ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನದಲ್ಲಿ ನಾಯಕರಾಗಿ ಅತ್ಯಧಿಕ ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು

Top 5 Batsmen who scored most runs as captain in ODIs

ಬೆಂಗಳೂರು, ಮೇ 12: ರಾಷ್ಟ್ರೀಯ ತಂಡವೊಂದರ ನಾಯಕನಾಗಿರುವುದೆಂದರೆ ಅಲ್ಲಿ ಅಷ್ಟೇ ಜವಾಬ್ದಾರಿ ಮತ್ತು ಒತ್ತಡವಿರುತ್ತೆ. ಮುಖ್ಯವಾಗಿ ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಂಡದ ನಾಯಕರಾಗಿರುವವರ ಮೇಲೆ ಜವಾಬ್ದಾರಿಯ ಹೊರೆ ಜಾಸ್ತಿಯಿರುತ್ತದೆ. ಆದರೂ ಕೆಲ ಪ್ರತಿಭಾವಂತ, ಹೆಚ್ಚು ಪರಿಶ್ರಮಿ ಕ್ರಿಕೆಟಿಗರು ವೈಯಕ್ತಿಕವಾಗಿ ಪ್ರದರ್ಶನ ನೀಡಿದ್ದಕಿಂತಲೂ ತಂಡದ ನಾಯಕನಾಗಿ, ಒತ್ತಡದ ಮಧ್ಯೆಯೇ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ್ದಾರೆ.

ರೋಹಿತ್, ವಿರಾಟ್, ಎಬಿ ಡಿ ಅಲ್ಲ: ಆರ್ಚರ್‌ಗೆ ಕಠಿಣ ಬ್ಯಾಟ್ಸ್‌ಮನ್ ಕನ್ನಡಿಗರೋಹಿತ್, ವಿರಾಟ್, ಎಬಿ ಡಿ ಅಲ್ಲ: ಆರ್ಚರ್‌ಗೆ ಕಠಿಣ ಬ್ಯಾಟ್ಸ್‌ಮನ್ ಕನ್ನಡಿಗ

ರಾಷ್ಟ್ರೀಯ ತಂಡದ ನಾಯಕನಾಗಿದ್ದು ಉತ್ತಮ ರನ್‌ ಸಾಧನೆ ಮಾಡಿ ಸೈ ಎನಿಸಿಕೊಂಡ ಬಹಳಷ್ಟು ಆಟಗಾರರು ವಿಶ್ವ ಕ್ರಿಕೆಟ್‌ನಲ್ಲಿದ್ದಾರೆ. ಇದರಲ್ಲಿ ಏಕದಿನ ಕ್ರಿಕೆಟ್‌ ತಂಡದ ನಾಯಕನಾಗಿ ಅತ್ಯಧಿಕ ರನ್ ಗಳಿಸಿದವರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಕೊಹ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳನ್ನು ಉರಿಸುತ್ತಿದ್ದರು ಎಂದ ಬಾಂಗ್ಲಾ ಕ್ರಿಕೆಟಿಗ!ಕೊಹ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳನ್ನು ಉರಿಸುತ್ತಿದ್ದರು ಎಂದ ಬಾಂಗ್ಲಾ ಕ್ರಿಕೆಟಿಗ!

ಒಡಿಐನಲ್ಲಿ ಅತ್ಯಧಿಕ ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿ ಹೀಗಿದೆ ನೋಡಿ.

1. ರಿಕಿ ಪಾಂಟಿಂಗ್

1. ರಿಕಿ ಪಾಂಟಿಂಗ್

ವಿಶ್ವ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಗುರುತಿಸಿಕೊಂಡವರು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್. ಆಸ್ಟ್ರೇಲಿಯಾ ಏಕದಿನ ತಂಡದ ನಾಯಕತ್ವ ವಹಿಸಿದ್ದ ಪಾಂಟಿಂಗ್, 2002-12ರ ವರೆಗೆ 230 ಪಂದ್ಯಗಳಲ್ಲಿ 42.91ರ ಸರಾಸರಿಯಲ್ಲಿ 8,497 ರನ್ ಬಾರಿಸಿದ್ದರು. ಇದರಲ್ಲಿ 22 ಶತಕಗಳು, 51 ಅರ್ಧ ಶತಕಗಳು ಸೇರಿದ್ದವು. 2006ರಲ್ಲಿ ಜೋಹಾನ್ಸ್ ಬರ್ಗ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 164 ರನ್ ಬಾರಿಸಿದ್ದು ಇವರ ಅತ್ಯಧಿಕ ರನ್‌ ಆಗಿದೆ.

2. ಎಂಎಸ್ ಧೋನಿ

2. ಎಂಎಸ್ ಧೋನಿ

ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಯಶಸ್ವಿ ನಾಯಕನಾಗಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಗುರುತಿಸಿಕೊಂಡಿದ್ದಾರೆ. 2007-2018ರ ವರೆಗೂ ಧೋನಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ತನ್ನ ನಾಯಕತ್ವದ ಅವಧಿಯಲ್ಲಿ 200 ಏಕದಿನ ಪಂದ್ಯಗಳನ್ನಾಡಿರುವ ಧೋನಿ 53.55ರ ಸರಾಸರಿಯಲ್ಲಿ 6,641 ರನ್ ಬಾರಿಸಿದ್ದಾರೆ. ಇದರಲ್ಲಿ 6 ಶತಕ, 47 ಅರ್ಧ ಶತಕಗಳು ಸೇರಿವೆ. ಗ್ರೇಟ್ ಫಿನಿಷರ್ ಅನ್ನಿಸಿಕೊಂಡಿದ್ದ ಧೋನಿ 48 ಬಾರಿ ಅಜೇಯರಾಗಿ ಉಳಿದಿದ್ದರು.

3 ಸ್ಟೀಫನ್ ಫ್ಲೆಮಿಂಗ್

3 ಸ್ಟೀಫನ್ ಫ್ಲೆಮಿಂಗ್

ನ್ಯೂಜಿಲೆಂಡ್‌ನ ಶ್ರೇಷ್ಠ ಕ್ರಿಕೆಟಿಗ ಸ್ಟೀಫನ್ ಫ್ಲೆಮಿಂಗ್‌ ಕೂಡ ನಾಯಕನಾಗಿ ಅತ್ಯತ್ತಮ ಆಟವಾಡಿದ್ದಕ್ಕಾಗಿ ಗಮನ ಸೆಳೆದಿದ್ದಾರೆ. ನ್ಯೂಜಿಲೆಂಡ್ ಏಕದಿನ ತಂಡವನ್ನು 218 ಪಂದ್ಯಗಳಲ್ಲಿ ಸ್ಟೀಫನ್ ಮುನ್ನಡೆಸಿದ್ದರು. 1997-2007ರ ವರೆಗೂ ಫ್ಲೆಮಿಂಗ್ ನಾಯಕನಾಗಿದ್ದರು. 32.78ರ ಸರಾಸರಿಯಲ್ಲಿ 6,295 ರನ್ ಮಾಡಿದ್ದಾರೆ. ಇದರಲ್ಲಿ 7 ಶತಕಗಳು 38 ಅರ್ಧ ಶತಕಗಳು ಸೇರಿವೆ. ಸ್ಟೀಫನ್ ಕ್ಯಾಪ್ಟನ್ಸಿಯಲ್ಲಿ ಕಿವೀಸ್ 218 ಪಂದ್ಯಗಳಲ್ಲಿ 98 ಪಂದ್ಯಗಳನ್ನು ಗೆದ್ದಿತ್ತು.

4. ಅರ್ಜುನ ರಣತುಂಗ

4. ಅರ್ಜುನ ರಣತುಂಗ

ಶ್ರೀಲಂಕಾ ಅತ್ಯುತ್ತಮ ನಾಯಕರಲ್ಲಿ ಅರ್ಜುನ ರಣತುಂಗ ಕೂಡ ಒಬ್ಬರು. 269 ಏಕದಿನ ಪಂದ್ಯಗಳನ್ನಾಡಿರುವ ರಣತುಂಗ, 193 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ 37.63ರ ಸರಾಸರಿಯಲ್ಲಿ 5,608 ರನ್ ಗಳಿಸಿದ್ದರು. ಇದರಲ್ಲಿ 4 ಶತಕಗಳು, 37 ಶತಕಗಳು ಸೇರಿದ್ದವು. 1996ರಲ್ಲಿ ರಣತುಂಗ ನಾಯಕತ್ವದಲ್ಲಿ ಶ್ರೀಲಂಕಾ ಐಸಿಸಿ ವಿಶ್ವಕಪ್ ಗೆದ್ದಿತ್ತು.

5. ಗ್ರೇಮ್ ಸ್ಮಿತ್

5. ಗ್ರೇಮ್ ಸ್ಮಿತ್

ಸದ್ಯ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಿರ್ದೇಶಕರಾಗಿರುವ ಮಾಜಿ ನಾಯಕ ಗ್ರೇಮ್ ಸ್ಮಿತ್ 2003-2011ರ ವರೆಗೆ ತಂಡದ ನಾಯಕತ್ವ ಜವಾಬ್ದಾರಿ ಹೊತ್ತಿದ್ದರು. 150 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಸ್ಮಿತ್, 38.96ರ ಸರಾಸರಿಯಲ್ಲಿ 5,416 ರನ್ ಗಳಿಸಿದ್ದಾರೆ. 8 ಶತಕಗಳನ್ನು, 37 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಈ ಅವಧಿಯಲ್ಲಿ ಸ್ಮಿತ್ ಬಾರಿಸಿದ ಅತ್ಯಧಿಕ ರನ್ ಅಂದರೆ 141. ಇನ್ನು ಗ್ರೇಮ್ ನಾಯಕತ್ವದಲ್ಲಿ 92 ಪಂದ್ಯಗಳನ್ನು ಆಫ್ರಿಕಾ ಗೆದ್ದಿತ್ತು.

Story first published: Tuesday, May 12, 2020, 16:34 [IST]
Other articles published on May 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X