್ಶನ ದಕ್ಷಿಣ ಆಫ್ರಿಕಾದ ಈ ಆಟಗಾರನಿಂದ ಬಾರಲಿಲ್ಲ.

ಇಷ್ಟು ದುಬಾರಿ ಮೊತ್ತಕ್ಕೆ ಆರ್‌ಆರ್ ಫ್ರಾಂಚೈಸಿ ಕ್ರಿಸ್ ಮಾರಿಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡ ಕಾರಣಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಆ ಟೀಕೆಗಳಿಗೆ ತಕ್ಕಂತೆಯೇ ಮೋರಿಸ್ ಕಳೆದ ಆವೃತ್ತಿಯಲ್ಲಿ ವಿಫಲವಾಗಿದ್ದಾರೆ. ಭಾರತದಲ್ಲಿ ನಡೆದ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಾರಿಸ್ ಯುಎಇ ಲೆಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಒಟ್ಟಾರೆಯಾಗಿ 11 ಪಂದ್ಯಗಳಿಂದ 15 ವಿಕೆಟ್ ಪಡೆದುಕೊಂಡಿದ್ದರಾದರೂ 9.17ರಷ್ಟು ಎಕಾನಮಿಯಲ್ಲಿ ರನ್ ನೀಡಿದ್ದು ದುಬಾರಿಯೆನಿಸಿತು.

ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ನಂತರ ವೈರಲ್ ಆದ ವಿಶೇಷ ಫೋಟೋ | Oneindia Kannada

Story first published: Monday, December 6, 2021, 10:29 [IST]
Other articles published on Dec 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X