ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಚಿತ್ರ ಬೌಲಿಂಗ್‌ ಶೈಲಿಯೊಂದಿಗೆ ವಿಕೆಟ್‌ ಕೂಡ ಪಡೆದ ಅಶ್ವಿನ್‌: ವಿಡಿಯೊ

TNPL 2019: Ravi Ashwin unveils his mystery ball again, gets a wicket

ಚೆನ್ನೈ, ಜುಲೈ 23: ಭಾರತ ಟೆಸ್ಟ್‌ ತಂಡದ ಅನುಭವಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ತಮ್ಮ ಬೌಲಿಂಗ್‌ ಶೈಲಿಯಲ್ಲಿ ಆಗಿಂದಾಗೆ ಬದಲಾವಣೆ ತಂದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಪ್ರಸಕ್ತ ತಮಿಳುನಾಡು ಪ್ರೀಮಿಯರ್‌ ಲೀಗ್‌ನಲ್ಲೂ ಅಶ್ವಿನ್‌ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಟಿಎನ್‌ಪಿಎಲ್‌ ಟಿ20 ಟೂರ್ನಿಯ ಪಂದ್ಯದಲ್ಲಿ ಅಶ್ವಿನ್‌ ಮೊದಲ ಬಾರಿ ವಿಚಿತ್ರ ಬೌಲಿಂಗ್‌ ಶೈಲಿಯನ್ನು ಬಳಕೆಗೆ ತಂದು ಸುದ್ದಿಯಾಗಿದ್ದರು. ಇದೀಗ ಅದೇ ಶೈಲಿಯ ಬೌಲಿಂಗ್‌ ಮೂಲಕ ವಿಕೆಟ್‌ ಕೂಡ ಪಡೆದಿರುವ ವಿಡಿಯೊ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

ವಿಂಡೀಸ್‌ ಪ್ರವಾಸದಲ್ಲಿ ಮಿಂಚುವ ತುಡಿತದಲ್ಲಿರುವ ಪ್ರತಿಭೆಗಳಿವರುವಿಂಡೀಸ್‌ ಪ್ರವಾಸದಲ್ಲಿ ಮಿಂಚುವ ತುಡಿತದಲ್ಲಿರುವ ಪ್ರತಿಭೆಗಳಿವರು

ಬೌಲಿಂಗ್‌ ಶೈಲಿಯನ್ನು ಸಂಪೂರ್ಣವಾಗಿ ಪೂರೈಸದೇ ಚೆಂಡನ್ನು ಎಸೆಯುವ ಹೊಸದೊಂದೊದು ವಿಧಾನವನ್ನು ಅಶ್ವಿನ್‌ ಕಂಡುಕೊಂಡಿದ್ದಾರೆ. ಅದರಲ್ಲೂ ತಮ್ಮ ಎಡಗೈಯನ್ನು ಕಿಂಚಿತ್ತು ಅಲುಗಾಡದಂತೆ ಮತ್ತು ಎಡಗಾಲನ್ನು ಮುಂದಿಟ್ಟು ಚೆಂಡನ್ನು ಎಸೆಯದೆ ಬಲಗಾಲಿಟ್ಟು ಬೌಲಿಂಗ್‌ ಮಾಡುತ್ತಿದ್ದಾರೆ. ಇಂಥದ್ದೊಂದು ವಿಭಿನ್ನ ಹಾಗೂ ವಿಚಿತ್ರ ಬೌಲಿಂಗ್‌ ಶೈಲಿ ನಿಯಮಗಳ ಅನುಸಾರ ಅರಿಯೇ? ಈ ರೀತಿ ಬೌಲಿಂಗ್‌ ನಡೆಸುವುದನ್ನು ಅನುಮತಿಸಬೇಕೆ? ಎಂಬೆಲ್ಲಾ ಪ್ರಶ್ನೆಗಳಿಗೆ ಕ್ರಿಕೆಟ್‌ ಪಂಡಿತರು ಉತ್ತರ ನೀಡಬೇಕಿದೆ.

ಇನ್ನು ಟಿಎನ್‌ಪಿಎಲ್‌ ಟೂರ್ನಿ ಸಂಘಟಕರು ಕೂಡ ಈ ವಿಚಿತ್ರ ಬೌಲಿಂಗ್‌ ಶೈಲಿಗೆ ಚಕಾರ ತೆಗೆದಿಲ್ಲ. ಹೀಗಾಗಿ ತಮ್ಮ ಪ್ರಯೋಗ ಮುಂದುವರಿಸಿರುವ ರವಿ ಅಶ್ವಿನ್‌, ಸೋಮವಾರ ನಡೆದ ದಿಂಡುಗಲ್‌ ಡ್ರ್ಯಾಗನ್ಸ್‌ ಮತ್ತು ಮಧುರೈ ಪ್ಯಾಂಥರ್ಸ್‌ ನಡುವಣ ಪಂದ್ಯದಲ್ಲಿ ವಿಚಿತ್ರ ಶೈಲಿಯೊಂದಿಗೆ ವಿಕೆಟ್‌ ಕೂಡ ಪಡೆದಿದ್ದಾರೆ.

ಶ್ರೀಲಂಕಾದ ವೇಗಿ ಲಸಿತ್‌ ಮಾಲಿಂಗ ನಿವೃತ್ತಿಗೆ ಮುಹೂರ್ತ ಫಿಕ್ಸ್‌ಶ್ರೀಲಂಕಾದ ವೇಗಿ ಲಸಿತ್‌ ಮಾಲಿಂಗ ನಿವೃತ್ತಿಗೆ ಮುಹೂರ್ತ ಫಿಕ್ಸ್‌

ಪಂದ್ಯದಲ್ಲಿ 183 ರನ್‌ಗಳ ಗುರಿ ಬೆನ್ನತ್ತಿದ ಮಧುರೈ ತಂಡಕ್ಕೆ ಕೊನೆಯ ಓವರ್‌ನಲ್ಲಿ 32 ರನ್‌ ಗಳಿಸುವ ಅಗತ್ಯವಿತ್ತು. ಈ ಸಂದರ್ಭದಲ್ಲಿ ಬೌಲಿಂಗ್‌ಗೆ ಇಳಿದ ನಾಯಕ ಅಶ್ವಿನ್‌ ತಮ್ಮ ವಿಭಿನ್ನ ಶೈಲಿಯ ಬೌಲಿಂಗ್‌ ಆರಂಭಿಸಿದರು. ಮೊದಲ ನಾಲ್ಕು ಎಸೆತಗಳಲ್ಲಿ ಅಶ್ವಿನ್‌ ತಮ್ಮ ಎಂದಿನ ಶೈಲಿಯಲ್ಲೇ ಬೌಲಿಂಗ್‌ ನಡೆಸಿ 12 ಎಸೆತಗಳಲ್ಲಿ 24 ರನ್‌ ಸಿಡಿಸಿದ್ದ ಅಭಿಷೇಕ್‌ ತನ್ವರ್‌ ಅವರ ವಿಕೆಟ್‌ ಪಡೆದರು. ಬಳಿಕ ಇನ್ನೆರಡು ಎಸೆತಗಳು ಬಾಕಿ ಇರುವಾಗ ತಮ್ಮ ಹೊಸ ಅಸ್ತ್ರದ ಪ್ರಯೋಗ ಮಾಡಿ ಕಿರಣ್‌ ಆಕಾಶ್‌ ಅವರ ವಿಕೆಟ್‌ ಕೂಡ ಪಡೆದು ಗಮನ ಸೆಳೆದರು.

ಟೆನಿಸ್‌ ಬಾಲ್‌ ಕ್ರಿಕೆಟರ್‌ಗೆ ಇಂದು ಟೀಮ್‌ ಇಂಡಿಯಾ ಟಿಕೆಟ್‌!ಟೆನಿಸ್‌ ಬಾಲ್‌ ಕ್ರಿಕೆಟರ್‌ಗೆ ಇಂದು ಟೀಮ್‌ ಇಂಡಿಯಾ ಟಿಕೆಟ್‌!

ಅಶ್ವಿನ್‌ ಅವರ ವಿಚಿತ್ರ ಬೌಲಿಂಗ್‌ ಎದುರು ಲಾಂಗ್‌ ಆನ್‌ ಕಡೆಗೆ ಸಿಕ್ಸರ್‌ ಬಾರಿಸಲೆತ್ನಿಸಿದ ಆಕಾಶ್‌ ಬೌಂಡರಿ ಗೆರೆ ಬಳಿಯಿದ್ದ ಫೀಲ್ಡರ್‌ ಚತುರ್ವೇದ್‌ಗೆ ಕ್ಯಾಚಿತ್ತರು. ಇದರೊಂದಿಗೆ ಅಶ್ವಿನ್‌ಗೆ ತಮ್ಮ ವಿಚಿತ್ರ ಬೌಲಿಂಗ್‌ ಮೂಲಕ ಮೊದಲ ವಿಕೆಟ್‌ ಪಡೆದರು. ಪಂದ್ಯದಲ್ಲಿ ದಿಂಡುಗಲ್‌ ತಂಡ 30 ರನ್‌ಗಳ ಜಯ ದಾಖಲಿಸಿತು. ಅಂದಹಾಗೆ ಅಶ್ವಿನ್‌ ಬೌಲಿಂಗ್‌ ನೋಡಿದರೆ ಆಮಿರ್‌ ಖಾನ್‌ ನಟನೆಯ ಬಾಲಿವುಡ್‌ ಸಿನಿಮಾ ಲಗಾನ್‌ನಲ್ಲಿಕಂಡಂತಹ ಬೌಲಿಂಗ್‌ ಶೈಲಿಯೊಂದು ನೆನೆಪಿಗೆ ಬರುತ್ತದೆ.

Story first published: Tuesday, July 23, 2019, 19:34 [IST]
Other articles published on Jul 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X