ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಜಿ ಕ್ರಿಕೆಟರ್ ಟಾಮ್ ಮೂಡಿ ಆಯ್ಕೆಯ ಐಪಿಎಲ್ ತಂಡ ಹೀಗಿದೆ

Tom Moody Picks His Best IPL 2020 XI for IPL 2020

ಕೊರೊನಾವೈರಸ್ ಅಡೆತಡೆಗಳ ನಡುವೆ ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020 ಆಯೋಜನೆಗೊಳಿಸಿ ಬಿಸಿಸಿಐ ಭರ್ಜರಿ ಯಶಸ್ಸನ್ನು ಕಂಡಿದೆ. ನಾಲ್ಕು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ನವೆಂಬರ್ 10ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಲಿದೆ. ಈ ನಡುವೆ ಮಾಜಿ ಆಟಗಾರರು, ಕೋಚ್, ಕಾಮೆಂಟೆಟರ್ಸ್ ತಮ್ಮ ಆಯ್ಕೆಯ ಐಪಿಎಲ್ ಶ್ರೇಷ್ಠ XI ಹೆಸರಿಸುತ್ತಿದ್ದಾರೆ.

ಟೀಂ ಇಂಡಿಯಾದ ಮಾಜಿ ಆಟಗಾರ ಕಮ್ ಕಾಮೆಂಟೆಟರ್ ಸಂಜಯ್ ಮಂಜ್ರೇಕರ್ ಅವರು ಐಪಿಎಲ್ 2020ಕ್ಕಾಗಿ ತಮ್ಮ ಆಯ್ಕೆಯ ಅತ್ಯುತ್ತಮ ಇಲೆವೆನ್ ಪ್ರಕಟಿಸಿದ್ದರು. ಮಂಜ್ರೇಕರ್ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಕೈಬಿಡಲಾಗಿದೆ.

ಮಂಜ್ರೇಕರ್ ಆಯ್ಕೆಯ ಐಪಿಎಲ್ ತಂಡದಲ್ಲಿ ಯಾರಿದ್ದಾರೆ ಯಾರಿಲ್ಲ? ಮಂಜ್ರೇಕರ್ ಆಯ್ಕೆಯ ಐಪಿಎಲ್ ತಂಡದಲ್ಲಿ ಯಾರಿದ್ದಾರೆ ಯಾರಿಲ್ಲ?

ಈಗ ಆಸ್ಟ್ರೇಲಿಯಾ ಮಾಜಿ ಆಟಗಾರ, ಕೋಚ್, ಕಾಮೆಂಟೆಟರ್ ಟಾಮ್ ಮೂಡಿ ಅವರು ತಮ್ಮ ಆಯ್ಕೆಯ ತಂಡವನ್ನು ಪ್ರಕಟಿಸಿದ್ದಾರೆ. ಮೂಡಿ ಕೂಡಾ ಮೂರನೇ ಕ್ರಮಾಂಕಕ್ಕೆ ಮುಂಭೈ ಇಂಡಿಯನ್ಸ್ ತಂಡದ ಸೂರ್ಯ ಕುಮಾರ್ ಯಾದವ್ ಸೂಕ್ತ ಎಂದಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡ ಮಾಜಿ ಕೋಚ್ ಮೂಡಿ ಅವರು ನಿರೀಕ್ಷೆಯಂತೆ ಆರ್ಚರ್ ಹಾಗೂ ರಬಾಡಾ ಇಬ್ಬರನ್ನು ವೇಗಿಗಳಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಮೂಡಿ ಟ್ವೀಟ್ ನೀಡಿದ ಕ್ರಿಕೆಟ್ ಅಭಿಮಾನಿಗಳು ರಾಹುಲ್ ತೇವಾಟಿಯಾರನ್ನು ಆಲ್ ರೌಂಡರ್ ಎಂದು ಆಯ್ಕೆ ಮಾಡಿದ್ದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಟಾಮ್ ಮೂಡಿ ಆಯ್ಕೆಯ ಐಪಿಎಲ್ 2020 ತಂಡ ಹೀಗಿದೆ;
1. ಶಿಖರ್ ಧವನ್- ಡೆಲ್ಲಿ ಕ್ಯಾಪಿಟಲ್ಸ್
2. ಕೆಎಲ್ ರಾಹುಲ್- ಕಿಂಗ್ಸ್ ಎಲೆವನ್ ಪಂಜಾಬ್
3. ಸೂರ್ಯಕುಮಾರ್ ಯಾದವ್- ಮುಂಬೈ ಇಂಡಿಯನ್ಸ್
4. ಎಬಿ ಡಿ ವಿಲಿಯರ್ಸ್- ರಾಯಲ್ ಚಾಲೆಂಜರ್ಸ್ ಬೆಂಗಳೂರು
5. ಇಶಾನ್ ಕಿಶನ್- ಮುಂಬೈ ಇಂಡಿಯನ್ಸ್
6. ರಾಹುಲ್ ತೇವಾಟಿಯಾ-ರಾಜಸ್ಥಾನ್ ರಾಯಲ್ಸ್
7. ರಶೀದ್ ಖಾನ್- ಸನ್ ರೈಸರ್ಸ್ ಹೈದರಾಬಾದ್
8. ಜೋಫ್ರಾ ಆರ್ಚರ್-ರಾಜಸ್ಥಾನ್ ರಾಯಲ್ಸ್
9. ಕಗಿಸೋ ರಬಾಡಾ- ಡೆಲ್ಲಿ ಕ್ಯಾಪಿಟಲ್ಸ್
10. ಯುಜುವೇಂದ್ರ ಚಾಹಲ್-ರಾಯಲ್ ಚಾಲೆಂಜರ್ಸ್ ಬೆಂಗಳೂರು
11. ಜಸ್ ಪ್ರೀತ್ ಬೂಮ್ರಾ-ಮುಂಬೈ ಇಂಡಿಯನ್ಸ್

Story first published: Monday, November 9, 2020, 13:47 [IST]
Other articles published on Nov 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X