ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಗೆ ಬಾಬರ್‌ ಅಝಾಮ್ ಹೋಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಯೂನಿಸ್ ಖಾನ್

Too early to compare Babar Azam and Virat Kohli: Younis Khan

ಲಾಹೋರ್, ಮೇ 18: ಬಾಬರ್ ಅಝಾಮ್ ಈಗಷ್ಟೇ ಕ್ರಿಕೆಟ್‌ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ. ಅವರು ಸಾಧಿಸೋಕೆ ಇನ್ನೂ ಸಾಕಷ್ಟಿದೆ. ಇಷ್ಟು ಬೇಗ ಅವರನ್ನು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಹೋಲಿಸಬಾರದು ಎಂದು ಪಾಕಿಸ್ತಾನ ಮಾಜಿ ನಾಯಕ ಯೂನಿಸ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.

ಜಗಳಕ್ಕಾಗಿ ಹರ್ಭಜನ್ ರೂಮ್‌ ಬಳಿ ತೆರಳಿದ್ದೆ: ಏಷ್ಯಾ ಕಪ್ ಪಂದ್ಯದ ಘಟನೆ ಸ್ಮರಿಸಿದ ಅಖ್ತರ್ಜಗಳಕ್ಕಾಗಿ ಹರ್ಭಜನ್ ರೂಮ್‌ ಬಳಿ ತೆರಳಿದ್ದೆ: ಏಷ್ಯಾ ಕಪ್ ಪಂದ್ಯದ ಘಟನೆ ಸ್ಮರಿಸಿದ ಅಖ್ತರ್

ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡದ ನಾಯಕರಾಗಿದ್ದ, 25ರ ಬಾಬರ್ ಅಝಾಮ್ ಅವರನ್ನು ಇತ್ತೀಚೆಗೆ ಪಾಕ್ ಏಕದಿನ ತಂಡಕ್ಕೂ ನಾಯಕನಾಗಿ ಆರಿಸಲಾಗಿತ್ತು. ಲಿಮಿಟೆಡ್ ಓವರ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಬಾಬರ್, ಹಿಂದಿನ ನಾಯಕ ಸರ್ಫರಾಜ್ ಅಹ್ಮದ್ ಅವರನ್ನು ಕೆಳಗಿಳಿಸಿದ್ದರು.

31ರ ಹರೆಯದ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಗುರುತಿಸಿಕೊಂಡವರು. ಆದರೆ ಕ್ರಿಕೆಟ್ ಕ್ಷೇತ್ರದಲ್ಲಿ ಗಮನಾರ್ಹ ಬ್ಯಾಟಿಂಗ್‌ ಸಾಧನೆ ತೋರುತ್ತಿರುವ ಬಾಬರ್ ಬಗ್ಗೆ ಕ್ರಿಕೆಟ್ ಪರಿಣಿತರು, ಅಭಿಮಾನಿಗಳು ಈಗ ಹೆಚ್ಚೆಚ್ಚು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಕೆಲವರು ಕೊಹ್ಲಿ ಮತ್ತು ಬಾಬರ್‌ಗೆ ಹೋಲಿಕೆಯೂ ಮಾಡುತ್ತಿದ್ದಾರೆ.

ಟೀಮ್ ಇಂಡಿಯಾಕ್ಕೆ ಬೆಂಬಲವೇ ಸಿಗದ ಜಾಗ ಹೆಸರಿಸಿದ ರೋಹಿತ್ ಶರ್ಮಾಟೀಮ್ ಇಂಡಿಯಾಕ್ಕೆ ಬೆಂಬಲವೇ ಸಿಗದ ಜಾಗ ಹೆಸರಿಸಿದ ರೋಹಿತ್ ಶರ್ಮಾ

'ನೋಡಿ, ಈಗ 31 ವರ್ಷದ, ವೃತ್ತಿ ಬದುಕಿನ ಸಾಧನೆಯ ಶಿಖರದಲ್ಲಿರುವ ಕೊಹ್ಲಿ ಸುಮಾರು 10 ವರ್ಷಗಳಿಂದಲೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿದ್ದಾರೆ. ಎಲ್ಲಾ ಮಾದರಿಯಲ್ಲೂ ಎಲ್ಲಾ ಪರಿಸ್ಥಿತಿಯಲ್ಲೂ ಸೈ ಎನಿಸಿಕೊಂಡಿದ್ದಾರೆ. 70 ಅಂತಾರಾಷ್ಟ್ರೀಯ ಶತಕಗಳು ಅವರ ಶಕ್ತಿ, ಸಾಮರ್ಥ್ಯಕ್ಕೆ ಕನ್ನಡಿ,' ಎಂದು ಗಾಲ್ಫ್ ನ್ಯೂಸ್‌ ಜೊತೆ ಮಾತನಾಡುತ್ತ ಯೂನಿಸ್ ಹೇಳಿಕೊಂಡಿದ್ದಾರೆ.

'ಬಾಬರ್ ಇನ್ನೊಂದು ಬದಿಯಲ್ಲಿದ್ದಾರೆ. 5 ವರ್ಷಗಳ ಹಿಂದಷ್ಟೇ ಅಝಾಮ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈಗಾಗಲೇ 16 ಶತಕಗಳನ್ನು ಬಾರಿಸಿರುವ ಬಾಬರ್ ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಉತ್ತಮ ಸರಾಸರಿ ಹೊಂದಿದ್ದಾರೆ. ಹಾಗಂತ ಕೊಹ್ಲಿ-ಬಾಬರ್ ಹೋಲಿಕೆ ಸರಿಯಲ್ಲ,' ಎಂದು ಖಾನ್ ಹೇಳಿದ್ದಾರೆ.

ಸತತ ಶತಕಗಳ ಬಾರಿಸಿ ವಿಶ್ವದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳುಸತತ ಶತಕಗಳ ಬಾರಿಸಿ ವಿಶ್ವದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳು

'ನೀವೊಂದು ವೇಳೆ ವಿರಾಟ್ ಕೊಹ್ಲಿಗೆ ಬಾಬರ್‌ ಅಝಾಮ್ ಅವರನ್ನು ಹೋಲಿಸುವುದಾದರೆ, ಇವತ್ತಿಗೆ 5 ವರ್ಷಗಳ ಬಳಿಕ ಕೊಹ್ಲಿ ಈಗ ಎಷ್ಟು ಸಾಧನೆ ಮಾಡಿರುತ್ತಾರೋ ಬಾಬರ್ ಆಗ ಅಷ್ಟೇ ಸಾಧನೆ ಮಾಡಬಹುದೇನೊ,' ಎಂದು ಯೂನಿಸ್ ಖಾನ್ ವಿವರಿಸಿದ್ದಾರೆ.

Story first published: Monday, May 18, 2020, 11:30 [IST]
Other articles published on May 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X