ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ನಿಷೇಧದಿಂದ ತಪ್ಪಿಸಲು ಆರ್ ಅಶ್ವಿನ್ ಕ್ರಿಕೆಟ್‌ನಿಂದ ದೂರವುಳಿದಿದ್ದರು ಎಂದ ಪಾಕ್ ಸ್ಪಿನ್ನರ್

To avoid being banned by the ICC, R Ashwin was kept away from cricket says Saeed Ajmal

ಟೀಮ್ ಇಂಡಿಯಾ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಪ್ರಸಕ್ತ ಕಾಲದ ಶ್ರೇಷ್ಠ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ಗಳೊಂದಿಗೂ ಆರ್ ಅಶ್ವಿನ್ ಸಾಧನೆಯನ್ನು ಹೋಲಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಭಾರತದ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್ ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಅಲ್ಲ ಎಂದು ಹೇಳಿಕೆಯನ್ನು ನೀಡಿ ಸುದ್ದಿಯಾಗಿದ್ದರು. ಈ ಮಧ್ಯೆ ಈಗ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ ಭಾರತೀಯ ಅನುಭವಿ ಆರ್ ಅಶ್ವಿನ್ ಉದ್ದೇಶಪೂರ್ವಕವಾಗಿ ಕೆಲ ತಿಂಗಳುಗಳ ಕಾಲ ಆಟದಿಂದ ದೂರವಿದ್ದರು. ಈ ಕಾರಣದಿಂದಾಗಿ ಐಸಿಸಿಯಿಂದ ಅವರು ನಿಷೇಧಗೊಳ್ಳುವುದರಿಂದ ತಪ್ಪಿಸಿಕೊಂಡರು ಎಂದು ಹೇಳಿಕೆಯನ್ನು ನೀಡಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಯೀದ್ ಅಜ್ಮಲ್ ಕ್ರಿಕೆಟ್ ನಿಯಮಗಳ ವಿರುದ್ಧವಾದ ಬೌಲಿಂಗ್ ಶೈಲಿಯನ್ನು ಹೊಂದಿದ್ದ ಕಾರಣದಿಂದಾಗಿ ಐಸಿಸಿಯಿಂದ ನಿಷೇಧಕ್ಕೆ ಒಳಗಾಗಿದ್ದರು.

ಮನೀಷ್ ಪಾಂಡೆ ಮುಂದೆ ಧವನ್ ಮತ್ತು ಭುವನೇಶ್ವರ್‌ಗೆ ನಾಯಕರಾಗುವ ಅರ್ಹತೆ ಇಲ್ಲ ಎಂದ ಮಾಜಿ ಕ್ರಿಕೆಟಿಗಮನೀಷ್ ಪಾಂಡೆ ಮುಂದೆ ಧವನ್ ಮತ್ತು ಭುವನೇಶ್ವರ್‌ಗೆ ನಾಯಕರಾಗುವ ಅರ್ಹತೆ ಇಲ್ಲ ಎಂದ ಮಾಜಿ ಕ್ರಿಕೆಟಿಗ

"ನೀವು ಎಲ್ಲಾ ನೀತಿ ನಿಯಮಗಳನ್ನು ಯಾರಲ್ಲಿಯೂ ಕೇಳದೆ ಬದಲಾವಣೆ ಮಾಡಿದಿರಿ. ನಾನು ಎಂಟು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೆ. ಎಲ್ಲಾ ನಿಯಮಗಳು ನನಗೆ ಮಾತ್ರವೇ ಇದ್ದವು, ಅಷ್ಟೆ. ಅದೇ ಸಂದರ್ಭದಲ್ಲಿ ಆರ್ ಅಶ್ವಿನ್ ಕ್ರಿಕೆಟ್‌ನಿಂದ 6 ತಿಂಗಳುಗಳ ಕಾಲ ಕ್ರಿಕೆಟ್‌ನಿಮದ ದೂರವಿದ್ದರು. ಅದು ಯಾವ ಕಾರಣಕ್ಕಾಗಿ? ಆತನ ಬೌಲಿಂಗ್‌ನಲ್ಲಿ ಬದಲಾವಣೆಗಳನ್ನು ಮಾಡಿ ನಿಷೇಧಗಳನ್ನು ಮಾಡಿ ನಿಷೇಧದಿಂದ ತಪ್ಪಿಸಿದಿರಿ. ಆದರೆ ಅವರು ಪಾಕಿಸ್ತಾನ ಬೌಲರ್ ನಿಷೇಧಗೊಂಡರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಕೇವಲ ಹಣದ ಬಗ್ಗೆ ಮಾತ್ರವೇ ತಲೆಕೆಡಿಸಿಕೊಳ್ಳುತ್ತಾರೆ. ಎಂದು ಅಜ್ಮಲ್ 'ಕ್ರಿಕ್ ವಿಕ್‌'ಗೆ ನೀಡಿದ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ 2011ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯ ವಿಚಾರವಾಗಿಯೂ ಮಾತನಾಡಿದ್ದಾರೆ. ಈ ಪಂದ್ಯವನ್ನು ಭಾರತ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಎಲ್‌ಬಿಡಬ್ಲ್ಯುಗೆ ಔಟಾಗಿದ್ದರು. ಆದರೆ ಡಿಆರ್‌ಎಸ್ ಅವರನ್ನು ಉಳಿಸಿತ್ತು ಎಂದಿದ್ದಾರೆ.

Story first published: Monday, June 14, 2021, 17:44 [IST]
Other articles published on Jun 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X