ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್

Tim David set to become first Singapore international cricketer to play in IPL

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದಲ್ಲಿ ಟಿಮ್ ಡೇವಿಡ್ ವಿಶೇಷ ದಾಖಲೆ ನಿರ್ಮಿಸಲಿದ್ದಾರೆ. ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ಸಿಂಗಾಪುರ್‌ನ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟರ್ ಆಗಿ ಡೇವಿಡ್ ಗುರುತಿಸಿಕೊಳ್ಳಲಿದ್ದಾರೆ. ಅದೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ಡೇವಿಡ್ ಆಡಲಿದ್ದಾರೆ ಅನ್ನೋದು ವಿಶೇಷ. ಸ್ಫೋಟಕ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದ ಡೇವಿಡ್, ಆರ್‌ಸಿಬಿಯಲ್ಲಿ ಹೇಗೆ ಆಡಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

ನೀರಜ್ ಚೋಪ್ರಾ ಮುಂದೆ ಆರ್‌ಜೆ ಮಲಿಷ್ಕಾ ಡ್ಯಾನ್ಸ್: ಭಾರೀ ವಿವಾದ!ನೀರಜ್ ಚೋಪ್ರಾ ಮುಂದೆ ಆರ್‌ಜೆ ಮಲಿಷ್ಕಾ ಡ್ಯಾನ್ಸ್: ಭಾರೀ ವಿವಾದ!

ಟಿಮ್ ಡೇವಿಡ್ ಸದ್ಯ ಸಿಂಗಾಪುರ್ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ. 25ರ ಹರೆಯದ ಡೇವಿಡ್, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ ಫಿನ್ ಅಲೆನ್ ಬದಲಾಗಿ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಅದರಲ್ಲೂ ಆರ್‌ಸಿಬಿ ತಂಡ ಸೇರಿಕೊಂಡಿರುವುದರಿಂದ ಟಿಮ್ ಈಗ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ.

ಟಿಮ್ ಡೇವಿಡ್ ಹೆಸರಿನಲ್ಲಿ ಉತ್ತಮ ರನ್ ದಾಖಲೆ
ಒಟ್ಟು 11 ಟಿ20ಐ ಪಂದ್ಯಗಳನ್ನಾಡಿರುವ ಬ್ಯಾಟಿಂಗ್‌ ಆಲ್ ರೌಂಡರ್ ಡೇವಿಡ್, 11 ಟಿ20ಐ ಪಂದ್ಯಗಳಲ್ಲಿ 47.67ರ ಸರಾಸರಿಯಲ್ಲಿ 429 ರನ್ ಗಳಿಸಿದ್ದಾರೆ. 157.72 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 92 ಅತ್ಯಧಿಕ ರನ್ ಗಳಿಸಿರುವ ಟಿಮ್, 3 ಅರ್ಧ ಶತಕಗಳನ್ನೂ ಬಾರಿಸಿದ್ದಾರೆ. ಒಟ್ಟಾರೆಯಾಗಿ 49 ಟಿ20 ಪಂದ್ಯಗಳನ್ನಾಡಿರುವ ಟಿಮ್, 155 ಸ್ಟ್ರೈಕ್‌ ರೇಟ್‌ನಂತೆ 1171 ರನ್ ಗಳಿಸಿದ್ದಾರೆ. ಬಿಗ್‌ಬ್ಯಾಷ್ ಲೀಗ್‌ (ಬಿಬಿಎಲ್) ಮತ್ತು ಪಾಕಿಸ್ತಾನ್ ಸೂಪರ್ ಲೀಗ್‌ (ಪಿಎಸ್‌ಎಲ್)ನಲ್ಲೂ ಟಿಮ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಲಿಸ್ಟ್‌ ಎ ಪಂದ್ಯವೊಂದರಲ್ಲಿ ಟಿಮ್ 140 ರನ್ ವೈಯಕ್ತಿಕ ಅತ್ಯಧಿಕ ರನ್ ದಾಖಲೆ ಹೊಂದಿದ್ದಾರೆ. ವೆಸ್ಟರ್ನ್ ಆಸ್ಟ್ರೇಲಿಯಾ XI, ಪರ್ತ್ ಸ್ಕಾರ್ಚರ್ಸ್, ಸಿಂಗಾಪುರ್, ಹೋಬರ್ಟ್ ಹರಿಕೇನ್ಸ್, ಲಾಹೋರ್ ಕಲಂದರ್ಸ್, ಸರ್ರೆ, ಸೇಂಟ್ ಲೂಸಿಯಾ ಕಿಂಗ್ಸ್, ಸೌತ್ ಬ್ರೇವ್ ಪರ ಆಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದ್ವಿತೀಯ ಹಂತದ ಐಪಿಎಲ್‌ಗೆ ತಂಡದಲ್ಲಿ ಒಂದಿಷ್ಟು ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿರುವುದರಿಂದ ಯುಎಇಯಲ್ಲಿ ಆರ್‌ಸಿಬಿ ಪ್ರದರ್ಶನದತ್ತ ಅಭಿಮಾನಿಗಳ ಚಿತ್ತವಿದೆ.

ಐಪಿಎಲ್ 2021 ದ್ವಿತೀಯ ಹಂತ: ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಆಡಲ್ಲಐಪಿಎಲ್ 2021 ದ್ವಿತೀಯ ಹಂತ: ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಆಡಲ್ಲ

ಐಪಿಎಲ್ ದ್ವಿತೀಯ ಹಂತಕ್ಕೆ ಆರ್‌ಸಿಬಿಯಲ್ಲಿ ಪ್ಲೇಯರ್ಸ್ ಕೂಡ ಬದಲಾವಣೆ
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್‌ 19ರಿಂದ ನಡೆಯಲಿರುವ ಐಪಿಎಲ್ 2021ರ ದ್ವಿತೀಯ ಹಂತದ ಪಂದ್ಯಗಳ ವೇಳೆ ಆರ್‌ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆಗಳು ಕಾಣ ಸಿಗಲಿವೆ. ಒಂದು ತಂಡದ ಮುಖ್ಯ ಕೋಚ್ ಆಗಿ ಸೈಮನ್ ಕಟಿಚ್ ಬದಲು ಮೈಕ್ ಹೆಸನ್ ಆರಿಸಲ್ಪಟ್ಟರೆ, ಆಟಗಾರರು ಒಂದಿಷ್ಟು ಮಂದಿ ಬದಲಾಗಿದ್ದಾರೆ. ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಆರ್‌ಸಿಬಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಜಂಪಾ ಬದಲು ಶ್ರೀಲಂಕಾದ ಸ್ಪಿನ್ನರ್, ಆಲ್ ರೌಂಡರ್ ವನಿಂದು ಹಸರಂಗ ಆಡಲಿದ್ದಾರೆ. ಆಸೀಸ್ ಮತ್ತೊಬ್ಬ ಬೌಲರ್ ಕೇನ್ ರಿಚರ್ಡ್ಸನ್ ಬದಲು ಶ್ರೀಲಂಕಾದ ದುಶ್ಮಂತ ಚಮೀರ ಆಡಲಿದ್ದಾರೆ. ಇನ್ನು ನ್ಯೂಜಿಲೆಂಡ್‌ನ ವಿಕೆಟ್ ಕೀಪರ್ ಫಿನ್ ಅಲೆನ್ ಬದಲಿಗೆ ಸಿಂಗಾಪುರದ ಕ್ರಿಕೆಟರ್ ಟಿಮ್ ಡೇವಿಡ್ ಕಣಕ್ಕಿಳಿಯಲಿದ್ದಾರೆ. ಆರ್‌ಸಿಬಿ ಈ ವರ್ಷ ಉತ್ತಮ ಫಾರ್ಮ್‌ನಲ್ಲಿದ್ದು, ಬದಲಾವಣೆಗೆ ತಕ್ಕಂತೆ ಉತ್ತಮ ಪ್ರದರ್ಶನವೂ ನೀಡಿದರೆ ಚೊಚ್ಚಲ ಬಾರಿಗೆ ಕಪ್‌ ಗೆಲ್ಲಲು ಅವಕಾಶಗಳಿವೆ.

ಐಪಿಎಲ್ ದ್ವಿತೀಯ ಪಂದ್ಯಗಳು ಶುರು ಯಾವಾಗ?
ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್‌ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಆರ್‌ಸಿಬಿಗೆ ಸೆಪ್ಟೆಂಬರ್‌ 20ರಂದು ಮೊದಲ ಪಂದ್ಯವಿದ್ದು, ಆವತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ.

Story first published: Sunday, August 22, 2021, 2:08 [IST]
Other articles published on Aug 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X