ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಮ್ಮನ್ನು ಬೆರಗುಗೊಳಿಸಬಲ್ಲ ಐಪಿಎಲ್‌ನ 10 ಸತ್ಯ ಸಂಗತಿಗಳಿವು!

Top 10 Amazing Facts about Indian Premier League (IPL)

ಬೆಂಗಳೂರು: ಭಾರತದ ನಗದು ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಬಗ್ಗೆ ಹೆಚ್ಚಿನ ಸಂಗತಿಗಳು ನಮಗೆಲ್ಲರಿಗೂ ಗೊತ್ತೇಯಿದೆ. ಕೊರೊನಾವೈರಸ್ ಕಾರಣದಿಂದ ಈ ಬಾರಿಯ ಐಪಿಎಲ್ ಆವೃತ್ತಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿದೆ. ಈ ಬಾರಿ ನಡೆಯುತ್ತಿರುವುದು ಐಪಿಎಲ್ 13ನೇ ಆವೃತ್ತಿ. ಅಂದರೆ ಒಟ್ಟು 12 ಸೀಸನ್‌ಗಳು ಮುಗಿದಿದ್ದಾಗಿದೆ. ಐಪಿಎಲ್‌ ಇತಿಹಾಸದಲ್ಲಿ ಅಪರೂಪದ ದಾಖಲೆಗಳು ದಾಖಲಿಸಲ್ಪಟ್ಟಿವೆ.

ಒಂದೇ ಎಸೆತಕ್ಕೆ ಎರಡೆರಡು ಸಾರಿ ಔಟ್: ಬಲು ಅಪರೂಪದ ವಿಡಿಯೋಒಂದೇ ಎಸೆತಕ್ಕೆ ಎರಡೆರಡು ಸಾರಿ ಔಟ್: ಬಲು ಅಪರೂಪದ ವಿಡಿಯೋ

ಐಪಿಎಲ್ ದಾಖಲೆಗಳ ಬಗ್ಗೆ ಕ್ರಿಕೆಟ್ ಪ್ರೇಮಿಗಳಿಗೆ ಹೆಚ್ಚಿನವರಿಗೆ ಗೊತ್ತಿರುತ್ತದೆ. ಆದರೂ ಕೆಲವೊಂದು ದಾಖಲೆಗಳು, ಸತ್ಯ ಸಂಗತಿಗಳು ನಮ್ಮ ಕಣ್ತಪ್ಪಿ ಉಳಿದಿರುವ ಸಾಧ್ಯತೆಗಳಿರುತ್ತವೆ. ಇತಿಹಾಸ ಕೆದಕಿದರೆ ಇಂಥ ಅಚ್ಚರಿಯ ಸತ್ಯ ಸಂಗತಿಗಳು ನಮಗೆ ಕಾಣ ಸಿಗುತ್ತವೆ.

IPL ಇತಿಹಾಸದಲ್ಲಿಯೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ ಡೆಲ್ಲಿ ಬೌಲರ್: 156.22kmphIPL ಇತಿಹಾಸದಲ್ಲಿಯೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ ಡೆಲ್ಲಿ ಬೌಲರ್: 156.22kmph

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಿಮಗೆ ಗೊತ್ತಿರುವ ಅಥವಾ ಗೊತ್ತಿಲ್ಲದಿರಬಹುದಾದ 10 ಅದ್ಭುತ ಸತ್ಯ ಸಂಗತಿಗಳು ಇಲ್ಲಿವೆ ನೋಡಿ.

1. ಒಂದು ಎಸೆತಕ್ಕೆ 21 ಲಕ್ಷ ರೂ.

1. ಒಂದು ಎಸೆತಕ್ಕೆ 21 ಲಕ್ಷ ರೂ.

2018ರಲ್ಲಿ ಐಪಿಎಲ್ ಪ್ರಸಾರಕದ ಹಕ್ಕು 16347.5 ಕೋ.ರೂ.ಗೆ ಸ್ಟಾರ್ ಇಂಡಿಯಾ ನೆಟ್ವರ್ಕ್‌ ಪಾಲಾಯಿತು. ಅಂದರೆ ಇಲ್ಲಿ ಪ್ರತೀ ಎಸೆತವನ್ನು ಲೆಕ್ಕಾಚಾರ ಮಾಡಿದರೆ ಪ್ರತೀ ಎಸೆತಕ್ಕೂ ಸ್ಟಾರ್ ಇಂಡಿಯಾ ನೆಟ್ವರ್ಕ್ ಬರೋಬ್ಬರಿ 21 ಲಕ್ಷ ರೂ. ವ್ಯಯಿಸಿದಂತಾಗುತ್ತದೆ.

2. ಡೆಲ್ಲಿ ಹಣೆಯಲ್ಲಿ ಕೆಟ್ಟ ದಾಖಲೆ

2. ಡೆಲ್ಲಿ ಹಣೆಯಲ್ಲಿ ಕೆಟ್ಟ ದಾಖಲೆ

ಐಪಿಎಲ್‌ನಲ್ಲಿ ಒಂದೇ ಒಂದು ಸಾರಿಯೂ ಫೈನಲ್‌ನಲ್ಲಿ ಆಡದ ಏಕಮಾತ್ರ ತಂಡವೆಂಬ ದಾಖಲೆ ಈಗ ಡೆಲ್ಲಿ ಕ್ಯಾಪಿಟಲ್ಸ್ ಎಂದು ಹೆಸರು ಬದಲಿಸಿಕೊಂಡಿರುವ ಹಿಂದಿನ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಹೆಸರಿನಲ್ಲಿದೆ. ಡೆಲ್ಲಿ ತಂಡ ಈವರೆಗೂ ಒಮ್ಮೆಯೂ ಫೈನಲ್‌ ಹಂತಕ್ಕೇರಿಲ್ಲ.

3. ಮೊದಲ ಲೈವ್ ಪ್ರಸಾರ

3. ಮೊದಲ ಲೈವ್ ಪ್ರಸಾರ

ಐಪಿಎಲ್ ಪಂದ್ಯವನ್ನು ನೀವು ಮೊದಲು ವೈವ್ ನೋಡಿದ್ದು ಯಾವಾಗ ನೆನಪಿಸಿಕೊಳ್ಳಿ. ಐಪಿಎಲ್ ಪಂದ್ಯಗಳನ್ನು ಮೊದಲ ಬಾರಿಗೆ ಲೈವ್ ಪ್ರಸಾರ ಮಾಡಿದ ಹೆಗ್ಗಳಿಕೆ ಯೂಟ್ಯೂಬ್‌ಗೆ ಸಲ್ಲುತ್ತದೆ. 2010ರಲ್ಲಿ ಯೂಟ್ಯೂಬ್‌ ಐಪಿಎಲ್‌ ಅನ್ನು ನೇರಪ್ರಸಾರಗೊಳಿಸಿತ್ತು.

4. ಯುವಿಗೆ ಭರ್ಜರಿ ಬೆಲೆ

4. ಯುವಿಗೆ ಭರ್ಜರಿ ಬೆಲೆ

2015ರ ವರೆಗೆ ಐಪಿಎಲ್‌ನಲ್ಲಿ ಅತೀ ಹೆಚ್ಚಿನ ಬೆಲೆಗೆ ಹರಾಜಾದ ಆಟಗಾರನೆಂದರೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್. 2015ರಲ್ಲಿ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಬರೋಬ್ಬರಿ 16 ಕೋ.ರೂ.ಗೆ ಖರೀದಿಸಿತ್ತು. ವಿಶೇಷ ಅಂದರೆ ಅಂದಿನ ಐಪಿಎಲ್ ಬಹುಮಾನದ ಮೊತ್ತ 15 ಕೋ.ರೂ. ಆಗಿತ್ತು.

5. ಪ್ರವೀಣ್‌ ಕುಮಾರ್

5. ಪ್ರವೀಣ್‌ ಕುಮಾರ್

ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಡಾಟ್ ಬಾಲ್ ಹಾಕಿದ ದಾಖಲೆ ವೇಗಿ ಪ್ರವೀಣ್ ಕುಮಾರ್ ಹೆಸರಿನಲ್ಲಿದೆ. 119 ಪಂದ್ಯಗಳನ್ನಾಡಿದ್ದ ಪ್ರವೀಣ್ 1075 ಡಾಟ್ ಬಾಲ್‌ಗಳನ್ನು ಹಾಕಿದ್ದರು. ಐಪಿಎಲ್‌ನಲ್ಲಿ ಮೊದಲ ಎಸೆತ ಎಸೆದ ಬೌಲರ್‌ ಕೂಡ ಪ್ರವೀಣ್ ಅವರೇ.

6. ಸಚಿನ್ ಮತ್ತು ಕೊಹ್ಲಿ

6. ಸಚಿನ್ ಮತ್ತು ಕೊಹ್ಲಿ

ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಅತ್ಯಮೂಲ್ಯ ಆಟಗಾರನೆಂಬ ಪ್ರಶಸ್ತಿ ಪಡೆದ ಭಾರತೀಯರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ಭಾರತೀಯರಲ್ಲಿ ಈ ದಾಖಲೆಯಿರುವುದು ಈ ಇಬ್ಬರಲ್ಲೇ.

7. ಚೆನ್ನೈ ಸೂಪರ್ ಕಿಂಗ್ಸ್

7. ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್ ಫ್ರಾಂಚೈಸಿಗಳಲ್ಲಿ ಒಂದು ಬಾರಿಯೂ ನಾಯಕನನ್ನು ಬದಲಿಸದ ಫ್ರಾಂಚೈಸಿಯೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್. ಈ ತಂಡ ಐಪಿಎಲ್ ಆರಂಭದಿಂದಲೂ ಎಂಎಸ್ ದೋನಿಯವರನ್ನೇ ತಂಡದ ನಾಯಕನನ್ನಾಗಿ ನೇಮಿಸಿದೆ.

8. ಗೇಲ್, ರಾಹುಲ್

8. ಗೇಲ್, ರಾಹುಲ್

ಐಪಿಎಲ್‌ನಲ್ಲಿ ಅತೀ ವೇಗ ಅರ್ಧ ಶತಕ ದಾಖಲೆ ಕನ್ನಡಿಗ ಕೆಎಲ್ ರಾಹುಲ್ ಹೆಸರಿನಲ್ಲಿದೆ. ರಾಹುಲ್ ಕೇವಲ 14 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ್ದರು. ಇನ್ನು ಐಪಿಎಲ್‌ನಲ್ಲಿ ವೇಗದ ಶತಕದ ದಾಖಲೆ ಯುನಿವರ್ಸಲ್ ಬಾಸ್ ಗೇಲ್ ಅವರದ್ದು. ಗೇಲ್ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

9. ಒಂದೇ ಎಸೆತ, ಒಂದು ವಿಕೆಟ್

9. ಒಂದೇ ಎಸೆತ, ಒಂದು ವಿಕೆಟ್

ಐಪಿಎಲ್ ಇತಿಹಾಸದಲ್ಲಿ ಒಂದೇ ಎಸೆತ ಎಸೆದ ದಾಖಲೆ ಆಸ್ಟ್ರೇಲಿಯಾದ ದಂತಕತೆ ಆ್ಯಡಮ್ ಗಿಲ್‌ಕ್ರಿಸ್ಟ್ ಅವರದ್ದು. ಅಚ್ಚರಿಯೆಂದರೆ ಎಸೆದ ಆ ಒಂದು ಎಸೆತಕ್ಕೆ ಗಿಲ್‌ಕ್ರಿಸ್ಟ್‌ಗೆ ಒಂದು ವಿಕೆಟ್ ಕೂಡ ಲಭಿಸಿತ್ತು! (ಅಚ್ಚರಿ ಸನ್ನಿಸಿದರೆ ಇಲ್ಲಿ ಚೆಕ್ ಮಾಡಿನೋಡಿ!).

10. ಕೆಕೆಆರ್‌ನಲ್ಲಿ ಶತಕದ ಬರ

10. ಕೆಕೆಆರ್‌ನಲ್ಲಿ ಶತಕದ ಬರ

ಬ್ರೆಂಡನ್ ಮೆಕಲಮ್ ಶತಕ ಚಚ್ಚಿದ್ದು ಬಿಟ್ಟರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆ ಬಳಿಕ ಒಂದೂ ಶತಕ ಬಾರಿಸಿದವರಿಲ್ಲ. ಕೆಕೆಆರ್‌ ಪರ ಶತಕ ಬಾರಿಸಿದ ಏಕಮಾತ್ರ ಬ್ಯಾಟ್ಸ್‌ಮನ್ ಮೆಕಲಮ್. ಬಹುಶಃ ಈ ಬಾರಿ ಈ ಕೆಟ್ಟ ದಾಖಲೆ ತೀರುತ್ತಾ ಕಾದುನೋಡಬೇಕಿದೆ.

Story first published: Thursday, October 15, 2020, 10:05 [IST]
Other articles published on Oct 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X