ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವದ ಜನರಿಗೆ ಸ್ಫೂರ್ತಿದಾಯಕ ಸಂದೇಶ ಸಾರಿದ ಶೋಯೆಬ್ ಅಖ್ತರ್

Time To Be Human, Not Hindu, Muslim: Shoaib Akhtar On Coronavirus

ಕರಾಚಿ, ಮಾರ್ಚ್ 23: ಕೊರನಾವೈರಸ್ ಸೋಂಕಿಗೆ ಇಡೀ ವಿಶ್ವವೇ ಆತಂಕಕ್ಕೀಡಾಗಿದೆ. ವಿಶ್ವದಲ್ಲಿ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇಂಥ ಸಮಯದಲ್ಲಿ ಜನರು ತಮ್ಮ ತಮ್ಮ ಧರ್ಮ, ಅಂತಸ್ತು ಬದಿಗಿಟ್ಟು ಒಬ್ಬರಿಗೊಬ್ಬರು ಸಹಾಯ ನೀಡಬೇಕು ಎಂದು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ.

ವೀವ್ ರಿಚರ್ಡ್ಸ್ ಟು ವಿರಾಟ್ ಕೊಹ್ಲಿ: ಐಸಿಸಿ ಬೆಸ್ಟ್ 'ಪುಲ್‌ಶಾಟ್' ಪ್ರಶ್ನೆಗೆ ರೋಹಿತ್ ಅಸಮಾಧಾನವೀವ್ ರಿಚರ್ಡ್ಸ್ ಟು ವಿರಾಟ್ ಕೊಹ್ಲಿ: ಐಸಿಸಿ ಬೆಸ್ಟ್ 'ಪುಲ್‌ಶಾಟ್' ಪ್ರಶ್ನೆಗೆ ರೋಹಿತ್ ಅಸಮಾಧಾನ

ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಶೋಯೆಬ್ ಅಖ್ತರ್, ವಿಶ್ವದ ಜನರೆಲ್ಲ ಸೇರಿ ಒಂದು ಜಾಗತಿಕ ಶಕ್ತಿಯಾಗಿ ಕೊರೊನಾವೈರಸ್ ವಿರುದ್ಧ ಹೋರಾಡಬೇಕು. ವೈದ್ಯಾಧಿಕಾರಿಗಳು ನೀಡಿರುವ ಸೂಚನೆಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು ಎಂದು ಜನತ್ತಿನ ಎಲ್ಲಾ ಮಂದಿಯಲ್ಲಿ ವಿನಂತಿಸಿಕೊಂಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ದಾಖಲೆಯ 5 ವಿದೇಶಿ ಆಟಗಾರರಿವರುಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ದಾಖಲೆಯ 5 ವಿದೇಶಿ ಆಟಗಾರರಿವರು

'ವಿಶ್ವದಲ್ಲಿರುವ ನನ್ನೆಲ್ಲಾ ಅಭಿಮಾನಿಗಳೆ, ಕೊರೊನಾವೈರಸ್ ಒಂದು ಜಾಗತಿಕ ಬಿಕ್ಕಟ್ಟು. ಹೀಗಾಗಿ ನಾವೆಲ್ಲರೂ ಒಂದು ಜಾಗತಿಕ ಶಕ್ತಿಯಾಗಿ ಕೆಲಸ ಮಾಡಬೇಕು. ಇಂಥ ಸಮಯದಲ್ಲಿ ನಾವೆಲ್ಲರೂ ಮನುಷ್ಯರೇ ಹೊರತು; ಹಿಂದೂ, ಮುಸ್ಲಿಮ್ ಎಂದು ಪ್ರತ್ಯೇಕಿಸಿಕೊಳ್ಳುವುದು ಸಲ್ಲ,' ಎಂದು ರಾವಲ್ಪಿಂಡಿ ಎಕ್ಸ್‌ಪ್ರೆಸ್ ಅಖ್ತರ್ ಹೇಳಿದ್ದಾರೆ.

ಕೊರೊನಾ ವೈರಸ್: ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೂ 'ಕನ್ನಿಕಾ' ಕಂಟಕಕೊರೊನಾ ವೈರಸ್: ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೂ 'ಕನ್ನಿಕಾ' ಕಂಟಕ

'ನೀವು ವಸ್ತುಗಳನ್ನು ಸಂಗ್ರಹಿಸುತ್ತಿದ್ದರೆ, ದಯವಿಟ್ಟು ದೈನಂದಿನ ಕೂಲಿ ಕಾರ್ಮಿಕರ ಬಗ್ಗೆ ಯೋಚಿಸಿ. ಮಳಿಗೆಗಳು ಖಾಲಿಯಾಗಿವೆ. ಮೂರು ತಿಂಗಳ ನಂತರ ನೀವು ಬದುಕುವಿರಿ ಎಂಬ ಭರವಸೆ ಏನು? ದೈನಂದಿನ ಕೂಲಿ ಕಾರ್ಮಿಕರ ಬಗ್ಗೆ ಯೋಚಿಸಿ, ಅವನು ತನ್ನ ಕುಟುಂಬವನ್ನು ಹೇಗೆ ಪೋಷಿಸುತ್ತಾನೆ? ಜನರ ಬಗ್ಗೆ ಯೋಚಿಸಿ, ಮನುಷ್ಯನಾಗಲು ಇದು ಸಮಯವೇ ಹೊರತು ಹಿಂದೂ ಆಗಿ ಅಲ್ಲ, ಮುಸ್ಲಿಂ ಆಗಿ ಅಲ್ಲ,' ಎಂದು ಶೋಯೆಬ್ ಜಗತ್ತಿಗೆ ಸೌಹಾರ್ದತೆ ಸಾರಿದ್ದಾರೆ.

Story first published: Monday, March 23, 2020, 12:19 [IST]
Other articles published on Mar 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X