ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಾಮ್‌ ಮೂಡಿ ಬೆಸ್ಟ್ ಟಿ20 ‍XI: ಧೋನಿಯಿಲ್ಲ, ವಿರಾಟ್ ನಾಯಕನಲ್ಲ ಆದರೂ ಭಾರತೀಯನೇ ಕ್ಯಾಪ್ಟನ್!

Tom Moody Picks Rohit Sharma To Lead His World T20 Xi

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ವಿಶ್ವದ ಖ್ಯಾತ ಕ್ರಿಕೆಟ್ ಕೋಚ್ ಎನಿಸಿರುವ ಟಾಮ್ ಮೂಡಿ ಚುರುಕಿನ ಕ್ರಿಕೆಟ್ ತಂತ್ರಗಳಿಗೆ ಖ್ಯಾತರಾಗಿದ್ದಾರೆ. ತನ್ನ ಸುದೀರ್ಘ ಕೋಚಿಂಗ್ ವೃತ್ತ ಜೀವನದಲ್ಲಿ ಟಾಮ್ ಮೂಡಿ ಹಲವಾರು ಅಂತಾರಾಷ್ಟ್ರೀಯ ತಂಡಗಳ ಜೊತೆಗೆ ಅನೇಕ ಫ್ರಾಂಚೈಸಿಗಳೊಂದಿಗೆ ಕೈಜೋಡಿಸಿದ್ದಾರೆ. ಐಪಿಎಲ್‌ನಲ್ಲೂ ಟಾಮ್ ಮೂಡಿ ಸನ್ ರೈಸರ್ಸ್ ಹೈದರಾಬಾದ್ ದಂಡದಲ್ಲಿ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಇತ್ತೀಚೆಗೆ ಭಾರತದ ಖ್ಯಾತ ಕಾಮೆಂಟೇಟರ್ ಹರ್ಷ ಭೋಗ್ಲೆ ಜೊತೆಗೆ ಟಾಮ್ ಮೂಡಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಟಾಮ್ ಮೂಡಿ ವಿಶ್ವದ ಶ್ರೇಷ್ಠ ಟಿ20 ತಂಡವನ್ನು ಹೆಸರಿಸಿದ್ದಾರೆ. ಈ ತಂಡದಲ್ಲಿ ಅಚ್ಚರಿಗಳಿದ್ದು ಭಾರತೀಯ ಕ್ರಿಕೆಟಿಗನಿಗೆ ತಂಡದ ಚುಕ್ಕಾಣಿ ನೀಡಿದ್ದಾರೆ. ಆದರೆ ಟೀಮ್ ಇಂಡಿಯಾದ ಖಾಯಂ ನಾಯಕ ವಿರಾಟ್ ತಂಡದ ನಾಯಕನಲ್ಲ!

'2019ರ ವಿಶ್ವಕಪ್‌ ಸೂಪರ್ ಓವರ್‌ಗೂ ಮುನ್ನ ಸ್ಟೋಕ್ಸ್ ಸಿಗರೇಟ್ ಸುಟ್ಟಿದ್ದರು''2019ರ ವಿಶ್ವಕಪ್‌ ಸೂಪರ್ ಓವರ್‌ಗೂ ಮುನ್ನ ಸ್ಟೋಕ್ಸ್ ಸಿಗರೇಟ್ ಸುಟ್ಟಿದ್ದರು'

ತಂಡದ ಬಗ್ಗೆ ಮೂಡಿ ಸ್ಪಷ್ಟನೆ

ತಂಡದ ಬಗ್ಗೆ ಮೂಡಿ ಸ್ಪಷ್ಟನೆ

ಟಾಮ್ ಮೂಡಿ ಈ ತಂಡದ ಬಗ್ಗೆ ಹೇಳಿಕೆಯನ್ನು ನೀಡಿದ್ದು ಈ ತಂಡ ಪ್ರಸಕ್ತ ಆಡುವ ತಂಡವನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಕಳೆದ ಹತ್ತು ವರ್ಷಗಳ ಪ್ರದರ್ಶನವನ್ನು ಇಲ್ಲಿ ಪರಿಗಣಿಸದೆ ಮುಂದಿನ ಎರಡು ಮೂರು ವಾರದಗಳಲ್ಲಿ ನಡೆಯಬಹುದಾದ ಟೂರ್ನಿಗಾಗಿ ಈ ಶ್ರೇಷ್ಠ ತಂಡವನ್ನು ಹೆಸರಿಸಿರುವುದಾಗಿ ಟಾಮ್ ಮೂಡಿ ಹೇಳಿದ್ದಾರೆ.

ಟಾಪ್ ಆರ್ಡರ್‌ನಲ್ಲಿ ಯಾರ್ಯಾರು?

ಟಾಪ್ ಆರ್ಡರ್‌ನಲ್ಲಿ ಯಾರ್ಯಾರು?

ಟಾಮ್ ಮೂಡಿ ಹೆಸರಿಸಿರುವ ಈ ತಂಡದಲ್ಲಿ ಆರಂಭಿಕರಾಗಿ ಟೀಮ್ ಇಂಡಿಯಾದ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಮೂಲಕ ಎಡಗೈ ಬಲಗೈ ಜೋಡಿಗೆ ಮಣೆ ಹಾಕಿದ್ದಾರೆ. ಮೂರು ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕ್ರಮವಾಗಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಹೆಸರಿಸಿದ್ದಾರೆ.

ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್

ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್

ಟಾಮ್ ಮೂಡಿ ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗೆ ಮಣೆ ಹಾಕಲು ನಿರ್ಧರಿಸಿದ್ದಾರೆ. ನಾನು ಜೋಸ್ ಬಟ್ಲರ್ ಅವರನ್ನು ಆಯ್ಕೆ ಮಾಡಲು ಉತ್ಸುಕನಾಗಿದ್ದೇನೆ. ಆದರೆ ಕೋಚ್ ಆಗಿ ಆ ಕ್ರಮಾಂಕದಲ್ಲಿ ಎಡಗೈ ಆಟಗಾರನನ್ನು ಆಡಿಸುವ ಅಗತ್ಯವಿದೆ. ಹಾಗಾಗಿ ನಿಕೋಲಸ್ ಪೂರನ್ ಆಯ್ಕೆ ಮಾಡುತ್ತೇನೆ ಎಂದು ಹೇಳಿದರು. ನಿಕೋಲಸ್ ಪೂರನ್ ಕೆರೇಬಿಯನ್ ಲೀಗ್‌ನಲ್ಲಿ ಸಾಕಷ್ಟು ಆಡಿದ್ದು ಅಲ್ಲಿನ ಅವರ ಪ್ರದರ್ಶನವನ್ನು ಗಮನಿಸಿದ್ದೇನೆ ಎಂದಿದ್ದಾರೆ.

ಧೋನಿಗಿಲ್ಲ ಅವಕಾಶ, ಕಾರಣ ಹೇಳಿದ ಮೂಡಿ

ಧೋನಿಗಿಲ್ಲ ಅವಕಾಶ, ಕಾರಣ ಹೇಳಿದ ಮೂಡಿ

ತನ್ನ ತಂಡದಲ್ಲಿ ಧೋನಿಗೆ ಅವಕಾಶವನ್ನು ನೀಡದ್ದಕ್ಕೆ ಟಾಮ್ ಮೂಡಿ ಕಾರಣವನ್ನು ಹೇಳಿದ್ದಾರೆ. ಈ ತಂಡ ಈಗನ ಸಂದರ್ಭಕ್ಕೆ. ಇಲ್ಲವಾದಲ್ಲಿ ಧೋನಿ ಮೊದಲ ಆಯ್ಕೆಯಾಗಿರುತ್ತಿದ್ದರು. ತಾನು ಕೂಡ ಧೋನಿಯ ದೊಡ್ಡ ಅಭಿಮಾನಿ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗ

ಆಲ್‌ರೌಂಡರ್ ಆಗಿ ಆರನೇ ಕ್ರಮಾಂಕದಲ್ಲಿ ಆಂದ್ರೆ ರಸೆಲ್ ಮತ್ತು ಏಳನೇ ಕ್ರಮಾಂಕದಲ್ಲಿ ಸುನಿಲ್ ನರೇನ್ ಇರಲಿದ್ದಾರೆ, ಮಿಚೆಲ್ ಸ್ಟಾರ್ಕ್, ರಶೀದ್ ಖಾನ್, ಜಸ್ಪ್ರೀತ್ ಬೂಮ್ರಾ ಮತ್ತು ಜೋಫ್ರಾ ಆರ್ಚರ್ ಬೌಲರ್‌ಗಳಾಗಿ ನನ್ನ ತಂಡದಲ್ಲಿರಲಿದ್ದಾರೆ. ಹನ್ನೆರಡನೇ ಆಟಗಾರನಾಗಿ ನಿಸ್ಸಂಶಯವಾಗಿ ರವೀಂದ್ರ ಜಡೇಜಾ ಇರಲಿದ್ದಾರೆ. ಫೀಲ್ಡಿಂಗ್ ವಿಭಾಗದಲ್ಲಿ ಅವರು ಸಮತೋಲನವನ್ನು ತರಲಿದ್ದಾರೆ ಎಂದು ಟಾಮ್ ಮೂಡಿ ಹೇಳಿದರು.

ನಾಯಕನ ಜವಾಬ್ಧಾರಿ ರೋಹಿತ್ ಶರ್ಮಾಗೆ

ನಾಯಕನ ಜವಾಬ್ಧಾರಿ ರೋಹಿತ್ ಶರ್ಮಾಗೆ

ಟಾಮ್ ಮೂಡಿ ತಾವು ಹೆಸರಿಸಿದ ಶ್ರೇಷ್ಠ ವಿಶ್ವ ಟಿ20 ತಂಡದ ನಾಯಕತ್ವವನ್ನು ಭಾರತದ ಉಪನಾಯಕ ರೋಹಿತ್ ಶರ್ಮಾಗೆ ನೀಡಿದ್ದಾರೆ. ತಂಡದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನವನ್ನು ಪಡೆದಿದ್ದರೂ ವಿರಾಟ್‌ಗಿಂತ ರೋಹಿತ್ ಶರ್ಮಾ ಟಿ20ಗೆ ಸೂಕ್ತ ನಾಯಕ ಎಂದು ಟಾಮ್ ಮೂಡಿ ನಿರ್ಧರಿಸಿದ್ದಾರೆ.

ಟಾಮ್ ಮೂಡಿ ಪ್ಲೇಯಿಂಗ್ XI

ಟಾಮ್ ಮೂಡಿ ಪ್ಲೇಯಿಂಗ್ XI

ರೋಹಿತ್ ಶರ್ಮಾ(ನಾಯಕ), ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ನಿಕೋಲಸ್ ಪೂರನ್, ಆಂದ್ರೆ ರಸೆಲ್, ಸುನಿಲ್ ನರೈನ್, ಮಿಚೆಲ್ ಸ್ಟಾರ್ಕ್, ರಶೀದ್ ಖಾನ್, ಜಸ್ಪ್ರೀತ್ ಬೂಮ್ರಾ ,ಜೋಫ್ರಾ ಆರ್ಚರ್ (ರವೀಂದ್ರ ಜಡೇಜಾ ಹನ್ನೆರಡನೇ ಆಟಗಾರ)

Story first published: Wednesday, July 15, 2020, 10:06 [IST]
Other articles published on Jul 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X