ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳು

Top 5 Batsmen who hold the most sixes record in international cricket

ಬೆಂಗಳೂರು: ಆಧುನಿಕ ದಿನಗಳಲ್ಲಿ ಕ್ರಿಕೆಟ್ ವೀಕ್ಷಿಸುವಾಗೆಲ್ಲಾ ಮೈದಾನ ಚಿಕ್ಕದಾಗಿದೆಯೋ ಅನ್ನಿಸುತ್ತಿರುತ್ತದೆ. ಯಾಕೆಂದರೆ ಈಗಿನ ಬ್ಯಾಟ್ಸ್‌ಮನ್‌ಗಳು ಅಷ್ಟು ಲೀಲಾಜಾಲವಾಗಿ ಚೆಂಡನ್ನು ಸಿಕ್ಸ್‌ ಲೈನ್‌ನಿಂದಾಚೆಗೆ ಅಟ್ಟುತ್ತಿರುತ್ತಾರೆ. ಮುಖ್ಯವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ ವೇಳೆ ಸಿಕ್ಸ್‌ಗಳ ಸುರಿಮಳೆಯೇ ಬೀಳೋದನ್ನೂ ಈ ದಿನಗಳಲ್ಲಿ ಆಗಾಗ ನೋಡುತ್ತಿರುತ್ತೇವೆ. ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸಿಕ್ಸ್‌, ಫೋರ್‌ಗಳು ಅಷ್ಟರಮಟ್ಟಿಗೆ ಸುಲಭವೆನಿಸಿದೆ.

ಕುಂಬ್ಳೆಗೆ 'ಹತ್ತು ವಿಕೆಟ್' ದಾಖಲೆ ತಪ್ಪಿಸಲು ಮಾಡಿದ ತಂತ್ರ ಬಹಿರಂಗ ಪಡಿಸಿದ ವಾಸಿಮ್ ಅಕ್ರಮ್ಕುಂಬ್ಳೆಗೆ 'ಹತ್ತು ವಿಕೆಟ್' ದಾಖಲೆ ತಪ್ಪಿಸಲು ಮಾಡಿದ ತಂತ್ರ ಬಹಿರಂಗ ಪಡಿಸಿದ ವಾಸಿಮ್ ಅಕ್ರಮ್

ಬೀಸುಗೈ ದಾಂಡಿಗರೆಂದೇ ಹೆಸರಾದ ಅನೇಕ ಬ್ಯಾಟ್ಸ್‌ಮನ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿದ್ದಾರೆ. ವಿಶೇಷವೆಂದರೆ ನಿವೃತ್ತರಾಗಿರುವ ಒಬ್ಬ ಬ್ಯಾಟ್ಸ್‌ಮನ್‌ ಹೆಸರಿನಲ್ಲಿ ಈಗಲೂ ಅತ್ಯಧಿಕ ಸಿಕ್ಸ್‌ ದಾಖಲೆಯಿದೆ.

ಕ್ರಿಕೆಟ್‌, ಸೆಕ್ಸ್‌ ಎರಡರ ವೇಳೆಯೂ ಹೇಳಬಹುದಾದ ಪೋಲಿ ಪದಗಳಿವು!ಕ್ರಿಕೆಟ್‌, ಸೆಕ್ಸ್‌ ಎರಡರ ವೇಳೆಯೂ ಹೇಳಬಹುದಾದ ಪೋಲಿ ಪದಗಳಿವು!

ಇಂಟರ್‌ ನ್ಯಾಷನಲ್ ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸರ್‌ಗಳ ಬಾರಿಸಿದ ಟಾಪ್ ಐವರು ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಲ್ಲಿದೆ.

1. ಕ್ರಿಸ್ ಗೇಲ್

1. ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್‌ಗೇಲ್ ಅವರು ಸಿಕ್ಸ್ ಸಿಡಿಸುವ ಪರಿಯೇ ಚಂದ. ಎಂಥಾ ಎಸೆತಕ್ಕಾದರೂ ಸುಲಭವಾಗಿ ಸಿಕ್ಸ್, ಫೋರ್ ಬಾರಿಸುವ ಕಲೆ ಗೇಲ್‌ಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬರೋಬ್ಬರಿ 534 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದಾಖಲೆ ಗೇಲ್ ಹೆಸರಿನಲ್ಲಿದೆ. ಯುನಿವರ್ಸಲ್ ಬಾಸ್ ಎಂದು ಕರೆಯಲ್ಪಡುವ ಗೇಲ್ ಸುಮಾರು 20 ವರ್ಷಗಳ ವೃತ್ತಿ ಜೀವನದಲ್ಲಿ 462 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಬರೀ ಸಿಕ್ಸ್ ಪಟ್ಟಿಯೇ ಇಷ್ಟು ದೊಡ್ಡದಿದೆ. ಇನ್ನು ಬೌಂಡರಿಗಳನ್ನು ಲೆಕ್ಕ ಹಾಕಿದರೆ 2312 ಸಿಗುತ್ತದೆ. ಗೇಲ್ ಒಟ್ಟಿಗೆ 25,128 ರನ್‌ಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಲೆ ಹಾಕಿದ್ದಾರೆ.

2. ಶಾಹಿದ್ ಅಫ್ರಿದಿ

2. ಶಾಹಿದ್ ಅಫ್ರಿದಿ

ಪಾಕಿಸ್ತಾನ ತಂಡದ ಮಾಜಿ ಆಲ್ ರೌಂಡರ್ ಅಫ್ರಿದಿ ಈಗಲೂ ಅತ್ಯಧಿಕ ಅಂತಾರಾಷ್ಟ್ರೀಯ ಸಿಕ್ಸರ್‌ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಅಫ್ರಿದಿ ಒಟ್ಟಿಗೆ 476 ಅಂತಾರಾಷ್ಟ್ರೀಯ ಸಿಕ್ಸರ್‌ಗಳ ವಿಶ್ವದಾಖಲೆ ಹೊಂದಿದ್ದಾರೆ. 22 ವರ್ಷಗಳ ವೃತ್ತಿ ಜೀವನದಲ್ಲಿ ಅಫ್ರಿದಿ ಸುಮಾರು 1,053 ಬೌಂಡರಿಗಳನ್ನು ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11,196 ರನ್‌ ದಾಖಲೆ ಅಫ್ರಿದಿ ಹೆಸರಿನಲ್ಲಿದೆ.

3. ರೋಹಿತ್ ಶರ್ಮಾ

3. ರೋಹಿತ್ ಶರ್ಮಾ

'ಹಿಟ್‌ಮ್ಯಾನ್' ಖ್ಯಾತಿಯ, ಭಾರತದ ಉಪನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್ ದಾಖಲೆಯಲ್ಲಿ ತೃತೀಯ ಸ್ಥಾನದಲ್ಲಿದ್ದಾರೆ. ರೋಹಿತ್ ಹೆಸರಿನಲ್ಲಿ 423 ಸಿಕ್ಸರ್‌ಗಳ ದಾಖಲೆಯಿದೆ. 33ರ ಹರೆಯದ ರೋಹಿತ್ 364 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲೇ ಮೂರು ಬಾರಿ ದ್ವಿಶತಕ ಬಾರಿಸಿದ ಹಿರಿಮೆ ರೋಹಿತ್‌ ಅವರದ್ದು. 1278 ಅಂತಾರಾಷ್ಟ್ರೀಯ ಫೋರ್‌, 14,029 ರನ್ ದಾಖಲೆ ರೋಹಿತ್‌ ಹೆಸರಿನಲ್ಲಿದೆ.

4. ಬ್ರೆಂಡನ್ ಮೆಕಲಮ್

4. ಬ್ರೆಂಡನ್ ಮೆಕಲಮ್

ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕಲಮ್ ಯಾವುದೇ ಬೌಲರ್‌ಗಳಿಗೆ ಲೆಕ್ಕಿಸದೆ ಬ್ಯಾಟ್‌ ಬೀಸುವವರು. ಮೆಕಲಮ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 398 ಸಿಕ್ಸ್‌ ದಾಖಲೆ ಹೊಂದಿದ್ದಾರೆ. 14 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಮೆಕಲಮ್ 432 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, 14,676 ರನ್ ಗಳಿಸಿದ್ದಾರೆ.

5. ಎಂಎಸ್ ಧೋನಿ

5. ಎಂಎಸ್ ಧೋನಿ

ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ, ಅತ್ಯಧಿಕ ಅಂತಾರಾಷ್ಟ್ರೀಯ ಸಿಕ್ಸರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. 15 ವರ್ಷಗಳ ವೃತ್ತಿ ಬದುಕಿನಲ್ಲಿ 538 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಧೋನಿ, 359 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ, ಅಷ್ಟೇ ಅಲ್ಲ ಬರೋಬ್ಬರಿ 1,486 ಫೋರ್‌ಗಳ ದಾಖಲೆ ನಿರ್ಮಿಸಿದ್ದಾರೆ. 17,266 ರನ್ ಗಳಿಸಿರುವ ಧೋನಿಯ ಫೋರ್‌, ಸಿಕ್ಸ್‌ಗಳ ಸಂಖ್ಯೆಯೇ 1,845 ಇದೆ!.

Story first published: Tuesday, June 9, 2020, 18:15 [IST]
Other articles published on Jun 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X