ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ODI ಕ್ರಿಕೆಟ್‌ನಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು: ಘಟಾನುಘಟಿಗಳದ್ದೇ ಸಿಂಹಪಾಲು

Top 5 Batsmen With The Most Number Of Ducks In Odi History

ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯುವುದು ಕ್ರಿಕೆಟ್‌ನಲ್ಲಿ ಎಲ್ಲಾ ಆಟಗಾರರ ಕನಸಾಗಿರುತ್ತದೆ. ಆದರೆ ಕೆಲವರಿಗೆ ಮಾತ್ರ ದಾಖಲೆಗಳನ್ನು ಬರೆಯಲು ಸಾಧ್ಯವಾಗುತ್ತದೆ. ಅತಿ ಹೆಚ್ಚು ವಿಕೆಟ್, ಅತಿ ಹೆಚ್ಚು ರನ್ ಹೀಗೆ ಅದೆಷ್ಟೋ ಸಾಧನೆಗಳನ್ನು ಬೇರೆ ಬೇರೆ ಆಟಗಾರರು ಸಾಧಿಸಿ ತಮ್ಮ ಛಾಪು ಮೂಡಿಸಿದ್ದಾರೆ.

ಆದರೆ ಕೆಲ ದಾಖಲೆಗಳು ಆಟಗಾರಿಗೆ ಮುಜುಗರವನ್ನುಂಟು ಮಾಡುತ್ತದೆ. ತಮಗೆ ಬೇಡವಾಗಿದ್ದರೂ ಅಂತಾ ದಾಖಲೆಗಳಲ್ಲಿ ಆಟಗಾರರು ತಮ್ಮ ಹೆಸರನ್ನು ಬರೆದುಕೊಂಡಿರುತ್ತಾರೆ. ಅಂತಾ ಬೇಡದ ದಾಖಲೆಯೊಂದರ ಬಗ್ಗೆ ಈ ವರದಿಯಲ್ಲಿ ಮಾಹಿತಿಯನ್ನು ನೀಡುತ್ತೇವೆ.

ಬಿಸಿಸಿಐ ಅನುಪಸ್ಥಿತಿಯಲ್ಲಿ ಟಿ20 ವಿಶ್ವಕಪ್ ಮರುವೇಳಾಪಟ್ಟಿ ಚರ್ಚಿಸಿದ ಐಸಿಸಿಬಿಸಿಸಿಐ ಅನುಪಸ್ಥಿತಿಯಲ್ಲಿ ಟಿ20 ವಿಶ್ವಕಪ್ ಮರುವೇಳಾಪಟ್ಟಿ ಚರ್ಚಿಸಿದ ಐಸಿಸಿ

ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತವನ್ನು ದಾಖಲಿಸಬೇಕೆಂದು ಪ್ರತಿ ಬಾರಿಯೂ ಕಣಕ್ಕಿಳಿದಿರುತ್ತಾರೆ. ಆದರೆ ಅದಷ್ಟೋ ಬಾರಿ ಒಂದು ರನ್ ಗಳಿಸದೆಯೂ ವಿಕೆಟ್ ಒಪ್ಪಿಸಿರುತ್ತಾರೆ. ಹೀಗೆ ಸೊನ್ನೆಗೆ ಅತಿ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು ಯಾರು? ಮೊದಲ ಸ್ಥಾನದಲ್ಲಿ ಯಾರಿದ್ದಾರೆ? ಮುಂದೆ ಓದಿ..

# 5 ಶ್ರೀಲಂಕಾದ ಮಾಜಿ ಆರಂಭಿಕ ಆಟಗಾರ ಕಲುವಿತರಣ

# 5 ಶ್ರೀಲಂಕಾದ ಮಾಜಿ ಆರಂಭಿಕ ಆಟಗಾರ ಕಲುವಿತರಣ

ಈ ಬೇಡ ದಾಖಲೆಯ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದಿರು ಆಟಗಾರ ಅಂದರೆ ಅದು ಶ್ರೀಲಂಕಾ ಕ್ರಿಕೆಟಿಗ ರೊಮೇಶ್ ಕಲುವಿತರಣ. ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾ ತಂಡದಲ್ಲಿ ಸನತ್ ಜಯಸೂರ್ಯ ಅವರ ಜೊತೆಗೆ ಇನ್ನಿಂಗ್ಸ್‌ ಆರಂಭಿಸುವ ಮೂಲಕ ಖ್ಯಾತರಾಗಿದ್ದಾರೆ. 1996ರಲ್ಲಿ ಶ್ರೀಲಂಕಾ ವಿಶ್ವಕಪ್ ಗೆದ್ದ ತಂಡದ ಅವಿಭಾಜ್ಯ ಅಂಗವಾಗಿದ್ದವರು ರೊಮೇಶ್ ಕಲುವಿತಣ. ಆದರೆ 24 ಬಾರಿ ರೊಮೇಶ್ ಕಲುವಿತರಣ "ಸೊನ್ನೆ"ಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಈ ದಾಖಲೆಯ ಪಟ್ಟಿಯಲ್ಲಿ ಐದನೆಯವರಾಗಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

#4 ವೆಸ್ಟ್‌ ಇಂಡೀಸ್‌ನ ಬ್ಯಾಟಂಗ್ ದೈತ್ಯ ಕ್ರಿಸ್ ಗೇಲ್

#4 ವೆಸ್ಟ್‌ ಇಂಡೀಸ್‌ನ ಬ್ಯಾಟಂಗ್ ದೈತ್ಯ ಕ್ರಿಸ್ ಗೇಲ್

ಈ ದಾಖಲೆಯ ಪಟ್ಟಿಯಲ್ಲಿರುವ ಮತ್ತೊಂದು ಹೆಸರು ವೆಸ್ಟ್ ಇಂಡೀಸ್‌ನ ಬ್ಯಾಟಿಂಗ್ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಅವರದ್ದು. ಕ್ರಿಸ್ ಗೇಲ್ ತಮ್ಮ ಸ್ಪೋಟಕ ಆಟದ ಮೂಲಕ ವಿಶ್ವ ಕ್ರಿಕೆಟ್‌ನ ಬೌಲರ್‌ಗಳ ನಿದ್ದೆಗೆಡಿಸಿದ ಆಟಗಾರ. ಆದರೆ ಹಲವು ಬಾರಿ ಇವರು ರನ್ ಗಳಿಸದೆಯೇ ಫೆವಿಲಿಯನ್‌ಗೆ ಮರಳಿದ್ದಾರೆ. ಕ್ರಿಸ್ ಗೇಲ್ 25 ಬಾರಿ ಒಂದೂ ರನ್ ಗಳಿಸದೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟಾದ ಆಟಗಾರರ ಪಟ್ಟಿಯಲ್ಲಿ ಗೇಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

#3 ಶ್ರೀಲಂಕಾದ ದಿಗ್ಗಜ ಮಹೇಲ ಜಯವರ್ದನೆ

#3 ಶ್ರೀಲಂಕಾದ ದಿಗ್ಗಜ ಮಹೇಲ ಜಯವರ್ದನೆ

ಈ ಪಟ್ಟಿಯಲ್ಲಿರುವ ಮತ್ತೊಂದು ಅಚ್ಚರಿಯ ಹೆಸರು ಅಂದರೆ ಅದು ಜಯವರ್ದನೆ. ಶ್ರೀಲಂಕಾ ಕ್ರಿಕೆಟ್ ಕಂಡ ಪ್ರತಿಭಾನ್ವಿತ ಕ್ರಿಕೆಟಿಗ ಜಯವರ್ದನೆ. ತಾಂತ್ರಿಕವಾಗಿ ಅದ್ಭುತ ಆಟಗಾರನೆನಿಸಿಕೊಂಡಿದ್ದ ಮಾಜಿ ನಾಯಕ ಶ್ರೀಲಂಕಾ ಪರವಾಗಿ 448 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದು 19 ಶತಕ 77 ಅರ್ಧ ಶತಕಗಳ ಸಹಿತ 12000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಹಾಗಿದ್ದರೂ ಅತಿ ಎಹಚ್ಚು ಸೊನ್ನೆಗೆ ಔಟಾದವರ ಪಟ್ಟಿಯಲ್ಲಿ ಮಹೇಲ 3ನೇ ಸ್ಥಾನದಲ್ಲಿದ್ದಾರೆ. 28 ಬಾರಿ ಜಯವರ್ದನೆ ಸೊನ್ನೆಗೆ ವಿಕೆಟ್ ಒಪ್ಪಿಸಿ ಈ ಬೇಡದ ದಾಖಲೆಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡಿದ್ದಾರೆ.

#2 ಪಾಕಿಸ್ತಾನದ ಬೂಮ್ ಬೂಮ್ ಬ್ಯಾಟ್ಸ್‌ಮನ್ ಅಫ್ರಿದಿ

#2 ಪಾಕಿಸ್ತಾನದ ಬೂಮ್ ಬೂಮ್ ಬ್ಯಾಟ್ಸ್‌ಮನ್ ಅಫ್ರಿದಿ

ಪಾಕಿಸ್ತಾನ ಕ್ರಿಕೆಟ್ ಕಂಡ ಸ್ಪೋಟಕ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿದಿ ಸಿನ್ನೆಗೆ ಅತಿ ಹೆಚ್ಚು ಬಾರಿ ಔಟಾದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಟಗಾರ. ಸ್ಪೋಟಕ ಆಟದಿಂದ ಬೌಲರ್‌ಗಳಿಗೆ ಶಾಹಿದ್ ಅಫ್ರಿದಿ ಸಿಂಹಸ್ವಪ್ನವಾಗಿದ್ದರು. ಪಾಕಿಸ್ತಾನದ ಪರವಾಗಿ 398 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅಫ್ರಿದಿ ಬರೊಬ್ಬರಿ 30 ಬಾರಿ ಸೊನ್ನೆಗೆ ವಿಕೆಟ್ ಒಪ್ಪಿಸಿಕೊಂಡಿದ್ದಾರೆ.

#1 ಶ್ರೀಲಂಕಾ ಕ್ರಿಕೆಟ್‌ನ ದಿಗ್ಗಜ ಸನತ್ ಜಯಸೂರ್ಯ

#1 ಶ್ರೀಲಂಕಾ ಕ್ರಿಕೆಟ್‌ನ ದಿಗ್ಗಜ ಸನತ್ ಜಯಸೂರ್ಯ

ಶ್ರೀಲಂಕಾ ಕ್ರಿಕೆಟ್‌ ಕಂಡ ದಿಗ್ಗಜ ಕ್ರಿಕೆಟಿಗ ಸನತ್ ಜಯಸೂರ್ಯ ತಮ್ಮ ಹೆಸರಿನಲ್ಲಿ ಬರೆದ ಅದೆಷ್ಟೋ ಅದ್ಭುತ ದಾಖಲೆಗಳ ಜೊತೆಗೆ ಈ ಬೇಡದ ದಾಖಲೆಯಲ್ಲೂ ತಮ್ಮ ಹೆಸರನ್ನು ಸೇರಿಸಿಕೊಂಡಿದ್ದಾರೆ. 445 ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿರುವ ಜಯಸೂರ್ಯ 28 ಶತಕ ಮತ್ತು 68 ಅರ್ಧ ಶತಕಗಳನ್ನು ತಮ್ಮ ಹೆಸರಿನಲ್ಲಿ ಸಿಡಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಅತಿ ಹೆಚ್ಚು ಬಾರಿ ಔಟ್ ಆದವರ ಪಟ್ಟಿಯಲ್ಲಿ ಇವರೇ ಮೊದಲ ಸ್ಥಾನದಲ್ಲಿದ್ದಾರೆ. ಸನತ್ ಜಯಸೂರ್ಯ ಬರೊಬ್ಬರಿ 34 ಇನ್ನಿಂಗ್ಸ್‌ಗಳಲ್ಲಿ ಸೊನ್ನೆ ಸುತ್ತಿ ಫೆವಿಲಿಯನ್‌ಗೆ ವಾಪಾಸ್ಸಾಗಿದ್ದಾರೆ. ಸೊನ್ನೆಗೆ ಔಟಾದ ಟಾಪ್ ಐವರಲ್ಲಿ ಮೂವರು ಶ್ರೀಲಂಕಾ ಆಟಗಾರರೇ ಎಂಬುದು ಮತ್ತೊಂದು ಅಚ್ಚರಿ.

Story first published: Tuesday, May 26, 2020, 12:38 [IST]
Other articles published on May 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X