ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾವನ್ನು ಯಾವತ್ತೂ ಮುನ್ನಡೆಸದ 3 ಸೂಪರ್ ಸ್ಟಾರ್‌ಗಳು ಇವರು

Three Great Cricketers Who Never Captained Team India

ಕಳೆದ ಎರಡು ದಶಕದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ಟೀಮ್ ಇಂಡಿಯಾದಲ್ಲಿ ಅನೇಕ ದಿಗ್ಗಜ ಆಟಗಾರರು ವಿಜೃಂಭಿಸಿದ್ದಾರೆ. ಅದರಲ್ಲಿ ಕೆಲ ಆಟಗಾರರು ಕೇವಲ ಆಟಗಾರನಾಗ ಮಾತ್ರವಲ್ಲ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ ಕಾರಣಕ್ಕೂ ದಿಗ್ಗಜರೆನಿಸಿದ್ದಾರೆ.

ಪ್ರಧಾನಿ ಪರಿಹಾರ ನಿಧಿಗೆ ಬೆಂಬಲದ ಪ್ರತಿಜ್ಞೆ ಮಾಡಿದ ವಿರಾಟ್-ಅನುಷ್ಕಾಪ್ರಧಾನಿ ಪರಿಹಾರ ನಿಧಿಗೆ ಬೆಂಬಲದ ಪ್ರತಿಜ್ಞೆ ಮಾಡಿದ ವಿರಾಟ್-ಅನುಷ್ಕಾ

ತಂಡವನ್ನು ಮುನ್ನಡೆಸಲು ಅದ್ಭುತ ಆಟಗಾರನಾಗಿದ್ದರೆ ಸಾಲದು ಅದಕ್ಕಾಗಿಯೇ ಕೆಲ ವಿಶಿಷ್ಟ ಗುಣಗಳು ಇರಬೇಕಾಗುತ್ತದೆ. ಒತ್ತಡ ಸಂದರ್ಭದಲ್ಲಿ ತಂಡವನ್ನು ಸರಿಯಾಗಿ ನಾಯಕ ಸಂಭಾಳಿಸುತ್ತಾನೆ ಅದು ಆತನ ನಾಯಕತ್ವವನ್ನು ಅಳೆಯುತ್ತದೆ.

ಐಪಿಎಲ್ 2020: ರದ್ದಾಗುವ ಹಾದಿಯಲ್ಲಿ ಮೆಗಾ ಟೂರ್ನಿ!ಐಪಿಎಲ್ 2020: ರದ್ದಾಗುವ ಹಾದಿಯಲ್ಲಿ ಮೆಗಾ ಟೂರ್ನಿ!

ತಂಡವನ್ನು ಮುನ್ನಡೆಸುವ ಸಾಮರ್ಥ್ಯವಿದ್ದರೂ ಟೀಮ್ ಇಂಡಿಯಾದ ಮೂವರು ಆಟಗಾರರು ಮಾತ್ರ ಭಾರತ ಕ್ರಿಕೆಟ್‌ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುನ್ನಡೆಸುವ ಒಂದೇ ಒಂದು ಅವಕಾಶವನ್ನು ಪಡೆಯಲಿಲ್ಲ. ಯಾರು ಆ ಮೂರು ಆಟಗಾರರು ಅನ್ನೋದನ್ನು ಮುಂದೆ ಓದಿ

ಸಿಕ್ಸರ್ ಕಿಂಗ್ ಯುವಿ

ಸಿಕ್ಸರ್ ಕಿಂಗ್ ಯುವಿ

ಟೀಮ್ ಇಂಡಿಯಾದಲ್ಲಿ ದಶಕಕ್ಕೂ ಹೆಚ್ಚುಕಾಲ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿದ್ದ ಆಟಗಾರ ಅಂದರೆ ಅದು ಯುವರಾಜ್ ಸಿಂಗ್. ಕೇವಲ ಸ್ಪೋಟಕ ಬ್ಯಾಟಿಂಗ್ ಮಾತ್ರವಲ್ಲ ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲೂ ಯುವಿ ಅದ್ಭುತ ಕ್ರಿಕೆಟಿಗ. ಯುವ ಓರ್ವ ಪರ್ಫೆಕ್ಟ್ ಆಲ್‌ರೌಂಡರ್ ಎಮಬುದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಕನಿಷ್ಟ ಒಂದು ಪಂದ್ಯದಲ್ಲೂ ಯುವಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸುವ ಅವಕಾಶ ತನ್ನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಗಲೇ ಇಲ್ಲ.

ಮಾಹಿ ಶಕೆ ಆರಂಭವಾಗಿತ್ತು

ಮಾಹಿ ಶಕೆ ಆರಂಭವಾಗಿತ್ತು

ಯುವರಾಜ್ ಸಿಂಗ್ ಸೌರವ್ ಗಂಗೂಲಿ ನಾಯಕತ್ವದಲ್ಲಿ ಬೆಳೆದ ಕ್ರಿಕೆಟಿಗ. ಯುವಿ ತಂಡದಲ್ಲಿ ಮಿಂಚುತ್ತಿತಬೇಕಾದರೆ ಟೀಮ್ ಇಂಡಿಯಾ ಓರ್ವ ಅದ್ಭುತ ನಾಯಕನನ್ನು ಕಂಡುಕೊಂಡಿತ್ತು. ಅದು ಮಹೇಂದ್ರ ಸಿಂಗ್ ಧೋನಿ. ಧೋನಿಯ ಚಾಣಾಕ್ಷತನದ ನಾಯಕತ್ವದ ಮುಂದೆ ಯುವರಾಜ್‌ಸಿಂಗ್‌ಗೆ ನಾಯಕನಾಗುವ ಅವಕಾಶ ದೊರೆಯಲೇ ಇಲ್ಲ.

ವೆರಿ ವೆರಿ ಸ್ಪೆಶಲ್ ಬ್ಯಾಟ್ಸ್‌ಮನ್

ವೆರಿ ವೆರಿ ಸ್ಪೆಶಲ್ ಬ್ಯಾಟ್ಸ್‌ಮನ್

ಟೀಮ್ ಇಂಡಿಯಾ ಕಂಡ ಸ್ಟೈಲಿಶ್ ಆಟಗಾರರಲ್ಲಿ ಓರ್ವ ವಿವಿಎಸ್ ಲಕ್ಷ್ಮಣ್. ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚುಹರಿಸಿದ ಲಕ್ಷ್ಮಣ್ ಏಕದಿನ ಕ್ರಿಕೆಟ್‌‌ನಲ್ಲಿ ಅಂತಾ ಪ್ರದರ್ಶನ ತೀರಿಸಲು ವಿಫಲರಾದರು. ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್ಮನ್ ಆಗಿದ್ದ ಲಕ್ಷ್ಮಣ್‌ಗೆ ಟೀಮ್ ಇಂಡಿಯಾವನ್ನು ಮುನ್ನಡೆಸು ಅವಕಾಶ ಸಿಗಲೇ ಇಲ್ಲ.

ಭಾರತದ ವೇಗದ ಬೌಲರ್ ಜಹೀರ್ ಖಾನ್

ಭಾರತದ ವೇಗದ ಬೌಲರ್ ಜಹೀರ್ ಖಾನ್

ಟೀಮ್ ಇಂಡಿಯಾ ಕಂಡ ಪ್ರತಿಭಾನ್ವಿತ ವೇಗದ ಬೌಲರ್ ಅಂದರೆ ಅದು ಜಹೀರ್ ಖಾನ್. ಟೀಮ್ ಇಂಡಿಯಾದ ಪ್ರತಿ ಪಂದ್ಯದಲ್ಲಿ ಜಹೀರ್ ಸಾಕಷ್ಟು ಮಹತ್ವದ ಪಾತ್ರವನ್ನು ವಹಿಸಿಕೊಂಡಿದ್ದರು. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಜಹೀರ್ ಟೀಮ್ ಇಂಡಿಯಾ ಪಾಲಿನ ಆಪ್ತರಕ್ಷಕರಾಗಿದ್ದವರು. ಎದುರಾಳಿ ಬ್ಯಾಟ್ಸ್‌ಮನ್‌ನ ತಣತ್ರಗಾರಿಕೆಯನ್ನು ಅರಿತು ಬೌಲಿಂಗ್ ಮಾಡುವುದರ ಜೊತೆಗೆ ತಂಡದ ಬೌಲಿಂಗ್ ವಿಭಾಗವನ್ನು ಜಹೀರ್ ಮುನ್ನಡೆಸುತ್ತಿದ್ದರು. ಆದರೆ ಟೀಮ್ ಇಂಡಿಯಾವನ್ನು ಜಹೀರ್ ಒಂದೇ ಒಂದು ಬಾರಿಯೂ ಮುನ್ನಡೆಸುವ ಅವಕಾಶವನ್ನು ಪಡೆಯಲಿಲ್ಲ.

ಟೀಮ್ ಇಂಡಿಯಾ ಕಂಡ ನಾಯಕರೆಷ್ಟು

ಟೀಮ್ ಇಂಡಿಯಾ ಕಂಡ ನಾಯಕರೆಷ್ಟು

ಟೀಮ್ ಇಂಡಿಯಾವನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಈವರೆಗೂ 33 ನಾಯಕರು ಮುನ್ನಡೆಸಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾವನ್ನು ಸದ್ಯ ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಅತ್ಯಂತ ಹೆಚ್ಚಿನ ಗೆಲುವನ್ನು ತಮದುಕೊಟ್ಟ ನಾಯಕರಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ನಾಯಕರ ಸಂಖ್ಯೆ 24. ಏಕದಿನ ಕ್ರಿಕೆಟ್‌ನಲ್ಲಿಅತಿ ಹೆಚ್ಚಿನ ಗೆಲುವು ತಂದುಕೊಟ್ಟ ನಾಯಕನೆಂದರೆ ಅದು ಮಹೇಂದ್ರ ಸಿಂಗ್ ಧೋನಿ

Story first published: Monday, March 30, 2020, 18:34 [IST]
Other articles published on Mar 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X