ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭ್ರಷ್ಟಾಚಾರ ವಿರುದ್ಧ ಹೋರಾಡುವೆ: TNCA ಅಧ್ಯಕ್ಷೆ ರೂಪಾ ಗುರುನಾಥ್

TNCA will have zero tolerance towards corruption: New President Rupa Gurunath

ಚೆನ್ನೈ, ಸೆ.27: ಬಿಸಿಸಿಐ ಮಾಜಿ ಅಧ್ಯಕ್ಷ ಎನ್​​​ ಶ್ರಿನಿವಾಸನ್​​​​​ ಅವರ ಮಗಳು ರೂಪಾ ಗುರುನಾಥ್​ ತಮಿಳುನಾಡು ಕ್ರಿಕೆಟ್ ಸಂಸ್ಥೆ(TNCA)ಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ತಮಿಳುನಾಡು ಕ್ರಿಕೆಟ್​​ ಮಂಡಳಿ 87ನೇ ವಾರ್ಷಿಕ ಸಭೆಯಲ್ಲಿ ಈ ಸುದ್ದಿಯನ್ನು ಘೋಷಿಸಲಾಗಿದೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಬಿಸಿಸಿಐಯ ರಾಜ್ಯ ಕ್ರಿಕೆಟ್ ಮಂಡಳಿಯೊಂದಕ್ಕೆ ಮಹಿಳೆಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

2013ರ ಸ್ಪಾಟ್​​​ ಫಿಕ್ಸಿಂಗ್​​ ಹಗರಣದಲ್ಲಿ ಆರೋಪಿಯಾಗಿ, ಜೀವಾವಧಿ ನಿಷೇಧಕ್ಕೊಳಗಾದ ಚೆನ್ನೈ ಸೂಪರ್​ ಕಿಂಗ್​(ಸಿಎಸ್​ಕೆ) ಪ್ರಾಂಚೈಸಿಯ ಅಧಿಕಾರಿ ಗುರುನಾಥ್ ಮೇಯಪ್ಪನ್​​​​​​​​ ಅವರು ರೂಪಾ ಅವರ ಪತಿ.

ರಾಜ್ ಕುಂದ್ರಾ, ಮೇಯಪ್ಪನ್ ಗೆ ಕ್ರಿಕೆಟ್ ನಿಂದ ಆಜೀವ ನಿಷೇಧರಾಜ್ ಕುಂದ್ರಾ, ಮೇಯಪ್ಪನ್ ಗೆ ಕ್ರಿಕೆಟ್ ನಿಂದ ಆಜೀವ ನಿಷೇಧ

ಇಂಡಿಯಾ​ ಸಿಮೆಂಟ್ಸ್​​ ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಅವರು ಟಿಎನ್ ಸಿಎ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿಯಾಗಿದ್ದರು. ಹೀಗಾಗಿ ರೂಪಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಮಿಳುನಾಡು ಕ್ರಿಕೆಟ್ ಮಂಡಳಿ ಸಮಿತಿ:

* ಅಧ್ಯಕ್ಷೆ: ರೂಪಾ ಗುರುನಾಥ್ ಮೇಯಪ್ಪನ್

* ಉಪಾಧ್ಯಕ್ಷ: ಟಿ.ಜೆ.ಶ್ರೀನಿವಾಸ​ರಾಜು, ಡಾ. ಪಿ ಅಶೋಕ್​​​​​​​​​​​ ಸಿಗಮಣಿ

* ಕಾರ್ಯದರ್ಶಿ: ಆರ್​ ಎಸ್ ರಂಗಸ್ವಾಮಿ

* ಜಂಟಿ ಕಾರ್ಯದರ್ಶಿ: ಕೆ ಎಶಂಕರ್​​

* ಸಹಾಯಕ ಕಾರ್ಯದರ್ಶಿ: ​​​​​ವೆಂಕಟರಮಣನ್​​​

* ಖಜಾಂಚಿ: ಜೆ ಪಾರ್ಥಸಾರಥಿ

"ಟಿಎನ್ ಸಿಎಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಆಸ್ಪದ ಇರುವುದಿಲ್ಲ. ಯಾವುದೇ ದೂರು ಬಂದರೂ ಸೂಕ್ತರೀತಿಯಲ್ಲಿ ಸ್ಪಂದಿಸಿ ಪರಿಹಾರ ಕಂಡುಕೊಳ್ಳಲಾಗುವುದು" ಎಂದು ಅಧ್ಯಕ್ಷ ಸ್ಥಾನಕ್ಕೇರಿದ ಬಳಿಕ ರೂಪಾ ಪ್ರತಿಕ್ರಿಯಿಸಿದ್ದಾರೆ.

ಟಿಎನ್ ಸಿಎ ಹಾಗೂ ತಮಿಳುನಾಡು ಸರ್ಕಾರ ನಡುವಿನ ತಿಕ್ಕಾಟದಿಂದಾಗಿ ಎಂಎ ಚಿದಂಬರಂ ಸ್ಟೇಡಿಯಂನ ಐ, ಜೆ ಹಾಗೂ ಕೆ ಸ್ಟ್ಯಾಂಡ್ ಗಳು 2013ರಿಂದ ಬಂದ್ ಆಗಿವೆ. ಇದನ್ನು ಪ್ರೇಕ್ಷಕರಿಗೆ ಮುಕ್ತಗೂಳಿಸುವುದು ರೂಪಾ ಅವರ ಮುಂದಿರುವ ಮೊದಲ ಕೆಲಸವಾಗಿದೆ.

Story first published: Friday, September 27, 2019, 18:21 [IST]
Other articles published on Sep 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X