ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಕೊಹ್ಲಿ ಮಾತು ಕೇಳದೇ ಜೆಮಿಸನ್ ಒಳ್ಳೆಯ ಕೆಲಸ ಮಾಡಿದ್ದಾನೆ; ಟಿಮ್ ಸೌಥಿ ಪ್ರಶಂಸೆ

Tim Southee praises Kyle Jamieson for politely declining Virat Kohli’s request
Virat Kohli ಆಸೆಯನ್ನು ನಿರಾಕರಿಸಿದ Jamieson ನಿಜಕ್ಕೂ ಬುದ್ಧಿವಂತ | Oneindia Kannada

ಜೂನ್ 18ರಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಇಂಗ್ಲೆಂಡ್‌ನ ಸೌತಂಪ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಾದ ಬಳಿಕ ಇಂಗ್ಲೆಂಡ್ ನೆಲದಲ್ಲಿಯೇ ಆಗಸ್ಟ್ 4ರಿಂದ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

ಆ ಪಂದ್ಯದಿಂದ ನಾನು ಕೆಟ್ಟವನಾಗಿ ತಂಡದಿಂದ ಹೊರಬಿದ್ದೆ, ಎಷ್ಟೋ ರಾತ್ರಿ ನಿದ್ರೆ ಮಾಡಿರಲಿಲ್ಲ: ರವೀಂದ್ರ ಜಡೇಜಾ

ಈ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್‌ ಎರಡೂ ತಂಡಗಳಿಗೂ ಸಹ ಬಹುಮುಖ್ಯವಾಗಿದೆ, ಎರಡೂ ತಂಡಗಳು ಸಹ ಬಲಿಷ್ಠ ಆಟಗಾರರಿಂದ ಕೂಡಿದ್ದು ದೊಡ್ಡ ಮಟ್ಟದ ಕಾದಾಟ ಏರ್ಪಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಪಂದ್ಯಕ್ಕೆ ಮೊದಲ ಗ್ರೇಡ್ ಡ್ಯೂಕ್ ಬಾಲ್ ಬಳಕೆಯಾಗಲಿದ್ದು ಈ ವಿಷಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿಯೇ ಚರ್ಚೆಗೀಡಾಗುತ್ತಿದೆ.

ಯಾರಾಗ್ತಾರೆ ಧೋನಿ ಬಳಿಕ ಚೆನ್ನೈ ತಂಡದ ನಾಯಕ? ಈ 5 ಆಟಗಾರರ ಮೇಲೆ ಸಿಎಸ್‌ಕೆ ಕಣ್ಣು!

ಇದೀಗ ನ್ಯೂಜಿಲೆಂಡ್ ತಂಡದ ವೇಗಿ ಟಿಮ್ ಸೌಥಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಮಾತನಾಡಿದ್ದು ಡ್ಯೂಕ್ ಬಾಲ್ ಕುರಿತಾಗಿಯೂ ಸಹ ಚರ್ಚಿಸಿದ್ದಾರೆ. ಹೀಗೆ ಡ್ಯೂಕ್ ಬಾಲ್ ಕುರಿತು ಚರ್ಚಿಸುವಾಗ ಈ ಬಾರಿಯ ಐಪಿಎಲ್ ಟೂರ್ನಿಯ ವೇಳೆ ವಿರಾಟ್ ಕೊಹ್ಲಿ ಮತ್ತು ಕೈಲ್ ಜೆಮಿಸನ್ ನಡುವೆ ನಡೆದಿದ್ದ ಡ್ಯೂಕ್ ಬಾಲ್ ಪ್ರಸಂಗದ ಕುರಿತು ಟಿಮ್ ಸೌಥಿ ಮಾತನಾಡಿದ್ದಾರೆ. ಹೌದು ಆರ್‌ಸಿಬಿ ನೆಟ್ ಪ್ರಾಕ್ಟೀಸ್ ವೇಳೆ ಕೈಲ್ ಜೆಮಿಸನ್ ಹಾಗೂ ವಿರಾಟ್ ಕೊಹ್ಲಿ ನಡುವೆ ನಡೆದಿದ್ದ ಡ್ಯೂಕ್ ಬಾಲ್ ಪ್ರಸಂಗದ ಕುರಿತು ಟಿಮ್ ಸೌಥಿ ಈ ಕೆಳಕಂಡ ಅಂಶಗಳನ್ನು ಚರ್ಚಿಸಿದ್ದಾರೆ.

ಡ್ಯೂಕ್ ಬಾಲ್ ಹಾಕು ಎಂದಿದ್ದ ವಿರಾಟ್ ಕೊಹ್ಲಿ, ನಿರಾಕರಿಸಿದ್ದ ಜೆಮಿಸನ್

ಡ್ಯೂಕ್ ಬಾಲ್ ಹಾಕು ಎಂದಿದ್ದ ವಿರಾಟ್ ಕೊಹ್ಲಿ, ನಿರಾಕರಿಸಿದ್ದ ಜೆಮಿಸನ್

ವಿರಾಟ್ ಕೊಹ್ಲಿ ಮತ್ತು ಕೈಲ್ ಜೆಮಿಸನ್ ಇಬ್ಬರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾಗಿದ್ದ ಕಾರಣ ನೆಟ್ ಪ್ರಾಕ್ಟೀಸ್ ವೇಳೆ ವಿರಾಟ್ ಕೊಹ್ಲಿ ಡ್ಯೂಕ್ ಬಾಲ್ ಎಸೆಯುವಂತೆ ಕೈಲ್ ಜೆಮಿಸನ್ ಬಳಿ ಕೇಳಿಕೊಂಡಿದ್ದರು, ಆದರೆ ಕೊಹ್ಲಿಯ ಮನವಿಯನ್ನು ತಿರಸ್ಕರಿಸಿದ್ದ ಜೆಮಿಸನ್ ಯಾವುದೇ ಕಾರಣಕ್ಕೂ ಡ್ಯೂಕ್ ಬಾಲ್ ಎಸೆತವನ್ನು ಹಾಕುವುದಿಲ್ಲ ಎಂದಿದ್ದರು.

ಕೈಲ್ ಜೆಮಿಸನ್ ಒಳ್ಳೆಯ ಕೆಲಸವನ್ನು ಮಾಡಿದ್ದಾನೆ

ಕೈಲ್ ಜೆಮಿಸನ್ ಒಳ್ಳೆಯ ಕೆಲಸವನ್ನು ಮಾಡಿದ್ದಾನೆ

ವಿರಾಟ್ ಕೊಹ್ಲಿ ಐಪಿಎಲ್ ವೇಳೆ ಡ್ಯೂಕ್ ಬಾಲ್ ಎಸೆತವನ್ನು ಕೇಳಿದಾಗ ಜೆಮಿಸನ್ ನಿರಾಕರಿಸಿ ಒಳ್ಳೆಯ ಕೆಲಸವನ್ನು ಮಾಡಿದ್ದಾನೆ. ಕೊಹ್ಲಿ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನು ತಲೆಯಲ್ಲಿಟ್ಟುಕೊಂಡು ಡ್ಯೂಕ್ ಬಾಲ್ ಎಸೆತವನ್ನು ಕೇಳಿದ್ದರು, ಆದರೆ ಜೆಮಿಸನ್ ಕೊಹ್ಲಿ ಮನವಿಯ ಒಳಾರ್ಥವನ್ನು ಅರಿತುಕೊಂಡು ಡ್ಯೂಕ್ ಬಾಲ್ ಎಸೆಯದೆ ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದಾನೆ ಎಂದು ಶ್ಲಾಘಿಸಿದ್ದಾರೆ.

ಜೆಮಿಸನ್ ಡ್ಯೂಕ್ ಬಾಲ್ ಎಸೆಯಲು ನಿರಾಕರಿಸಿದ್ದ ಕಾರಣ

ಜೆಮಿಸನ್ ಡ್ಯೂಕ್ ಬಾಲ್ ಎಸೆಯಲು ನಿರಾಕರಿಸಿದ್ದ ಕಾರಣ

ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಡ್ಯೂಕ್ ಬಾಲ್ ಬಳಸಲಾಗುತ್ತದೆ. ಹೀಗಾಗಿ ಐಪಿಎಲ್ ಅಭ್ಯಾಸದ ವೇಳೆ ಜೆಮಿಸನ್ ಡ್ಯೂಕ್ ಬಾಲ್ ಎಸೆದಿದ್ದರೆ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ತಂಡದ ಆಟಗಾರನಾಗಿರುವ ಕೈಲ್ ಜೆಮಿಸನ್ ಯಾವ ರೀತಿ ಡ್ಯೂಕ್ ಬಾಲ್ ಎಸೆಯಲಿದ್ದಾರೆ ಎಂಬುದನ್ನು ಅರಿತುಕೊಳ್ಳುತ್ತಿದ್ದರು. ಹೀಗಾಗಿ ಜೆಮಿಸನ್ ಡ್ಯೂಕ್ ಬಾಲ್ ಎಸೆತಕ್ಕೆ ಒಲ್ಲೆ ಎಂದಿದ್ದರು.

Story first published: Monday, May 31, 2021, 21:42 [IST]
Other articles published on May 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X