ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆತ'ನನ್ನು ಆರ್‌ಸಿಬಿಗೆ ಆರಿಸುವಂತೆ ಕೊಹ್ಲಿಗೆ ಹೇಳಿದ್ದೆ: ಪಾರ್ಥಿವ್ ಪಟೇಲ್

Told Virat Kohli to get him in the RCB: Parthiv Patel spoken about Jasprit Bumrah

ಬೆಂಗಳೂರು, ಮೇ 21: ಇವತ್ತು ಎಲ್ಲರೂ ತಾತ್ಸಾರದಿಂದ ಕಾಣುವ ವ್ಯಕ್ತಿ ನಾಳೆ ಎತ್ತರಕ್ಕೆ ಬೆಳೆದು ನಿಲ್ಲಬಲ್ಲ. ಇಂಥ ಎಷ್ಟೋ ನಿದರ್ಶನಗಳನ್ನು ನಾವು ಬದುಕಿನಲ್ಲಿ ಕಂಡಿರುತ್ತೇವೆ. ಕ್ರೀಡೆಯಲ್ಲೂ ಇಂಥದ್ದೇ ಅನೇಕರ ಸ್ಫೂರ್ತಿಯ ಕತೆಗಳಿವೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಆಕರ್ಷಣೀಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಲಿಷ್ಠ ಆಟಗಾರನೊಬ್ಬ ಸೇರಿಕೊಳ್ಳುವುದರಲ್ಲಿದ್ದ. ಆದರೆ ಆರ್‌ಸಿಬಿಯ ನಿರಾಸಕ್ತಿಯಿಂದ ಅಂದು ಕೈತಪ್ಪಿದ ಅದೇ ಆಟಗಾರ ಈಗ ಬೇರೊಂದು ತಂಡದಲ್ಲಿ ಮುಂಚೂಣಿ ಆಟಗಾರನೆನಿಸಿದ್ದಾರೆ.

ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳುಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳು

ಐಪಿಎಲ್‌ 12 ಆವೃತ್ತಿಗಳು ನಡೆದಿವೆಯಾದರೂ ಒಂದೇ ಒಂದು ಬಾರಿಯೂ ಟ್ರೋಫಿ ಗೆಲ್ಲದ ತಂಡಗಳ ಸಾಲಿನಲ್ಲಿ ನಮ್ಮ ಬೆಂಗಳೂರು ತಂಡ ಕೂಡ ಇದೆ. ತಂಡ ಬಹುತೇಕ ಎಡವುತ್ತಿರುವುದು ಆಟಗಾರರ ಹರಾಜಿನ ವೇಳೆ. ಇದನ್ನು ರಾಹುಲ್ ದ್ರಾವಿಡ್ ಸೇರಿದಂತೆ ಇನ್ನೊಂದಿಷ್ಟು ಆಟಗಾರರು ಹೇಳಿಕೊಂಡಿದ್ದರು.

ಐಪಿಎಲ್ ಈ ವರ್ಷವೇ ನಡೆಯುವ ಬಗ್ಗೆ ಆಸಿಸ್ ಕ್ರಿಕೆಟಿಗ ಭರವಸೆಐಪಿಎಲ್ ಈ ವರ್ಷವೇ ನಡೆಯುವ ಬಗ್ಗೆ ಆಸಿಸ್ ಕ್ರಿಕೆಟಿಗ ಭರವಸೆ

ಆರ್‌ಸಿಬಿ ಸಹ ಆಟಗಾರ ಪಾರ್ಥಿವ್ ಪಟೇಲ್ ಕೂಡ ಬೆಂಗಳೂರು ಫ್ರಾಂಚೈಸಿ ಒಬ್ಬ ಆಟಗಾರನನ್ನು ಆರಿಸದೆ ತಪ್ಪು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆ ಆಟಗಾರ ಯಾರು? ಮುಂದೆ ಓದಿ..

ಈಗ ಆತ ಬೆಸ್ಟ್ ಬೌಲರ್‌

ಈಗ ಆತ ಬೆಸ್ಟ್ ಬೌಲರ್‌

ಟೀಮ್ ಇಂಡಿಯಾದ ವೇಗಿ ಜಸ್‌ಪ್ರೀತ್ ಬೂಮ್ರಾ ಈಗ ವಿಶ್ವದಲ್ಲೇ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಬಲಗೈ ವೇಗಿ ಬೂಮ್ರಾ ಐಪಿಎಲ್‌ನಲ್ಲೀಗ ಮುಂಬೈ ಇಂಡಿಯನ್ಸ್‌ನಲ್ಲಿ ಆಡುತ್ತಿದ್ದಾರೆ. 2013ರಿಂದಲೂ ಬೂಮ್ರಾ ಮುಂಬೈ ಇಂಡಿಯನ್ಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. 77 ಐಪಿಎಲ್ ಪಂದ್ಯಗಳನ್ನಾಡಿರುವ ಬೂಮ್ರಾ 7.55ರ ಎಕಾನಮಿಯಂತೆ 82 ವಿಕೆಟ್‌ಗಳನ್ನು ಮುರಿದಿದ್ದಾರೆ.

ಬೂಮ್ರಾ ಆರ್‌ಸಿಬಿಗೆ ಬರುವುದರಲ್ಲಿದ್ದರು

ಬೂಮ್ರಾ ಆರ್‌ಸಿಬಿಗೆ ಬರುವುದರಲ್ಲಿದ್ದರು

'ಲಾಕ್‌ಡೌನ್ ಬಟ್ ನಾಟ್ ಔಟ್‌' ಎಪಿಸೋಡ್‌ನಲ್ಲಿ ಮಾತನಾಡಿದ ಭಾರತದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, ಆಟಗಾರರ ಹರಾಜಿನ ವೇಳೆ ಜಸ್‌ಪ್ರೀತ್ ಬೂಮ್ರಾ ಅವರನ್ನು ಆರ್‌ಸಿಬಿಗೆ ತೆಗೆದುಕೊಳ್ಳುವಂತೆ ನಾಯಕ ವಿರಾಟ್ ಕೊಹ್ಲಿಯಲ್ಲಿ ಮಾತನಾಡಿದ್ದೆ ಎಂದಿದ್ದಾರೆ.

ಕೊಹ್ಲಿ ಜೊತೆಗೂ ಮಾತನಾಡಿದ್ದೆ

ಕೊಹ್ಲಿ ಜೊತೆಗೂ ಮಾತನಾಡಿದ್ದೆ

ಬೂಮ್ರಾ ಬಗ್ಗೆ ಮಾತನಾಡಿದ ಪಟೇಲ್, 'ವಿದರ್ಭ ವಿರುದ್ಧದ ಬೂಮ್ರಾ ಅವರ ಪಾದಾರ್ಪಣೆಯನ್ನು ನಾನು ನೆನಪಿಸಿಕೊಳ್ಳಬಲ್ಲೆ. ನಾನು ಜಾನ್ ರೈಟ್ ಅವರಲ್ಲಿ ಈ ಬಗ್ಗೆ ಮಾತನಾಡಿದೆ. ರಾಹುಲ್ ಸಂಘ್ವಿ ಜೆತೆಯೂ ಮಾತನಾಡಿದೆ. ಅಷ್ಟೇ ಯಾಕೆ ಬೂಮ್ರಾ ಅವರನ್ನು ಮುಂಬೈ ಇಂಡಿಯನ್ಸ್‌ ಆರಿಸುವ ಮೊದಲೇ ವಿರಾಟ್ ಕೊಹ್ಲಿ ಜೊತೆಗೂ ಬೂಮ್ರಾ ಬಗ್ಗೆ ಮಾತನಾಡಿದ್ದೆ,' ಎಂದಿದ್ದಾರೆ. ಮುಂಬೈ ಇಂಡಿಯನ್ಸ್ ಈಗ ಐಪಿಎಲ್ ಇತಿಹಾಸದಲ್ಲಿ ಅತೀ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ಮುಂಬೈ 4 ಬಾರಿ ಟ್ರೋಫಿ ಗೆದ್ದಿದ್ದರೆ, ಚೆನ್ನೈ 3 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಆತನಲ್ಲಿ ಏನೋ ವಿಶೇಷತೆಯಿದೆ ಎಂದಿದ್ದೆ

ಆತನಲ್ಲಿ ಏನೋ ವಿಶೇಷತೆಯಿದೆ ಎಂದಿದ್ದೆ

'ಆದರೆ ಆಟಗಾರರ ಹರಾಜಿನಲ್ಲಿ ಆರ್‌ಸಿಬಿಯನ್ನು ಹಿಂದಿಕ್ಕಿ ಎಂಐ ತಂಡ ಜಸ್‌ಪ್ರೀತ್‌ ಬೂಮ್ರಾ ಅವರನ್ನು ಖರೀದಿಸಿತು. ಆ ಬಳಿಕ ನಾನು ಜಾನ್ ರೈಟ್ (ಆಗಿನ ಮುಂಬೈ ಇಂಡಿಯನ್ಸ್ ಕೋಚ್) ಅವರಲ್ಲಿ ಹೇಳಿದ್ದೆ, ಆತನಲ್ಲಿ ಏನೋ ವಿಶೇಷತೆಯಿದೆ ಎಂದು,' ಎಂದು ಪಾರ್ಥಿವ್ ವಿವರಿಸಿದರು. ಸದ್ಯ ಏಕದಿನ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಬೂಮ್ರಾ, ಟೆಸ್ಟ್‌ನಲ್ಲಿ 7ನೇ ರ್ಯಾಂಕಿಂಗ್‌ನಲ್ಲಿದ್ದಾರೆ.

Story first published: Thursday, May 21, 2020, 18:41 [IST]
Other articles published on May 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X