ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ಈ ಐಪಿಎಲ್‌ನ ಅನ್ವೇಷಣೆ ಎಂದು ಯುವ ವೇಗಿಯನ್ನು ಕೊಂಡಾಡಿದ ವಾರ್ನರ್

tirle: IPL 2020: ‘He’s been outstanding,’ David Warner on T Natarajan

ಐಪಿಎಲ್ ಸಾಕಷ್ಟು ಯುವ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದೆ. ಪ್ರತಿ ವರ್ಷವೂ ಯುವ ಪ್ರತಿಭೆಗಳು ಐಪಿಎಲ್‌ನಲ್ಲಿ ಮಿಂಚಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಈ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಯುವ ವೇಗಿಯನ್ನು ಈ ಆವೃತ್ತಿಯ ಕೊಡುಗೆ ಆತ ಎಂದು ಪ್ರಶಂಸಿಸಿದ್ದಾರೆ.

ಸನ್‌ರೈಸರ್ಸ್ ತಮಡದ ನಾಯಕ ವಾರ್ನರ್ ಹೀಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದು ಹೈದರಾಬಾದ್‌ ತಂಡದ ಪರವಾಗಿ ಅದ್ಭುತ ಬೌಲಿಂಗ್ ದಾಳಿಯ ಮೂಲಕ ಅದರಲ್ಲೂ ಮಾರಕ ಯಾರ್ಕರ್‌ಗಳ ಮೂಲಕ ಹುಬ್ಬೇರಿಸುವಂತೆ ಮಾಡಿದ ಟಿ ನಟರಾಜನ್ ಬಗ್ಗೆ. ನಟರಾಜನ್ ಈ ಬಾರಿಯ ಐಪಿಎಲ್‌ನ ಕೊಡುಗೆ ಎಂದಿದ್ದಾರೆ ವಾರ್ನರ್.

ಐಪಿಎಲ್: ಅತಿ ಹೆಚ್ಚು ರನ್ ಗಳಿಕೆಯಲ್ಲಿ ರೋಹಿತ್ ಹಿಂದಿಕ್ಕಿದ ಧವನ್ಐಪಿಎಲ್: ಅತಿ ಹೆಚ್ಚು ರನ್ ಗಳಿಕೆಯಲ್ಲಿ ರೋಹಿತ್ ಹಿಂದಿಕ್ಕಿದ ಧವನ್

ನಟರಾಜನ್ ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ಯಾರ್ಕರ್ ಎಸೆತಗಳನ್ನು ಎಸೆದ ಬೌಲರ್ ಎನಿಸಿದ್ದಾರೆ. 160ಕ್ಕೂ ಹೆಚ್ಚಿನ ಯಾರ್ಕರ್ ಎಸೆತಗಳನ್ನು ನಟರಾಜನ್ ಎಸೆದಿದ್ದಾರೆ. ಅದರಲ್ಲೂ ಡೆತ್ ಓವರ್‌ಗಳಲ್ಲಿ ಹಾಗೂ ಒತ್ತಡದ ಸಂದರ್ದಲ್ಲಿ ನಟರಾಜನ್ ಅವರ ನಿಖರ ಬೌಲಿಂಗ್ ದಾಳಿ ಹೈದರಾಬಾದ್‌ಗೆ ಸಾಕಷ್ಟು ಸಹಕಾರವನ್ನು ನೀಡಿದೆ.

ಪಂದ್ಯದ ಮುಕ್ತಾಯದ ಬಳಿಕ ಸಹ ಆಟಗಾರರ ಬಗ್ಗೆ ವಾರ್ನರ್ ಮೆಚ್ಚುಗೆ ಸೂಚಿಸುತ್ತಾ ಬಂದರು. ಈ ಸಂದರ್ಭದಲ್ಲಿ "ನಟರಾಜನ್ ಈ ಆವೃತ್ತಿಯ ಅನ್ವೇಶಣೆಯಾಗಿದ್ದಾರೆ. ಆತ ಓರ್ವ ಅದ್ಭುತ ಪ್ರದರ್ಶನ ನೀಡುವ ವೇಗಿಯಾಗಿದ್ದಾರೆ. ರಶೀದ್ ಖಾನ್ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಮನೀಶ್ ಪಾಂಡೆ ಉತ್ತಮ ಕೊಡುಗೆ ನೀಡಿದರು. ಹೀಗಾಗಿ ಇದೊಂದು ಶ್ರೇಷ್ಠವಾದ ಟೂರ್ನಿಯಾಗಿದೆ" ಎಂದು ವಾರ್ನರ್ ಬಣ್ಣಿಸಿದ್ದಾರೆ.

ದಾಖಲೆ: ಮೊದಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದ ಡೆಲ್ಲಿದಾಖಲೆ: ಮೊದಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದ ಡೆಲ್ಲಿ

"ಅಂಗಳದಲ್ಲಿ ನಮ್ಮ ನಡವಳಿಕೆ ಸಾಕಷ್ಟು ಪ್ರಮುಖವಾಗಿರುತ್ತದೆ. ಕ್ಯಾಚ್‌ಗಳನ್ನು ಹಿಡಿಯಲು ಸಾಧ್ಯವಾಗದಿದ್ದರೆ ನೀವು ಪಂದ್ಯ ಗೆಲ್ಲುವುದು ಸಾಧ್ಯವಾಗಲಾರದು. ಈ ವಿಭಾಗದಲ್ಲಿ ನಾವು ಮುಂದಿನ ಬಾರಿ ಇನ್ನಷ್ಟು ಉತ್ತಮವಾಗಬೇಕಿದೆ. ಇದೇ ನಮ್ಮನ್ನು ಟೂರ್ನಿಯಲ್ಲಿ ಕುಸಿತ ಕಾಣಲು ಕಾರಣವಾಯಿತು" ಎಂದು ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಆಟಗಾರ ಹೇಳಿದ್ದಾರೆ.

Story first published: Monday, November 9, 2020, 10:48 [IST]
Other articles published on Nov 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X