ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ODI ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಬೌಂಡರಿ ದಾಖಲೆ: ಟಾಪ್-5ರಲ್ಲಿ ಭಾರತೀಯರದ್ದೇ ಸಿಂಹಪಾಲು!

top 5 Batsmen Who Smashed Most Number Of 4s In An Odi Innings

ಟಿ20 ಕಾಲದಲ್ಲಿ ಸಿಕ್ಸರ್‌ಗಳಿಗೆ ಈಗ ಹೆಚ್ಚಿನ ಮನ್ನಣೆ ದೊತೆಯುತ್ತದೆ. ಬ್ಯಾಟ್ಸ್‌ಮನ್ ಹೆಚ್ಚು ಅಪಾಯವನ್ನು ತಂದುಕೊಂಡು ದೊಡ್ಡ ಹೊಡೆತವನ್ನು ಬಾತಿಸಬೇಕಾಗುತ್ತದೆ. ಹೀಗಾಗಿ ಅಭಿಮಾನಿಗಳ ಪಾಲಿಗೆ ಸಿಕ್ಸರ್ ಬಾರಿಸುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಹೆಚ್ಚು ಇಷ್ಟ. ಇದರ ಜೊತೆಗೆ ಬೌಂಡರಿ ಕೂಡ ಅಭಿಮಾನಿಗಳಿಂದ ಪ್ರಶಂಸೆಗೆ ಒಳಪಡುತ್ತದೆ.

ಸಿಕ್ಸರ್ ರೀತಿಯಲ್ಲಿ ಬೌಂಡರಿಗಳು ಬ್ಯಾಟ್ಸ್‌ಮನ್ ಪಾಲಿಗೆ ಹೆಚ್ಚು ಅಪಾಯಕಾರಿ ಅಲ್ಲ. ಆದರೆ ಫೀಲ್ಡರ್‌ಗಳನ್ನು ತಪ್ಪಿಸಿ ಬೌಂಡರಿ ಹೊಡೆಯುವುದು ಬ್ಯಾಟ್ಸ್‌ಮನ್‌ನ ಚಾಣಾಕ್ಷತನ. ದೊಡ್ಡ ಮೈದಾನಗಳಲ್ಲಿ ಸಿಕ್ಸರ್ ಬಾರಿಸುವುದಕ್ಕಿಂತ ಬೌಂಡರಿ ಬಾರಿಸುವ ಕಡೆಗೆ ಬ್ಯಾಟ್ಸ್‌ಮನ್‌ಗಳು ಹೆಚ್ಚು ಒತ್ತು ನೀಡುತ್ತಾರೆ.

ಕೊಹ್ಲಿ-ರೋಹಿತ್ ಜೋಡಿಯ ವಿಕೆಟ್ ಪಡೆಯಲು ಅಂಪೈರ್ ಬಳಿ ಸಹಾಯ ಕೇಳಿದ್ದ ಫಿಂಚ್ಕೊಹ್ಲಿ-ರೋಹಿತ್ ಜೋಡಿಯ ವಿಕೆಟ್ ಪಡೆಯಲು ಅಂಪೈರ್ ಬಳಿ ಸಹಾಯ ಕೇಳಿದ್ದ ಫಿಂಚ್

ಹೀಗೆ ಸಿಕ್ಸರ್ ರೀತಿಯಲ್ಲೇ ಬೌಂಡರಿ ಕೂಡ ವಿಶೇಷ ಕ್ಷಣವಾಗುತ್ತದೆ. ಕೆಲ ಬ್ಯಾಟ್ಸ್‌ಮನ್‌ಗಳು ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿ ದಾಖಲೆಯನ್ನು ಬರೆದಿದ್ದಾರೆ. ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಟಾಪ್ ಐವರು ಬ್ಯಾಟ್ಸ್‌ಮನ್‌ಗಳ ಬಗ್ಗೆ ಮುಂದೆ ಓದಿ

ಟಾಪ್-5: ಮಾರ್ಟಿನ್ ಗಪ್ಟಿಲ್

ಟಾಪ್-5: ಮಾರ್ಟಿನ್ ಗಪ್ಟಿಲ್

ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಅತಿ ಹೆಚ್ಚು ಬೌಂಡರಿ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 11 ಬೌಂಡರಿ ಬಾರಿಸಿದ್ದ ಮಾರ್ಟಿಮ್ ಗಪ್ಟಿಲ್ 24 ಬೌಂಡರಿಯನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಕೀವಿಸ್ ಬ್ಯಾಟ್ಸ್‌ಮನ್ 237 ರನ್‌ಗಳನ್ನು ಬಾರಿಸಿ ದ್ವಿಶತಕದ ಸಾಧನೆ ಮಾಡಿದವರ ಪಟ್ಟಿಗೂ ಸೇರ್ಪಡೆಗೊಂಡರು.

ಟಾಪ್-4: ಸನತ್ ಜಯಸೂರ್ಯ

ಟಾಪ್-4: ಸನತ್ ಜಯಸೂರ್ಯ

ಶ್ರೀಲಂಕಾದ ದಿಗ್ಗಜ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಈ ಪಟ್ಟಿಯಲ್ಲಿರುವ ನಾಲ್ಕನೇ ಆಟಗಾರ. ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಯಸೂರ್ಯ ಈ ಸಾಧನೆಯನ್ನು ಮಾಡಿದ್ದರು. ಜಯಸೂರ್ಯ ಕೂಡ 24 ಬೌಂಡರಿಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಜಯಸೂರ್ಯ ಕೇವಲ 104 ಎಸೆತಗಳಲ್ಲಿ 157 ರನ್ ಬಾರಿಸಿದ್ದರು.

ಟಾಪ್-3: ವೀರೇಂದ್ರ ಸೆಹ್ವಾಗ್

ಟಾಪ್-3: ವೀರೇಂದ್ರ ಸೆಹ್ವಾಗ್

ಕ್ರಿಕೆಟ್ ಕಂಡ ಸ್ಪೋಟಕ ಆಟಗಾರರಲ್ಲಿ ವೀರೇಂದ್ರ ಸೆಹ್ವಾಗ್ ಕೂಡ ಒಬ್ಬರು. ಮೊದಲ ಎಸತವನ್ನೇ ಬೌಂಡರಿಗೆ ಅಟ್ಟುವುದಕ್ಕೆ ಸೆಹ್ವಾಗ್ ಖ್ಯಾತರಾಗಿದ್ದಾರೆ. ಈ ಪಟ್ಟಿಯಲ್ಲಿ ಸೆಹ್ವಾಗ್ ಮೂರನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ ಸೆಹ್ವಾಗ್ 25 ಬೌಂಡರಿ ಬಾರಿಸಿದ್ದರು. 7 ಸಿಕ್ಸರ್‌ಗಳನ್ನು ಒಳಗೊಂಡಿದ್ದ ಈ ಇನ್ನಿಂಗ್ಸ್‌ನಲ್ಲಿ ಸೆಹ್ವಾಗ್ 219 ರನ್ ಬಾರಿಸಿ ಏಕದಿನದಲ್ಲಿ ದ್ವಿಶತಕದ ಸಾಧನೆಯನ್ನು ಮಾಡಿದ್ದರು.

ಟಾಪ್-2: ಸಚಿನ್ ತೆಂಡೂಲ್ಕರ್

ಟಾಪ್-2: ಸಚಿನ್ ತೆಂಡೂಲ್ಕರ್

ಈ ಪಟ್ಟಿಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಸಚಿನ್ ಕೂಡ 25 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ಸಾಧನೆಕೂಡ ಸಚಿನ್ ದ್ವಿಶತಕ ಸಿಡಿಸಿದ ಪಂದ್ಯದಲ್ಲೇ ದಾಖಲಾಗಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಬಾರಿಸಿದ ಮೊದಲ ದ್ವಿಶತಕದಲ್ಲಿ ಸಚಿನ್ ಈ ಸಾಧನೆಯನ್ನು ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಈ ಪಂದ್ಯ ನಡೆದಿತ್ತು.

ಟಾಪ್-1: ರೋಹಿತ್ ಶರ್ಮಾ

ಟಾಪ್-1: ರೋಹಿತ್ ಶರ್ಮಾ

ಈ ಪಟ್ಟಿಯಲ್ಲಿರುವ ಮತ್ತೋರ್ವ ಭಾರತೀಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ. ಎಲ್ಲರಿಗಿಂತಲೂ ಹೆಚ್ಚು ಬೌಂಡರಿಯನ್ನು ಬಾರಿಸಿ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ರೋಹಿತ್ ಶರ್ಮಾ ಬರೆದುಕೊಂಡಿದ್ದಾರೆ. ಏಕದಿನ ಇತಿಹಾಸದಲ್ಲಿ ದಾಖಲಾಗಿರುವ ಸರ್ವಾಧಿಕ 264 ರನ್ ಗಳಿಸಿದ ಸಂದರ್ಭದಲ್ಲಿ ರೋಹಿತ್ ಶರ್ಮಾ ಈ ಸಾಧನೆಯನ್ನು ಮಾಡಿದ್ದಾರೆ. ಅಂದಹಾಗೆ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಬಾರಿಸಿದ ಬೌಂಡರಿಗಳ ಸಂಖ್ಯೆ ಬರೊಬ್ಬರಿ 33. ಈ ಪಂದ್ಯದಲ್ಲಿ 9 ಸಿಕ್ಸರ್ ಕೂಡ ಶರ್ಮಾ ಬಾರಿಸಿದ್ದಾರೆ.

Story first published: Thursday, June 11, 2020, 21:36 [IST]
Other articles published on Jun 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X