ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಗೆ ಅವಕಾಶ ನೀಡಲು ಗಂಗೂಲಿ ಒಪ್ಪಿರಲಿಲ್ಲ, ಹತ್ತು ದಿನಗಳ ಕಾಲ ಒತ್ತಾಯ ಮಾಡಿದ್ದೆ: ಮಾಜಿ ಕ್ರಿಕೆಟಿಗ

 Took 10 days to convince Sourav Ganguly to let MS Dhoni keep wickets says Kiran More
ಮೋರೆ ಇಲ್ಲಾ ಅಂದಿದ್ರೆ ಧೋನಿ ಕ್ರಿಕೆಟ್ ಗೆ ಬರೋಕೆ ಆಗ್ತಾನೆ ಇರ್ಲಿಲ್ಲ | Oneindia Kannada

ಅತ್ಯುತ್ತಮ ವಿಕೆಟ್ ಕೀಪರ್ ಎಂಬ ಚರ್ಚೆಗೆ ಬಂದರೆ ಎಂಎಸ್ ಧೋನಿಗೆ ಹೋಲಿಕೆ ಯಾರೂ ಸಹ ಸಿಗುವುದಿಲ್ಲ. ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಯಶಸ್ಸು ಗಳಿಸಿದ ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್‌ ಎಂಎಸ್ ಧೋನಿ ಎಂದರೆ ತಪ್ಪಾಗಲಾರದು. ಇಷ್ಟು ದೊಡ್ಡ ಮಟ್ಟದ ಸಾಧನೆಯನ್ನು ಮಾಡಿರುವ ಎಂ ಎಸ್ ಧೋನಿಯನ್ನು ಟೀಮ್ ಇಂಡಿಯಾಕ್ಕೆ ಕರೆತಂದದ್ದು ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಎಂಬುದು ತುಂಬಾ ಜನರಿಗೆ ತಿಳಿಯದ ಸಂಗತಿ.

ಐಪಿಎಲ್ 2022: ಹೊಸ ತಂಡಗಳಾಗಿ ಸೇರ್ಪಡೆಯಾಗಬಹುದಾದ 5 ನಗರಗಳು

ಹೌದು ಎಂಎಸ್ ಧೋನಿ ಇಷ್ಟು ದೊಡ್ಡ ಮಟ್ಟದ ಯಶಸ್ಸು ಸಾಧಿಸಲು ಕಾರಣ ಕಿರಣ್ ಮೋರೆ. ಆರಂಭದ ದಿನಗಳಲ್ಲಿ ಎಂಎಸ್ ಧೋನಿಯನ್ನು ಗುರುತಿಸಿ ಅವಕಾಶ ಸಿಗುವಂತೆ ಮಾಡಿದ ಕಿರಣ್ ಮೋರೆ ಧೋನಿಗೆ ತಂಡದಲ್ಲಿ ಅವಕಾಶ ಕೊಡಿಸಲು ಎಷ್ಟು ಪರದಾಡಿದ್ದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಯುಎಇಯಲ್ಲಿ ಐಪಿಎಲ್ ಮುಂದುವರೆದಾಗ ಈ 3 ತಂಡಗಳು ಕಂಗಾಲಾಗುವುದು ಖಚಿತ!

ಎಂ ಎಸ್ ಧೋನಿಯನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಿದ ಸಂದರ್ಭದ ಕುರಿತು ಮೆಲುಕು ಹಾಕಿರುವ ಕಿರಣ್ ಮೋರೆ ಧೋನಿಗೆ ವಿಕೆಟ್ ಕೀಪರ್ ಸ್ಥಾನಕೊಡಿಸಲು ಗಂಗೂಲಿಗೆ ಹತ್ತು ದಿನಗಳ ಕಾಲ ಒತ್ತಡವನ್ನು ಹೇರಿದ್ದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. 2003ರ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ನಂತರ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಸ್ಥಾನಕ್ಕೆ ಎಂಎಸ್ ಧೋನಿಯನ್ನು ಹೇಗೆ ಆಯ್ಕೆ ಮಾಡಲಾಯಿತು ಎಂಬುದನ್ನು ಕಿರಣ್ ಮೋರೆ ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ..

ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್‌ ಹುಡುಕಾಟ ನಡೆಯುತ್ತಿತ್ತು

ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್‌ ಹುಡುಕಾಟ ನಡೆಯುತ್ತಿತ್ತು

2003ರ ವಿಶ್ವಕಪ್ ಬಳಿಕ ಭಾರತ ತಂಡಕ್ಕೆ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡನ್ನೂ ನಿಭಾಯಿಸಬಲ್ಲ ಆಟಗಾರನನ್ನು ಹುಡುಕಲಾಗುತ್ತಿತ್ತು, ಅಚ್ಚುಕಟ್ಟಾಗಿ ವಿಕೆಟ್ ಕೀಪಿಂಗ್ ಮಾಡುವುದರ ಜೊತೆಗೆ 6 ಅಥವಾ 7ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಬಂದು 40-50 ರನ್ ಬಾರಿಸುವ ಸಾಮರ್ಥ್ಯವಿರುವಂತಹ ಆಟಗಾರನಿಗಾಗಿ ಹುಡುಕಾಟ ನಡೆದಿತ್ತು ಎಂದು ಕಿರಣ್ ಮೋರೆ ತಿಳಿಸಿದ್ದಾರೆ.

ಗಂಗೂಲಿಯನ್ನು ಒಪ್ಪಿಸಲು ಹತ್ತು ದಿನ ಬೇಕಾಯಿತು

ಗಂಗೂಲಿಯನ್ನು ಒಪ್ಪಿಸಲು ಹತ್ತು ದಿನ ಬೇಕಾಯಿತು

ಹೀಗೆ ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್‌ಗಾಗಿ ಹುಡುಕಾಟ ನಡೆಯುತ್ತಿದ್ದಂತಹ ಸಂದರ್ಭದಲ್ಲಿ ಎಂಎಸ್ ಧೋನಿಗೆ ಅವಕಾಶ ನೀಡಬೇಕೆಂದು ಕಿರಣ್ ಮೋರೆ ಪಟ್ಟು ಹಿಡಿದಿದ್ದರು. ಆದರೆ ಸೌರವ್ ಗಂಗೂಲಿ ಈ ಆಯ್ಕೆಗೆ ಒಪ್ಪಿಗೆ ನೀಡಿರಲಿಲ್ಲ, ಹೀಗಾಗಿ ಕಿರಣ್ ಮೋರೆ ಸತತವಾಗಿ ಹತ್ತು ದಿನಗಳ ಕಾಲ ಸೌರವ್ ಗಂಗೂಲಿಯನ್ನು ಒತ್ತಾಯಿಸಿದ ಬಳಿಕ ಎಂಎಸ್ ಧೋನಿಗೆ2004ರ ದುಲೀಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುವ ಅವಕಾಶ ನೀಡಲಾಯಿತು.

ಧೋನಿ ಸ್ಥಾನಕ್ಕೆ ದೀಪ್‌ದಾಸ್ ಗುಪ್ತಾ ಆಯ್ಕೆಯಾಗಿದ್ದರು

ಧೋನಿ ಸ್ಥಾನಕ್ಕೆ ದೀಪ್‌ದಾಸ್ ಗುಪ್ತಾ ಆಯ್ಕೆಯಾಗಿದ್ದರು

2003ರ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಸ್ಥಾನಕ್ಕೆ ದೀಪ್‌ದಾಸ್ ಗುಪ್ತಾ ಆಯ್ಕೆಯಾಗಿದ್ದರು. ಆದರೆ ಕಿರಣ್ ಮೋರೆ ಎಂಎಸ್ ಧೋನಿಗೇ ಆ ಸ್ಥಾನವನ್ನು ನೀಡಬೇಕೆಂದು ಪಟ್ಟು ಹಿಡಿದು ಅವಕಾಶವನ್ನು ಕೊಡಿಸಿದ್ದರು.

ದೇಶಿ ಕ್ರಿಕೆಟ್‍ನಲ್ಲಿ ಧೋನಿ ಆಟ ನೋಡಿ ಬೆರಗಾಗಿದ್ದ ಮೋರೆ

ದೇಶಿ ಕ್ರಿಕೆಟ್‍ನಲ್ಲಿ ಧೋನಿ ಆಟ ನೋಡಿ ಬೆರಗಾಗಿದ್ದ ಮೋರೆ

ಎಂಎಸ್ ಧೋನಿ ದೇಶೀಯ ಕ್ರಿಕೆಟ್‍ನಲ್ಲಿ ಆಡುತ್ತಿದ್ದ ಆಟವನ್ನು ನೋಡಿ ಕಿರಣ್ ಮೋರೆ ಬೆರಗಾಗಿದ್ದರು, ಹೀಗೆ ಕಿರಣ್ ಮೋರೆ ವೀಕ್ಷಿಸಿದ್ದ ಪಂದ್ಯದಲ್ಲಿ ಧೋನಿ ಆಡುತ್ತಿದ್ದ ತಂಡದ ಮೊತ್ತ 170 ರನ್ ಆಗಿತ್ತು, ಇದರಲ್ಲಿ ಧೋನಿ ವೈಯಕ್ತಿಕವಾಗಿ 130 ರನ್ ಸಿಡಿಸಿ ಮಿಂಚಿದ್ದರು ಎಂದು ಕಿರಣ್ ಮೋರೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Story first published: Thursday, June 3, 2021, 16:31 [IST]
Other articles published on Jun 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X