ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ಗೂ ಮುನ್ನ ಬೇರೆ ಕ್ರೀಡೆಗಳನ್ನಾಡುತ್ತಿದ್ದ 5 ಜನಪ್ರಿಯ ಕ್ರಿಕೆಟಿಗರು

Top 5 cricketers had been a great players in other sports before playing cricket

ಬೆಂಗಳೂರು, ಏಪ್ರಿಲ್ 9: ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯಾದರೂ ಇಲ್ಲಿ ಕ್ರಿಕೆಟ್‌ ಆಟಕ್ಕಿರುವ ಅಭಿಮಾನಿಗಳು ಬೇರೆ ಕ್ರೀಡೆಗಳಿಗಿಲ್ಲ. ಭಾರತವೆಂದಲ್ಲ, ಉಳಿದ ಒಂದಿಷ್ಟು ದೇಶಗಳಲ್ಲೂ ಕ್ರಿಕೆಟ್‌ ಕ್ರೇಸ್ ಹೆಚ್ಚೇ ಇದೆ. ಕ್ರಿಕೆಟ್ ರಂಗದಲ್ಲಿ ಮಿಂಚಿದ ಅನೇಕ ಆಟಗಾರರ ಬಗ್ಗೆ ನಾವು ಕೇಳಿದ್ದೇವೆ. ಆದರೆ ಕ್ರಿಕೆಟ್ ಆಟಕ್ಕೂ ಮುನ್ನ ಬೇರೆ ಆಟಗಳಲ್ಲಿ ತೊಡಗಿದ್ದ ಕ್ರಿಕೆಟಿಗರ ಬಗ್ಗೆ ಅಥವಾ ಕ್ರಿಕೆಟ್‌ ಬಳಿಕ ಬೇರೆ ಕ್ರೀಡೆಗಳತ್ತ ಮುಖ ಮಾಡಿದ ಬಹಳಷ್ಟು ಜನಪ್ರಿಯ ಕ್ರೀಡಾಪಟುಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ.

ತನ್ನ ಪಾಲಿನ ಶ್ರೇಷ್ಠ ನಾಯಕನನ್ನು ಹೆಸರಿಸಿದ ಕನ್ನಡಿಗ ರಾಬಿನ್ ಉತ್ತಪ್ಪತನ್ನ ಪಾಲಿನ ಶ್ರೇಷ್ಠ ನಾಯಕನನ್ನು ಹೆಸರಿಸಿದ ಕನ್ನಡಿಗ ರಾಬಿನ್ ಉತ್ತಪ್ಪ

ಮಿಂಚಿನ ಓಟಗಾರ ಉಸೇನ್ ಬೋಲ್ಟ್‌ ಕೂಡ ಓಟಕ್ಕೆ ಬೈ ಹೇಳಿದ ಬಳಿಕ ಫುಟ್ಬಾಲ್ ಮೈದಾನದಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದರು. ಆದರೆ ಅಲ್ಲಿ ಬೋಲ್ಡ್‌ಗೆ ನೆಲೆಯೂರಲು ಸಾಧ್ಯವಾಗಿಲ್ಲ. ಕ್ರಿಕೆಟ್ ಅಷ್ಟೇ ಅಲ್ಲದೆ ಇತರ ಕ್ರೀಡೆಗಳಲ್ಲೂ ಸೈ ಎನಿಸಿಕೊಂಡಿರುವ ಬಹಳಷ್ಟು ಕ್ರಿಕೆಟಿಗರಿದ್ದಾರೆ.

ವಿಸ್ಡನ್ ಕ್ರಿಕೆಟರ್ಸ್ ಆಫ್‌ ದ ಇಯರ್ 2019: ವಿಜೇತರ ಸಂಪೂರ್ಣ ಪಟ್ಟಿವಿಸ್ಡನ್ ಕ್ರಿಕೆಟರ್ಸ್ ಆಫ್‌ ದ ಇಯರ್ 2019: ವಿಜೇತರ ಸಂಪೂರ್ಣ ಪಟ್ಟಿ

ಕ್ರಿಕೆಟ್‌ ಅಲ್ಲದೆ ಬೇರೆ ಆಟಗಳಲ್ಲಿ ತೊಡಗಿಕೊಂಡಿದ್ದ ಐವರು ಜನಪ್ರಿಯ ಕ್ರಿಕೆಟಿಗರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

1. ಎಬಿ ಡಿ ವಿಲಿಯರ್ಸ್

1. ಎಬಿ ಡಿ ವಿಲಿಯರ್ಸ್

ಕ್ರಿಕೆಟ್‌ ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಬಿರುಸಿನ ಬ್ಯಾಟಿಂಗ್ ಮಾಡಿದ್ದನ್ನು, ಮಿಂಚಿನ ಫೀಲ್ಡಿಂಗ್ ನಡೆಸಿದ್ದನ್ನು, ಸೂಪರ್ ಮ್ಯಾನ್‌ನಂತೆ ಕ್ಯಾಚ್ ಮಾಡಿದ್ದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಇದೇ ಮಿಸ್ಟರ್ 360 ಡಿಗ್ರೀ ಎಬಿ ಡಿ ವಿಲಿಯರ್ಸ್ ಕ್ರಿಕೆಟ್‌ಗೆ ಬರುವುದಕ್ಕೂ ಮುನ್ನ ಉತ್ತಮ ಹಾಕಿ ಆಟಗಾರನಾಗಿದ್ದರು. ದಕ್ಷಿಣ ಆಫ್ರಿಕಾ ಕಿರಿಯರ ರಾಷ್ಟ್ರೀಯ ಹಾಕಿ ತಂಡದಲ್ಲಿ ಆಡಿದ್ದರು. ಅದಾಗಿ ರಗ್ಬಿ ಆಟದಲ್ಲೂ ಎಬಿಡಿ ಸೈ ಎನಿಸಿಕೊಂಡಿದ್ದರು.

2. ಸರ್ ವಿವಿಯನ್ ರಿಚರ್ಡ್ಸ್

2. ಸರ್ ವಿವಿಯನ್ ರಿಚರ್ಡ್ಸ್

ವೆಸ್ಟ್ ಇಂಡೀಸ್ ಕ್ರಿಕೆಟ್‌ ದಂತಕತೆ ಸರ್ ವಿವಿಯನ್ ರಿಚರ್ಡ್ಸ್‌ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತೇಯಿರುತ್ತದೆ. ಈಗಲೂ ವಿವಿಯನ್ ರಿಚರ್ಡ್ಸ್ ಹೆಸರಿನಲ್ಲಿ ಕ್ರಿಕೆಟ್ ದಾಖಲೆಗಳಿವೆ. ಆದರೆ 1974 ವಿಶ್ವಕಪ್ ಫುಟ್ಬಾಲ್ ಅರ್ಹತಾ ಪಂದ್ಯಗಳ ವೇಳೆಗೆ ವಿವ್ ರಿಚರ್ಡ್ಸ್ ಆ್ಯಂಟಿಗುವಾ ತಂಡದಲ್ಲಿದ್ದರು. ಆಗೊಂದು ವೇಳೆ ಆ್ಯಂಟಿಗುವಾ ತಂಡ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರೆ ರಿಚರ್ಡ್ಸ್, ಕ್ರಿಕೆಟ್ ಮತ್ತು ಫುಟ್ಬಾಲ್‌ನಲ್ಲಿ ವಿಶ್ವಕಪ್‌ ಆಡಿದ ಹೆಗ್ಗಳಿಕೆ ಪಾತ್ರರಾಗುತ್ತಿದ್ದರು.

3. ಜಾಂಟಿ ರೋಡ್ಸ್

3. ಜಾಂಟಿ ರೋಡ್ಸ್

ಕ್ರಿಕೆಟ್‌ನಲ್ಲಿ ಅದ್ಭುತ ಫೀಲ್ಡಿಂಗ್‌ಗಾಗಿ ಪಕ್ಕನೆ ನೆನಪಾಗುವ ಹೆಸರು ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್. ಇದೇ ಕಾರಣಕ್ಕೆ ಮೊಹಮ್ಮದ್ ಕೈಫ್‌ಗೆ ಭಾರತದ ಜಾಂಟಿ ರೋಡ್ಸ್ ಎಂದು ಕರೆಯಲಾಗುತ್ತದೆ. ಕ್ರಿಕೆಟ್‌ಗೂ ಮುನ್ನ ರೋಡ್ಸ್ ಒಬ್ಬರು ವೃತ್ತಿಪರ ಹಾಕಿ ಆಟಗಾರನಾಗಿದ್ದರು ಎಂದರೆ ನಂಬುತ್ತೀರಾ? 1992ರಲ್ಲಿ ಬಾರ್ಸಿಲೋನಾದಲ್ಲಿ ನಡೆದಿದ್ದ ಒಲಿಂಪಿಕ್ಸ್ ವೇಳೆ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಹಾಕಿ ತಂಡಕ್ಕೆ ರೋಡ್ಸ್ ಆಯ್ಕೆಯಾಗಿದ್ದರು. ಆದರೆ ದುರಾದೃಷ್ಟವಶಾತ್ ಆವತ್ತು ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್‌ಗೆ ಅರ್ಹತೆಯನ್ನೇ ಪಡೆಯಲಿಲ್ಲ.

4. ಎಲ್ಲಿಸ್ ಪೆರ್ರಿ

4. ಎಲ್ಲಿಸ್ ಪೆರ್ರಿ

ಇತ್ತೀಚೆಗಷ್ಟೇ ಪ್ರಕಟವಾಗಿರುವ 'ವಿಸ್ಡನ್ ಕ್ರಿಕೆಟರ್ಸ್ ಆಫ್‌ ದ ಇಯರ್ 2019'ನಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಎಲ್ಲಿಸ್ ಪೆರ್ರಿ ವರ್ಷದ ವಿಶ್ವದ ಕ್ರಿಕೆಟಿಗೆಯಾಗಿ ಮಿಂಚಿದ್ದರು. ಈ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ್ತಿ ಪೆರ್ರಿ ಫುಟ್ಬಾಲ್ ಆಟಗಾರ್ತಿಯೂ ಹೌದು. ಎಲ್ಲಿಸ್ ಪೆರ್ರಿ ಕ್ಯಾನ್‌ಬೆರಾ ಯುನೈಟೆಡ್ ಮತ್ತು ಸಿಡ್ನಿ ಎಫ್‌ಸಿ ಪರ ಆಡಿದ್ದಾರೆ. ಈಗ 29ರ ಹರೆಯದವರಾಗಿರುವ ಪೆರ್ರಿ 16ನೇ ವಯಸ್ಸಿನಲ್ಲಿ ಕ್ರಿಕೆಟ್ ಮತ್ತು ಫುಟ್ಬಾಲ್ ಎರಡರಲ್ಲೂ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. ಪೆರ್ರಿ ಒಟ್ಟಿಗೆ 18 ಬಾರಿ ಫುಟ್ಬಾಲ್ ಪಂದ್ಯಗಳನ್ನಾಡಿದ್ದರು.

5. ಬ್ರೆಂಡನ್ ಮೆಕಲಮ್

5. ಬ್ರೆಂಡನ್ ಮೆಕಲಮ್

ನ್ಯೂಜಿಲೆಂಡ್‌ನ ಅಪಾಯಕಾರಿ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕಲಮ್. ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಗಳನ್ನು ಉಳಿಸಿಕೊಂಡಿರುವ ಮೆಕಲಮ್ ಉತ್ತಮ ರಗ್ಬಿ ಆಟಗಾರರಾಗಿದ್ದರು. 2000ರ ಸೀಸನ್‌ನಲ್ಲಿ ಬ್ರೆಂಡನ್ ಮೆಕಲಮ್ ರಗ್ಬಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಡಾನ್ ಕಾರ್ಟರ್ ಅವರು ನ್ಯೂಜಿಲೆಂಡ್ ರಗ್ಬಿ ತಂಡ ತೊರೆಯಬೇಕಾಗಿ ಬಂದಿತ್ತು. ಆದಾಗ್ಯೂ ಅನಂತರ ಕಾರ್ಟರ್ ಶ್ರೇಷ್ಠ ರಗ್ಬಿ ಆಟಗಾರರಲ್ಲಿ ಗುರುತಿಸಿಕೊಂಡರು. ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕವೂ ಮೆಕಲಮ್ 2018ರಲ್ಲಿ ಒಂದು ರಗ್ಬಿ ಪಂದ್ಯವನ್ನಾಗಿದ್ದರು.

Story first published: Thursday, April 9, 2020, 17:10 [IST]
Other articles published on Apr 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X