ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧ ಕಣಕ್ಕಿಳಿಯಲು ಟಿಮ್ ಡೇವಿಡ್ ಸಿದ್ಧ: ಸ್ಫೋಟಕ ಸಿಕ್ಸರ್‌ ಸಿಡಿಸಲು ನೆಟ್ಸ್‌ನಲ್ಲಿ ಅಭ್ಯಾಸ

Tim David

ಭಾರತ ವಿರುದ್ಧದ ಮುಂಬರುವ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಅತ್ಯಂತ ಸ್ಫೋಟಕ ಆಟಗಾರನನ್ನು ಕಣಕ್ಕಿಳಿಸಲು ಹೊರಟಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೂಡ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ತನ್ನ ಸಾಮಾಜಿಕ ಜಾಲತಾಣದ ಅಕೌಂಟ್‌ನಲ್ಲಿ ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 25ರವರೆಗೆ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗಲಿದ್ದು, ಮಂಗಳವಾರ ಮೊದಲ ಪಂದ್ಯ ನಡೆಯಲಿದೆ.
23ರಂದು 2ನೇ ಟಿ20 ಪಂದ್ಯ ನಡೆಯಲಿದ್ದು, 25ರಂದು ಕೊನೆಯ ಟಿ20 ಪಂದ್ಯ ನಡೆಯಲಿದೆ. ಈ ಸರಣಿಯಲ್ಲಿ ಡೇವಿಡ್ ವಾರ್ನರ್‌ಗೆ ವಿಶ್ರಾಂತಿ ನೀಡಲಾಗಿದೆ.

ಅಲ್ಲದೆ, ಮಿಚೆಲ್ ಸ್ಟಾರ್ಕ್, ಸ್ಟೋನಿಸ್, ಮಿಚೆಲ್ ಮಾರ್ಷ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ಆಸ್ಟ್ರೇಲಿಯ ತಂಡ ದುರ್ಬಲವಾದಂತೆ ಕಂಡಿದ್ದರೂ, ಪ್ಯಾಟ್ ಕಮಿನ್ಸ್, ಹೇಜಲ್‌ವುಡ್‌, ರಿಚರ್ಡ್ಸನ್, ಆಡಮ್ ಚಂಪಾ ಅವರಂತಹ ಬಲಿಷ್ಠ ಬೌಲರ್‌ಗಳಿದ್ದಾರೆ. ಅದೇ ರೀತಿ ಮ್ಯಾಕ್ಸ್ ವೆಲ್, ಸ್ಮಿತ್, ಮ್ಯಾಥ್ಯೂ ವೇಡ್‌ ಅವರಂತಹ ಆಟಗಾರರಿದ್ದಾರೆ.

ಭಾರತ ವಿರುದ್ಧ ಸ್ಫೋಟಕ ಬ್ಯಾಟರ್ ಕಣಕ್ಕಿಳಿಸಿಲು ಆಸ್ಟ್ರೇಲಿಯಾ ಯೋಜನೆ

ಭಾರತ ವಿರುದ್ಧ ಸ್ಫೋಟಕ ಬ್ಯಾಟರ್ ಕಣಕ್ಕಿಳಿಸಿಲು ಆಸ್ಟ್ರೇಲಿಯಾ ಯೋಜನೆ

ಆಸ್ಟ್ರೇಲಿಯಾ ಪ್ರಮುಖ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ದೈತ್ಯಾಕಾರದ ಬ್ಯಾಟ್ಸ್ ಮನ್ ನನ್ನು ಕಣಕ್ಕಿಳಿಸಲು ಹೊರಟಿದೆ. ಹೌದು, ಅದು ಬೇರೆ ಯಾರೂ ಅಲ್ಲ, ಸಿಂಗಾಪುರದ ಟಿಮ್ ಡೇವಿಡ್. ಅವರು ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡದಲ್ಲಿ ಆಡಲಿದ್ದಾರೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಟಿಮ್ ಡೇವಿಡ್ ತರಬೇತಿಯ ವಿಡಿಯೋವನ್ನು ಬಿಡುಗಡೆ ಮಾಡಿದೆ.

ನೆಟ್ಸ್‌ ಪ್ರಾಕ್ಟೀಸ್‌ನಲ್ಲಿ ಚೆಂಡನ್ನ ಸಿಕ್ಸರ್‌ಗೆ ಅಟ್ಟಿದ ಟಿಮ್ ಡೇವಿಡ್

ಇದರಲ್ಲಿ, ಟಿಮ್ ಡೇವಿಡ್ ನೆಟ್ಸ್‌ನಲ್ಲಿ ಚೆಂಡುಗಳನ್ನು ಸಿಕ್ಸರ್‌ಗೆ ಫ್ಲಿಕ್ ಮಾಡಿದರು. ಇದನ್ನು ನೋಡಿದಾಗ ಟೀಂ ಇಂಡಿಯಾ ಅಭಿಮಾನಿಗಳಿಗೆ ಸ್ವಲ್ಪ ಭಯವಾಗುತ್ತದೆ. ಅದರಲ್ಲೂ ಟಿಮ್ ಡೇವಿಡ್‌ ಸ್ಪಿನ್ನರ್ ಗಳಿಗೆ ಚೆಂಡನ್ನ ಎತ್ತಿ ಸಿಕ್ಸರ್ ಬಾರಿಸುವುದರಲ್ಲಿ ನಿಪುಣರು.

ಟಿಮ್ ಡೇವಿಡ್ ಇದುವರೆಗೆ 127 ಪಂದ್ಯಗಳಲ್ಲಿ 2725 ರನ್ ಗಳಿಸಿದ್ದಾರೆ. ಸರಾಸರಿ 31 ಆಗಿದೆ. ಸ್ಟ್ರೈಕ್‌ರೇಟ್‌ 163 ರಷ್ಟಿದ್ದು, ಸ್ಫೋಟಕ ಬ್ಯಾಟರ್ ಆಗಿದ್ದಾರೆ. ಐಪಿಎಲ್ನಲ್ಲಿ ಟಿಮ್ ಡೇವಿಡ್ ಅವರನ್ನು ಮುಂಬೈ ತಂಡ 8 ಕೋಟಿ 25 ಲಕ್ಷ ರೂಪಾಯಿ ನೀಡಿ ಖರೀದಿಸಿತ್ತು. ಮುಂಬೈ ಡೇವಿಡ್‌ಗೆ ಅವಕಾಶ ನೀಡುವ ಹೊತ್ತಿಗೆ ಅದಾಗಲೇ ಅರ್ಧ ಅವದಿ ಮುಕ್ತಾಯಗೊಂಡಿತ್ತು. ಲೀಗ್‌ನ ಮೊದಲಾರ್ಧದಲ್ಲಿ ಅವರಿಗೆ ನ್ಯಾಯಯುತ ಅವಕಾಶವನ್ನು ನೀಡದಿರುವುದು ಮುಂಬೈ ಮ್ಯಾನೇಜ್‌ಮೆಂಟ್‌ನ ತಪ್ಪು ಎಂದು ಟಿಮ್ ಡೇವಿಡ್‌ ಸಾಬೀತುಪಡಿಸಿದ್ರು.
ಟಿಮ್ 8 ಪಂದ್ಯಗಳನ್ನು ಆಡಿ 186 ರನ್ ಗಳಿಸಿದ್ದರು. ಇದರಲ್ಲಿ 16 ಸಿಕ್ಸರ್‌ಗಳು ಸೇರಿವೆ.

160+ ಸ್ಟ್ರೈಕ್‌ರೇಟ್ ಹೊಂದಿರುವ ಡೇವಿಡ್

160+ ಸ್ಟ್ರೈಕ್‌ರೇಟ್ ಹೊಂದಿರುವ ಡೇವಿಡ್

ದೇಶೀಯ ಕ್ರಿಕೆಟ್‌ನಲ್ಲಿ 160 ಸ್ಟ್ರೈಕ್‌ರೇಟ್ ಹೊಂದಿರುವ ಟಿಮ್ ಡೇವಿಡ್‌, ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಹೊಸ ಆಯಾಮವನ್ನ ಸೃಷ್ಟಿಸಬಲ್ಲ ಆಟಗಾರನಾಗಿದ್ದಾನೆ. 6.2 ಅಡಿವುಳ್ಳ 100 ಕೆಜಿ ತೂಕದ ಟಿಮ್ ಡೇವಿಡ್ ವಿಶ್ವದ ಯಾವುದೇ ಕ್ರೀಡಾಂಗಣದಲ್ಲಿ ಬೃಹತ್ ಸಿಕ್ಸರ್ ಸಿಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾನೆ. ಆತ ಉತ್ತಮ ಫೀಲ್ಡರ್ ಆಗಿದ್ದು, ಕೆಲವು ಓವರ್‌ಗಳನ್ನ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯವನ್ನ ಸಹ ಹೊಂದಿದ್ದಾನೆ.

Story first published: Sunday, September 18, 2022, 19:16 [IST]
Other articles published on Sep 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X