ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಲೋಲನ್ ರಂಗರಾಜನ್ ಹೆಗಲಿಗೆ ಸಿಪಿಎಲ್ ಸಹಾಯಕ ಕೋಚ್ ಜವಾಬ್ದಾರಿ

TN allrounder Malolan Rangarajan to remotely assist in CPL

ನವದೆಹಲಿ, ಆಗಸ್ಟ್ 8: ತಮಿಳುನಾಡು ತಂಡದ ಮಾಜಿ ಆಲ್ ರೌಂಡರ್ ಮಲೋಲನ್ ರಂಗರಾಜನ್ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್ ತಂಡವಾದ ನೆವಿಸ್ ಪ್ಯಾಟ್ರಿಯೋಟ್ಸ್ ತಂಡಕ್ಕೆ ಈ ಸೀಸನ್‌ನಲ್ಲಿ ಸಹಾಯಕ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. ಆದರೆ ರಂಗರಾಜನ್ ದೂರದಿಂದಲೇ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ಎಂಗೇಜ್ಮೆಂಟ್ ಫೋಟೋ ಹಂಚಿಕೊಂಡ ಸ್ಪಿನ್ನರ್ ಯುಜುವೇಂದ್ರ ಚಾಹಲ್ಎಂಗೇಜ್ಮೆಂಟ್ ಫೋಟೋ ಹಂಚಿಕೊಂಡ ಸ್ಪಿನ್ನರ್ ಯುಜುವೇಂದ್ರ ಚಾಹಲ್

'ಈ ಅವಕಾಶ ಲಭಿಸಿದ್ದಕ್ಕಾಗಿ ನಾನು ಖುಷಿಗೊಂಡಿದ್ದೇನೆ. ದುರದೃಷ್ಟಕರವಾಗಿ ನಾನು ಪ್ರಯಾಣ ನಿರ್ಬಂಧ ಕಾರಣದಿಂದಾಗಿ ಸಿಪಿಎಲ್‌ನಿಂದ ಹಿಂದೆ ಸರಿದಿದ್ದೇನೆ. ಆದರೆ ಕಾರ್ಯತಂತ್ರದ ಸಲಹೆಗಾರನಾಗಿ ನನ್ನ ಜವಾಬ್ದಾರಿ ಹೆಚ್ಚಿಸಿದ್ದಕ್ಕಾಗಿ ನಾನು ಪ್ಯಾಟ್ರಿಯೋಟ್ಸ್ ಮ್ಯಾನೇಜ್ಮೆಂಟ್‌ಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ,' ಎಂದು ರಂಗರಾಜನ್ ಹೇಳಿದ್ದಾರೆ.

ಹಿಂದು ಅನ್ನೋ ಕಾರಣಕ್ಕೆ ಪಿಸಿಬಿ ನನ್ನನ್ನು ಮೂಲೆಗುಂಪು ಮಾಡುತ್ತಿದೆ: ಕನೇರಿಯಾಹಿಂದು ಅನ್ನೋ ಕಾರಣಕ್ಕೆ ಪಿಸಿಬಿ ನನ್ನನ್ನು ಮೂಲೆಗುಂಪು ಮಾಡುತ್ತಿದೆ: ಕನೇರಿಯಾ

'ಸಿಪಿಎಲ್‌ನ ಈ ಸೀಸನ್ ಅವಧಿಯಲ್ಲಿ ತಂತ್ರಗಳ ಕಾರ್ಯತಂತ್ರಗಳಿಗೆ ಸಂಬಂಧಿಸಿದಂತೆ ನಾನು ತಂಡದ ಆಲೋಚನೆಗಳನ್ನು ಒರೆಗೆ ಹಚ್ಚುವ ಕಾರ್ಯ ನಿರ್ವಹಿಸುತ್ತೇನೆ,' ಎಂದು ಮಲೋಲನ್ ತಿಳಿಸಿದ್ದಾರೆ. ಸಿಪಿಎಲ್ ಮತ್ತೊಂದು ತಂಡ ಸೇಂಟ್ ಕೈಟ್ಸ್‌ಗೆ ವೆಸ್ಟ್ ಇಂಡೀಸ್ ಮಾಜಿ ವೇಗಿ ಕರ್ಟ್ನಿ ವಾಲ್ಷ್ ಅವರು ಸಹ ಕೋಚ್ ಆಗಿ ಹೆಸರಿಸಲ್ಪಟ್ಟಿದ್ದಾರೆ.

ಐಪಿಎಲ್ 2020: ನೀವು ತಿಳಿದುಕೊಳ್ಳಲೇ ಬೇಕಿರುವ ಐಪಿಎಲ್‌ನ 5 ಬ್ಯಾಟಿಂಗ್ ದಾಖಲೆಗಳುಐಪಿಎಲ್ 2020: ನೀವು ತಿಳಿದುಕೊಳ್ಳಲೇ ಬೇಕಿರುವ ಐಪಿಎಲ್‌ನ 5 ಬ್ಯಾಟಿಂಗ್ ದಾಖಲೆಗಳು

ಪ್ಯಾಟ್ರಿಯೋಟ್ಸ್ ತಂಡಕ್ಕೆ ಮುಖ್ಯ ಕೋಚ್‌ ಆಗಿದ್ದ ಆಸ್ಟ್ರೇಲಿಯಾ ಕೋಚ್ ಸೈಮನ್ ಹೆಲ್ಮೋಟ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿತ್ತು. ಹೀಗಾಗಿ ಹೆಲ್ಮೋಟ್ ಬದಲಿಗೆ ನ್ಯೂಜಿಲೆಂಡ್‌ನ ಮಾರ್ಕ್ ಒ'ಡೊನೆಲ್ ಅವರನ್ನು ಕರೆತರಲಾಗಿದೆ. ಸಿಪಿಎಲ್ ಟಿ20 ಟೂರ್ನಿ ಆಗಸ್ಟ್ 18ರಿಂದ ಸೆಪ್ಟೆಂಬರ್ 10ರ ವರೆಗೆ ನಡೆಯಲಿದೆ.

Story first published: Sunday, August 9, 2020, 9:30 [IST]
Other articles published on Aug 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X