ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಬಾರಿ 300ಕ್ಕೂ ಅಧಿಕ ರನ್ ಕಲೆ ಹಾಕಿರುವ ತಂಡ ಯಾವುದು?

Top 10 list of teams with most times 300 plus scores in ODI cricket history

ಸದ್ಯ ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಿರತವಾಗಿದ್ದು, 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೆರಿಬಿಯನ್ನರ ವಿರುದ್ಧ ಸೆಣಸಾಟ ನಡೆಸುತ್ತಿದೆ. ಈ ಪೈಕಿ ಮೊದಲೆರಡು ಪಂದ್ಯಗಳಲ್ಲಿ ಈಗಾಗಲೇ ಗೆದ್ದು ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಮೂರನೇ ಪಂದ್ಯವನ್ನೂ ಗೆದ್ದು ವೈಟ್ ವಾಶ್ ಬಳಿಯುವ ಯೋಜನೆಯಲ್ಲಿದೆ.

ಸತತವಾಗಿ 23 ಮತ್ತು 22 ಏಕದಿನ ಪಂದ್ಯ ಸೋತ ಕಳಪೆ ತಂಡವಿದು; ಅಪಾಯದಲ್ಲಿ ವಿಂಡೀಸ್!ಸತತವಾಗಿ 23 ಮತ್ತು 22 ಏಕದಿನ ಪಂದ್ಯ ಸೋತ ಕಳಪೆ ತಂಡವಿದು; ಅಪಾಯದಲ್ಲಿ ವಿಂಡೀಸ್!

ಇನ್ನು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಕಳೆದ ಭಾನುವಾರ ( ಜುಲೈ 24 ) ಕ್ವೀನ್ಸ್ ಪಾರ್ಕ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯ ಕ್ರಿಕೆಟ್ ಇತಿಹಾಸದ 4438ನೇ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಗಿತ್ತು ಹಾಗೂ ಈ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಎರಡೂ ತಂಡಗಳು ಸಹ 300ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದವು.

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಕಾಮನ್‍ವೆಲ್ತ್ ಗೇಮ್ಸ್‌ನಿಂದ ಹೊರಕ್ಕೆ?ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಕಾಮನ್‍ವೆಲ್ತ್ ಗೇಮ್ಸ್‌ನಿಂದ ಹೊರಕ್ಕೆ?

ಕೇವಲ ಈ ಪಂದ್ಯದಲ್ಲಿ ಮಾತ್ರವಲ್ಲದೇ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಜುಲೈ 22ರಂದು ನಡೆದಿದ್ದ ಸರಣಿಯ ಪ್ರಥಮ ಏಕದಿನ ಪಂದ್ಯದಲ್ಲಿಯೂ ಕೂಡ ಇತ್ತಂಡಗಳು 300ಕ್ಕಿಂತ ಅಧಿಕ ರನ್ ಕಲೆಹಾಕಿದ್ದವು. ಈ ಮೂಲಕ ವೆಸ್ಟ್ ಇಂಡೀಸ್ ಕ್ರಿಕೆಟ್ ಇತಿಹಾಸದಲ್ಲಿ 54ನೇ ಬಾರಿಗೆ ಏಕದಿನ ಪಂದ್ಯದಲ್ಲಿ 300ಕ್ಕೂ ಹೆಚ್ಚು ರನ್ ಕಲೆಹಾಕಿತು. ಹಾಗಾದರೆ ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡ ಎಷ್ಟು ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದು ಎಷ್ಟು ಬಾರಿ 300ಕ್ಕಿಂತ ಅಧಿಕ ರನ್ ಕಲೆ ಹಾಕಿದೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

ಏಕದಿನ ಕ್ರಿಕೆಟ್‍ನಲ್ಲಿ 300ಕ್ಕಿಂತ ಅಧಿಕ ರನ್ ಕಲೆಹಾಕಿದ ತಂಡಗಳ ಪಟ್ಟಿ ( ಜುಲೈ 26, 2022ರವರೆಗೆ )

ಏಕದಿನ ಕ್ರಿಕೆಟ್‍ನಲ್ಲಿ 300ಕ್ಕಿಂತ ಅಧಿಕ ರನ್ ಕಲೆಹಾಕಿದ ತಂಡಗಳ ಪಟ್ಟಿ ( ಜುಲೈ 26, 2022ರವರೆಗೆ )

1. ಟೀಮ್ ಇಂಡಿಯಾ ಇಲ್ಲಿಯವರೆಗೂ ಒಟ್ಟು 1007 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 122 ಪಂದ್ಯಗಳಲ್ಲಿ 300ಕ್ಕಿಂತ ಅಧಿಕ ರನ್ ದಾಖಲಿಸಿದೆ.

2. ಆಸ್ಟ್ರೇಲಿಯಾ ಇಲ್ಲಿಯವರೆಗೂ ಒಟ್ಟು 966 ಏಕದಿನ ಪಂದ್ಯಗಳನ್ನಾಡಿದ್ದು, 113 ಬಾರಿ 300ಕ್ಕಿಂತ ಅಧಿಕ ರನ್ ದಾಖಲಿಸಿದೆ.

3. ದಕ್ಷಿಣ ಆಫ್ರಿಕಾ ಇಲ್ಲಿಯವರೆಗೂ ಒಟ್ಟು 644 ಏಕದಿನ ಪಂದ್ಯಗಳನ್ನಾಡಿದ್ದು, 87 ಪಂದ್ಯಗಳಲ್ಲಿ 300ಕ್ಕಿಂತ ಅಧಿಕ ರನ್ ದಾಖಲಿಸಿದೆ.

4. ಪಾಕಿಸ್ತಾನ ಇಲ್ಲಿಯವರೆಗೂ 942 ಏಕದಿನ ಪಂದ್ಯಗಳನ್ನಾಡಿದ್ದು, 86 ಪಂದ್ಯಗಳಲ್ಲಿ 300ಕ್ಕಿಂತ ಅಧಿಕ ರನ್ ದಾಖಲಿಸಿದೆ.

5. ಕ್ರಿಕೆಟ್ ಜನಕ ಇಂಗ್ಲೆಂಡ್ ಇಲ್ಲಿಯವರೆಗೂ 770 ಏಕದಿನ ಪಂದ್ಯಗಳನ್ನಾಡಿದ್ದು, 84 ಪಂದ್ಯಗಳಲ್ಲಿ 300ಕ್ಕಿಂತ ಅಧಿಕ ರನ್ ದಾಖಲಿಸಿದೆ.

6. ಶ್ರೀಲಂಕಾ ತಂಡ ಇಲ್ಲಿಯವರೆಗೂ 875 ಏಕದಿನ ಪಂದ್ಯಗಳನ್ನಾಡಿದ್ದು, 77 ಪಂದ್ಯಗಳಲ್ಲಿ 300ಕ್ಕಿಂತ ಅಧಿಕ ರನ್ ದಾಖಲಿಸಿದೆ.

7. ನ್ಯೂಜಿಲೆಂಡ್ ತಂಡ ಇಲ್ಲಿಯವರೆಗೂ 781 ಏಕದಿನ ಪಂದ್ಯಗಳನ್ನಾಡಿದ್ದು, 65 ಪಂದ್ಯಗಳಲ್ಲಿ 300ಕ್ಕಿಂತ ಅಧಿಕ ರನ್ ದಾಖಲಿಸಿದೆ.

8. ವೆಸ್ಟ್ ಇಂಡೀಸ್ ಇಲ್ಲಿಯವರೆಗೂ 848 ಏಕದಿನ ಪಂದ್ಯಗಳನ್ನಾಡಿದ್ದು, 54 ಪಂದ್ಯಗಳಲ್ಲಿ 300ಕ್ಕಿಂತ ಅಧಿಕ ರನ್ ದಾಖಲಿಸಿದೆ.

9. ಅಫ್ಘಾನಿಸ್ತಾನ ಇಲ್ಲಿಯವರೆಗೂ 138 ಏಕದಿನ ಪಂದ್ಯಗಳನ್ನಾಡಿದ್ದು, 29 ಪಂದ್ಯಗಳಲ್ಲಿ 300ಕ್ಕಿಂತ ಅಧಿಕ ರನ್ ದಾಖಲಿಸಿದೆ.

10. ಬಾಂಗ್ಲಾದೇಶ ಇಲ್ಲಿಯವರೆಗೂ 397 ಏಕದಿನ ಪಂದ್ಯಗಳನ್ನಾಡಿದ್ದು, 22 ಪಂದ್ಯಗಳಲ್ಲಿ 300ಕ್ಕಿಂತ ಅಧಿಕ ರನ್ ದಾಖಲಿಸಿದೆ.

ಟೀಮ್ ಇಂಡಿಯಾ ಸಾಧನೆ

ಟೀಮ್ ಇಂಡಿಯಾ ಸಾಧನೆ

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 300ಕ್ಕಿಂತ ಅಧಿಕ ರನ್ ದಾಖಲಿಸಿರುವ ತಂಡ ಎಂಬ ಕೀರ್ತಿಯನ್ನು ಭಾರತ ತಂಡ ಹೊಂದಿದೆ. 1007 ಏಕದಿನ ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ 525 ಪಂದ್ಯಗಳಲ್ಲಿ ಜಯ ಸಾಧಿಸಿ, 432 ಪಂದ್ಯಗಳಲ್ಲಿ ಸೋತು, 9 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ ಹಾಗೂ ಉಳಿದ 30 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ.

ಬಾಂಗ್ಲಾದೇಶಕ್ಕೆ ಅಂತಿಮ ಸ್ಥಾನ

ಬಾಂಗ್ಲಾದೇಶಕ್ಕೆ ಅಂತಿಮ ಸ್ಥಾನ

ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಬಾರಿ 300ಕ್ಕೂ ಅಧಿಕ ರನ್ ಬಾರಿಸಿದ ತಂಡಗಳ ಟಾಪ್ 10 ಪಟ್ಟಿಯಲ್ಲಿ ಬಾಂಗ್ಲಾದೇಶ ಅಂತಿಮ ಸ್ಥಾನ ಪಡೆದುಕೊಂಡಿದೆ. ಒಟ್ಟು 397 ಏಕದಿನ ಪಂದ್ಯಗಳನ್ನಾಡಿರುವ ಬಾಂಗ್ಲಾದೇಶ 143 ಪಂದ್ಯಗಳಲ್ಲಿ ಗೆದ್ದಿದ್ದು, 247 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ ಹಾಗೂ 7 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿವೆ.

Story first published: Tuesday, July 26, 2022, 16:08 [IST]
Other articles published on Jul 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X