ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ಫೈನಲ್‌ ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥೀ, ಕಾರಣ ಕೇಳಿದ್ರೆ ಮನ ಕರಗುತ್ತೆ!

Tim Southee is auctioning his jersey to help a 8 years girl who is battling cancer
ಮಗುವಿಗಾಗಿ ತನ್ನ ಇಷ್ಟದ ಜೆರ್ಸಿಯನ್ನೇ ಹಾರಾಜಿಗಿಟ್ಟ ಟಿಮ್ ಸೌಥಿ | Oneindia Kannada

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರಮುಖ ವೇಗಿ ಟಿಮ್ ಸೌಥೀ ತಾನು ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿ ಹರಾಜಿಗಿಟ್ಟಿದ್ದಾರೆ. ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆದಿದ್ದ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಸೌಥೀ ಈ ಜೆರ್ಸಿ ಧರಿಸಿದ್ದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 8 ವಿಕೆಟ್‌ಗಳ ಸುಲಭ ಜಯ ಗಳಿಸಿತ್ತು.

ಅಭಿಮಾನಿಯ ಪ್ರಶ್ನೆಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಡೇವಿಡ್ ವಾರ್ನರ್ಅಭಿಮಾನಿಯ ಪ್ರಶ್ನೆಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಡೇವಿಡ್ ವಾರ್ನರ್

32ರ ಹರೆಯದ ಬಲಗೈ ಮಧ್ಯಮ ವೇಗಿ ಸೌಥೀ ಹರಾಜಿಗಿಟ್ಟಿರುವ ಟೆಸ್ಟ್‌ ಜೆರ್ಸಿ ವಿಶೇಷತೆಯಿಂದ ಕೂಡಿದೆ. ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕಾಗಿ ಹೆಸರಿಸಲ್ಪಟ್ಟಿದ್ದ ನ್ಯೂಜಿಲೆಂಡ್‌ನ 15 ಪ್ರಮುಖ ಆಟಗಾರರ ಸಹಿಗಳು ಈ ಜೆರ್ಸಿಯಲ್ಲಿದೆ.

ವಿಶ್ವ ಶ್ರೇಷ್ಠ ವೇಗಿಗಳಲ್ಲಿ ಸೌಥೀ

ವಿಶ್ವ ಶ್ರೇಷ್ಠ ವೇಗಿಗಳಲ್ಲಿ ಸೌಥೀ

WTC ಫೈನಲ್‌ನಲ್ಲಿ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ನ್ಯೂಜಿಲೆಂಡ್‌ ಪ್ರಮುಖ 4 ವೇಗಿಗಳಲ್ಲಿ ಸೌಥೀ ಕೂಡ ಒಬ್ಬರಾಗಿದ್ದರು. ಆ ನಾಲ್ಕು ವೇಗಿಗಳೆಂದರೆ ಕೈಲ್ ಜೇಮಿಸನ್, ಟ್ರೆಂಟ್ ಬೌಲ್ಟ್, ನೀಲ್‌ ವ್ಯಾಗ್ನರ್ ಮತ್ತು ಟಿಮ್ ಸೌಥೀ. ಬೌಲ್ಟ್, ಜೇಮಿಸನ್, ಸೌಥೀ, ವ್ಯಾಗ್ನರ್ ವಿಶ್ವದ ಅತ್ಯುತ್ತಮ ಬೌಲರ್‌ಗಳು ಎಂದು ಕಿವೀಸ್ ಬೌಲಿಂಗ್‌ ಕೋಚ್ ಶೇನ್ ಜುರ್ಗೆನ್ಸನ್ ಕೂಡ ಹೇಳಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಟೆಸ್ಟ್‌ನಲ್ಲಿ ಸೌಥೀ 314 ವಿಕೆಟ್ (28.22 ಸರಾಸರಿ), ಬೌಲ್ಟ್ 292 (27.67), ವ್ಯಾಗ್ನರ್ 229 (26.40), ಜೇಮಿಸನ್ 46 (14.17) ವಿಕೆಟ್‌ ಪಡೆದಿದ್ದಾರೆ.

ಜೆರ್ಸಿ ಹರಾಜಿಗಿಡಲು ಕಾರಣ?

WTC ಫೈನಲ್‌ ಪಂದ್ಯದಲ್ಲಿ ಆಡುವಾಗ ಟಿಮ್ ಸೌಥೀ ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಟ್ಟಿದ್ದಾರೆ. ಇದರ ಹಿಂದೊಂದು ಒಳ್ಳೆಯ ಉದ್ದೇಶವಿದೆ. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ 8 ವರ್ಷದ ಹೆಣ್ಣು ಮಗುವಿನ ಚಿಕಿತ್ಸೆಗೆ ಹಣ ಸಂಗ್ರಹಿಸಲು ಸೌಥೀ ಜೆರ್ಸಿ ಹರಾಜಿಗಿಟ್ಟಿದ್ದಾರೆ. ಸೌಥೀಯ ಇಂಥ ಮಾನವೀಯ ನಡೆ ಕ್ರಿಕೆಟ್ ಪ್ರೇಮಿಗಳ ಮನಕೆ ತಾಗಿದೆ. ಎಲ್ಲೆಡೆ ಸೌಥೀ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಜೆರ್ಸಿಯಲ್ಲಿ 15 ಮಂದಿಯ ಹೆಸರು

ಜೆರ್ಸಿಯಲ್ಲಿ 15 ಮಂದಿಯ ಹೆಸರು

ಮಗುವಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಸೌಥೀ ಹರಾಜಿಗಿಟ್ಟಿರುವ ಜೆರ್ಸಿಯಲ್ಲಿ WTC ಫೈನಲ್‌ ಪಂದ್ಯಕ್ಕಾಗಿ ನ್ಯೂಜಿಲೆಂಡ್‌ ಹೆಸರಿಸಿದ್ದ 15 ಆಟಗಾರರ ಸಹಿಗಳಿವೆ. ಆ ಆಟಗಾರರೆಂದರೆ ಟಾಮ್ ಲ್ಯಾಥಮ್, ಡೆವೋನ್ ಕಾನ್ವೇ, ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ನೀಲ್ ವ್ಯಾಗ್ನರ್, ಟಿಮ್ ಸೌಥೀ, ಟ್ರೆಂಟ್ ಬೌಲ್ಟ್, ಅಜಾಝ್ ಪಟೇಲ್, ವಿಲ್ ಯಂಗ್, ಟಾಮ್ ಬ್ಲಂಡೆಲ್, ಮ್ಯಾಟ್‌ ಹೆನ್ರಿ.

Story first published: Tuesday, June 29, 2021, 11:07 [IST]
Other articles published on Jun 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X