ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸತತ ಶತಕಗಳ ಬಾರಿಸಿ ವಿಶ್ವದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳು

Top 5 Batsmen who hold the record of most consecutive centuries in ODIs

ಬೆಂಗಳೂರು, ಮೇ 16: ಕ್ರಿಕೆಟ್‌ನಲ್ಲಿ ಪ್ರತೀ ಪರಿಸ್ಥಿತಿಯೂ ಬ್ಯಾಟ್ಸ್‌ಮನ್‌ಗಳ ಅಥವಾ ಬೌಲರ್‌ಗಳ ಕೈಯಲ್ಲಿರುವುದಿಲ್ಲ. ಆದರೆ ಸಂದರ್ಭಕ್ಕೆ ತಕ್ಕಂತೆ ಆಟದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಕೌಶಲಗಳನ್ನು ಸರಿಯಾದ ಸಮಯದಲ್ಲಿ ಬಳಸಿ ಆಡುವ ಆಟಗಾರ ಉತ್ತಮ ಪ್ರದರ್ಶನ ನೀಡಬಲ್ಲ. ದಾಖಲೆಗಳನ್ನೂ ನಿರ್ಮಿಸಬಲ್ಲ. ಅಂದ್ಹಾಗೆ, ಪ್ರತೀ ಪಂದ್ಯಗಳ ವೇಳೆಯೂ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಿರುತ್ತವೆ. ಈ ಆಧುನಿಕ ಯುಗದಲ್ಲಿ ದಾಖಲೆಗಳನ್ನು ನಿರ್ಮಿಸುವ ಕ್ರಿಕೆಟಿಗ ಸ್ಟಾರ್ ಆಗಿ ಹೆಚ್ಚು ಮಿನುಗುತ್ತಾನೆ.

ಎಂಐ-ಸಿಎಸ್‌ಕೆ ಸೇರಿಸಿ ಬಲಿಷ್ಠ ತಂಡ ಪ್ರಕಟಿಸಿದ ರೋಹಿತ್, ಸುರೇಶ್ ರೈನಾಎಂಐ-ಸಿಎಸ್‌ಕೆ ಸೇರಿಸಿ ಬಲಿಷ್ಠ ತಂಡ ಪ್ರಕಟಿಸಿದ ರೋಹಿತ್, ಸುರೇಶ್ ರೈನಾ

ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸೋದು ಸುಲಭದ ಮಾತಲ್ಲ. ಶತಕ ಪೂರೈಸೋಕೆ ಬ್ಯಾಟ್ಸ್‌ಮನ್‌ಗಳಿಗೆ ಸರಿಯಾದ ತಂತ್ರಗಾರಿಕೆ ಮತ್ತು ತಾಳ್ಮೆ ಬೇಕು. ಆದರೆ ಏಕದಿನದಲ್ಲಿ ಸತತ ಶತಕಗಳನ್ನು ಬಾರಿಸಿದ ಕೆಲವೇ ಕೆಲವು ಬ್ಯಾಟ್ಸ್‌ಮನ್‌ಗಳಿದ್ದಾರೆ.

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಶೀಘ್ರ ನಡೆಯುವುದರಲ್ಲಿದೆ ವಿನ್ಸಿ ಟಿ10 ಲೀಗ್‌!ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಶೀಘ್ರ ನಡೆಯುವುದರಲ್ಲಿದೆ ವಿನ್ಸಿ ಟಿ10 ಲೀಗ್‌!

ಏಕದಿನ ಕ್ರಿಕೆಟ್‌ನಲ್ಲಿ ಸತತವಾಗಿ ಹೆಚ್ಚು ಶತಕಗಳ ದಾಖಲೆ ಹೊಂದಿರುವ ಬ್ಯಾಟ್ಸ್‌ಮನ್‌ಗಳ ಸಂಕ್ಷಿಪ್ತ ಮಾಹಿತಿ ಕೆಳಗಿದೆ.

1. ಕುಮಾರ ಸಂಗಕ್ಕಾರ

1. ಕುಮಾರ ಸಂಗಕ್ಕಾರ

ಆಸ್ಟ್ರೇಲಿಯಾದಲ್ಲಿ 2015ರಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕಾರ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದರು. ಜೊತೆಗೆ ಸತತ ಶತಕಗಳನ್ನು ಬಾರಿಸಿದ್ದಕ್ಕಾಗಿಯೂ ಇತಿಹಾಸ ಬರೆದಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಅದರಲ್ಲೂ ವಿಶ್ವಕಪ್‌ನಲ್ಲಿ ಸತತ 4 ಶತಕಗಳನ್ನು ಸಂಗಕ್ಕಾರ ಬಾರಿಸಿದ್ದರು. 105*, 117*, 104, 124 ರನ್‌ಗಳನ್ನು ಬಾರಿಸಿದ್ದ ಸಂಗಕ್ಕಾರ ಈ ವಿಶ್ವದಾಖಲೆ ನಿರ್ಮಿಸಿದ್ದರು.

2. ಝಹೀರ್ ಅಬ್ಬಾಸ್

2. ಝಹೀರ್ ಅಬ್ಬಾಸ್

80ರ ದಶಕದಲ್ಲಿ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಎದುರಾಳಿತ್ವ ಹೆಚ್ಚಿತ್ತು. 1982-83ರ ಇಸವಿಯಲ್ಲಿ ಪಾಕಿಸ್ತಾನ ಬ್ಯಾಟ್ಸ್‌ಮನ್ ಝಹೀರ್ ಅಬ್ಬಾಸ್ ಏಕದಿನ ಕ್ರಿಕೆಟ್‌ನಲ್ಲಿ ಸತತ 3 ಶತಕಗಳನ್ನು ಬಾರಿಸಿ ದಾಖಲೆ ಪುಟದಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದರು. 118, 105, 113 ರನ್ ಗಳನ್ನು ಅಬ್ಬಾಸ್ ಆವತ್ತು ಬಾರಿಸಿದ್ದರು. ಇದರಲ್ಲಿ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದಿದ್ದರೆ, 1 ಪಂದ್ಯದಲ್ಲಿ ಭಾರತ ಜಯಿಸಿತ್ತು.

3. ಎಬಿ ಡಿ ವಿಲಿಯರ್ಸ್

3. ಎಬಿ ಡಿ ವಿಲಿಯರ್ಸ್

ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿವಿಲಿಯರ್ಸ್ ಕೂಡ ಸತತ ಶತಕಗಳನ್ನು ಬಾರಿಸಿದ್ದಕ್ಕಾಗಿ ದಾಖಲೆ ಬರೆದಿದ್ದರು. ದಕ್ಷಿಣ ಆಫ್ರಿಕಾ ತಂಡದ ಪ್ರತಿಭಾನ್ವಿತ ಆಟಗಾರ ಎಬಿ ಡಿ, 2010ರಲ್ಲಿ ಸತತ 3 ಶತಕಗಳನ್ನು ಬಾರಿಸಿ ಗಮನ ಸೆಳೆದಿದ್ದರು. ಭಾರತ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮೂರೂ ಪಂದ್ಯಗಳಲ್ಲಿ ಎಬಿಡಿ ಶತಕ ಸಿಡಿಸಿದ್ದರು.

4. ವಿರಾಟ್ ಕೊಹ್ಲಿ

4. ವಿರಾಟ್ ಕೊಹ್ಲಿ

ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಹೆಸರಿನಲ್ಲೂ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದ ವಿಶ್ವದಾಖಲೆಯಿದೆ. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಕೊಹ್ಲಿ ಸತತ 3 ಶತಕಗಳನ್ನು ಬಾರಿಸಿದ್ದರು. ಆವತ್ತು ಕೊಹ್ಲಿ 140, 157*, 107 ರನ್ ಬಾರಿಸಿದ್ದರು. ಇದರಲ್ಲಿ ಭಾರತ 1 ಪಂದ್ಯ, ವೆಸ್ಟ್ ಇಂಡೀಸ್ 1 ಪಂದ್ಯ ಗೆದ್ದಿದ್ದರೆ, 1 ಪಂದ್ಯ ಟೈ ಎನಿಸಿತ್ತು.

5. ರೋಹಿತ್ ಶರ್ಮಾ

5. ರೋಹಿತ್ ಶರ್ಮಾ

ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 2019ರ ವಿಶ್ವಕಪ್‌ನಲ್ಲಿ ಸತತ 3 ಶತಕಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಟೂರ್ನಿಯಲ್ಲಿ 5 ಶತಕಗಳನ್ನು ಬಾರಿಸಿದ ವಿಶ್ವದಾಖಲೆ ಬರೆದ ಮೊದಲ ಆಟಗಾರ, ಏಕಮಾತ್ರ ಆಟಗಾರ ರೋಹಿತ್ ಶರ್ಮಾ. ವಿಶ್ವಕಪ್‌ನಲ್ಲೂ 5 ಶತಕಗಳನ್ನು ಬಾರಿಸಿ ಸಂಗಕ್ಕಾರ ಹೆಸರಿನಲ್ಲಿದ್ದ 4 ಶತಕಗಳ ದಾಖಲೆಯನ್ನು ಶರ್ಮಾ ಮುರಿದಿದ್ದರು.

ಸತತ ಮೂರು ಏಕದಿನ ಶತಕಗಳನ್ನು ಗಳಿಸಿದ ಇತರ ಬ್ಯಾಟ್ಸ್‌ಮನ್‌ಗಳು

ಸಾಯೀದ್ ಅನ್ವರ್, ಪಾಕಿಸ್ತಾನ (1993), ಹರ್ಷಲ್ ಗಿಬ್ಸ್, ದಕ್ಷಿಣ ಆಫ್ರಿಕಾ (2002), ಕ್ವಿಂಟನ್ ಡಿ ಕಾಕ್, ದಕ್ಷಿಣ ಆಫ್ರಿಕಾ (2013), ರಾಸ್ ಟೇಲರ್, ನ್ಯೂಜಿಲೆಂಡ್ (2014), ಬಾಬರ್ ಅಝಾಮ್, ಪಾಕಿಸ್ತಾನ (2016) ಮತ್ತು ಜಾನಿ ಬೈರ್‌ಸ್ಟೋವ್, ಇಂಗ್ಲೆಂಡ್ (2018).

Story first published: Saturday, May 16, 2020, 20:50 [IST]
Other articles published on May 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X