ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಿತಾಸಕ್ತಿ ಸಂಘರ್ಷ: ಸಿಒಎ ವಿರುದ್ಧ ವಿವಿಎಸ್‌ ಲಕ್ಷ್ಮಣ್‌ ಕಿಡಿ

Till date CoA has not explained our role: Angry Laxman writes to Ombudsman

ಹೊಸದಿಲ್ಲಿ, ಏಪ್ರಿಲ್‌ 30: ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿಯ ಸದಸ್ಯರಾಗಿದ್ದರೂ ಐಪಿಎಲ್‌ನಲ್ಲಿ ರನ್‌ರೈಸರ್ಸ್‌ ತಂಡದ ಮೆಂಟರ್‌ ಕಾರ್ಯ ನಿರ್ವಹಿಸುವ ಮೂಲಕ ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿರುವ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌, ಈ ವಿಚಾರವಾಗಿ ಸುಪ್ರೀಂ ನೇಮಿತ ಬಿಸಿಸಿಐನ ಆಡಳಿತ ಸಮಿತಿ ವಿರುದ್ಧ ಕಿಡಿ ಕಾರಿದ್ದಾರೆ.

 ದಾದಾ-ಪಂಟರ್‌ಗೆ ಮ್ಯಾಚ್‌ ವಿನ್ನರ್‌ಗಳನ್ನು ತರುವ ಕಲೆಯಿದೆ: ಧವನ್‌ ದಾದಾ-ಪಂಟರ್‌ಗೆ ಮ್ಯಾಚ್‌ ವಿನ್ನರ್‌ಗಳನ್ನು ತರುವ ಕಲೆಯಿದೆ: ಧವನ್‌

ನಿಯಮಗಳ ಅನುಸಾರ ಬಿಸಿಸಿಐನ ಹುದ್ದೆಯಲ್ಲಿದ್ದು, ಖಾಸಗಿ ತಂಡಗಳ ಪರ ಕಾರ್ಯನಿರ್ವಹಿಸುವಂತಿಲ್ಲ. ಹೀಗಾಗಿ ಏಕಕಾಲದಲ್ಲಿ ಎರಡು ಹುದ್ದೆಗಳನ್ನು ಹೊಂದಿದ್ದಾರೆ ಎಂದು ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆಯ ಆಜೀವ ಸದಸ್ಯರಾದ ಸಂಜೀವ್‌ ಗುಪ್ತಾ ಆರೋಪಿಸಿದ್ದರು. ಬಳಿಕ ಬಿಸಿಸಿಐನ ನೂತನ ಒಂಬುಡ್ಸ್‌ಮನ್‌ ನಿವೃತ್ತ ನ್ಯಾಯಮೂರ್ತಿಗಳಾದ ಡಿಕೆ ಜೈನ್‌, ವಿವಿಎಸ್‌ ಲಕ್ಷ್ಮಣ್‌ ಮತ್ತು ಸಚಿನ್‌ ತೆಂಡೂಲ್ಕರ್‌ ಅವರಿಗೆ ಈ ವಿಚಾರವಾಗಿ ಉತ್ತರಿಸುವಂತೆ ನೋಟಿಸ್‌ ನೀಡಿದ್ದರು. ಸಚಿನ್‌, ಕ್ರಿಕೆಟ್‌ ಸಲಹಾ ಸಮಿತಿಯ ಹುದ್ದೆಯ ಜೊತೆಗೆ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್‌ ಆಗಿದ್ದಾರೆ.

 ಐಪಿಎಲ್ 2019: 'ಮಹಿಳೆಯರ ಟಿ20 ಚಾಲೆಂಜ್' ಸಮಯದಲ್ಲಿ ಬದಲಾವಣೆ ಐಪಿಎಲ್ 2019: 'ಮಹಿಳೆಯರ ಟಿ20 ಚಾಲೆಂಜ್' ಸಮಯದಲ್ಲಿ ಬದಲಾವಣೆ

ಇದೀಗ ಒಂಬುಡ್ಸ್‌ಮನ್‌ ನೋಟಿಸ್‌ಗೆ ಉತ್ತರ ನೀಡಿರುವ ವಿವಿಎಸ್‌ ಲಕ್ಷ್ಮಣ್‌, ವಿನೋದ್‌ ರಾಯ್‌ ಮುಂದಾಳತ್ವದ ಸಿಒಎ, ಕ್ರಿಕೆಟ್‌ ಸಲಹಾ ಸಮಿತಿಯಲ್ಲಿ ತಮ್ಮ ಸ್ಥಾನ ಮತ್ತು ಜವಾಬ್ದಾರಿಯ ಕುರಿತಾಗಿ ಸರಿಯಾಗಿ ವಿವರಣೆ ನಿಡಿಲ್ಲ ಹಾಗೂ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ದೊಡ್ಡ ಮಟ್ಟದ ಜವಾಬ್ದಾರಿ ನೀಡುವುದಾಗಿ ಹೇಳಿ ಕೇವಲ ಕೋಚ್‌ ಆಯ್ಕೆ ವಿಚಾರಕ್ಕೆ ಮಾತ್ರವೇ ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ)ಯನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಒಂಬುಡ್ಸ್‌ಮನ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

 ಮೊಹಮ್ಮದ್‌ ಶಮಿ ಪತ್ನಿ ಹಸೀನ್‌ ಜಹಾನ್‌ ಬಂಧನ, ಬಿಡುಗಡೆ ಮೊಹಮ್ಮದ್‌ ಶಮಿ ಪತ್ನಿ ಹಸೀನ್‌ ಜಹಾನ್‌ ಬಂಧನ, ಬಿಡುಗಡೆ

"2018ರ ಡಿ.7ರಂದು ಸಿಒಎಗೆ ಪತ್ರ ಬರೆದಿದ್ದು, ನಮ್ಮ ಜವಾಬ್ದಾರಿ ಮತ್ತು ಪಾತ್ರಗಳ ಕುರಿತಾಗಿ ವಿವರಿಸುವಂತೆ ಕೇಳಿಕೊಂಡಿದ್ದೇವೆ. ಇಲ್ಲಿಯವರೆಗೂ ಅದಕ್ಕೆ ಉತ್ತರ ಬಂದಿಲ್ಲ. ಇನ್ನು 2015ರಲ್ಲಿ ನೀಡಿರುವ ಪತ್ರದಲ್ಲಿ ಯಾವುದೇ ವಿವರಣೆಗಳಿಲ್ಲ. ಹೀಗಾಗಿ ಕ್ರಿಕೆಟ್‌ ಸಲಹಾ ಸಮಿತಿ ಅಸ್ಥಿತ್ವದಲ್ಲಿದೆಯೇ ಎಂಬುದನ್ನು ಮೊದಲು ಖಾತ್ರಿ ಪಡಿಸಬೇಕಿದೆ,'' ಎಂದು ಲಕ್ಷ್ಮಣ್‌ ತಮ್ಮ ವಕೀಲರ ಮೂಲಕ ಒಂಬುಡ್ಸ್‌ಮನ್‌ಗೆ ನೀಡಿರುವ ಪತ್ರದಲ್ಲಿ ಖಾರವಾಗಿ ಉತ್ತರಿಸಿದ್ದಾರೆ.

 ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ತಂಡದಿಂದ ಹೊರಬಿದ್ದ ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ತಂಡದಿಂದ ಹೊರಬಿದ್ದ ಅಲೆಕ್ಸ್ ಹೇಲ್ಸ್

ಹಿತಾಸಕ್ತಿ ಸಂಘರ್ಷದ ಕುರಿತಾಗಿ ಈ ಮೊದಲು ಸಚಿನ್‌ ತೆಂಡೂಲ್ಕರ್‌ ಉತ್ತರ ನೀಡಿದ್ದು, ತಾವು ಮುಂಬಯಿ ಇಂಡಿಯನ್ಸ್‌ ತಂಡದಿಂದ ಯಾವುದೇ ರೀತಿಯ ಹಣ ಸ್ವೀಕರಿಸಿಲ್ಲ ಮತ್ತು ತಂಡದ ಯಾವುದೇ ನಿರ್ಧಾರಗಳಲ್ಲಿ ಪಾಲ್ಗೊಂಡಿಲ್ಲ. ಹೀಗಾಗಿ ಇಲ್ಲಿ ಹಿತಾಸಕ್ತಿ ಸಂಘರ್ಷದ ಮಾತೇ ಇಲ್ಲ ಎಂದು ಪತ್ರ ರವಾನಿಸಿದ್ದರು.

Story first published: Tuesday, April 30, 2019, 11:50 [IST]
Other articles published on Apr 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X