ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ರಾಹುಲ್ ಆಯ್ಕೆಯನ್ನು ಸಮರ್ಥಿಸಿದ ಆಸಿಸ್ ಮಾಜಿ ಕ್ರಿಕೆಟಿಗ

ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗೆ ಕೆಎಲ್ ರಾಹುಲ್ ಆಯ್ಕೆಯಾಗಿದ್ದಾರೆ. ಐಪಿಎಲ್ ಹಾಗೂ ಸೀಮಿತ ಓವರ್‌ಗಳ ಫಾರ್ಮ್ ಆಧರಿಸಿ ಕೆಎಲ್ ರಾಹುಲ್ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂಬ ಬಗ್ಗೆ ಕೆಲ ಟೀಕೆಗಳು ವ್ಯಕ್ತವಾಗಿದೆ. ಆದರೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಕೆಎಲ್ ರಾಹುಲ್ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಟೆಸ್ಟ್ ತಂಡದಿಂದ ಹೊರಬಿದ್ದಿದ್ದ ಕೆಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಗೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷದ ಆಗಸ್ಟ್‌ನ ಬಳಿಕ ಮತ್ತೊಮ್ಮ ಬಿಳಿ ಜರ್ಸಿ ತೊಡಲು ಆಸಿಸ್ ಕ್ರಿಕೆಟಿಗ ಸಜ್ಜಾಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿರುವುದು ರಾಹುಲ್ ವಿಶ್ವಾಸವನ್ನು ಹೆಚ್ಚಿಸಲಿದೆ ಎಂದು ಟಾಮ್ ಮೂಡಿ ಅಭಿಪ್ರಾಯಪಟ್ಟಿದ್ದಾರೆ.

ಉಪನಾಯಕನಾಗಿ ರಾಹುಲ್ ಆಯ್ಕೆಗೂ ಮುನ್ನ ಇನ್ನಷ್ಟು ಕಾಯಬಹುದಿತ್ತು: ದೀಪ್‌ದಾಸ್‌ ಗುಪ್ತ

"ಅವರು ಕ್ಲಾಸ್ ಆಟಗಾರನನ್ನು ಆಯ್ಕೆ ಮಾಡಿದ್ದಾರೆ. ಇತ್ತೀಚಿನ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಫಾರ್ಮ್‌ನಲ್ಲಿ ಇಲ್ಲದಿರಬಹುದು. ಆದರೆ ಕೆಎಲ್ ರಾಹುಲ್ ಓರ್ವ ಕ್ಲಾಸ್ ಆಟಗಾರ ಎಂದಿರುವ ಟಾಮ್ ಮೂಡಿ ಕೆಎಲ್ ರಾಹುಲ್ ಮೂರು ಮಾದರಿಯ ಆಟಗಾರ ಎಂದು ಆಯ್ಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಸುಲಭವಾಗಿ ಶ್ರೇಷ್ಠ ಪ್ರದರ್ಶನವನ್ನು ನಿಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಕೆಎಲ್ ರಾಹುಲ್. ಆತನ ಮೂಲಕ ಭಾರತೀಯ ಕ್ರಿಕೆಟ್ ಅತ್ಯುತ್ತಮ ಆಟಗಾರನನ್ನು ಹೊಂದಬಹುದು ಎಂದು ರಾಹುಲ್ ಪ್ರದರ್ಶನದ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಟಾಮ್ ಮೂಡಿ.

ಭಾರತ vs ಆಸ್ಟ್ರೇಲಿಯಾ: ಟೆಸ್ಟ್, ಟಿ20, ಏಕದಿನ ಪಂದ್ಯಗಳ ಸಮಯ ಪ್ರಕಟ

ಕೆಎಲ್ ರಾಹುಲ್ 2014-15ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದರು. ಮೂರನೇ ಟೆಸ್ಟ್‌ನಲ್ಲಿ ಕಣಕ್ಕಿಳಿದ ರಾಹುಲ್ ವೈಫಲ್ಯವನ್ನು ಅನುಭವಿಸಿದ್ದರು. ಆದರೆ ಅದಾದ ಮುಂದಿನ ಪಮದ್ಯದಲ್ಲಿ ಶತಕವನ್ನು ಸಿಡಿಸಿ ಸ್ಮರಣೀಯವಾಗಿಸಿದರು. ಆದರೆ ರಾಹುಲ್‌ಗೆ 2018-19ರ ಕೊನೆಯ ಆಸ್ಟ್ರೇಲಿಯಾ ಪ್ರವಾಸ ಮಾತ್ರ ಸ್ಮರಣೀಯವಾಗಿರಲಿಲ್ಲ. ಮೂರು ಪಂದ್ಯಗಳಲ್ಲಿ ರಾಹುಲ್ ಗಳಿಸಿದ್ದು ಕೇವಲ 57 ರನ್ ಮಾತ್ರ. ಈ ಐತಿಹಾಸಿಕ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದು ಬೀಗಿತ್ತು.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, October 28, 2020, 17:13 [IST]
Other articles published on Oct 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X